ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Telugu actor Rajeev Kanakala: ಅಪ್ಪುವನ್ನು ನೆನೆದು ಭಾವುಕರಾದ ಖ್ಯಾತ ತೆಲುಗು ನಟ!

Puneeth Rajkumar: ಲವ್ ಸ್ಟೋರಿ ಕುರಿತಾದ ಈಗಾಗಲೇ ಅನೇಕ ಸಿನಿಮಾಗಳು ತೆರೆ ಮೇಲೆ ಬಂದಿದೆ‌‌.‌ ಅಂತೆಯೇ 'ಲವ್ ಒಟಿಪಿ' ಎಂಬ ಹೆಸರಿನ ಸಿನಿಮಾದ ಮೂಲಕ ವಿಭಿನ್ನವಾದ ಅರ್ಥದಲ್ಲಿ ಪ್ರೀತಿಯನ್ನು ವ್ಯಾಖ್ಯಾನಿಸಲು ಚಿತ್ರತಂಡವು ಹೊರಟಿದೆ. ಅನೀಶ್ ತೇಜೇಶ್ವರ್ ಅವರು ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಸಿನಿಮಾದಲ್ಲಿ ತೆಲುಗು ನಟ ರಾಜೀವ್ ಕನಕಲ ಅವರು ಕೂಡ ಅಭಿ ನಯಿಸಿದ್ದಾರೆ. ಇದೀಗ ಅವರು ಸಿನಿಮಾದ ಬಗ್ಗೆ ಅನೇಕ ವಿಚಾರಗಳನ್ನು ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮಾನವೀಯ ಗುಣದ ಬಗ್ಗೆ ವಿಶ್ವವಾಣಿ ಟಿವಿ ವಾಹಿನಿಯ ಸಂದರ್ಶನ ಒಂದ ರಲ್ಲಿ ಹಂಚಿಕೊಂಡಿದ್ದಾರೆ..

ಅಪ್ಪು ಬಗ್ಗೆ ಖ್ಯಾತ ತೆಲುಗು ನಟ ಹೇಳಿದ್ದೇನು?

ವಿಶೇಷ ಸಂದರ್ಶನದಲ್ಲಿ ಲವ್ ಒಟಿಪಿ ಸಿನಿಮಾ ತಂಡ -

Profile
Pushpa Kumari Nov 11, 2025 11:27 AM

ಬೆಂಗಳೂರು: ಇತ್ತೀಚಿನ ದಿನದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ವಿಭಿನ್ನ ಕಥೆಗಳು, ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರವಾಗಿದೆ‌. ಅದರಲ್ಲೂ ಲವ್ ಸ್ಟೋರಿ ಕುರಿತಾದ ಈಗಾಗಲೇ ಅನೇಕ ಸಿನಿಮಾಗಳು ತೆರೆ ಮೇಲೆ ಬಂದಿದೆ‌‌.‌ ಅಂತೆಯೇ 'ಲವ್ ಒಟಿಪಿ' (Love OTP Movie) ಎಂಬ ಹೆಸರಿನ ಸಿನಿಮಾದ ಮೂಲಕ ವಿಭಿನ್ನವಾದ ಅರ್ಥದಲ್ಲಿ ಪ್ರೀತಿಯನ್ನು ವ್ಯಾಖ್ಯಾನಿಸಲು ಚಿತ್ರತಂಡವು ಹೊರಟಿದೆ. ಅನೀಶ್ ತೇಜೇಶ್ವರ್ (Aniissh Tejeshwar) ಅವರು ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಸಿನಿಮಾದಲ್ಲಿ ತೆಲುಗು ನಟ ರಾಜೀವ್ ಕನಕಲ (Rajeev Kanakala) ಅವರು ಕೂಡ ಅಭಿನಯಿಸಿದ್ದಾರೆ.ಇದೀಗ ಅವರು ಸಿನಿಮಾದ ಬಗ್ಗೆ ಅನೇಕ ವಿಚಾರ ಗಳನ್ನು ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮಾನವೀಯ ಗುಣದ ಬಗ್ಗೆ ವಿಶ್ವವಾಣಿ ಟಿವಿ ವಾಹಿನಿಯ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.

ತೆಲುಗು ನಟ ರಾಜೀವ್ ಕನಕಲ ಅವರು ಲವ್ ಒಟಿಪಿ ಸಿನಿಮಾದಲ್ಲಿ ಅಭಿನಯಿಸಿ ಈ ಬಗ್ಗೆ ಮಾತ ನಾಡಿ, ಕನ್ನಡ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಈ ಸಿನಿಮಾದಲ್ಲಿ ಅಭಿನಯಿಸಲು ಸಾಕಷ್ಟು ಸಹಕಾರ ನೀಡಿದ್ದಾರೆ. ಸಿನಿಮಾ ಶೂಟಿಂಗ್ ಕೊನೆ ಗೊಂಡಿದ್ದು ತುಂಬಾ ಚೆನ್ನಾಗಿ ಈ ಮೂವಿ ತೆರೆ ಕಾಣುತ್ತದೆ ಎನ್ನುವ ನಿರೀಕ್ಷೆ ಇದೆ. ನಮ್ಮ ಸಿನಿಮಾ ತಂಡ ಸಮೇತ ನಾವು ಡಾ‌. ರಾಜ್ ಕುಮಾರ್ ಸರ್ ಅವರ ಸಮಾಧಿ ಹಾಗೂ ಪಾರ್ವತಮ್ಮ ಅವರ ಸಮಾಧಿ ಇದ್ದ ಸ್ಥಳಕ್ಕೆ ಹೋದೆವು. ಅವರ ಸಮಾಧಿಗೆ ಕೈ ಮುಗಿದು ಆಶೀರ್ವಾದ ಪಡೆದೆವು ಎಂದು ಅವರು ಹೇಳಿದರು.



ಬಳಿಕ ಅಲ್ಲಿಂದ ಅಪ್ಪು ಸರ್ ಅವರ ಸಮಾಧಿ ಇದ್ದ ಸ್ಥಳಕ್ಕೂ ಭೇಟಿ ನೀಡಿ ಸಮಾಧಿಗೆ ನಮಸ್ಕರಿ ಸಿದೆವು. ಅಪ್ಪು ಸರ್ ಎಂದರೆ ಅನೀಶ್ ಗೆ ಬಹಳ ಇಷ್ಟ. ಅವರಿಬ್ಬರ ನಡುವೆ ಒಳ್ಳೆ ಬಾಂಡಿಂಗ್ ಇತ್ತು. ನನಗೆ ಅಪ್ಪು ಸರ್ ಎಂದಾಗ ಮೊದಲು ನೆನಪಾಗುವುದು ಅವರ ಚಕ್ರವ್ಯೂಹ ಸಿನಿಮಾದ ಜೂನಿ ಯರ್ ಎನ್ ಟಿ ಆರ್ ಅವರು ಹಾಡಿದ್ದ ಗೆಳೆಯ ಗೆಳೆಯ ಹಾಡು... ನನಗೆ ಜೂನಿಯರ್ ಎನ್ ಟಿ ಆರ್ ಅವರು ಅಪ್ಪು ಸರ್ ಬಗ್ಗೆ ಅನೇಕ ವಿಚಾರ ಹೇಳಿದ್ದರು. ಅವರು ಬಹಳ ಸಿಂಪಲ್ ವ್ಯಕ್ತಿ, ಬಹಳಷ್ಟು ಮಾನವೀಯ ಕೆಲಸ ಮಾಡುತ್ತಿದ್ದರು ಎಂದೆಲ್ಲ ತಿಳಿಯಿತು. ಅನೀಶ್ ಕೂಡ ಅದೇ ಮಾತನ್ನು ತನ್ನ ಜೊತೆ ಹೇಳಿದ್ದರು. ಇದನ್ನೆಲ್ಲ ಕೇಳಿ ಅವರ ಮೇಲಿದ್ದ ಗೌರವ ಹೆಚ್ಚಾಯಿತು ಎಂದು ಹೇಳಿ ಕೊಂಡಿದ್ದಾರೆ

ಇದನ್ನೂ ಓದಿ:Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ಟ್ರೇಲರ್‌ ಔಟ್‌

ಬಳಿಕ ಮಾತನಾಡಿ ಬೆಂಗಳೂರು ಸುತ್ತ ಮುತ್ತ ಎಲ್ಲಿ ನೋಡಿದರು ಅಪ್ಪು ಸರ್ ಅವರ ಫೋಟೊ ಕಾಣ ಸಿಗುತ್ತಿತ್ತು. ಇದರಲ್ಲೇ ಅರ್ಥವಾಗುತ್ತದೆ ಜನರು ಅವರ ಮೇಲೆ ಎಷ್ಟು ಪ್ರೀತಿ ಅಭಿಮಾನ ಇಟ್ಟುಕೊಂಡಿದ್ದರು ಎಂದು ತಿಳಿಯುತ್ತದೆ. ಅಪ್ಪು ಕೇವಲ ಒಬ್ಬ ಸಿನಿಮಾ ಹೀರೊ ಮಾತ್ರವಲ್ಲ ನಿಜ ಜೀವನದಲ್ಲೂ ಉತ್ತಮ ವ್ಯಕ್ತಿತ್ವ ಹಾಗೂ ಗುಣ ಉಳ್ಳವರು. ಆದರೆ ಅವರನ್ನು ಕಳೆದು ಕೊಂಡಿರುವ ದುಃಖ ಇಂದಿಗೂ ಇದೆ ಎಂದು ನಟ ರಾಜೀವ್ ಕನಕಲ ಅವರು ಅಪ್ಪು ನೆನೆದು ಭಾವುಕರಾಗಿದ್ದಾರೆ.