`ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಿದ್ದಾರೆ'; ಸುಳ್ಳು ಸುದ್ದಿ ಬಗ್ಗೆ ಕ್ಲಾರಿಟಿ ಕೊಟ್ಟ ಮಗಳು ಇಶಾ ಡಿಯೋಲ್
ಧರ್ಮೇಂದ್ರ (Dharmendra) ಅವರು ನವೆಂಬರ್ 10 ರಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಮಂಗಳವಾರ, ಅವರ ಸಾವಿನ ಹಲವಾರು ವರದಿಗಳ ಮಧ್ಯೆ, ಇಶಾ ಡಿಯೋಲ್ (Esha Deol) ಹೇಳಿಕೆ ನೀಡಿ, ತಮ್ಮ ತಂದೆ ಸ್ಥಿರರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನಟ ಧಮೇಂದ್ರ -
ಬಾಲಿವುಡ್ ಹಿರಿಯ ನಟ ಧಮೇಂದ್ರ (Dharmendra) ಅವರ ಆರೋಗ್ಯ ಸ್ಥಿತಿ ಬಗ್ಗೆ ಮಗಳು ಇಶಾ ಡಿಯೋಲ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಧರ್ಮೇಂದ್ರ ಅವರು ನವೆಂಬರ್ 10 ರಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಮಂಗಳವಾರ, ಅವರ ನಿಧನದ ಹಲವಾರು ವರದಿಗಳ ಮಧ್ಯೆ, ಇಶಾ ಡಿಯೋಲ್ ಹೇಳಿಕೆ ನೀಡಿ, ತಮ್ಮ ತಂದೆ ಸ್ಥಿರರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಗಳು ಇಶಾ ಡಿಯೋಲ್ ಪೋಸ್ಟ್ ಏನು?
"ಮಾಧ್ಯಮಗಳು ಅತಿರೇಕದಲ್ಲಿದ್ದು ಸುಳ್ಳು ಸುದ್ದಿಗಳನ್ನು ಹರಡುತ್ತಿರುವಂತೆ ತೋರುತ್ತಿದೆ. ನನ್ನ ತಂದೆ ಸ್ಥಿರರಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಗೌಪ್ಯತೆಯನ್ನು ನೀಡುವಂತೆ ನಾವು ಎಲ್ಲರಿಗೂ ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ಪ್ರಾರ್ಥನೆಗಳಿಗೆ ಧನ್ಯವಾದಗಳು" ಎಂದು ಇಶಾ ಡಿಯೋಲ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕೊನೆಗೂ ರಕ್ಷಿತಾರ ಈ ವಿಚಾರಗಳ ಬಗ್ಗೆ ಮಾತೇ ಆಡಲಿಲ್ಲ ಕಿಚ್ಚ!
ನಿಧನಕ್ಕೆ ಸಂಬಂಧಿಸಿದ ಟ್ವೀಟ್ ಯಾರದ್ದು?
ಹಿರಿಯ ನಟ ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್ ಅವರ ಆರೋಗ್ಯದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅವರ ನಿಧನಕ್ಕೆ ಸಂಬಂಧಿಸಿದ ಹಿಂದಿನ ಟ್ವೀಟ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರದ್ದಾಗಿ ಹೇಳಲಾಗಿದ್ದು, ಧರ್ಮೇಂದ್ರ ಅವರ ಮಾಧ್ಯಮ ತಂಡದಿಂದ ದೃಢೀಕರಣದ ನಂತರ ಕುಟುಂಬದಿಂದ ಹೆಚ್ಚಿನ ಮಾಹಿತಿ ಬರುವವರೆಗೆ ಆ ಟ್ವೀಟ್ ಅನ್ನು ಈಗ ಅಳಿಸಲಾಗಿದೆ.
Daughter of veteran actor Dharmendra, Esha Deol posts an update about his health. The previous tweet related to his demise was attributed to Defence Minister Rajnath Singh, and after confirmations from the media team of Dharmendra. The tweet now stands deleted till further… pic.twitter.com/OIEptsiJJP
— ANI (@ANI) November 11, 2025
ನಟನ ಆರೋಗ್ಯದ ಬಗ್ಗೆ ವರದಿಗಳು ಬಂದ ನಂತರ ಇಶಾ ಅವರ ಸಂದೇಶ ಬಂದಿದೆ. ಕಳೆದ ವಾರ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ, ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಎಂದು ವರದಿಗಳು ಹೇಳಿದ್ದವು, ಆದರೆ ಸನ್ನಿ ಡಿಯೋಲ್ ಅವರ ತಂಡ ಸೋಮವಾರ ತಡರಾತ್ರಿ ನಟ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿತ್ತು.
1960ರಿಂದಲೂ ಧರ್ಮೇಂದ್ರ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಅವರನ್ನು ಅಭಿಮಾನಿಗಳು ಗುರುತಿಸುತ್ತಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ನಟಿಸಿ ಅನೇಕ ಬಗೆಯ ಪಾತ್ರಗಳಲ್ಲಿ ಪರಾಕಾಯ ಪ್ರವೇಶ ಮಾಡಿದ್ದಾರೆ.
1960ರಲ್ಲಿ ರಿಲೀಸ್ ಆದ ʼದಿಲ್ ಬಿ ತೇರ ಹಮ್ ಬಿ ತೇರೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಧರ್ಮೇಂದ್ರ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಬರೋಬ್ಬರಿ 6 ದಶಕಗಳಿಂದ ಹೆಚ್ಚು ಕಾಲ ಅಭಿನಯಿಸುತ್ತಲೇ ಬಂದಿದ್ದಾರೆ. ಹಿಂದಿ ಜತೆಗೆ ಪಂಜಾಬಿ, ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ಇಷ್ಟಪಟ್ಟ ಮಲ್ಲಮ್ಮ, ಚಂದ್ರಪ್ರಭ ಹೋಗಾಯ್ತು, ಉಳಿದವರು ಹುಷಾರ್ ಎಂದ ಗಿಲ್ಲಿ!
ಸದ್ಯ ಧರ್ಮೇಂದ್ರ ಕಾಣಿಸಿಕೊಂಡ ʼಇಕ್ಕೀಸ್ʼ ಹಿಂದಿ ಚಿತ್ರ ರಿಲೀಸ್‌ಗೆ ರೆಡಿ ಇದೆ. ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ಧರ್ಮೇಂದ್ರ ಮುಖ್ಯ ಪಾತ್ರ ನಿರ್ವಹಿಸಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಕಥೆಯನ್ನು ಇದು ಹೊಂದಿದೆ.