ಸುಜುಕಿ ಮೋಟಾರ್ ಸೈಕಲ್ ಇಂಡಿಯಾದಿಂದ 20 ವರ್ಷಗಳ ರೈಡಿಂಗ್ ಹೆಗ್ಗುರುತು ಭಾರತದೊಂದಿಗೆ ಸದಾ `ನಿಮ್ಮ ಕಡೆ’!
ಸುಜುಕಿಯ ಜಾಗತಿಕ ತತ್ವದಲ್ಲಿ ಬೇರೂರಿದ ಎಸ್.ಎಂ.ಐ.ಪಿ.ಎಲ್. ಪ್ರಯಾಣವು ಗ್ರಾಹಕ-ಪ್ರಥಮ ವಿಧಾನವನ್ನು ಅನುಸರಿಸುತ್ತಿದ್ದು ತಂಡದ ಕೆಲಸದ ಮೂಲಕ ಆವಿಷ್ಕಾರಕ್ಕೆ ಆದ್ಯತೆ ನೀಡುತ್ತದೆ ಮತ್ತು ಸತತ ಸುಧಾರಣೆಗೆ ಪ್ರಯತ್ನಿಸುತ್ತದೆ. ಈ ತತ್ವಗಳು ಭಾರತದಲ್ಲಿ ಎಸ್.ಎಂ.ಐ.ಪಿ.ಎಲ್. ಪ್ರಗತಿಯನ್ನು ರೂಪಿಸಿವೆ.
-
ಗುರುಗ್ರಾಮ್: ಜಪಾನಿನ ಸುಜುಕಿ ಮೋಟಾರ್ ಕಾರ್ಪೊರೇಷನ್ ನ ದ್ವಿಚಕ್ರ ವಾಹನದ ಅಧೀನ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ.ಲಿ. (ಎಸ್.ಎಂ.ಐ.ಪಿ.ಎಲ್.) ಭಾರತದಲ್ಲಿ ತನ್ನ ಪ್ರಯಾಣದ 20 ವರ್ಷಗಳ ಸಂಭ್ರಮಾಚರಣೆ ಮಾಡುತ್ತಿದ್ದು ಇದು ಸದೃಢವಾದ ಗ್ರಾಹಕರ ನಂಬಿಕೆ ನಿರ್ಮಿಸಿದ, ವಿಶ್ವಾಸಾರ್ಹ ಉತ್ಪನ್ನಗಳನ್ನು ಪೂರೈಸಿದ ಮತ್ತು ಭಾರತದ ಮೊಬಿಲಿಟಿಯ ಅಗತ್ಯ ಗಳೊಂದಿಗೆ ವಿಕಾಸಗೊಂಡ ಎರಡು ದಶಕಗಳ ಗುರುತಾಗಿದೆ.
ಸುಜುಕಿಯ ಜಾಗತಿಕ ತತ್ವದಲ್ಲಿ ಬೇರೂರಿದ ಎಸ್.ಎಂ.ಐ.ಪಿ.ಎಲ್. ಪ್ರಯಾಣವು ಗ್ರಾಹಕ-ಪ್ರಥಮ ವಿಧಾನವನ್ನು ಅನುಸರಿಸುತ್ತಿದ್ದು ತಂಡದ ಕೆಲಸದ ಮೂಲಕ ಆವಿಷ್ಕಾರಕ್ಕೆ ಆದ್ಯತೆ ನೀಡುತ್ತದೆ ಮತ್ತು ಸತತ ಸುಧಾರಣೆಗೆ ಪ್ರಯತ್ನಿಸುತ್ತದೆ. ಈ ತತ್ವಗಳು ಭಾರತದಲ್ಲಿ ಎಸ್.ಎಂ.ಐ.ಪಿ.ಎಲ್. ಪ್ರಗತಿಯನ್ನು ರೂಪಿಸಿವೆ.
ಮೊದಲ ಹೆಜ್ಜೆಯಿಂದ ಮಿಲಿಯನ್ ಗಟ್ಟಲೆ ಪ್ರಯಾಣಗಳವರೆಗೆ
ಸುಜುಕಿ ಮೋಟಾರ್ ಕಾರ್ಪೊರೇಷನ್ (ಎಸ್.ಎಂ.ಸಿ.) 2006ರಲ್ಲಿ ಮೋಟಾರ್ ಸೈಕಲ್ ವಲಯದಲ್ಲಿ ಸುಜುಕಿ ಹೀಟ್ 125 ಮತ್ತು ಸುಜುಕಿ ಝ್ಯೂಸ್ 125 ಬಿಡುಗಡೆ ಮೂಲಕ ಭಾರತೀಯ ದ್ವಿಚಕ್ರ ಮಾರುಕಟ್ಟೆಯನ್ನು ಪ್ರವೇಶಿಸಿತು ಮತ್ತು ನಂತರ 2007ರಲ್ಲಿ ತನ್ನ ಸುಜುಕಿ ಅಕ್ಸೆಸ್ 125 ಸ್ಕೂಟರ್ ಬಿಡುಗಡೆ ಮೂಲಕ ತನ್ನ ಉತ್ಪನ್ನದ ಕೊಡುಗೆಗಳನ್ನು ಸದೃಢಗೊಳಿಸಿಕೊಂಡಿತು.
ಇದನ್ನೂ ಓದಿ: Osamu Suzuki: ಮಾರುತಿ-ಸುಜುಕಿ ಮೂಲಕ ಭಾರತದಲ್ಲೂ ವಾಹನ ಕ್ರಾಂತಿ ಮೂಡಿಸಿದ ಒಸಾಮು ಸುಜುಕಿ ವಿಧಿವಶ
ಹಲವು ವರ್ಷಗಳಿಂದ ಎಸ್.ಎಂ.ಐ.ಪಿ.ಎಲ್. ಪ್ರತಿನಿತ್ಯದ ಸಂಚಾರದಿಂದ ಕಾರ್ಯಕ್ಷಮತೆ ಕೇಂದ್ರಿತ ಮೋಟಾರ್ ಸೈಕ್ಲಿಂಗ್ ವರೆಗೆ ವಿಸ್ತಾರ ಗ್ರಾಹಕರ ಅಗತ್ಯಗಳಿಗೆ ಪೂರೈಸುವ ತನ್ನ ಉತ್ಪನ್ನದ ವ್ಯಾಪ್ತಿ ವಿಸ್ತರಿಸಿತು.
ಭಾರತದಲ್ಲಿ 20 ವರ್ಷಗಳು ಪೂರ್ಣಗೊಳಿಸಿರುವ ಕುರಿತು ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈ.ಲಿ.ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆನಿಚಿ ಉಮೇಡಾ,
“ಭಾರತದಲ್ಲಿ ಉತ್ಪಾದನೆ ಪ್ರಾರಂಭಿಸಿದ 20 ವರ್ಷಗಳ ಹೆಗ್ಗುರುತು ಎಸ್.ಎಂ.ಐ.ಪಿ.ಎಲ್.ನಲ್ಲಿ ನಮಗೆಲ್ಲರಿಗೂ ಗಮನಾರ್ಹ ಮೈಲಿಗಲ್ಲಾಗಿದೆ. ಈ ಪ್ರಯಾಣವು ನಮ್ಮ ಗ್ರಾಹಕರು, ಡೀಲರ್ ಪಾಲು ದಾರರು, ಪೂರೈಕೆದಾರರು ಮತ್ತು ಉದ್ಯೋಗಿಗಳ ವಿಶ್ವಾಸ ಮತ್ತು ಬೆಂಬಲದಿಂದ ಸಾಧ್ಯವಾಗಿದ್ದು ಅವರು ನಮ್ಮೊಂದಿಗೆ ಪ್ರತಿಯೊಂದು ಹೆಜ್ಜೆಯಲ್ಲೂ ನಿಂತಿದ್ದಾರೆ. ನಮ್ಮ ಉತ್ಪನ್ನದ ಪೋರ್ಟ್ ಫೋಲಿಯೊದ ವಿಸ್ತರಣೆ, ಉತ್ಪಾದನೆಯಲ್ಲಿ ಸುಸ್ಥಿರ ಹೂಡಿಕೆಗಳು ಮತ್ತು ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಗೆ ಆದ್ಯತೆಯಿಂದ ನಾವು ಭಾರತದಲ್ಲಿ ನಮ್ಮ ಉಪಸ್ಥಿತಿಯನ್ನು ಕ್ರಮೇಣ ವಿಸ್ತರಿಸುತ್ತಿದ್ದೇವೆ.
ಈ ಪ್ರಗತಿಯು ನಮಗೆ ನಂಬಿಕೆ ಮತ್ತು ಸಹಯೋಗದಿಂದ ಸ್ಥಾಪನೆಯಾದ ವ್ಯವಸ್ಥೆಯನ್ನು ನಿರ್ಮಿ ಸಲು ಅವಕಾಶ ನೀಡಿದ್ದು ಎಲ್ಲ ರಾಜ್ಯಗಳಲ್ಲೂ 1,240 ಟಚ್ ಪಾಯಿಂಟ್ ಗಳು ಮತ್ತು 212 ಪೂರೈಕೆದಾರರ ಸದೃಢ ಸಹಯೋಗಗಳನ್ನು ಹೊಂದಿದೆ. ಒಟ್ಟಿಗೆ ಈ ಪ್ರಯತ್ನಗಳು ನಮ್ಮ ಗ್ರಾಹಕ ರಲ್ಲಿ ನಗು ತರಲು ನೆರವಾಗಿವೆ.
ನಮ್ಮ ವಿಧಾನದ ಕೇಂದ್ರದಲ್ಲಿ `ಒನ್-ಬೈ-ಒನ್’ ರೀತಿಯ ಕೆಲಸದ ವಿಧಾನವಿದ್ದು ಅದು ಪ್ರತಿ ಯೂನಿಟ್ ನಲ್ಲೂ ಅತ್ಯುತ್ತಮ ಗುಣಮಟ್ಟ ಪೂರೈಸಲು ಮತ್ತು ಪ್ರತಿ ಗ್ರಾಹಕನಿಗೂ ಉನ್ನತ ಆತಿಥ್ಯ ನೀಡಲು ಒತ್ತು ನೀಡುವ ಮೂಲಕ ಸುಜುಕಿಯೊಂದಿಗಿನ ಅವರ ಪ್ರಯಾಣದ ಪ್ರತಿ ಹೆಜ್ಜೆಗೂ ಸಾಧ್ಯ ವಿರುವ ಅತ್ಯುತ್ತಮ ಅನುಭವ ನೀಡುತ್ತದೆ.
ಪ್ರಸ್ತುತ ನಡೆಯುತ್ತಿರುವ ಉತ್ಪನ್ನದ ಆವಿಷ್ಕಾರ ಮತ್ತು ಗ್ರಾಹಕರ ಬೇಡಿಕೆಯು ನಮಗೆ ಹೊಸ ಕೊಡುಗೆಗಳನ್ನು ನೀಡಲು ಉತ್ತೇಜಿಸಿವೆ, ಅದರಲ್ಲಿ ಇ-ಅಕ್ಸೆಸ್, ಅಕ್ಸೆಸ್ ವಿಥ್ ಎಬಿಎಸ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಬರ್ಗ್ಮನ್ ಸ್ಟ್ರೀಟ್ ಒಳಗೊಂಡಿವೆ. ಇದು ನಮಗೆ ಖಾರ್ಕೋಡದಲ್ಲಿ ನಮ್ಮ ಎರಡನೆಯ ಉತ್ಪಾದನಾ ಘಟಕ ಪ್ರಾರಂಭಿಸಲು ಸಜ್ಜಾಗಲು ಉತ್ತೇಜಿಸಿದ್ದು ನಮ್ಮ ಭವಿಷ್ಯದ ಪ್ರಗತಿಯ ಕಾರ್ಯತಂತ್ರವು ಇಂಗಾಲದ ತಟಸ್ಥತೆಯ ಬಹು ಮಾರ್ಗಗಳ ವಿಧಾನದಿಂದ ಪ್ರೇರಿತವಾಗಿದ್ದು ಅದು ಭಾರತಕ್ಕೆ ಅತ್ಯುತ್ತಮವಾಗಿ ಹೊಂದಿಕೊಳ್ಳುವ ವಿಸ್ತಾರವಾದ ಇಂಧನ ಮತ್ತು ವಿದ್ಯುಚ್ಛಕ್ತಿಯ ಪರಿಹಾರಗಳನ್ನು ಅಳವಡಿಸಿಕೊಂಡಿದೆ” ಎಂದರು.
ಈ ಉತ್ಪನ್ನವನ್ನು ರೂಪಿಸಿದ ಉತ್ಪನ್ನಗಳು ಮತ್ತು ಮೈಲಿಗಲ್ಲುಗಳು
ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಭಾರತದ ಎಸ್.ಎಂ.ಐ.ಪಿ.ಎಲ್.ನ ಪ್ರಗತಿಯು ವಿಸ್ತಾರ ಮತ್ತು ವಿಕಾಸಗೊಳ್ಳುತ್ತಿರುವ ಉತ್ಪನ್ನಗಳ ವ್ಯಾಪ್ತಿಯಿಂದ ಪ್ರೇರಿತವಾಗಿದ್ದು ಅದು ಪ್ರಮುಖ ಮೈಲಿಗಲ್ಲುಗಳನ್ನು ಹೊಂದಿದೆ. ಈ ಪ್ರಯಾಣದ ಕೇಂದ್ರದಲ್ಲಿ ಸುಜುಕಿ ಅಕ್ಸೆಸ್ ಇದ್ದು ಇದು 125ಸಿಸಿ ಸ್ಕೂಟರ್ ವಲಯ ರೂಪಿಸುವಲ್ಲಿ ನೆರವಾಗಿದ್ದು ನಂತರ ಸುಜುಕಿ ಬರ್ಗ್ಮನ್ ಅದನ್ನು ಅನುಸರಿಸಿದ್ದು ಇದು ಐಷಾರಾಮಿ ಸ್ಕೂಟರ್ ಕ್ಷೇತ್ರವನ್ನು ಮರು ವ್ಯಾಖ್ಯಾನಿಸಿದೆ ಮತ್ತು ಸ್ಪೋರ್ಟಿ ಅವೆನಿಸ್ ಒಟ್ಟಿಗೆ ವಿಸ್ತಾರ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಸಮಗ್ರ ಸ್ಕೂಟರ್ ಅನುಭವ ನೀಡುತ್ತವೆ. ಜಿಕ್ಸರ್ ಸೀರೀಸ್, ವಿ-ಸ್ಟ್ರೊಮ್ ಎಸ್.ಎಕ್ಸ್. ಅವುಗಳೊಂದಿಗೆ ಹಯಬುಸ, ಜಿ.ಎಸ್.ಎಕ್ಸ್.-8ಆರ್, ವಿ-ಸ್ಟ್ರೊಮ್ 800 ಡಿಇಯಂತಹ ಬೈಕ್ ಗಳು ವಿವಿಧ ವಲಯಗಳಲ್ಲಿ ಸುಜುಕಿಯ ಉಪಸ್ಥಿತಿ ಸದೃಢಗೊಳಿಸಿವೆ.
ಈ ಸಂದರ್ಭವು ಪ್ರಮುಖ ಮೈಲಿಗಲ್ಲುಗಳ ಸಾಧನೆಯಾಗಿದ್ದು ಎಸ್.ಎಂ.ಐ.ಪಿ.ಎಲ್. 2012ರಲ್ಲಿ ಮೊದಲ ಒಂದು ಮಿಲಿಯನ್ ಗ್ರಾಹಕರನ್ನು ಸಾಧಿಸಿತು, 2020ರಲ್ಲಿ 5 ಮಿಲಿಯನ್ ಯೂನಿಟ್ ಗಳನ್ನು ದಾಟಿತು ಮತ್ತು 2026ರಲ್ಲಿ ಭಾರತದಲ್ಲಿ ಉತ್ಪಾದನೆಯಾದ 10 ಮಿಲಿಯನ್ ದ್ವಿಚಕ್ರ ವಾಹನಗಳ ಪ್ರಮುಖ ಮೈಲಿಗಲ್ಲು ಸಾಧಿಸಿದ್ದು ಇದು ಗ್ರಾಹಕರ ನಂಬಿಕೆ ಮತ್ತು ಸುಸ್ಥಿರ ಪ್ರಗತಿ ಯನ್ನು ಬಿಂಬಿಸುತ್ತದೆ.
`ಬೈ ಯುವರ್ ಸೈಡ್- ಕ್ರಿಯಾತ್ಮಕತೆಯ ಸ್ಫೂರ್ತಿ
`ನಿಮ್ಮ ಕಡೆ’ ಇರುವ ಭರವಸೆಯ ಸುತ್ತಲೂ ಬೆಳೆದ ಸುಜುಕಿಯು ರೈಡಿಂಗ್ ಆಚೆಗೂ ಅನುಭವ ಗಳನ್ನು ಪೂರೈಸುವ ಮೂಲಕ ಗ್ರಾಹಕ ಬಾಂಧವ್ಯಗಳನ್ನು ಸದೃಢಗೊಳಿಸುತ್ತದೆ. ಇದನ್ನು ದೇಶ ವ್ಯಾಪಿ ಜಾಲ, ಪರಿಣಾಮಕಾರಿ ಅನುಭವಪೂರ್ವಕ ಉಪಕ್ರಮಗಳು, ಸ್ಥಿರವಾದ ಡೀಲರ್ ಶಿಪ್ ಆತಿಥ್ಯ ಮತ್ತು ಸದೃಢ ಮಾರಾಟ ನಂತರದ ಬೆಂಬಲದ ಮೂಲಕ ಸಾಧ್ಯವಾಗಿಸಲಾಗಿದೆ. ಪಾಲು ದಾರರ ನೇತೃತ್ವದ ಪ್ರಗತಿಯ ವಿಧಾನವು ಡೀಲರ್ ಪಾಲುದಾರರಿಗೆ ಸ್ಥಿರವಾದ ವಿಸ್ತರಣೆ ಯಿಂದ ಪ್ರೇರಿತವಾಗಿದ್ದು ಪೂರೈಕೆದಾರರ ಸಹಯೋಗವು ವಿಶ್ವಾಸ, ಸಾಮರ್ಥ್ಯ ನಿರ್ಮಾಣ ಮತ್ತು ಸುಸ್ಥಿರತೆಯಿಂದ ದೀರ್ಘಾವಧಿ ಮೌಲ್ಯ ಸೃಷ್ಟಿಯನ್ನು ಮರು ದೃಢೀಕರಿಸಿದೆ. ಇದಕ್ಕೆ ಪೂರಕವಾಗಿ ಜನರ-ಕೇಂದ್ರಿತ ಸಂಸ್ಕೃತಿಯು ಉದ್ಯೋಗಿಗಳನ್ನು ಮಾನ್ಯತೆ, ಸಕ್ರಿಯತೆ ಮತ್ತು ಸತತ ಅಭಿವೃದ್ಧಿಯ ಮೂಲಕ ಸನ್ನದ್ಧವಾಗಿಸುತ್ತದೆ.
ಭವಿಷ್ಯಕ್ಕೆ ಚಾಲನೆ: ಬಹು ಮಾರ್ಗಗಳ ವಿಧಾನ
ಎಸ್.ಎಂ.ಐ.ಪಿ.ಎಲ್. ತಂತ್ರಜ್ಞಾನದ ವಿಕಾಸಗೊಳ್ಳುವ ಯುಗದಲ್ಲಿ ಉದ್ದೇಶ-ಪ್ರೇರಿತ ಆವಿಷ್ಕಾರಕ್ಕೆ ಹೆಚ್ಚು ಆದ್ಯತೆ ನೀಡುವುದನ್ನು ಮುಂದುವರಿಸಿದ್ದು ಇದು ಸುಜುಕಿಯ ಜಾಗತಿಕ ಧ್ಯೇಯಕ್ಕೆ ಪೂರಕವಾಗಿದೆ. ಇಲ್ಲಿಯವರೆಗಿನ ಪ್ರಮುಖ ಉಪಕ್ರಮಗಳಲ್ಲಿ ಸುಜುಕಿ ಇ-ಅಕ್ಸೆಸ್ ಬಿಡುಗಡೆ ಒಳಗೊಂಡಿದ್ದು ಇದು ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೇಶವಾಗಿದೆ ಮತ್ತು ಸುಜುಕಿ ಜಿಕ್ಸರ್ ಎಸ್.ಎಫ್. 250 ಎಫ್.ಎಫ್.ವಿ.ಯು ಇ85-ಅನುಸರಣೆಯ ಫ್ಲೆಕ್ಸ್-ಫ್ಯೂಯೆಲ್ ತಂತ್ರಜ್ಞಾನ ಹೊಂದಿದೆ.
ಜಾಗತಿಕ ಪರಂಪರೆ, ಸ್ಥಳೀಯ ಪ್ರಸ್ತುತತೆ
ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಶತಮಾನದ ಜಾಗತಿಕ ಚಲನೆಯ ಪರಂಪರೆಯ ಬೆಂಬಲ ಹೊಂದಿರುವ ಎಸ್.ಎಂ.ಐ.ಪಿ.ಎಲ್.ನ ಗುರುಗ್ರಾಮ್ ಉತ್ಪಾದನಾ ಸೌಲಭ್ಯವು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ಮೇಡ್-ಇನ್-ಇಂಡಿಯಾ ಸುಜುಕಿ ದ್ವಿಚಕ್ರ ವಾಹನಗಳು ವಿಶ್ವದಾದ್ಯಂತ 77 ದೇಶಗಳಿಗೆ ರಫ್ತಾಗುತ್ತಿವೆ.
ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಮುನ್ನಡೆಯುತ್ತಿದ್ದಂತೆ ಇದು ಪ್ರತಿ ರೈಡ್ ಅನ್ನೂ ಹೆಚ್ಚು ವಿಶ್ವಾಸಾರ್ಹ ಮತ್ತು ಆನಂದದಾಯಕವಾಗಿಸಲು ಭಾರತಕ್ಕೆ ತನ್ನ ಬದ್ಧತೆಯನ್ನು ಮರು ದೃಢೀಕರಿಸಿದೆ.
*
ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಭಾರತದಲ್ಲಿ ಉತ್ಪಾದನೆ ಪ್ರಾರಂಭವಾಗಿ 20 ವರ್ಷಗಳು ಸಂಪೂರ್ಣವಾಗಿವೆ
- ಕಳೆದ ನಾಲ್ಕು ವರ್ಷಗಳಲ್ಲಿ ಮಾರಾಟ ದುಪ್ಪಟ್ಟಾಗಿದ್ದು ಅದಕ್ಕೆ ಬಲವಾದ ಬೇಡಿಕೆ ಮತ್ತು ಉತ್ಪನ್ನದ ಆವಿಷ್ಕಾರ ಕಾರಣವಾಗಿವೆ
- 10 ಮಿಲಿಯನ್ ಯೂನಿಟ್ ಗಳ ಉತ್ಪಾದನೆಯ ಮೈಲಿಗಲ್ಲು ಸಾಧಿಸಲಾಗಿದೆ
- ಎಲೆಕ್ಟ್ರಿಕ್ ಮೊಬಿಲಿಟಿ, ಫ್ಲೆಕ್ಸ್-ಫ್ಯೂಯೆಲ್ ತಂತ್ರಜ್ಞಾನ ಮತ್ತ ಖಾರ್ಖೋಡದಲ್ಲಿ ಹೊಸ ಉತ್ಪಾದನಾ ಘಟಕದೊಂದಿಗೆ ಭವಿಷ್ಯ ಸನ್ನದ್ಧ ಉತ್ಪಾದನೆ
- ಸುಜುಕಿಯ `ಬೈ ಯುವರ್ ಸೈಡ್’ ತತ್ವವು ಗ್ರಾಹಕರು ಮತ್ತು ಪಾಲುದಾರರನ್ನು ಪ್ರತಿಯೊಂದು ಪ್ರಯಾಣದ ಕೇಂದ್ರದಲ್ಲಿರಿಸುತ್ತದೆ