ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ನಿಮ್ಮನ್ನು ನೀವು ದೇವರೆಂದುಕೊಂಡಿದ್ದೀರಾ'? ಆಹಾರ ಸುರಕ್ಷತಾ ಸಂಸ್ಥೆ FDAಯನ್ನು ತರಾಟೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

Bombay High court: ಕಾನೂನನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ ಅಗತ್ಯವಾಗಿ ಆತುರದಿಂದ ಆದೇಶಗಳನ್ನು ಜಾರಿಗೊಳಿಸಿದ ತುಕಾರಾಮ್ ಮುಂಢೆ ನೇತೃತ್ವದ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ)ವನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನೈಸರ್ಗಿಕ ನ್ಯಾಯ ತತ್ತ್ವಗಳನ್ನು ಉಲ್ಲಂಘಿಸಿರುವುದಕ್ಕೆ ನ್ಯಾಯಪೀಠ ಎಫ್‌ಡಿಎಯನ್ನು ಟೀಕಿಸಿದೆ.

ತುಕಾರಾಮ್ ಮುಂಢೆ ನೇತೃತ್ವದ ಎಫ್‌ಡಿಎಗೆ ಬಾಂಬೆ ಹೈಕೋರ್ಟ್ ತರಾಟೆ

ಸಂಗ್ರಹ ಚಿತ್ರ -

ಮುಂಬೈ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತುಕಾರಾಮ್ ಮುಂಢೆ (Tukaram Mundhe) ನೇತೃತ್ವದ ಮಹಾರಾಷ್ಟ್ರ (Maharashtra) ಆಹಾರ ಮತ್ತು ಔಷಧ ಆಡಳಿತ ಮಂಡಳಿಯನ್ನು (Food and Drugs Administration) ಬಾಂಬೆ ಹೈಕೋರ್ಟ್ (bombay high court) ತರಾಟೆಗೆ ತೆಗೆದುಕೊಂಡಿದೆ. ಪುಣೆಯ ಸಿಪ್ಲಾ ಮತ್ತು ಮುಂಬೈಯ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(Mumbai Cricket Association) ಆವರಣದಲ್ಲಿದ್ದ ಐದು ತಿನಿಸುಗಳ ವಿರುದ್ಧದ ಆದೇಶಗಳನ್ನು ಹಿಂತೆಗೆದುಕೊಳ್ಳುವಂತೆ ಶನಿವಾರ ಎಫ್‌ಡಿಎಗೆ ಆದೇಶಿಸಿದೆ. ಕಾನೂನನ್ನು ಸರಿಯಾಗಿ ವಿಶ್ಲೇಷಣೆ ಮಾಡದೆ ಅಗತ್ಯವಾಗಿ ಆತುರದಿಂದ ಆದೇಶ ಜಾರಿಗೊಳಿಸಿರುವುದಕ್ಕಾಗಿ ನ್ಯಾಯಪೀಠ ಎಫ್‌ಡಿಎಯನ್ನು ಟೀಕಿಸಿದೆ.

ಬಾಂದ್ರಾ- ಕುರ್ಲಾ ಸಂಕೀರ್ಣದ ಎಂಸಿಎ ಆವರಣದ ಐದು ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದ ವಿಚಾರಣೆಯ ಸಮಯದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರನ್ನೊಳಗೊಂಡ ನ್ಯಾಯ ಪೀಠವು, ನೀವು ದೇವರೆಂದು ಭಾವಿಸಿದ್ದೀರಾ ಎಂದು ಪ್ರಶ್ನಿಸಿದೆ. ನೈಸರ್ಗಿಕ ನ್ಯಾಯ ತತ್ತ್ವ ಗಳನ್ನು ಉಲ್ಲಂಘಿಸಿ ಪ್ರಾಯೋಗಿಕವಾಗಿ ನೋಡದೆ ನಿಷ್ಠುರ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದೆ.

ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ಹಿಂದೂ ಆಗರಲಾರ: ಮೋಹನ್ ಭಾಗವತ್

ಆಹಾರ ತಪಾಸಣೆಯಲ್ಲಿ ತಿನಿಸುಗಳು ಆಹಾರ ಸುರಕ್ಷತೆಯ ಅವಶ್ಯಕತೆಗಳಲ್ಲಿ ಶೇ. 88ರಷ್ಟು ಅನುಸರಣೆ ಮಾಡಿರುವುದನ್ನು ಮನಗಂಡ ನ್ಯಾಯಪೀಠ, ಎಫ್‌ಡಿಎ ಆದೇಶವನ್ನು ಪ್ರಶ್ನಿಸಿ ನೀವು ಏನನ್ನಾದರೂ ಮಾಡಬಹುದು ಎಂದು ಯೋಚಿಸಿದ್ದೀರಾ, ಇಲಾಖೆ ಪದೇ ಪದೇ ಅನಗತ್ಯ ಆತುರದಿಂದ ವರ್ತಿಸುವುದು ಏಕೆ ಎಂದು ಕೇಳಿದೆ.

ಯಾವುದೇ ಆದೇಶವನ್ನು ಜಾರಿಗೊಳಿಸುವ ಮೊದಲು ಪ್ರಾಯೋಗಿಕ ದೃಷ್ಟಿಕೋನವನ್ನು ಪರಿಗಣಿಸಬೇಕು ಎಂದಿರುವ ನ್ಯಾಯಪೀಠ, ನಾವು ಇಲಾಖೆ ಮತ್ತು ಅಧಿಕಾರಿಗಳನ್ನು ಬೈಯುವುದರಿಂದ ಬೇಸತ್ತಿದ್ದೇವೆ. ಈಗ ಕಟುವಾದ ಆದೇಶಗಳನ್ನು ನೀಡುವ ಸಮಯ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಾವು ನ್ಯಾಯಾಂಗ ನಿಂದನೆ ಕ್ರಮವನ್ನು ಕೈಗೊಳ್ಳುತ್ತೇವೆ. ಅವರು ಮನವರಿಕೆ ಮಾಡಿಕೊಳ್ಳಲಿ ಅಥವಾ ಜೈಲಿಗೆ ಹೋಗಲಿ ಎಂದು ಹೇಳಿದೆ.

ಎಫ್‌ಡಿಎ ಐದು ತಿನಿಸುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ತನ್ನ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ಎಂಸಿಎ ಗೆ ಹೊಸ ನೋಟಿಸ್ ಕಳುಹಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತು. ಅಲ್ಲದೇ ಎಂ/ಎಸ್ ಶಿರ್ಕೆ ಇನ್ಫ್ರಾಸ್ಟ್ರಕ್ಚರ್ ಜೊತೆಗಿನ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು. ಇದನ್ನು ಪರಿಗಣಿಸಿ ನ್ಯಾಯಾಲಯ ತಿನಿಸುಗಳ ವಿರುದ್ಧ ಎಫ್‌ಡಿಎ ಹೊರಡಿಸಿದ್ದ ಅಮಾನತು ಆದೇಶವನ್ನು ರದ್ದುಗೊಳಿಸಿ ರೆಸ್ಟೋರೆಂಟ್‌ಗಳು ಮತ್ತೆ ತೆರೆಯುವಂತೆ ಆದೇಶ ನೀಡಿದೆ.

ಏನಿದು ವಿವಾದ ?

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(MCA) ಆವರಣದಲ್ಲಿ ಎಂ/ಎಸ್ ಶಿರ್ಕೆ ಇನ್ಫ್ರಾಸ್ಟ್ರಕ್ಚರ್ ನಿರ್ವಹಿಸುವ ಆಹಾರಗಳಿಗೆ ನೀಡಲಾಗಿರುವ ಪರವಾನಗಿಗಳಿಂದಾಗಿ ವಿವಾದ ಉಂಟಾಗಿತ್ತು. ಇದನ್ನು ನಿಷೇಧಿಸಲು ಕಾನೂನು ಅಡಿಯಲ್ಲಿ ಯಾವುದೇ ನಿಬಂಧನೆಗಳು ಇಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಎಫ್‌ಡಿಎ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿದೆ.

ಇನ್ನೊಂದು ಪ್ರಕರಣ ಪುಣೆಯ ವಾಡ್ಕಿಯಲ್ಲಿರುವ ಸಿಪ್ಲಾ ಫಾರ್ಮಾ ಆಂಡ್ ಲೈಫ್ ಸೈನ್ಸಸ್ ಲಿಮಿಟೆಡ್‌ನ ಔಷಧ ಮಾರಾಟ ಪರವಾನಗಿಗಳನ್ನು ರದ್ದುಗೊಳಿಸುವ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಎಫ್‌ಡಿಎಗೆ ಹೈಕೋರ್ಟ್ ಆದೇಶಿಸಿದೆ.

ರಿಯಾಕ್ಟಿನ್ ಪ್ಲಸ್ ಟ್ಯಾಬ್ಲೆಟ್‌ಗಳ ಪ್ಯಾಕೇಜಿಂಗ್ ಮತ್ತು ಹಿಂಪಡೆಯುವಿಕೆಯ ಅನಂತರ ತನಿಖೆ ವೇಳೆ ಕಂಡು ಬಂದಿರುವ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಪರವಾನಗಿಗಳನ್ನು ಎಫ್‌ಡಿಎ ರದ್ದುಗೊಳಿಸಿತ್ತು. ರಾಜ್ಯ ಸರ್ಕಾರ ಘೋಷಿಸಿದ ಸಾರ್ವಜನಿಕ ರಜಾದಿನದಂದು ವಿಚಾರಣೆಗಾಗಿ ಕಂಪನಿಯ ಪ್ರತಿನಿಧಿಯನ್ನು ಕರೆಸುವ ಇಮೇಲ್ ಸೇರಿದಂತೆ ಎಫ್‌ಡಿಎ ಅನುಸರಿಸಿದ ಕಾರ್ಯವಿಧಾನವನ್ನು ನ್ಯಾಯಾಲಯ ಪ್ರಶ್ನಿಸಿದೆ.

ಒಳ್ಳೆಯ ಕೆಲಸ ಮಾಡಿದ್ದೀರಿ. ಆದರೆ ಮಿತಿ ಮೀರಿ ಯಾಕೆ ಕೆಲಸ ಮಾಡಿದ್ದೀರಿ. ಇದು ಮೊದಲ ಪ್ರಕರಣವಲ್ಲ. ತಪ್ಪು ಮಾಡಿದ್ದೀರಿ. ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಬೇಕು. ಪರವಾನಗಿಯನ್ನು ರದ್ದುಗೊಳಿಸುವಲ್ಲಿ ತಪ್ಪು ವಿಧಾನವನ್ನು ಅನುಸರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಆದೇಶವು ನೈಸರ್ಗಿಕ ನ್ಯಾಯದ ತತ್ತ್ವಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.

ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್‌ ಇಂಡಿಯ: ಒತ್ತಡ ಹೇರಲಾಗಿದೆ ಎಂದ ಕಾಂಗ್ರೆಸ್, ಬಿಜೆಪಿಯಿಂದ ತಿರುಗೇಟು

ನ್ಯಾಯಾಲಯದ ಆದೇಶದ ಬಳಿಕ ಎಫ್‌ಡಿಎಯು ಸಿಪ್ಲಾ ಫಾರ್ಮಾ ಆಂಡ್ ಲೈಫ್ ಸೈನ್ಸಸ್ ಲಿಮಿಟೆಡ್‌ನ ಔಷಧ ಮಾರಾಟ ಪರವಾನಗಿ ರದ್ದು ಆದೇಶವನ್ನು ಹಿಂತೆಗೆದುಕೊಂಡಿದೆ.