ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸತತ ಎರಡನೇ ವರ್ಷವೂ ಇಪಿಎಫ್ ಬಡ್ಡಿದರ ಯಥಾಸ್ಥಿತಿ

Employees Provident Fund: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಸೋಮವಾರ 2025-26ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.25ಕ್ಕೆ ನಿಗದಿಪಡಿಸಿದ್ದು, ಸತತ ಎರಡನೇ ವರ್ಷವೂ ಅದೇ ದರವನ್ನು ಉಳಿಸಿಕೊಂಡಿದೆ. ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಪಿಎಫ್: ಸತತ ಎರಡನೇ ವರ್ಷವೂ ಬಡ್ಡಿದರ ಯಥಾಸ್ಥಿತಿ

ಸಾಂದರ್ಭಿಕ ಚಿತ್ರ. -

Priyanka P
Priyanka P Mar 2, 2026 6:54 PM

ನವದೆಹಲಿ, ಮಾ. 2: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ಸೋಮವಾರ 2025-26ನೇ ಸಾಲಿಗೆ ನೌಕರರ ಭವಿಷ್ಯ ನಿಧಿ (Employees' Provident Fund) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.25ಕ್ಕೆ ನಿಗದಿಪಡಿಸಿದ್ದು (EPF interest rate), ಸತತ ಎರಡನೇ ವರ್ಷವೂ ಅದೇ ದರವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ, ಇಪಿಎಫ್‌ಒ 2024-25ರ ಆರ್ಥಿಕ ವರ್ಷಕ್ಕೆ ಶೇ. 8.25 ರ ಬಡ್ಡಿದರ ನಿಗದಿಪಡಿಸಿತ್ತು.

ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (CBT) ಸಭೆಯಲ್ಲಿ ಸೋಮವಾರ (ಮಾರ್ಚ್‌ 2) ಈ ನಿರ್ಧಾರ ಕೈಗೊಳ್ಳಲಾಗಿದೆ. 2025-26ನೇ ಸಾಲಿಗೆ ಇಪಿಎಫ್ ಮೇಲೆ ಶೇಕಡಾ 8.25ರಷ್ಟು ಬಡ್ಡಿದರವನ್ನು ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಳ್ಳಲಾಗಿದೆ.

ಯುಪಿಐ ಮೂಲಕ ಇಪಿಎಫ್ ಹಣ ಪಡೆಯಲು ಅವಕಾಶ; ಯಾವಾಗ, ಹೇಗೆ?

2024ರಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO), 2022-23ರಲ್ಲಿ ಶೇ. 8.15ರಿಂದ 2023-24ಕ್ಕೆ ಶೇ. 8.25ಕ್ಕೆ ಬಡ್ಡಿದರವನ್ನು ಸ್ವಲ್ಪ ಹೆಚ್ಚಿಸಿತು. 2022ರಲ್ಲಿ, EPFO ​​ತನ್ನ ಏಳು ಕೋಟಿಗೂ ಹೆಚ್ಚು ಚಂದಾದಾರರಿಗೆ 2021-22ರ ನಿವೃತ್ತಿ ನಂತರದ ಠೇವಣಿಗಳ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ಕನಿಷ್ಠ ಮಟ್ಟವಾದ ಶೇ. 8.10ಕ್ಕೆ ಇಳಿಸಿತ್ತು.

ಸಿಬಿಟಿಯ ನಿರ್ಧಾರದ ನಂತರ, 2025-26ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ. ಸರ್ಕಾರ ಅನುಮೋದನೆ ನೀಡಿದ ನಂತರ, 2025-26ರ ಬಡ್ಡಿದರವನ್ನು ಏಳು ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

7 ಕೋಟಿ EPFO ಚಂದಾದಾರರಿಗೆ ಗುಡ್ ನ್ಯೂಸ್; ಹೆಚ್ಚಾಗಲಿದೆ ಇಪಿಎಫ್ ವಾರ್ಷಿಕ ಬಡ್ಡಿ ದರ

ಸರ್ಕಾರವು ಹಣಕಾಸು ಸಚಿವಾಲಯದ ಮೂಲಕ ಅನುಮೋದನೆ ನೀಡಿದ ನಂತರ ಇಪಿಎಫ್‌ಒ ಬಡ್ಡಿದರವನ್ನು ಒದಗಿಸುತ್ತದೆ. 2020ರಲ್ಲಿ ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ ಮಟ್ಟವಾದ ಶೇ. 8.5ಕ್ಕೆ ಇಳಿಸಿತ್ತು.

ಇಪಿಎಫ್‌ಒ ತನ್ನ ಚಂದಾದಾರರಿಗೆ 2016-17ರಲ್ಲಿ ಶೇ. 8.65 ಮತ್ತು 2017-18ರಲ್ಲಿ ಶೇ. 8.55 ಬಡ್ಡಿದರವನ್ನು ನೀಡಿತು. 2015-16ರಲ್ಲಿ ಬಡ್ಡಿದರವು ಶೇ. 8.8ರಷ್ಟು ಹೆಚ್ಚಾಗಿತ್ತು. ನಿವೃತ್ತಿ ನಿಧಿ ಸಂಸ್ಥೆಯು 2013-14 ಮತ್ತು 2014-15ರಲ್ಲಿ ಶೇ. 8.75ರಷ್ಟು ಬಡ್ಡಿದರವನ್ನು ನೀಡಿತು. ಇದು 2012-13ರಲ್ಲಿ ಶೇ. 8.5ಕ್ಕಿಂತ ಹೆಚ್ಚಾಗಿದೆ. 2011-12ರಲ್ಲಿ ಬಡ್ಡಿದರ ಶೇ. 8.25 ರಷ್ಟಿತ್ತು.