ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 5th May 2026: ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್‌; ಚಿನ್ನದ ದರದಲ್ಲಿ ಭಾರಿ ಇಳಿಕೆ

Gold Silver Rate: ಇಂದು ಚಿನ್ನದ ದರ ಇಳಿಕೆಯಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 40 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 13,675 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 44 ರುಪಾಯಿ ಅಗ್ಗವಾಗಿದ್ದು, 14,918 ರುಪಾಯಿಗೆ ಬಂದು ತಲುಪಿದೆ.

ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole May 5, 2026 2:05 PM

ಬೆಂಗಳೂರು, ಮೇ 5: ಪಂಚ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಆಭರಣಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇಂದು ಚಿನ್ನದ ದರ (ಮೇ 5) ಇಳಿಕೆಯಾಗಿದೆ (Gold Price Today On 5th May 2026). ಮಂಗಳವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 40 ರುಪಾಯಿ ಕಡಿಮೆಯಾಗಿದ್ದು, ಆ ಮೂಲಕ 13,675 ರುಪಾಯಿಗೆ ಇಳಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 44 ರುಪಾಯಿ ಅಗ್ಗವಾಗಿದ್ದು, 14,918 ರುಪಾಯಿಗೆ ಬಂದು ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,400 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,36,750 ರುಪಾಯಿ ಹಾಗೂ 100 ಗ್ರಾಂಗೆ 13,67,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,19,344 ರುಪಾಯಿ, 10 ಗ್ರಾಂಗೆ 1,49,180 ರುಪಾಯಿ ಹಾಗೂ 100 ಗ್ರಾಂಗೆ 14,91,800 ರುಪಾಯಿ ಇದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,820 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,077 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,675 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,918 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,690 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,923 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,675 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,918 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 13,675 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,918 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,820 ರುಪಾಯಿ 15,077 ರುಪಾಯಿ
ಮುಂಬೈ 13,675 ರುಪಾಯಿ 14,918 ರುಪಾಯಿ
ದೆಹಲಿ 13,690 ರುಪಾಯಿ 14,923 ರುಪಾಯಿ
ಕೋಲ್ಕತ್ತಾ 13,675 ರುಪಾಯಿ 14,918 ರುಪಾಯಿ
ಹೈದರಾಬಾದ್‌ 13,675 ರುಪಾಯಿ 14,918 ರುಪಾಯಿ

ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಹೆಚ್ಚಳ ಸಾಧ್ಯತೆ

ಬೆಳ್ಳಿ ದರ

ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 10 ರುಪಾಯಿ ಇಳಿಕೆಯಾಗಿದ್ದು, 255 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,550 ರುಪಾಯಿ ಹಾಗೂ 1 ಕೆಜಿಗೆ 2,55,000 ರುಪಾಯಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.