Gold Price Today On 10th April 2026: ಹಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನದ ದರದಲ್ಲಿಂದು ಮತ್ತೆ ಏರಿಕೆ
Gold Rate Today: ಹಲವು ದಿನಗಳಿಂದ ಇಳಿಕೆ ಕಂಡು ಬಂದಿದ್ದ ಚಿನ್ನದ ದರದಲ್ಲಿಂದು ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 140 ರೂ. ಏರಿಕೆಯಾಗಿ 14,025 ರೂ. ಇದೆ.
ಸಂಗ್ರಹ ಚಿತ್ರ -
Vishakha Bhat Heggar
Apr 10, 2026 12:59 PM
ಬೆಂಗಳೂರು: ಹಲವು ದಿನಗಳಿಂದ ಇಳಿಕೆ ಕಂಡು ಬಂದಿದ್ದ ಚಿನ್ನದ ದರದಲ್ಲಿಂದು ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 (Gold Price Today On 10th April 2026) ಗ್ರಾಂ ಚಿನ್ನದ ಬೆಲೆಯಲ್ಲಿ 140 ರೂ. ಏರಿಕೆಯಾಗಿ 14,025 ರೂ. ಇದ್ದರೆ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 152 ರೂ. ಏರಿಕೆಯಾಗಿ 15,300 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,12,200 ರೂ. ಇದ್ದರೆ 10 ಗ್ರಾಂಗೆ ನೀವು 1,40,250 ರೂ. ಪಾವತಿಸಬೇಕು. ಇನ್ನು 100 ಗ್ರಾಂ ಚಿನ್ನಕ್ಕೆ ನೀವು 14,02,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,22,400 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 15,30,000 ರೂ. ಪಾವತಿ ಮಾಡಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,025 ರೂ | 15,300 ರೂ. |
| ಮುಂಬೈ | 14,025 ರೂ | 15,300 ರೂ. |
| ದೆಹಲಿ | 14,025 ರೂ | 15,300 ರೂ. |
| ಕೋಲ್ಕತ್ತಾ | 14,025 ರೂ | 15,300 ರೂ. |
| ಹೈದರಾಬಾದ್ | 14,025 ರೂ | 15,300 ರೂ. |
ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 260 ರೂ.ಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,600 ರೂ. ಹಾಗೂ 1 ಕೆಜಿಗೆ 2,60,000 ರೂ. ಇದೆ.