N R Pura Bridge: ಮಲೆನಾಡಿನ ಸಂಪರ್ಕ ಕ್ರಾಂತಿ
ಎಂ.ಶ್ರೀನಿವಾಸ್ ಅವರ ನೇತೃತ್ವ, ಸ್ಥಳೀಯರ ಪರಿಶ್ರಮ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರ ಬೆಂಬಲ ದಿಂದ ಈಗ ಈ ಸೇತುವೆ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆ ಆಗುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಹಸಿರು ಮತ್ತು ತುಂಗಾ ನದಿಯಂಥ ಸದಾಕಾಲ ಹರಿಯುವ ನದಿಗಳಿಂದ ಆವೃತ ವಾಗಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯಕ್ಕೇನು ಕೊರತೆಯಿಲ್ಲ. ಇಲ್ಲಿನ ಜನತೆ ದಶಕಗಳ ಕಾಲ ಕಿರಿದಾದ ರಸ್ತೆಗಳು ಮತ್ತು ತಗ್ಗು ಪ್ರದೇಶದ ಸೇತುವೆಗಳನ್ನೇ ಅವಲಂಬಿಸಿದ್ದರು.
-
ಈ ಸೇತುವೆ ಕೇವಲ ಸಿಮೆಂಟ್ ರಸ್ತೆಯಲ್ಲ. ಇಲ್ಲಿನ ಜನರ ಜೀವನಾಡಿ. ಸುದೀರ್ಘ ಹೋರಾಟ ಕ್ಕೆ ಸಿಕ್ಕ ಪ್ರತಿಫಲ. ಎರಡು ಊರುಗಳನ್ನು ಸೇರಿಸುವ ಜತೆಗೆ ಮನುಷ್ಯರನ್ನೂ ಭಾವನಾ ತ್ಮಕವಾಗಿ ಬೆಸೆಯುತ್ತಿದೆ. ಅದೆಷ್ಟೋ ಜೀವಗಳು ಈಗ ನೆಮ್ಮದಿಯಿಂದ ಓಡಾಡುವ ಸಮಯ ಬಂದಿದೆ. ಮನೆಗೆ ಹೋಗಲು ತಡವಾಗುತ್ತದೆ ಎಂಬ ಆತಂಕದಿಂದ ದೂರವಾಗುವ ಸಮಯ ಬಂದಿದೆ. ಇದು ಚಿಕ್ಕಮಗಳೂರಿನ ಜನರ ದೈನಂದಿನ ಜೀವನವನ್ನು ಪುನರ್ ರೂಪಿಸಿದೆ. ಮಲೆನಾಡಿನ ಈ ಸುಂದರ ಪ್ರದೇಶದಲ್ಲಿ ಪ್ರಗತಿಯು ಮುಂದುವರಿಯುತ್ತಿದ್ದಂತೆ, ಇದು ಸ್ಥಳಗಳನ್ನು ಮಾತ್ರವಲ್ಲದೆ, ಜನರ ಕನಸು ಮತ್ತು ಅವಕಾಶಗಳನ್ನು ಬೆಸೆಯುವ ಪ್ರಮುಖ ಸೇತುವೆ!
ಕರ್ನಾಟಕದ ಮಲೆನಾಡಿನ ಹೃದಯಭಾಗದಲ್ಲಿರುವ ನರಸಿಂಹರಾಜಪುರ (ಎನ್.ಆರ್.ಪುರ) ಬಳಿ ಇತ್ತೀಚೆಗೆ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಗಿದೆ ಈ ಸೇತುವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲಾಗಿದ್ದು, ಈಗ ಇದೇ 12ನೇ ತಾರೀಕಿಗೆ ಇದರ ಲೋಕಾರ್ಪಣೆ ಆಗುತ್ತಿರುವುದು ವಿಶೇಷ. ಅಂದ ಹಾಗೆ, ಇದನ್ನು ಆಡುಭಾಷೆಯಲ್ಲಿ ಅಲ್ಲಿನ ಜನರು ‘ಸಿದ್ದರಾಮಯ್ಯ ಸೇತುವೆ’ ಎಂದು ಕರೆಯುತ್ತಿದ್ದಾರೆ. ಮುಂದೆ ಇದಕ್ಕೆ ‘ಸಿದ್ದರಾಮಯ್ಯ ಸೇತುವೆ’ ಎಂದೇ ನಾಮಕರಣ ಮಾಡುವ ಬಗ್ಗೆ ಚರ್ಚೆಯೂ ನಡೆಯುತ್ತಿದೆ.
ಎಂ.ಶ್ರೀನಿವಾಸ್ ಅವರ ನೇತೃತ್ವ, ಸ್ಥಳೀಯರ ಪರಿಶ್ರಮ ಹಾಗೂ ಶಾಸಕ ಟಿ.ಡಿ ರಾಜೇಗೌಡ ಅವರ ಬೆಂಬಲದಿಂದ ಈಗ ಈ ಸೇತುವೆ ಕಾರ್ಯ ಪೂರ್ಣಗೊಂಡು ಲೋಕಾರ್ಪಣೆ ಆಗುತ್ತಿದೆ. ಪಶ್ಚಿಮ ಘಟ್ಟಗಳ ದಟ್ಟ ಹಸಿರು ಮತ್ತು ತುಂಗಾ ನದಿಯಂಥ ಸದಾಕಾಲ ಹರಿಯುವ ನದಿಗಳಿಂದ ಆವೃತ ವಾಗಿರುವ ಈ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯಕ್ಕೇನು ಕೊರತೆಯಿಲ್ಲ. ಇಲ್ಲಿನ ಜನತೆ ದಶಕಗಳ ಕಾಲ ಕಿರಿದಾದ ರಸ್ತೆಗಳು ಮತ್ತು ತಗ್ಗು ಪ್ರದೇಶದ ಸೇತುವೆಗಳನ್ನೇ ಅವಲಂಬಿಸಿದ್ದರು.
ಮಕ್ಕಳು ಶಾಲೆಗೆ ಹೋಗಬೇಕೆಂದರೆ, ಸ್ಥಳೀಯರು ಪಟ್ಟಣಕ್ಕೆ ಹೋಗಬೇಕೆಂದರೆ, ವೃದ್ಧರು ಆಸ್ಪತ್ರೆಗೆ ಹೋಗಬೇಕೆಂದರೆ ಅಥವಾ ಯಾವುದಾದರೂ ತುರ್ತು ಪರಿಸ್ಥಿತಿ ಎದುರಾಗಿ ಪೇಟೆಗೆ ಹೋಗಬೇಕಿದ್ದರೂ ಪರದಾಡುವ ಪರಿಸ್ಥಿತಿಯಿತ್ತು.
ಮಳೆಗಾಲದಲ್ಲಿ ಈ ಹಳೆಯ ಮಾರ್ಗಗಳು ಸಂಚಾರಕ್ಕೆ ಯೋಗ್ಯವಾಗಿರುತ್ತಿರಲಿಲ್ಲ. ಇದೀಗ ನಿರ್ಮಾಣವಾಗಿರುವ ಹೊಸ ಸೇತುವೆ ಈ ಭಾಗದ ಜನರ ಸುಗಮ ಸಂಚಾರ ಮತ್ತು ಸುರಕ್ಷತೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.
ಇದನ್ನೂ ಓದಿ: Hari Paraak Column: ವೈಭವ್ ಸೂರ್ಯವಂಶಿ ನೀತಿ ಹೊಡೆದು ಆಳಬೇಕು
ಸುಲಭವಾದ ಸಂಚಾರ
ಹೊನ್ನೇಕೊಡಿಗೆ ಭಾಗದ ಜನರಿಗೆ ಅಲ್ಲಿಂದ ಪೇಟೆಗೆ ಬರಬೇಕೆಂದರೆ ಸುಮಾರು 23 ಕಿಮೀ ದೂರ ಪ್ರಯಾಣ ಮಾಡಬೇಕಿತ್ತು. ಆದರೆ, ಈ ಸೇತುವೆ ಆಗಿರುವುದರಿಂದ ಕೇವಲ 3 ಕಿಮೀ ದೂರ ಪ್ರಯಾಣ ಮಾಡಿದರೆ ಸಾಕು. ಈ ಸೇತುವೆ ನಿರ್ಮಾಣವಾಗಲು ಮುಖ್ಯ ಕಾರಣ ಎಂ.ಶ್ರೀನಿವಾಸ್. ಅವರು ಅದೇ ಜಾಗದಲ್ಲಿ ಹುಟ್ಟಿ ಬೆಳೆದಿದ್ದರಿಂದ ಅಲ್ಲಿನ ಕಷ್ಟಗಳನ್ನು ತಿಳಿದುಕೊಂಡಿದ್ದು, ನೇತೃತ್ವ ವಹಿಸಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಧನ ಸಹಾಯದ ಜತೆಗೆ ಎಲ್ಲ ಬೆಂಬಲವನ್ನು ಪಡೆಯಲು ಸಹಾಯ ಮಾಡಿದ್ದಾರೆ ಎನ್ನುವುದು ಅಲ್ಲಿನ ಜನರ ಹೆಮ್ಮೆಯ ಮಾತು.
38 ಕೋಟಿ ರು. ಅನುದಾನ ಈ ಸೇತುವೆ ನಿರ್ಮಾಣಕ್ಕೆ ಸಿಕ್ಕಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗತ್ಯವೂ ಇದ್ದಿದ್ದಕ್ಕೆ ಆರು ಕೋಟಿ ರು. ಖರ್ಚು ಮಾಡಿ ಹೊಸ ರಸ್ತೆ ನಿರ್ಮಿಸಲಾಗಿದೆ. ಹಾಗೆಯೇ ನರಸಿಂಹರಾಜಪುರದ ರಸ್ತೆ ಅಗಲೀಕರಣಕ್ಕೆ 60 ಕೋಟಿ ಹಣ ಮೀಸಲಿಡಲಾಗಿದೆ.
ಸುಮಾರು 15-2 ವರ್ಷಗಳ ಸುದೀರ್ಘ ಹೋರಾಟ ಇದಾಗಿತ್ತು. 2017ರಲ್ಲಿ ಶುರುವಾದ ಈ ಕೆಲಸ ಈಗ ಪೂರ್ಣಗೊಳ್ಳುತ್ತಿದ್ದು, ಹೋರಾಟವು ಈಗ ಸಾರ್ಥಕತೆ ಕಂಡುಕೊಂಡಿದೆ. ಪೇಟೆಗೆ ಬಂದು ವಾಪಸ್ ಹೋಗುವುದೆಂದರೆ ಅದು
ಒಂದು ಇಡೀ ದಿನದ ಕೆಲಸವಾಗಿತ್ತು. ಈಗ ಕೆಲವು ಗಂಟೆಗಳಲ್ಲಿ ಬಂದು ಹೋಗಬಹುದು. ಇದರ ಜತೆಗೆ ಲಕ್ಕುಂದ, ಸಾಲೂರು, ಬಿಳಲ್ಕೊಪ್ಪ ಸೇರಿದಂತೆ 7 ಗ್ರಾಮಗಳ 2000 ಜನಗಳಿಗೆ ಇದು ಅನುಕೂಲ ಆಗಿದೆ.
ಗೊತ್ತಿದೆಯೇ ಇತಿಹಾಸ?
ಈ ಭಾಗದ ಜನರಿಗೆ ಈ ಸೇತುವೆ ಯಾಕೆ ಇಷ್ಟು ಮಹತ್ವವಾದದ್ದು ಎಂದು ತಿಳಿಯಬೇಕಾದರೆ ಸಣ್ಣ ಕಥೆ ನೆನಪಿಸಿಕೊಳ್ಳಬೇಕಾಗುತ್ತದೆ. ಕರ್ನಾಟಕದ ಈ ಭಾಗದ ನದಿಗಳ ಹರಿವಿನ ಮೇಲೆ ಪ್ರಭಾವ ಬೀರಿದ ಪ್ರಮುಖ ಅಂಶವೆಂದರೆ 20ನೆಯ ಶತಮಾನದ ಮಧ್ಯಭಾಗದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಭದ್ರಾ ಅಣೆಕಟ್ಟು. ಇದರಿಂದ ಮೇಲ್ಭಾಗದ ಅರಣ್ಯ ಪ್ರದೇಶಗಳು ಮತ್ತು ವಸಾಹತು ಗಳ ಮುಳುಗಡೆಗೆ ಕಾರಣವಾಯಿತು. ಇದು ಅನೇಕ ಸ್ಥಳೀಯರ ಸ್ಥಳಾಂತರಕ್ಕೂ ಕಾರಣವಾಯಿತು. ಇತ್ತೀಚಿನವರೆಗೂ ಇದನ್ನು ಮುಳುಗಡೆ ಪ್ರದೇಶ ಎಂದೇ ಕರೆಯಲಾಗುತ್ತದೆ.
ಭಾರೀ ಮಳೆಯಾದಾಗಂತೂ, ರಸ್ತೆಗಳು ನೀರಿನ ಪ್ರವಾಹದಲ್ಲಿ ಕಣ್ಮರೆಯಾಗುತ್ತಿದ್ದವು. ನದಿ ತೀರದ ಕೃಷಿ ಭೂಮಿಗಳು ಆಗಾಗ ಜಲಾವೃತಗೊಳ್ಳುತ್ತಿದ್ದವು. ಇದು ಅಡಿಕೆ ಮತ್ತು ಭತ್ತದಂತಹ ಬೆಳೆಗಳಿಗೆ ಹಾನಿ ಮಾಡುತ್ತಿತ್ತು. ಸರಕುಗಳ ಸಾಗಾಣಿಕೆ ಅನಿಶ್ಚಿತವಾಗುತ್ತಿತ್ತು. ರೈತರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿತ್ತು. ಸ್ಥಳೀಯ ನಿವಾಸಿಗಳ ಹಿರಿಯ ಹಲವು ಲಾಭಗಳು ಈ ಸೇತುವೆ ನಿರ್ಮಾಣ ಹೊನ್ನೇಕೊಡಿಗೆ ಪಂಚಾಯಿತಿಗೆ ಬಹಳ ಸಹಕಾರಿಯಾಗಿದೆ.
ಇಲ್ಲೇ ಸಮೀಪದಲ್ಲಿ ಹಳೆಯ ಚಿಕ್ಕಮಗಳೂರು ರಸ್ತೆಯಿದೆ. ಅದು ಚಿಕ್ಕಮಗಳೂರಿಗೆ ಸೇರುತ್ತದೆ. ಅಲ್ಲಿ ತಡಸ ಸೇತುವೆಯಿತ್ತು. ಅದರಲ್ಲಿ ರಸ್ತೆ ಮತ್ತು ರೈಲ್ವೇ ಹಳಿ ಎರಡೂ ಇದ್ದಿದ್ದು ವಿಶೇಷ. ಆ ರಸ್ತೆಗಳೆಲ್ಲ ಮುಳುಗಡೆ ಆದ ಬಳಿಕ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಆಗಿಲ್ಲ. ಸಮೀಪದ ಊರಿನವರನ್ನೆ ಸ್ಥಳಾಂತರಿಸಲಾಯಿತು.
ಉಳಿದ ಕೆಲವು ಊರುಗಳು ಪಟ್ಟಣದಿಂದ ದೂರವಿರುವದರಿಂದ ಓಡಾಡಲು ಸಮಸ್ಯೆ ಎದುರಿಸು ತ್ತಿದ್ದವು. ಈಗ ಈ ಸೇತುವೆ ಆಗಿರುವುದರಿಂದ ಪಟ್ಟಣಕ್ಕೆ ಸಂಪರ್ಕ ಮಾಡುವುದು ಸುಲಭವಾಗಿದೆ. ಮಲೆನಾಡು ಪ್ರದೇಶ ಕಾಫಿ, ಅಡಿಕೆ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಪ್ರಸಿದ್ಧಿ ಹೊಂದಿರುವ ಜಾಗ. ರೈತರು ತಮ್ಮ ಬೆಳೆಗಳನ್ನು ಸಾಗಿಸಲು ಹರಸಾಹಸ ಪಡಬೇಕಾಗುತ್ತಿತ್ತು.
ಹೊಸ ಸೇತುವೆಯಿಂದಾಗಿ ಬೆಳೆ ಸಾಗಾಣಿಕೆ ಸುಲಭವಾಗಿದೆ. ರೈತರಿಗೆ ಈಗ ನಷ್ಟದ ಭೀತಿ ದೂರ ವಾಗಿದೆ. ಕೇವಲ ಸೌಕರ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಸೇತುವೆಯು ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೂ ಪೂರಕವಾಗಲಿದೆ. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಸೇತುವೆ ಸಾಕ್ಷಿ!
ದೀರ್ಘಕಾಲದ ಸಂಪರ್ಕ ಮತ್ತು ಸುರಕ್ಷತೆಯ ಸವಾಲುಗಳನ್ನು ಮೆಟ್ಟಿ ನಿಂತಿರುವ ಈ ಎನ್.ಆರ್. ಪುರ ಸೇತುವೆಯು ಇಡೀ ಊರಿನಲ್ಲಿ ಅರ್ಥಪೂರ್ಣ ಬದಲಾವಣೆ ತಂದಿದೆ. ತಲೆಮಾರಿನವರು ಈಗಲೂ ಸಹ ನೀರಿನ ಮಟ್ಟವು ಏರಿ ರಸ್ತೆಗಳನ್ನಷ್ಟೇ ಅಲ್ಲದೆ ತಗ್ಗು ಪ್ರದೇಶದ ಮನೆಗಳನ್ನು ಮುಳುಗಿಸಿದ ವರ್ಷಗಳನ್ನು ನೆನಪಿಸಿಕೊಳ್ಳುತ್ತಾರೆ.
ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತೆಂದರೆ ಅಲ್ಲಿನ ಕೆಲವು ಪ್ರದೇಶದ ಜನರಿಗೆ ವಿವಾಹಕ್ಕೂ ತೊಡಕುಂಟಾಗುತ್ತಿತ್ತು. ಹೆಣ್ಣುಕೊಡಬೇಕಿದ್ದರೂ ಜನ ಇದನ್ನು ‘ಕಾಡೂರು’ ಎಂದು ಹೀಯಾಳಿಸು ತ್ತಿದ್ದರು. ಇಲ್ಲಿಗೆ ಒಂದೇ ಬಸ್ ಸಂಪರ್ಕ ಇದ್ದಿದ್ದು. ಅದು ಕೂಡ ಯಾವಾಗ ಬರುತ್ತಿತ್ತು ಎಂದು ಹೇಳುವುದು ಕಷ್ಟವಾಗಿತ್ತು. ಈಗ ಇವರಿಗೆಲ್ಲ ನಿಟ್ಟುಸಿರು ಬಿಡುವ ಸಂದರ್ಭ ಬಂದಿದೆ.
ಸುದೀರ್ಘ ಹೋರಾಟ
ಒಂದು ಹೊಸ ಸೇತುವೆ ನಿರ್ಮಾಣ ಆದಾಗ ಅದರಿಂದ ಕೇವಲ ಸಂಪರ್ಕವೊಂದೇ ಸುಲಭ ವಾಗುವುದಿಲ್ಲ. ಕೆಲವು ಮಾತ್ರೆಗಳಿಗೆ ಸೈಡ್ ಎಫೆಕ್ಟ್ ಇದ್ದ ಹಾಗೆ ಇದಕ್ಕೂ ಇರುತ್ತವೆ. ಆದರೆ, ಈ ಸೈಡ್ ಎಫೆಕ್ಟ್ ಒಳ್ಳೆಯದನ್ನು ಮಾಡುತ್ತವೆ. ಇಲ್ಲಿನ ಸ್ಥಳೀಯರೊಬ್ಬರು ಹೇಳುವ ಪ್ರಕಾರ ಎನ್ ಆರ್ ಪುರ ಇತಿಹಾಸದಲ್ಲಿ ಇಷ್ಟು ದೊಡ್ಡ ಸೇತುವೆ ಅಭಿವೃದ್ಧಿಯಾಗಿದ್ದು ಇದೇ ಮೊದಲು. ಇದನ್ನು ನೋಡಲು ಎಂದೇ ಜನರು ಬರುವಷ್ಟು ಅದ್ಭುತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿದಾಗ ಈ ಸೇತುವೆಯ ಪ್ರಾಮುಖ್ಯತೆ ಇನ್ನೂ ಸ್ಪಷ್ಟವಾಗಿ ಅರ್ಥವಾಗುತ್ತದೆ. ದಟ್ಟ ಅರಣ್ಯಗಳು, ಗುಡ್ಡಗಾಡು ಮತ್ತು ಅತಿ ಹೆಚ್ಚು ಮಳೆಯಾಗುವ ಈ ಪ್ರದೇಶ!
ಇಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು ಅತ್ಯಂತ ಅಗತ್ಯವಾಗಿತ್ತು. ಸುಮಾರು ಹದಿನೈದು ವರ್ಷಗಳ ಕಾಲ ಇಲ್ಲಿ ಸೇತುವೆ ಆಗಬೇಕೆಂದು ಸ್ಥಳೀಯರು ಹೋರಾಟ ನಡೆಸಿದ್ದಾರೆ. ಅದು ಈಗ -ಲ ಸಿಕ್ಕಂತಾಗಿದೆ. ಪ್ರಯಾಣದ ಸಮಯ ಕಡಿಮೆಯಾಗಿದ್ದು, ಸಂಚಾರವು ಹೆಚ್ಚು ಸುರಕ್ಷಿತವಾಗಿದೆ. ನಿರಂತರ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಈ ಅಭಿವೃದ್ಧಿಯು ಸ್ಥಿರತೆಯನ್ನು ತಂದುಕೊಟ್ಟಿದೆ.
ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ
ಸೇತುವೆ ನಿರ್ಮಾಣ ಮಾಡಿದ್ದು ಗೊತ್ತಾದ ಬಳಿಕ ಅನೇಕರಿಗೆ ಈ ಹೊಸ ಸೇತುವೆ ಮೇಲೆ ಹೋಗು ವುದು, ಅಲ್ಲಿ ನಿಂತು -ಟೋ ತೆಗೆಸಿಕೊಳ್ಳುವುದು ಖುಷಿಯ ವಿಷಯವಾದರೆ ಇನ್ನೂ ಕೆಲವರಿಗೆ ಹೆಮ್ಮೆಯ ವಿಷಯ. ಇದಕ್ಕಾಗಿ ಇಲ್ಲಿಗೆ ಭೇಟಿ ಕೊಡುವ ಜನರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಪ್ರವಾಸೋದ್ಯಮ ಬೆಳೆಯುವುದು ಒಂದು ವಿಧಾನವಾದರೆ, ವಿಶೇಷವಾಗಿ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿಯೇ ಸರಕಾರ ಮೂರು ಎಕರೆ ಜಾಗವನ್ನು ಮೀಸಲಿಟ್ಟಿದೆ.
ಬಸ್ತಿ ಮಠ, ದೇವಸ್ಥಾನ ಬಿಟ್ಟು ಬೇರೇನು ಇಲ್ಲಿರಲಿಲ್ಲ. ಈಗ ಸೇತುವೆ ನೋಡಲು ಸಾವಿರಾರು ಜನ ಬರುತ್ತಿದ್ದಾರೆ. ಇನ್ನು ನರಸಿಂಹರಾಜಪುರ ಮತ್ತು ಅದರ ಸುತ್ತಮುತ್ತಲಿನ ನದಿಗಳು, ಜಲಪಾತಗಳು ಮತ್ತು ಅರಣ್ಯ ಮಾರ್ಗಗಳು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ. ಅಲ್ಲ ಈಗ ಜನರಿಗೆ ತಲುಪುವುದು ಸುಲಭವಾಗಿದೆ. ಹೊಸ ಸೇತುವೆ ಮೇಲೆ ಸಾಗುತ್ತ ಕಾರ್ ಕಿಟಕಿ ತೆಗೆದು ಸುತ್ತಲಿನ ಪ್ರಕೃತಿಯನ್ನು ನೋಡುತ್ತಾ, ತಂಪು ಗಾಳಿಗೆ ಮುಖ ಒಡ್ಡುತ್ತಾ ಹೋಗುವಾಗ ಸಿಗುವ ಆನಂದ ಇನ್ನೆಲ್ಲೂ ಸಿಗುವುದಿಲ್ಲ!
ಹಲವು ಲಾಭಗಳು
ಈ ಸೇತುವೆ ನಿರ್ಮಾಣ ಹೊನ್ನೇಕೊಡಿಗೆ ಪಂಚಾಯಿತಿಗೆ ಬಹಳ ಸಹಕಾರಿಯಾಗಿದೆ. ಇಲ್ಲೇ ಸಮೀಪದಲ್ಲಿ ಹಳೆಯ ಚಿಕ್ಕಮಗಳೂರು ರಸ್ತೆಯಿದೆ. ಅದು ಚಿಕ್ಕಮಗಳೂರಿಗೆ ಸೇರುತ್ತದೆ. ಅಲ್ಲಿ ತಡಸ ಸೇತುವೆಯಿತ್ತು. ಅದರಲ್ಲಿ ರಸ್ತೆ ಮತ್ತು ರೈಲ್ವೇ ಹಳಿ ಎರಡೂ ಇದ್ದಿದ್ದು ವಿಶೇಷ. ಆ ರಸ್ತೆಗಳೆಲ್ಲ ಮುಳುಗಡೆ ಆದ ಬಳಿಕ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಆಗಿಲ್ಲ. ಸಮೀಪದ ಊರಿನವರನ್ನೆ ಸ್ಥಳಾಂತರಿಸಲಾಯಿತು. ಉಳಿದ ಕೆಲವು ಊರುಗಳು ಪಟ್ಟಣದಿಂದ ದೂರವಿರುವುದರಿಂದ ಓಡಾಡಲು ಸಮಸ್ಯೆ ಎದುರಿಸುತ್ತಿದ್ದವು. ಈಗ ಈ ಸೇತುವೆ ಆಗಿರುವುದರಿಂದ ಪಟ್ಟಣಕ್ಕೆ ಸಂಪರ್ಕ ಮಾಡುವುದು ಸುಲಭವಾಗಿದೆ. ಮಲೆನಾಡು ಪ್ರದೇಶ ಕಾಫಿ, ಅಡಿಕೆ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಪ್ರಸಿದ್ಧಿ ಹೊಂದಿರುವ ಜಾಗ. ರೈತರು ತಮ್ಮ ಬೆಳೆಗಳನ್ನು ಸಾಗಿಸಲು ಹರಸಾಹಸ ಪಡಬೇಕಾಗುತ್ತಿತ್ತು. ಹೊಸ ಸೇತುವೆಯಿಂದಾಗಿ ಬೆಳೆ ಸಾಗಾಣಿಕೆ ಸುಲಭವಾಗಿದೆ. ರೈತರಿಗೆ ಈಗ ನಷ್ಟದ ಭೀತಿ ದೂರವಾಗಿದೆ. ಕೇವಲ ಸೌಕರ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಸೇತುವೆಯು ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೂ ಪೂರಕವಾಗಲಿದೆ.
ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಸೇತುವೆ ಸಾಕ್ಷಿ! ದೀರ್ಘಕಾಲದ ಸಂಪರ್ಕ ಮತ್ತು ಸುರಕ್ಷತೆಯ ಸವಾಲುಗಳನ್ನು ಮೆಟ್ಟಿ ನಿಂತಿರುವ ಈ ಎನ್.ಆರ್. ಪುರ ಸೇತುವೆಯು ಇಡೀ ಊರಿನಲ್ಲಿ ಅರ್ಥಪೂರ್ಣ ಬದಲಾವಣೆ ತಂದಿದೆ.
ಹಲವು ಲಾಭಗಳು
ಈ ಸೇತುವೆ ನಿರ್ಮಾಣ ಹೊನ್ನೇಕೊಡಿಗೆ ಪಂಚಾಯಿತಿಗೆ ಬಹಳ ಸಹಕಾರಿಯಾಗಿದೆ. ಇಲ್ಲೇ ಸಮೀಪದಲ್ಲಿ ಹಳೆಯ ಚಿಕ್ಕಮಗಳೂರು ರಸ್ತೆಯಿದೆ. ಅದು ಚಿಕ್ಕಮಗಳೂರಿಗೆ ಸೇರುತ್ತದೆ. ಅಲ್ಲಿ ತಡಸ ಸೇತುವೆಯಿತ್ತು. ಅದರಲ್ಲಿ ರಸ್ತೆ ಮತ್ತು ರೈಲ್ವೇ ಹಳಿ ಎರಡೂ ಇದ್ದಿದ್ದು ವಿಶೇಷ. ಆ ರಸ್ತೆಗಳೆಲ್ಲ ಮುಳುಗಡೆ ಆದ ಬಳಿಕ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಆಗಿಲ್ಲ. ಸಮೀಪದ ಊರಿನವರನ್ನೆ ಸ್ಥಳಾಂತರಿಸಲಾಯಿತು. ಉಳಿದ ಕೆಲವು ಊರುಗಳು ಪಟ್ಟಣದಿಂದ ದೂರವಿರುವದರಿಂದ ಓಡಾಡಲು ಸಮಸ್ಯೆ ಎದುರಿಸುತ್ತಿದ್ದವು. ಈಗ ಈ ಸೇತುವೆ ಆಗಿರುವುದರಿಂದ ಪಟ್ಟಣಕ್ಕೆ ಸಂಪರ್ಕ ಮಾಡುವುದು ಸುಲಭವಾಗಿದೆ. ಮಲೆನಾಡು ಪ್ರದೇಶ ಕಾಫಿ, ಅಡಿಕೆ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಪ್ರಸಿದ್ಧಿ ಹೊಂದಿರುವ ಜಾಗ. ರೈತರು ತಮ್ಮ ಬೆಳೆಗಳನ್ನು ಸಾಗಿಸಲು ಹರಸಾಹಸ ಪಡಬೇಕಾಗುತ್ತಿತ್ತು. ಹೊಸ ಸೇತುವೆಯಿಂದಾಗಿ ಬೆಳೆ ಸಾಗಾಣಿಕೆ ಸುಲಭವಾಗಿದೆ. ರೈತರಿಗೆ ಈಗ ನಷ್ಟದ ಭೀತಿ ದೂರವಾಗಿದೆ. ಕೇವಲ ಸೌಕರ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಸೇತುವೆಯು ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೂ ಪೂರಕವಾಗಲಿದೆ. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ಸಮಸ್ಯೆ ಉಂಟಾಗದಂತೆ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಈ ಸೇತುವೆ ಸಾಕ್ಷಿ! ದೀರ್ಘಕಾಲದ ಸಂಪರ್ಕ ಮತ್ತು ಸುರಕ್ಷತೆಯ ಸವಾಲುಗಳನ್ನು ಮೆಟ್ಟಿ ನಿಂತಿರುವ ಈ ಎನ್.ಆರ್.ಪುರ ಸೇತುವೆಯು ಇಡೀ ಊರಿನಲ್ಲಿ ಅರ್ಥಪೂರ್ಣ ಬದಲಾವಣೆ ತಂದಿದೆ.
![]()
ಈ ಸೇತುವೆ ನನ್ನ ಜೀವಮಾನದ ಸಾಧನೆ ಇದ್ದಂತೆ. ಇಲ್ಲಿನ ಕೆಲವು ಊರುಗಳು ಮುಳುಗಡೆ ಆದ ಬಳಿಕ ಹೊನ್ನೇಕೊಡಿಗೆಯವರು ಮಾತ್ರ ಇಲ್ಲಿದ್ದರು. ಅವರಿಗೆ ಪೇಟೆಗೆ ಬರುವ ದಾರಿ ಸುಲಭದ್ದಾಗಿರ ಲಿಲ್ಲ. ಈ ಸೇತುವೆಯಿಂದ ಅವರು ಸಲೀಸಾಗಿ ಓಡಾಡುವ ಹಾಗಾಗಿದೆ. ಇದರ ಎಲ್ಲ ಕ್ರೆಡಿಟ್ ಸಿದ್ದರಾಮಯ್ಯನವರಿಗೆ ಸಲ್ಲಬೇಕಾಗುತ್ತದೆ. ಎಡೆಹಳ್ಳಿಯಾಗಿದ್ದ ಊರಿಗೆ ನರಸಿಂಹರಾಜಪುರ ಒಡೆಯರ್ ಬಂದು ನರಸಿಂಹರಾಜಪುರ ಎಂಬ ಹೆಸರು ಕೊಟ್ಟರು. ಹಾಗೇ 100 ವರ್ಷಗಳ ಬಳಿಕ ಬಂದ ನೀವು ಈ ಊರಿಗೆ ಏನಾದರು ಕೊಡುಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕೇಳಿದ್ದಕ್ಕೆ ಪ್ರೀತಿಯಿಂದ ಒಪ್ಪಿಕೊಂಡು ಈ ಸೇತುವೆ ನಿರ್ಮಾಣಕ್ಕೆ ನಾಂದಿ ಹಾಡಿದರು. ಶಂಕು ಸ್ಥಾಪನೆ ಕೂಡ ಮಾಡಿದರು. ಈಗ ಲೋಕಾರ್ಪಣೆ ಕೂಡ ಅವರೇ ಮಾಡುತ್ತಿ ದ್ದಾರೆ. ಹಾಗೆಯೇ ಅಂದು ರೆಸಾರ್ಟ್ ಮಾಡಲು ಜಿ ಡಿಸಿ ಮೀನಾ ಅವರಿಗೆ ಕೇಳಿದಾಗ 3 ಎಕರೆ ಜಾಗ ಕೂಡ ನೀಡಿದರು. ಅಮ್ಯೂಸ್ಮೆಂಟ್ ಪಾರ್ಕ್, ಥೀಮ್ ಪಾರ್ಕ್, ವಾಟರ್ ಪಾರ್ಕ್ ಮಾಡುವ ಆಸೆಯಿದೆ. ಇಲ್ಲಿ ಈಗಾಗಲೇ ಅಂಗಡಿಗಳು ಶುರುವಾಗಿವೆ. ಇದೊಂದು ದೊಡ್ಡ ಪ್ರವಾಸಿ ತಾಣವಾಗುತ್ತದೆ ಎಂದು ಅನೇಕರು ಹೇಳುವುದನ್ನು ಕೇಳಿದಾಗ ಖುಷಿಯಾಗುತ್ತದೆ. ಮುಂದೆ ಇಂದು ಚೆಕ್ ಡ್ಯಾಮ್ ಕಟ್ಟಬೇಕಿದೆ. ಹಾಗೆಯೇ ಇದನ್ನು ಟೂರಿಸಂ ಸ್ಪಾಟ್ ಮಾಡೇ ಮಾಡುತ್ತೇನೆ. ಇವೆಲ್ಲವೂ ಹುಟ್ಟೂರಿನ ಋಣ ತೀರಿಸುವ ಪ್ರಯತ್ನ ಅಷ್ಟೇ! ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಶ್ವೇಶ್ವರ ಭಟ್ ಅವರ ಸಲಹೆಗಳು ಸಾಕಷ್ಟಿವೆ. ನಮ್ಮ ನರಸಿಂಹರಾಜಪುರಕ್ಕೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾವ ಮುಖ್ಯಮಂತ್ರಿ ಇದುವರೆಗೂ ಬಂದೇ ಇಲ್ಲ.
-ಎಂ. ಶ್ರೀನಿವಾಸ, ಅಧ್ಯಕ್ಷರು, ಕೆಎಸ್ ಟಿಡಿಸಿ