Gold Price Today On 10th June 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಇಲ್ಲಿದೆ ನೋಡಿ
ಏರಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆಯಾಗಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ (Gold Price Today On 10th June 2026) 395 ರೂ. ಇಳಿಕೆಯಾಗಿ 13,645 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂ. ಏರಿಕೆಯಾಗಿ 14,886 ರುಪಾಯಿ ಕಂಡು ಬಂದಿದೆ.
ಸಂಗ್ರಹ ಚಿತ್ರ -
Vishakha Bhat Heggar
Jun 10, 2026 12:58 PM
ಏರಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆಯಾಗಿದೆ. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ (Gold Price Today On 10th June 2026) 395 ರೂ. ಇಳಿಕೆಯಾಗಿ 13,645 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂ. ಇಳಿಕೆಯಾಗಿ 14,886 ರೂಪಾಯಿ ಕಂಡು ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,160 ರೂ. ಇದ್ದರೆ, 10 ಗ್ರಾಂಗೆ 1,36,450 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 13,64,500 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,19,088 ರೂ. ಇದ್ದರೆ 10 ಗ್ರಾಂಗೆ ನೀವು 1,48,860 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,88,600 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,645 ರೂ. | 14,886 ರೂ |
| ಮುಂಬೈ | 13,645 ರೂ. | 14,886 ರೂ |
| ದೆಹಲಿ | 13,645 ರೂ. | 14,886 ರೂ |
| ಕೋಲ್ಕತ್ತಾ | 13,645 ರೂ. | 14,886 ರೂ |
| ಹೈದರಾಬಾದ್ | 13,645 ರೂ. | 14,886 ರೂ |
ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,500 ರುಪಾಯಿ ಹಾಗೂ 1 ಕೆಜಿಗೆ 2,50,000 ರುಪಾಯಿ ಕಂಡು ಬಂದಿದೆ.