ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತೀಯ ಫ್ಯಾಷನ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾದ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಪ್ರಾಯೋಜಿತ ಇಂದ್ರಿಯಾ

ಹೌಸ್ ಆಫ್ ಮಸಾಬಾದ ಚೊಚ್ಚಲ ವಧುವಿಗಾಗಿಯೇ ವಿನ್ಯಾಸಗೊಳಿಸಲಾದ ಆಭರಣಗಳ ಪ್ರದರ್ಶನ ವಾಗಿದ್ದ ಈ ಸಂಗ್ರಹವು, ಧೈರ್ಯಶಾಲಿ, ಉಲ್ಲಾಸಭರಿತ ಹಾಗೂ ತನ್ನ ನೈಜ ವ್ಯಕ್ತಿತ್ವ ವನ್ನು ನಿರ್ಭಯ ವಾಗಿ ವ್ಯಕ್ತಪಡಿಸುವ, ಹಳೆಬೇರು ಹೊಸ ಚಿಗುರು ಎಂಬಂತೆ, ತಲೆಮಾರಿನ ಸಂಪ್ರದಾಯದೊಂದಿಗೆ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ವಧುವಿಗೆ ಗೌರವ ಸಲ್ಲಿಸಲಾಯಿತು.

ಕರಕುಶಲ ಆಭರಣಗಳಿಗೆ ವೇದಿಕೆ ಕಲ್ಪಿಸಿರುವ ಇಂದ್ರಿಯಾ

-

Profile
Ashok Nayak Aug 3, 2026 8:08 PM

ಬೆಂಗಳೂರು: ಆದಿತ್ಯ ಬಿರ್ಲಾ ಜ್ಯುವೆಲ್ಲರಿಯ ಇಂದ್ರಿಯಾ, ಇಂಡಿಯಾ ಕೌಚರ್ ವೀಕ್ 2026ನಲ್ಲಿ ಹೌಸ್ ಆಫ್ ಮಸಾಬಾ ಅವರ ವಧು ಪ್ರದರ್ಶನಕ್ಕಾಗಿ ವಿಶೇಷವಾಗಿ ಆಯ್ದ ಆಭರಣಗಳ ಸಂಗ್ರಹ ವನ್ನು ಮೊದಲ ಬಾರಿಗೆ ಪರಿಚಯಿಸಿತು.

ಹೌಸ್ ಆಫ್ ಮಸಾಬಾದ ಚೊಚ್ಚಲ ವಧುವಿಗಾಗಿಯೇ ವಿನ್ಯಾಸಗೊಳಿಸಲಾದ ಆಭರಣಗಳ ಪ್ರದರ್ಶನವಾಗಿದ್ದ ಈ ಸಂಗ್ರಹವು, ಧೈರ್ಯಶಾಲಿ, ಉಲ್ಲಾಸಭರಿತ ಹಾಗೂ ತನ್ನ ನೈಜ ವ್ಯಕ್ತಿತ್ವ ವನ್ನು ನಿರ್ಭಯವಾಗಿ ವ್ಯಕ್ತಪಡಿಸುವ, ಹಳೆಬೇರು ಹೊಸ ಚಿಗುರು ಎಂಬಂತೆ, ತಲೆಮಾರಿನ ಸಂಪ್ರದಾಯದೊಂದಿಗೆ ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ವಧುವಿಗೆ ಗೌರವ ಸಲ್ಲಿಸಲಾಯಿತು.

ಈ ಪರಿಕಲ್ಪನೆಗೆ ಅನುಗುಣವಾಗಿ, ಭಾರತದ ಶ್ರೀಮಂತ ಕರಕುಶಲ ಪರಂಪರೆ ಮತ್ತು ಸಮಕಾಲೀನ ವಿನ್ಯಾಸ ಸಂವೇದನೆಗಳನ್ನು ಪ್ರತಿಬಿಂಬಿಸುವಂತೆ ಇಂಡ್ರಿಯಾ ಅತ್ಯಂತ ಕಾಳಜಿಯಿಂದ ಆಯ್ದ ಆಭರಣಗಳ ಸಂಗ್ರಹವನ್ನು ರೂಪಿಸಿತು. ಆದಿತ್ಯ ಬಿರ್ಲಾ ಸಮೂಹದ ವಿಶ್ವಾಸಾರ್ಹತೆಯ ಬೆಂಬಲದೊಂದಿಗೆ, ಪರಂಪರೆಯಿಂದ ಪ್ರೇರಿತ ಸೃಷ್ಟಿಗಳು, ಆಧುನಿಕ ವಿನ್ಯಾಸ ರೂಪಗಳು ಹಾಗೂ ನಿರಂತರವಾಗಿ ವಿಕಸಿಸುತ್ತಿರುವ ವಿನ್ಯಾಸ ಅಭಿವ್ಯಕ್ತಿಗಳು ಇಂದಿನ ಗ್ರಾಹಕರ ಅಗತ್ಯಗಳಿಗೆ ಹೇಗೆ ಒಂದಾಗಬಹುದು ಎಂಬುದನ್ನು ಬ್ರ್ಯಾಂಡ್ ಪ್ರದರ್ಶಿಸಿತು.

ಸುಮಾರು ಒಂದು ದಶಕದ ಬಳಿಕ ಮಧು ಸಪ್ರೆ ಅವರು ಇಂಡಿಯಾ ಕೌಚರ್ ವೀಕ್‌ನ ರ್‍ಯಾಂಪ್‌ಗೆ ಮರಳಿದ್ದು, ಅವರೊಂದಿಗೆ ಸಾಕ್ಷಿ ಸಿಂಧ್ವಾನಿ, ಕ್ಯಾರೊಲ್ ಗ್ರಾಸಿಯಾಸ್ ಮತ್ತು ಶೀತಲ್ ಮಲ್ಲಾರ್ ಅವರಂತಹ ಖ್ಯಾತ ಸೂಪರ್‌ಮಾಡೆಲ್‌ಗಳ ಉಪಸ್ಥಿತಿಯಿಂದ ರ್‍ಯಾಂಪ್‌ ಮತ್ತಷ್ಟು ಕಣ್ಮನ ಸೆಳೆಯಿತು. ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವದ ಮೂಲಕ ಪ್ರತಿಯೊಬ್ಬರೂ ಈ ಸಂಗ್ರಹಕ್ಕೆ ಜೀವ ತುಂಬಿದರು.

ಇದನ್ನೂ ಓದಿ: Jewel Fashion 2026: ವದನದ ಸೌಂದರ್ಯ ಹೆಚ್ಚಿಸುವ ಬಿಗ್ ಮಾಂಗ್ ಟೀಕಾ ಫ್ಯಾಷನ್

ಪರಂಪರೆಯ ಆಭರಣಗಳನ್ನು ಹೊಸ ದೃಷ್ಟಿಕೋನದಲ್ಲಿ ಧರಿಸುವ ಪರಿಕಲ್ಪನೆಯನ್ನು ಕೇಂದ್ರ ವಾಗಿಟ್ಟುಕೊಂಡ ಈ ವಿಶೇಷ ಆಭರಣ ಸಂಗ್ರಹವು, ಭಾರತದ ವೈವಿಧ್ಯಮಯ ಸಂಸ್ಕೃತಿಗಳು ಹಾಗೂ ಪ್ರಾದೇಶಿಕ ವಿನ್ಯಾಸ ಪರಂಪರೆಗಳಿಂದ ಪ್ರೇರಿತವಾದ ಇಂದ್ರಿಯಾದ ಅತ್ಯಂತ ಮನಮೋಹಕ ಆಭರಣಗಳನ್ನು ಒಳಗೊಂಡಿತ್ತು.

ಸಾಂಪ್ರದಾಯಿಕ ಹಳದಿ ಚಿನ್ನದ ಆಭರಣಗಳು, ಪಾರಂಪರಿಕ ಪರಂಪರೆಯನ್ನು ಪ್ರತಿಬಿಂಬಿಸುವ ಆಂಟಿಕ್ ಆಭರಣಗಳು, ಸಂಕೀರ್ಣವಾದ ನಕ್ಷಿ ಕಲಾಕೃತಿಗಳು, ದೇವಾಲಯ ಶೈಲಿಯ ಆಭರಣಗಳು, ರಾಜಸ್ಥಾನದ ಪ್ರಸಿದ್ಧ ಆಡ್ (Aad) ಹಾರಗಳು, ನಾಜೂಕಾದ ಫಿಲಿಗ್ರಿ ಕಲಾಕೃತಿಗಳು, ಸಾಂಪ್ರದಾಯಿಕ ಮಾಂಗ್ ಟಿಕ್ಕಾ ಗಳು, ಹಾಗೂ ಚಿನ್ನದಲ್ಲಿ ಅಳವಡಿಸಲಾದ ವರ್ಣರಂಜಿತ ರತ್ನಗಳಿಂದ ಅಲಂಕರಿಸಿದ ಆಭರಣಗಳು ಈ ಸಂಗ್ರಹದ ವಿಶೇಷತೆಯಾಗಿದ್ದವು. ಇದರ ಜೊತೆಗೆ, ಆಧುನಿಕ ಅಭಿರುಚಿ ಮತ್ತು ಜೀವನಶೈಲಿಗೆ ಹೊಂದುವಂತೆ ವಿನ್ಯಾಸಗೊಳಿಸಲಾದ ಬಹುಮುಖ ಆಭರಣಗಳ ಮೂಲಕ ಇಂದ್ರಿಯಾ ತನ್ನ ಸಮಕಾಲೀನ ವಿನ್ಯಾಸ ಶೈಲಿಯನ್ನೂ ಅನಾವರಣ ಗೊಳಿಸಿತು.

Fashion week 3

ಪರಂಪರೆ, ಬಣ್ಣ ಮತ್ತು ವೈಯಕ್ತಿಕತೆಯನ್ನು ಪ್ರಮುಖವಾಗಿಟ್ಟುಕೊಂಡ ಹೌಸ್ ಆಫ್ ಮಸಾಬಾ ಅವರ ವಧುವಿನ ಉಡುಪು ಸಂಗ್ರಹದೊಂದಿಗೆ ಈ ಆಭರಣಗಳನ್ನು ಸೊಗಸಾಗಿ ಸಂಯೋಜಿಸ ಲಾಗಿದ್ದು, ಪ್ರದರ್ಶನದ ಅವಿಭಾಜ್ಯ ಅಂಗವಾಗಿ ಭಾರತೀಯ ಕರಕುಶಲ ಪರಂಪರೆಯನ್ನು ಸಮಕಾಲೀನ ದೃಷ್ಟಿಕೋನದಲ್ಲಿ ಅದ್ಭುತವಾಗಿ ತೋರ್ಪಡಿಸಿತು.

ಈ ಸಹಯೋಗದ ಕುರಿತು ಮಾತನಾಡಿದ ಇಂದ್ರಿಯಾದ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಶಾಂತಿಸ್ವರೂಪ್ ಪಾಂಡಾ ಅವರು, “ಫ್ಯಾಷನ್ ಮತ್ತು ಆಭರಣಗಳ ನಡುವೆ ಯಾವಾಗಲೂ ಪರಸ್ಪರ ಪೂರಕವಾದ ಒಂದು ವಿಶೇಷ ನಂಟಿದೆ. ಒಂದರ ಸೌಂದರ್ಯವನ್ನು ಮತ್ತೊಂದು ಮತ್ತಷ್ಟು ಹೆಚ್ಚಿಸುತ್ತದೆ. ಇಂಡಿಯಾ ಕೌಚರ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಜೊತೆಗಿನ ನಮ್ಮ ಸಹಯೋಗವು ಭಾರತೀಯ ಪರಂಪರೆಯಲ್ಲಿ ಬೇರುಬಿಟ್ಟಿರುವ ಎರಡು ವಿಶಿಷ್ಟ ಸೃಜನಾತ್ಮಕ ದೃಷ್ಟಿಕೋನಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿತು.

ಕರಕುಶಲ, ಸೃಜನಶೀಲತೆ ಮತ್ತು ಸಮಕಾಲೀನ ಅಭಿವ್ಯಕ್ತಿ ಒಂದೇ ವೇದಿಕೆಯಲ್ಲಿ ಸೇರುವ ಈ ಸಾಂಸ್ಕೃತಿಕ ಸಂವಾದದ ಮೂಲಕ, ಇಂದ್ರಿಯಾಗೆ ತನ್ನ ವಿನ್ಯಾಸ ತತ್ವವನ್ನು ಪ್ರಸ್ತುತಪಡಿಸುವ ಅಪೂರ್ವ ಅವಕಾಶ ದೊರೆಯಿತು. ಈ ಸಂಗ್ರಹವು ನಮ್ಮ ಆಭರಣಗಳನ್ನು ಅತ್ಯುತ್ತಮವಾಗಿ ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನು ಒದಗಿಸಿತು. ಜೊತೆಗೆ, ಭಾರತದ ಸಮೃದ್ಧ ಆಭರಣ ಪರಂಪರೆ ಕಾಲಕ್ಕೆ ತಕ್ಕಂತೆ ನಿರಂತರವಾಗಿ ರೂಪಾಂತರಗೊಳ್ಳುತ್ತಾ, ಇಂದಿನ ಗ್ರಾಹಕರಿಗೂ ಹೇಗೆ ಸಮಾನವಾಗಿ ಪ್ರಸ್ತುತ ಮತ್ತು ಪ್ರಸ್ತುತವಾಗಿಯೇ ಉಳಿದಿದೆ ಎಂಬುದನ್ನು ಇದು ಪರಿಣಾಮಕಾರಿ ಯಾಗಿ ಪ್ರದರ್ಶಿಸಿತು,” ಎಂದು ಹೇಳಿದರು.

Fashion week 2

ಈ ಸಂಗ್ರಹದಲ್ಲಿನ ಪ್ರತಿಯೊಂದು ಆಭರಣವನ್ನೂ ಪೀಳಿಗೆಯಿಂದ ಪೀಳಿಗೆಗೆ ಪರಿಷ್ಕೃತಗೊಂಡ ಕರಕುಶಲ ತಂತ್ರಗಳನ್ನು ಅಳವಡಿಸಿಕೊಂಡ ಪರಿಣತ ಕುಶಲಕರ್ಮಿಗಳು ಕೈಯಿಂದಲೇ ಅತ್ಯಂತ ನಿಖರವಾಗಿ ರೂಪಿಸಿದ್ದಾರೆ. ಸೂಕ್ಷ್ಮ ಕೆತ್ತನೆ, ಅತ್ಯುತ್ತಮ ರತ್ನ ಜಡಿತ ಕೌಶಲ ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಅಲಂಕಾರಿಕ ವಿನ್ಯಾಸಗಳು ಪ್ರತಿಯೊಂದು ಆಭರಣವನ್ನೂ ಕಾಲಾತೀತ ಕಲಾಕೃತಿಯನ್ನಾಗಿ ರೂಪಿಸಿವೆ.

ಹೌಸ್ ಆಫ್ ಮಸಾಬಾ ಅವರ ಆಧುನಿಕ ವಧುವಿನ ಉಡುಪು ವಿನ್ಯಾಸಗಳೊಂದಿಗೆ ಈ ಆಭರಣ ಗಳನ್ನು ಸಂಯೋಜಿಸುವ ಮೂಲಕ, ಸಾಂಪ್ರದಾಯಿಕ ಆಭರಣಗಳನ್ನು ಕೇವಲ ಸಾಂಪ್ರದಾಯಿಕ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸದೆ, ಅವುಗಳ ವೈವಿದ್ಯತೆ ಮತ್ತು ಆಧುನಿಕ ವಧುವಿನ ಜೀವನಶೈಲಿಗೆ ಹೊಂದುವ ಪ್ರಸ್ತುತತೆಯನ್ನು ಹೊಸ ಆಯಾಮದಲ್ಲಿ ಅನಾವರಣಗೊಳಿಸ ಲಾಯಿತು.

“ನನ್ನ ಮೊದಲ ಕೌಚರ್ ಪ್ರದರ್ಶನಕ್ಕೆ ಆಭರಣ ಸಹಭಾಗಿಯಾಗಿ ಇಂದ್ರಿಯಾದ ಜೊತೆ ಕೈಜೋಡಿಸಿರುವುದಕ್ಕೆ ನನಗೆ ಅಪಾರ ಸಂತೋಷವಾಗಿದೆ. ಈ ಬ್ರ್ಯಾಂಡ್, ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸಮತೋಲನವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುತ್ತದೆ ಎಂದು ನಾನು ನಂಬುತ್ತೇನೆ. ಅವರ ಕೆಲವು ಆಭರಣಗಳನ್ನು ನಾನು ಈಗಾಗಲೇ ನೋಡಿದ್ದೇನೆ. ಅವು ಕೇವಲ ರ್‍ಯಾಂಪ್‌ ಮೇಲಷ್ಟೇ ಅಲ್ಲ, ನಮ್ಮ ವಾರ್ಡ್‌ರೋಬ್‌ಗಳಲ್ಲಿ ಹಾಗೂ ನಮ್ಮ ವೈಯಕ್ತಿಕ ಆಭರಣ ಸಂಗ್ರಹದ ಭಾಗವಾಗಿಯೂ ಸಹಜವಾಗಿ ಸ್ಥಾನ ಪಡೆಯುವಂತಿವೆ ಎಂಬ ಭಾವನೆ ನನಗೆ ತಕ್ಷಣವೇ ಮೂಡಿತು. ಈ ಆಭರಣಗಳು ಅತ್ಯಂತ ನಿಖರವಾದ ಕರಕುಶಲತೆಯಿಂದ ರೂಪುಗೊಂಡಿದ್ದು, ಪ್ರತಿಯೊಂದು ವಿನ್ಯಾಸವೂ ತನ್ನದೇ ಆದ ಕಥೆಯನ್ನು ಹೇಳುತ್ತದೆ.

ಈ ಬ್ರ್ಯಾಂಡ್ ತನ್ನ ಭಾರತೀಯತೆಯನ್ನು ಹೆಮ್ಮೆಯಿಂದ ಮತ್ತು ಆತ್ಮವಿಶ್ವಾಸದಿಂದ ಪ್ರತಿಬಿಂಬಿಸು ತ್ತದೆ. ಅದೇ ನನಗೆ ಅತ್ಯಂತ ಇಷ್ಟವಾದ ಅಂಶವಾಗಿದ್ದು, ಹೌಸ್ ಆಫ್ ಮಸಾಬಾ ಪ್ರತಿನಿಧಿಸುವ ಮೌಲ್ಯವೂ ಕೂಡ ಅದೇ. ಜೊತೆಗೆ, ಇದು ಆದಿತ್ಯ ಬಿರ್ಲಾ ಸಮೂಹದ ಬೆಂಬಲ ಹೊಂದಿರುವ ಬ್ರ್ಯಾಂಡ್ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಅಪಾರ ವಿಶ್ವಾಸವನ್ನು ಗಳಿಸಿದೆ. ವಿಶೇಷವಾಗಿ ಫೈನ್ ಜ್ಯುವೆಲ್ಲರಿ ಹಾಗೂ ವಧುವಿನ ಆಭರಣಗಳ ವಿಷಯದಲ್ಲಿ ಗ್ರಾಹಕರ ವಿಶ್ವಾಸ ಅತ್ಯಂತ ಮುಖ್ಯ. ಆ ವಿಶ್ವಾಸವನ್ನು ಈ ಬ್ರ್ಯಾಂಡ್ ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದೆ,” ಎಂದು ಡಿಸೈನರ್ ಮಸಾಬಾ ಗುಪ್ತಾ ಹೇಳಿದರು.

ಆಭರಣಗಳ ವಿಶೇಷ ಸಂಗ್ರಹದ ಕುರಿತು ಮಾತನಾಡಿದ ಇಂದ್ರಿಯಾದ ವಿನ್ಯಾಸ ವಿಭಾಗದ ಮುಖ್ಯಸ್ಥರಾದ ಅಭಿಷೇಕ್ ರಸ್ತೋಗಿ ಅವರು, “ಇಂಡಿಯಾ ಕೌಚರ್ ವೀಕ್‌ನಲ್ಲಿ ಹೌಸ್ ಆಫ್ ಮಸಾಬಾ ಅವರ ಪ್ರದರ್ಶನಕ್ಕಾಗಿ, ಭಾರತೀಯ ಆಭರಣ ಕರಕುಶಲ ಪರಂಪರೆಯ ವೈವಿಧ್ಯತೆ ಮತ್ತು ವೈಭವವನ್ನು ಸಂಭ್ರಮಿಸುವ ವಿಶೇಷ ಆಭರಣ ಸಂಗ್ರಹವನ್ನು ಇಂದ್ರಿಯಾ ರೂಪಿಸಿದೆ. ಈ ಸಂಗ್ರಹದಲ್ಲಿನ ಪ್ರತಿಯೊಂದು ಆಭರಣವೂ ಪರಿಣತ ಕುಶಲಕರ್ಮಿಗಳ ಅಸಾಧಾರಣ ಕಲಾತ್ಮಕತೆ ಯನ್ನು ಪ್ರತಿಬಿಂಬಿಸುತ್ತದೆ.

ಪೀಳಿಗೆಗಳಿಂದ ಪರಂಪರೆಯಾಗಿ ಬಂದಿರುವ ಕರಕುಶಲ ತಂತ್ರಗಳು, ಸೂಕ್ಷ್ಮ ಕೈಚಳಕ ಹಾಗೂ ಪ್ರಾದೇಶಿಕ ಕಲಾ ಸಂಪ್ರದಾಯಗಳು ಒಂದಾಗಿ ಬೆರೆತು ಕಾಲಾತೀತ ವಿನ್ಯಾಸಗಳಿಗೆ ಜೀವ ತುಂಬಿವೆ. ಸಮಕಾಲೀನ ಕೌಚರ್ ಉಡುಪುಗಳೊಂದಿಗೆ ಈ ಆಭರಣಗಳನ್ನು ಸಂಯೋಜಿಸುವ ಮೂಲಕ, ಭಾರತದ ಅತ್ಯುತ್ತಮ ಆಭರಣ ಪರಂಪರೆಗಳು ಕೇವಲ ಸಂರಕ್ಷಿಸಲ್ಪಟ್ಟಿರುವುದಲ್ಲ, ಅವು ಕಾಲಕ್ಕೆ ತಕ್ಕಂತೆ ನಿರಂತರವಾಗಿ ರೂಪಾಂತರಗೊಳ್ಳುತ್ತಿವೆ ಎಂಬುದನ್ನು ಈ ಸಂಗ್ರಹ ಮತ್ತೊಮ್ಮೆ ದೃಢಪಡಿಸುತ್ತದೆ. ಜೊತೆಗೆ, ಪರಂಪರೆಯು ಆಧುನಿಕ ವಿನ್ಯಾಸಗಳಿಗೆ ಸದಾ ಚಿರಂತನ ಸ್ಫೂರ್ತಿಯ ಮೂಲವಾಗಿಯೇ ಉಳಿದಿದೆ ಎಂಬುದನ್ನೂ ಇದು ಸಾಬೀತುಪಡಿಸುತ್ತದೆ,” ಎಂದು ಹೇಳಿದರು.

ಇಂಡಿಯಾ ಕೌಚರ್ ವೀಕ್ 2026ರಲ್ಲಿ ನಡೆದ ಈ ವಿಶೇಷ ಪ್ರದರ್ಶನದ ಮೂಲಕ, ಇಂದ್ರಿಯಾ ಮತ್ತು ಹೌಸ್ ಆಫ್ ಮಸಾಬಾ ಸಮಕಾಲೀನ ಭಾರತೀಯ ವಧುವಿನ ಅಭಿವ್ಯಕ್ತಿಯ ಸಂಭ್ರಮವನ್ನು ಅನಾವರಣಗೊಳಿಸಿದವು.

ಆಧುನಿಕ ವಧುವಿಗಾಗಿ ಪರಂಪರೆಯಿಂದ ಪ್ರೇರಿತವಾದ ವರ್ಣರಂಜಿತ ವಿನ್ಯಾಸಗಳನ್ನು ಒಳಗೊಂಡ ಹೌಸ್ ಆಫ್ ಮಸಾಬಾ ಅವರ ವಿಶಿಷ್ಟ ದೃಷ್ಟಿಕೋನ ಮತ್ತು ಭಾರತದ ವಿವಿಧ ಪ್ರಾದೇಶಿಕ ಆಭರಣ ಕರಕುಶಲ ಪರಂಪರೆಯ ಅತ್ಯುತ್ತಮ ಕಲಾಕೃತಿಗಳನ್ನು ಒಳಗೊಂಡ ಇಂದ್ರಿಯಾ ಅವರ ವಿಶೇಷ ಆಭರಣ ಸಂಗ್ರಹವು ಒಂದಾಗಿ ಬೆರೆತು, ಫ್ಯಾಷನ್ ಮತ್ತು ಆಭರಣಗಳ ಮೂಲಕ ಸಂಪ್ರದಾಯಗಳನ್ನು ನಿರಂತರವಾಗಿ ಹೊಸ ರೂಪದಲ್ಲಿ ಪ್ರದರ್ಶಿಸಬಹುದು ಎಂಬು ದನ್ನು ಈ ಸಹಯೋಗ ಪರಿಣಾಮಕಾರಿಯಾಗಿ ಪ್ರದರ್ಶಿಸಿತು. ಈ ಎರಡೂ ಬ್ರ್ಯಾಂಡ್‌ಗಳು ಒಟ್ಟಾಗಿ ಸಂಸ್ಕೃತಿ, ವೈಯಕ್ತಿಕತೆ ಮತ್ತು ಕಲಾತ್ಮಕತೆಯ ಶಕ್ತಿಶಾಲಿ ಕಥನವನ್ನು ಕಟ್ಟಿಕೊಡುತ್ತಾ, ಭಾರತದ ಸಮೃದ್ಧ ಸೃಜನಾತ್ಮಕ ಪರಂಪರೆಯನ್ನು ಗೌರವಿಸುವುದರ ಜೊತೆಗೆ ಅದರ ಭವಿಷ್ಯಕ್ಕೂ ಹೊಸ ದಿಕ್ಕು ನೀಡುವ ಪ್ರಯತ್ನವನ್ನು ಮಾಡಿವೆ.