Gold Price Today On 24nd July 2026: ಚಿನ್ನದ ದರದಲ್ಲಿಂದು ಕೊಂಚ ಇಳಿಕೆ; ಬೆಂಗಳೂರಿನಲ್ಲಿ ಬೆಲೆ ಏನಿದೆ?
Gold Price Today: ಕೆಲ ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ . ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 170 ರುಪಾಯಿ ಕಡಿಮೆಯಾಗಿ 13,230 ರುಪಾಯಿಗೆ ಬಂದು ತಲುಪಿದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
Vishakha Bhat Heggar
Jul 24, 2026 1:08 PM
ಬೆಂಗಳೂರು: ಕೆಲ ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ . ಬೆಂಗಳೂರಿನಲ್ಲಿ (Gold Price Today On 22nd July 2026) 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 170 ರುಪಾಯಿ ಕಡಿಮೆಯಾಗಿ 13,230ರುಪಾಯಿಗೆ ಬಂದು ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನ 185 ರುಪಾಯಿ ಕಡಿಮೆಯಾಗಿ, 14,433 ರುಪಾಯಿಗೆ ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,840 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,32,300 ರುಪಾಯಿ ಹಾಗೂ 100 ಗ್ರಾಂಗೆ 13,23,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,15,464ರುಪಾಯಿ, 10 ಗ್ರಾಂಗೆ 1,44,330 ರುಪಾಯಿ ಹಾಗೂ 100 ಗ್ರಾಂಗೆ 14,43,300 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,430 ರುಪಾಯಿ | 14,651 ರುಪಾಯಿ |
| ಮುಂಬೈ | 13,430 ರುಪಾಯಿ | 14,651 ರುಪಾಯಿ |
| ದೆಹಲಿ | 13,430 ರುಪಾಯಿ | 14,651 ರುಪಾಯಿ |
| ಕೋಲ್ಕತಾ | 13,430 ರುಪಾಯಿ | 14,651 ರುಪಾಯಿ |
| ಹೈದರಾಬಾದ್ | 13,430 ರುಪಾಯಿ | 14,651 ರುಪಾಯಿ |
ಇತ್ತ ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ 235 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,350 ರುಪಾಯಿ ಹಾಗೂ 1 ಕೆಜಿಗೆ 2,35,000 ರುಪಾಯಿ ಇದೆ.