ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೀವು 35-45 ವಯಸ್ಸಿನವರಾ? ಹಾಗಾದ್ರೆ ನಿಮ್ಮ ಉಳಿತಾಯದ ಹೂಡಿಕೆಯನ್ನು ಹೀಗೆ ಮಾಡಿ

ಜೀವನ ಎನ್ನುವುದು ಪ್ರಾರಂಭವಾಗುವುದೇ 35ರಿಂದ 45 ವರ್ಷ ವಯಸ್ಸಿನಲ್ಲಿ. ಈ ಹಂತದಲ್ಲಿ ನಾವು ಉಳಿತಾಯ ಮಾಡದೇ ಇದ್ದರೆ ಮುಂದೊಂದು ದಿನ ಎಡವಿ ಬೀಳುವುದು ಗ್ಯಾರಂಟಿ. ಹೀಗಾಗಿ ಈ ಅವಧಿಯಲ್ಲಿ ಯಾವುದೆಲ್ಲ ಹೂಡಿಕೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಮಾಹಿತಿಯನ್ನು ವಿಶ್ವವಾಣಿ ಮನಿಯಲ್ಲಿ ಹಂಚಿಕೊಂಡಿದ್ದಾರೆ ಎನ್ ಆರ್ ಐ ಮನಿ ಲಿಂಕ್ ಯೂಟ್ಯೂಬ್ ಚಾನೆಲ್ ಸಂಸ್ಥಾಪಕರಾದ ಚಂದ್ರಕಾಂತ್ ಭಟ್.

35- 45 ವರ್ಷದಲ್ಲಿ ಹೂಡಿಕೆ ಯೋಜನೆ ಹೇಗಿರಬೇಕು?

ಹಣ ಉಳಿತಾಯ ಹೇಗೆ? -

ಬೆಂಗಳೂರು: ಜೀವನದ ಎರಡನೇ ಅವಧಿ ಪ್ರಾರಂಭವಾಗುವುದು 35- 45 ವರ್ಷದಲ್ಲಿ. ಈ ಸಂದರ್ಭದಲ್ಲಿ ನಾವು ಭವಿಷ್ಯದ ಬಗ್ಗೆ ಸರಿಯಾದ ಯೋಜನೆ ಹಾಕಿಕೊಳ್ಳದೇ ಇದ್ದರೆ ಮುಂದೊಂದು ದಿನ ಪಶ್ಚತ್ತಾಪ ಪಡಲೇಬೇಕಾಗುತ್ತದೆ. ಉಳಿತಾಯ (Saving), ತುರ್ತು ಸಂದರ್ಭ (Emergency money), ಮಕ್ಕಳ ಶಿಕ್ಷಣ (education) ಮತ್ತು ನಿವೃತ್ತ ಜೀವನಕ್ಕಾಗಿ (Pension plan) ಹಿಂದೆ ನಾವು ಹಣ ಹೂಡಿಕೆ ಮಾಡದೇ ಇದ್ದರೂ ಈ ಅವಧಿಯಲ್ಲಿ ಮಾಡಲೇಬೇಕಾಗುತ್ತದೆ ಎಂದು ಎನ್ ಆರ್ ಐ ಮನಿ ಲಿಂಕ್ ಯೂಟ್ಯೂಬ್ ಚಾನೆಲ್ ಸಂಸ್ಥಾಪಕರಾದ ಚಂದ್ರಕಾಂತ್ ಭಟ್ (Chandrakanth Bhat) ಹೇಳಿದರು.

'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, 35- 45 ವರ್ಷವೆಂದರೆ ಇದು ಜನರಿಗೆ ಮೆಚುರಿಟಿ ಬರುವ ಹಂತ. ಈ ಸಂದರ್ಭದಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲು ನಾವು ಸಮರ್ಥರಾಗಿರುತ್ತೇವೆ. ಹೀಗಾಗಿ ಹಣಕಾಸಿನ ವಿಚಾರದಲ್ಲೂ ನಾವು ಗಂಭೀರವಾಗಿ ಯೋಚಿಸಬೇಕಾದ ಅವಧಿ ಇದಾಗಿದೆ ಎಂದರು.

ಪ್ರತಿಯೊಬ್ಬರೂ ಪಿಪಿಎಫ್ ಖಾತೆ ಹೊಂದಿರಲೇಬೇಕು ಎನ್ನುವುದೇಕೆ ಹಣಕಾಸು ತಜ್ಞರು? ಇಲ್ಲಿದೆ ಮಾಹಿತಿ

ಈ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಮುಂದೆ ಸಮಾಜ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಇದರಿಂದ ನಿರ್ಧರಿತವಾಗುತ್ತದೆ. ಹೀಗಾಗಿ ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಮುಖ್ಯವಾಗಿರುತ್ತದೆ ಎಂದು ಚಂದ್ರಕಾಂತ್ ತಿಳಿಸಿದರು.

ಹಣಕಾಸಿನ ಯೋಜನೆ ಮಾಡಿಕೊಳ್ಳಬೇಕಾದರೆ ಮೊದಲು ಕಳೆದ ಹತ್ತು ವರ್ಷದಲ್ಲಿ ನಾವು ಏನು ಮಾಡಿದ್ದೇವೆ ಎಂಬುದನ್ನು ಅವಲೋಕಿಸುವುದು ಬಹಳ ಮುಖ್ಯ. ಯಾವುದೋ ಆಸ್ತಿ ಖರೀದಿಗಾಗಿ ನಮ್ಮ ಸಂಪೂರ್ಣ ಹೂಡಿಕೆ ಹಣವನ್ನು ಖಾಲಿ ಮಾಡುವುದು ಮೂರ್ಖತನ. ಹೀಗಾಗಿ ನಮ್ಮ ಮೊದಲ ಆದ್ಯತೆ ಹೂಡಿಕೆಗಾಗಿಯೇ ಇರಬೇಕು. ಜೊತೆಗೆ ಜೀವನದ ಆನಂದವನ್ನು ನಾವು ಆಸ್ವಾದಿಸುವಂತಿರಬೇಕು ಎಂದು ಅವರು ಹೇಳಿದರು.

35- 45 ವರ್ಷದಲ್ಲಿ ನಾವು ಮುಖ್ಯವಾಗಿ ಯೋಚಿಸಬೇಕಿರುವುದು ಹಿಂದೆ ನಾನು ಏನು ಮಾಡಿಲ್ಲ, ಏನು ಮಾಡಿದ್ದೇನೆ. ಇದು ಭವಿಷ್ಯವನ್ನು ನಿರ್ಣಯಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನ ಹತ್ತು ವರ್ಷಗಳ ಅವಲೋಕನವು ನಮಗೆ ಮುಂದೇನು ಮಾಡಬೇಕು ಎನ್ನುವ ದಾರಿಯನ್ನು ತೋರಿಸುತ್ತದೆ. ಇದಕ್ಕಾಗಿ ಹಣಕಾಸು ಸಲಹೆಗಾರರ ಅಭಿಪ್ರಾಯಗಳನ್ನು ತೆಗೆದುಕೊಳ್ಳಬಹುದು. ಅವರು ವೈದ್ಯರಂತೆ. ನಾವು ಹಣಕಾಸಿನ ಆರೋಗ್ಯದ ವಿಚಾರದಲ್ಲಿ ಯಾವುದೇ ತಪ್ಪು ಮಾಡದಂತೆ ಕಾಳಜಿ ತೋರಿಸುತ್ತಾರೆ ಎಂದರು.

ಮುಖ್ಯವಾಗಿ ಮಾಡಬೇಕಿರುವುದು ಏನು?

35- 45 ವರ್ಷದಲ್ಲಿ ನಾವು ಮುಖ್ಯವಾಗಿ ಈ ನಾಲ್ಕು ಅಂಶಗಳಿಗೆ ಆದ್ಯತೆ ನೀಡಲೇಬೇಕು. ಅವುಗಳೆಂದರೆ ಉಳಿತಾಯ, ತುರ್ತು ಸಂದರ್ಭ, ಮಕ್ಕಳ ಶಿಕ್ಷಣ ಮತ್ತು ನಿವೃತ್ತ ಜೀವನಕ್ಕಾಗಿ ಹಣ ಉಳಿತಾಯ ಮಾಡುವ ಯೋಜನೆಯನ್ನು ಕಡ್ಡಾಯವಾಗಿ ಮಾಡಿದರೆ ಮಾತ್ರ ನಮ್ಮ ಭವಿಷ್ಯ ಸುಭದ್ರವಾಗುವುದು.

ತುರ್ತು ನಿಧಿ

ನಮ್ಮಲ್ಲಿರುವ ಎಮರ್ಜೆನ್ಸಿ ಫಂಡ್ ಅಥವಾ ತುರ್ತು ನಿಧಿಯನ್ನು ಮರು ಪರಿಶೀಲಿಸಬೇಕು. ಇದನ್ನು ಎರಡು ವರ್ಷದ ಯೋಜನೆ ಇಟ್ಟುಕೊಂಡು ಮಾಡುವುದು ಕಡ್ಡಾಯ. ಯಾವುದೇ ತುರ್ತು ಸಂದರ್ಭ ಬರಲಿ ಈ ಫಂಡ್ ನಮಗೆ ಸುರಕ್ಷೆಯನ್ನು ಒದಗಿಸುತ್ತದೆ. ಹೀಗಾಗಿ ಇದರಲ್ಲಿ ಏನು ಮಾಡಿಲ್ಲ, ಏನು ಮಾಡಬೇಕು ಎಂಬುದನ್ನು ಮೊದಲು ನೋಡಬೇಕು.

ಮಕ್ಕಳ ಶಿಕ್ಷಣ

ಎಷ್ಟು ಸಾಧ್ಯವೋ ಅಷ್ಟನ್ನು ಮಕ್ಕಳ ಶಿಕ್ಷಣ ತೆಗೆದಿಡಬೇಕು. ಇದರಲ್ಲಿ ಇಷ್ಟೇ ತೆಗೆದಿಡಬೇಕು ಎನ್ನುವ ನಿಯಮವಿಲ್ಲ. ಮಕ್ಕಳನ್ನು ಪದವಿ ತನಕ ಓಡಿಸುವುದು ಪೋಷಕರ ಜವಾಬ್ದಾರಿ. ಹೀಗಿರುವಾಗ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣ ತೆಗೆದಿರಿಸಬಹುದು. ಮಕ್ಕಳಿಗೆ ವಿದೇಶದಲ್ಲೇ ಓದಿಸಬೇಕು, ಸ್ನಾತಕೋತ್ತರ ಪದವಿಯನ್ನು ಕೊಡಿಸಲೇಬೇಕು ಎನ್ನುವ ಕಡ್ಡಾಯವೇನಿಲ್ಲ. ಯಾಕೆಂದರೆ ಕಾಲೇಜು ಜೀವನವೇ ಕಲಿಕೆ ಅಲ್ಲ. ಅದು ಕೇವಲ ಅಡಿಪಾಯವಷ್ಟೇ. ನಿಜವಾದ ಕಲಿಕೆ ಪ್ರಾರಂಭವಾಗುವುದು ಕಾಲೇಜಿನ ಅನಂತರವೇ.



ಉಳಿತಾಯ

35- 45 ವರ್ಷದಲ್ಲಿ ಉಳಿತಾಯವನ್ನು ಮಾಡಲೇಬೇಕು. ಸರಿಯಾದ ಪ್ರಮಾಣದಲ್ಲಿ ಉಳಿತಾಯವನ್ನು ಮಾಡದೇ ಹೋದರೆ ಮುಂದೆ ಬಹುದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಜೀವನವನ್ನು ಸಂತೋಷದಿಂದ ಕಲಿಯಲು, ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ಉಳಿತಾಯ ಮಾಡುವುದು ಕಡ್ಡಾಯವಾಗಿದೆ. ಉಳಿತಾಯ ಮಾಡದೇ ಇರುವುದು ಬಹುದೊಡ್ಡ ತಪ್ಪು.

ನಿವೃತ್ತ ಜೀವನದ ಯೋಜನೆ

ಈ ಅವಧಿಯಲ್ಲಿ ನಿವೃತ್ತಿ ಯೋಜನೆ ಮಾಡಿಕೊಳ್ಳುವುದು ಕಡ್ಡಾಯ. ಇಲ್ಲವಾದರೆ ಭವಿಷ್ಯದಲ್ಲಿ ಅಪಾಯ ಗ್ಯಾರಂಟಿ.

8th Pay Commission: ಮೂಲ ವೇತನದೊಂದಿಗೆ ಡಿಎ ವಿಲೀನ.. ಸಚಿವರು ಹೇಳಿದ್ದೇನು?

ಹಣಕಾಸು ಉಳಿತಾಯದ ವಿಚಾರದಲ್ಲಿ ಇವತ್ತಿನ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ. ಪತಿ ಪತ್ನಿ ಇಬ್ಬರೂ ಸೇರಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದಿರುವ ಚಂದ್ರಕಾಂತ್, ಜೀವನದಲ್ಲಿ ನಾವು ಕಲಿಕೆಯನ್ನು ನಿರಂತರವಾಗಿರಿಸಿಕೊಳ್ಳಬೇಕು. ಇದರಿಂದ ಕೆಲಸ ಕಳೆದುಕೊಳ್ಳುವ ಭೀತಿ ಉಂಟಾಗುವುದಿಲ್ಲ. ಕಲಿಕೆ ನಿಂತರೆ ಮಾತ್ರ ನಮ್ಮ ಮುಂದಿನ ಜೀವನ ಕಷ್ಟವಾಗುತ್ತದೆ. ಹೀಗಾಗಿ ಇವಿಷ್ಟನ್ನು ಸರಿಯಾಗಿಪಾಲಿಸಿದರೆ ಜೀವನವನ್ನು ಆಸ್ವಾದಿಸಿಕೊಂಡು ಹೋಗಬಹುದು.

ಹಣಕಾಸು ಹೂಡಿಕೆ ವಿಚಾರದಲ್ಲಿ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು ಎಂದ ಚಂದ್ರಕಾಂತ್, ನಾವು ನಮ್ಮ ದಿನವನ್ನು ವಿಶ್ರಾಂತಿ, ಕಚೇರಿ ಸಮಯ, ಫ್ಯಾಮಿಲಿಗಾಗಿ ಕೊಡಲೇಬೇಕು. ಈ ನಡುವೆ ಹಣಕಾಸಿನ ಪ್ಲಾನಿಂಗ್ ಹೊರೆಯನ್ನು ನಾವು ಹೊರಬೇಕಾಗಿಲ್ಲ ಎಂದು ಅವರು ತಿಳಿಸಿದರು.