Rohit Shetty: ಹಾರ್ಪಿಕ್‌ನಿಂದ ಹೊಸ 'ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್'ಗೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ
ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರ ದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್‌ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ.
-
ಬೆಂಗಳೂರು: ಹಾರ್ಪಿಕ್, ತನ್ನ ಅತ್ಯಂತ ಸುಧಾರಿತ ಆವಿಷ್ಕಾರವಾದ 'ಹೊಸ ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್' ಅನ್ನು ಬಿಡುಗಡೆ ಮಾಡಿದೆ. ಕಳೆದ ಒಂದು ದಶಕದಲ್ಲಿ ಸ್ನಾನಗೃಹ ಸ್ವಚ್ಛತಾ ವಿಭಾಗದಲ್ಲಿ ಹಾರ್ಪಿಕ್ ಕೈಗೊಂಡ ಅತಿ ದೊಡ್ಡ ಆವಿಷ್ಕಾರ ಇದಾ ಗಿದ್ದು, ಸ್ನಾನಗೃಹದಲ್ಲಿ ಕಂಡುಬರುವ ಅತ್ಯಂತ ಕಠಿಣ ಕಲೆಗಳನ್ನು ಹೋಗಲಾಡಿಸಿ 'ಅಲ್ಟ್ರಾ ಕ್ಲೀನ್' ಅನುಭವ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಬಾಲಿವುಡ್ ಚಲನಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಬ್ರ್ಯಾಂಡ್ ಅಂಬಾಸಿಡರ್ (Rohit Shetty as Brand Ambassador) ಆಗಿ ಈ ಉತ್ಪನ್ನದ ಪ್ರಬಲ ಶಕ್ತಿಯ ಭರವಸೆ ಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ.
ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್‌ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಈ ಉತ್ಪನ್ನ ಗಳು ಗಟ್ಟಿನೀರಿನ ಕಲೆಗಳ ಮೇಲೆ ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಮೇಲ್ಮೈ ಗಳನ್ನು ಹಾಳು ಮಾಡಿ ಸ್ನಾನಗೃಹವು ಮಂಕಾಗಿ ಕಾಣುವಂತೆ ಮಾಡುತ್ತವೆ.
ಇದನ್ನೂ ಓದಿ: Bangalore Tunnel Road: ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ
ನಂಬಿಕಸ್ತ ಮತ್ತು ಬಹುಮುಖಿ ಸ್ವಚ್ಛತಾ ಪರಿಹಾರಕ್ಕಾಗಿ ಗ್ರಾಹಕರ ದೀರ್ಘಕಾಲದ ಅಗತ್ಯ ಮನಗಂಡು, ಹೊಸ ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್ ಅನ್ನು ವಿಶೇಷವಾಗಿ ಭಾರತೀಯ ಸ್ನಾನಗೃಹಗಳಿಗಾಗಿಯೇ ರೂಪಿಸಲಾಗಿದೆ.
ಭಾರತದ ಅತ್ಯಂತ ಕಠಿಣ ಕಲೆ ನಿವಾರಣಾ ತಜ್ಞನಾಗಿರುವ ಇದು, ದೈನಂದಿನ ಹಳದಿ ಕಲೆಗಳು ಮತ್ತು ಉಪ್ಪುನೀರಿನ ಪದರಗಳ ಜೊತೆಗೆ ತುಕ್ಕಿನಂತಹ ಕಠಿಣ ಕಲೆಗಳನ್ನು ನಿವಾರಿಸಿ ಸ್ನಾನಗೃಹಕ್ಕೆ ಅಲ್ಟ್ರಾ ಕ್ಲೀನ್ ಹೊಳಪನ್ನು ನೀಡುತ್ತದೆ. "ಹೊಸ ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್ – ಎಂತಹದ್ದೇ ಕಲೆಯಿರಲಿ, ಇಡೀ ಸ್ನಾನಗೃಹ ಅಲ್ಟ್ರಾ ಕ್ಲೀನ್" ಎಂಬ ಈ ಬಿಡುಗಡೆಯ ಅಭಿಯಾನವು ಗ್ರಾಹಕರಿಗೆ ಪ್ರಬಲ ಪರಿಹಾರವನ್ನು ನೀಡುವ ಮೂಲಕ ಸ್ನಾನಗೃಹ ಸ್ವಚ್ಛತಾ ವಿಭಾಗದಲ್ಲಿ ಹಾರ್ಪಿಕ್‌ನ ನಾಯಕತ್ವವನ್ನು ಪುನರುಚ್ಚರಿಸುತ್ತದೆ.
ಈ ವೇಳೆ ಮಾತನಾಡಿದ ರೋಹಿತ್ ಶೆಟ್ಟಿ, "ಜನರು ನಿಮ್ಮನ್ನು ಒಂದು ನಿರ್ದಿಷ್ಟ ಶೈಲಿ ಯೊಂದಿಗೆ ಗುರುತಿಸಿದಾಗ ಹೇಗಿರುತ್ತದೆ ಎಂಬುದು ನನಗೆ ತಿಳಿದಿದೆ; ಇದರರ್ಥ ಪ್ರತಿ ಬಾರಿಯೂ ನೀವು ಅತ್ಯುತ್ತಮವಾದುದನ್ನೇ ನೀಡುತ್ತೀರಿ ಎಂದು ಅವರು ನಿಮ್ಮನ್ನು ನಂಬು ತ್ತಾರೆ. ಆ ನಂಬಿಕೆಯು ನಿಮ್ಮನ್ನು ಮತ್ತಷ್ಟು ಸಾಧಿಸಲು, ಉತ್ತಮವಾಗಿ ಕಾರ್ಯ ನಿರ್ವಹಿಸಲು ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ.
ಅದು ಕಾಮಿಡಿ ಇರಲಿ, ಆಕ್ಷನ್ ಇರಲಿ ಅಥವಾ ಹಾರ್ಪಿಕ್ ವಿಷಯದಲ್ಲಿ ಹೇಳುವುದಾದರೆ 'ಸೋಲಿಡ್ ಸಫಾಯಿ' (ಗಟ್ಟಿಯಾದ ಸ್ವಚ್ಛತೆ) ಇರಲಿ. ಹಾರ್ಪಿಕ್ ದಶಕಗಳಿಂದ ನೈರ್ಮಲ್ಯ ಕ್ಷೇತ್ರದಲ್ಲಿ ನಂಬಿಕಸ್ತ ಹೆಸರಾಗಿದೆ, ಇದು ಸ್ನಾನಗೃಹದ ನೈರ್ಮಲ್ಯಕ್ಕೆ ಪರ್ಯಾಯ ಪದದಂತಿದೆ.
ಹೊಸ 'ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್' ಮೂಲಕ ಬ್ರ್ಯಾಂಡ್ ಸ್ನಾನಗೃಹದ ಸ್ವಚ್ಛತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದೆ. ಕಠಿಣವಾದ, ವಿಶ್ವಾಸಾರ್ಹವಾದ ಮತ್ತು ನೈಜ ಭಾರತೀಯ ಮನೆಗಳಿಗಾಗಿಯೇ ವಿನ್ಯಾಸಗೊಳಿಸಲಾದ ಉತ್ಪನ್ನದೊಂದಿಗೆ ಗುರುತಿಸಿಕೊಳ್ಳಲು ನನಗೆ ಸಂತೋಷವಾಗಿದೆ.