ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಯೊಫೈನಾನ್ಸ್‌ನಿಂದ ಜಿಯೊಸಿಲ್ವರ್‌ ಬಿಡುಗಡೆ; ಬೆಳ್ಳಿಯಲ್ಲಿ 10 ರುಪಾಯಿಯಿಂದ ಡಿಜಿಟಲ್‌ ಹೂಡಿಕೆಗೆ ಅವಕಾಶ

JioSilver: ಜಿಯೋಫೈನಾನ್ಸ್ ಪ್ಲಾಟ್‌ಫಾರ್ಮ್ ಆ್ಯಂಡ್ ಸರ್ವೀಸ್ ಲಿಮಿಟೆಡ್ (ಜೆಎಫ್‌ಪಿಎಸ್‌ಎಲ್ ) ಸಂಸ್ಥೆಯು ಈಗ ತನ್ನ ಆ್ಯಪ್‌ನಲ್ಲಿ ಜಿಯೋಸಿಲ್ವರ್ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 10 ರೂಪಾಯಿಯಿಂದ ಅಪ್ಪಟ 99.9% ಶುದ್ಧತೆಯ ಡಿಜಿಟಲ್ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು.

ಜಿಯೊಫೈನಾನ್ಸ್‌ನಿಂದ ಜಿಯೊಸಿಲ್ವರ್‌ ಬಿಡುಗಡೆ

ಸಾಂದರ್ಭಿಕ ಚಿತ್ರ -

Profile
Siddalinga Swamy Sep 30, 2026 7:43 PM

ಮುಂಬಯಿ, ಸೆ.30: ಜಿಯೋಫೈನಾನ್ಸ್ ಆ್ಯಪ್‌ ಮೂಲಕ ಸಾಲ, ವಿಮೆ, ಹೂಡಿಕೆ ಹಾಗೂ ಪೇಮೆಂಟ್ ಸೇವೆಗಳನ್ನು ಒದಗಿಸುತ್ತಿರುವ ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಆ್ಯಂಡ್‌ ಸರ್ವೀಸ್ ಲಿಮಿಟೆಡ್ (ಜೆಎಫ್‌ಪಿಎಸ್‌ಎಲ್ ) ಸಂಸ್ಥೆಯು ಈಗ ತನ್ನ ಆ್ಯಪ್‌ನಲ್ಲಿ ಜಿಯೋಸಿಲ್ವರ್ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ಕೇವಲ 10 ರೂಪಾಯಿಯಿಂದ ಅಪ್ಪಟ 99.9% ಶುದ್ಧತೆಯ ಡಿಜಿಟಲ್ ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು.

ಜಿಯೋ ಸಿಲ್ವರ್‌ನ ಪ್ರಮುಖ ವಿಶೇಷತೆಗಳು

ಕನಿಷ್ಠ ಹೂಡಿಕೆ: ಕೇವಲ 10 ರೂ. ನಿಂದ 1 ಲಕ್ಷ ರೂ.ವರೆಗೆ ಡಿಜಿಟಲ್ ಬೆಳ್ಳಿಯನ್ನು ಸುಲಭವಾಗಿ ಖರೀದಿಸಬಹುದು.

ಲೈವ್ ರೇಟ್: ಮಾರುಕಟ್ಟೆಯ ನೇರ ದರದಲ್ಲೇ ವಹಿವಾಟು ನಡೆಸಬಹುದು, ಮಾರಾಟ ಮಾಡಿದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಸಿಪ್ (ಎಸ್‌ಐಪಿ) ಸೌಲಭ್ಯ: ವಾರದ ಅಥವಾ ತಿಂಗಳ ಆಧಾರದ ಮೇಲೆ ನಿಯಮಿತವಾಗಿ 'ಸಿಪ್' (ಎಸ್‌ಐಪಿ) ಮಾಡುವ ಆಯ್ಕೆಯೂ ಲಭ್ಯವಿದೆ.

ನೇರ ವಿತರಣೆ: ಡಿಜಿಟಲ್ ರೂಪದಲ್ಲಿ ಸಂಗ್ರಹವಾದ ಬೆಳ್ಳಿಯನ್ನು ಪ್ರಮಾಣೀಕೃತ ಬೆಳ್ಳಿಯ ನಾಣ್ಯಗಳಾಗಿ ನೇರವಾಗಿ ಮನೆ ಬಾಗಿಲಿಗೂ ಪಡೆದುಕೊಳ್ಳಬಹುದು.

ಸ್ಪಷ್ಟತೆ: 'ಜಿಯೋ ಸಿಲ್ವರ್' ಡ್ಯಾಶ್‌ಬೋರ್ಡ್ ಮೂಲಕ ಬೆಳ್ಳಿ ದರಗಳು, ನಿಮ್ಮ ಹೂಡಿಕೆ ಮತ್ತು ವಹಿವಾಟಿನ ವಿವರಗಳನ್ನು ಸುಲಭವಾಗಿ ವೀಕ್ಷಿಸಬಹುದು.

ಎಲ್ಲ ಬೆಳ್ಳಿಯ ಶುದ್ಧತೆಯನ್ನು ಎನ್‌ಎಬಿಎಎಲ್‌ ಸಂಸ್ಥೆಯೊಂದು ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ. ವಿಶೇಷವೆಂದರೆ, ಪ್ರತಿ ಖರೀದಿಗೂ 'ಜಿಯೋ ಪಾಯಿಂಟ್ಸ್' ಸಿಗಲಿದ್ದು, ಇವುಗಳನ್ನು ಬ್ರ್ಯಾಂಡ್ ವೋಚರ್‌ಗಳು ಮತ್ತು ಶಾಪಿಂಗ್ ಡಿಸ್ಕೌಂಟ್‌ಗಳಿಗೆ ಬಳಸಿ ಲಾಭ ಪಡೆಯಬಹುದು.

ಈ ಬಗ್ಗೆ ಮಾತನಾಡಿದ ಜಿಯೋ ಫೈನಾನ್ಸ್ ಪ್ಲಾಟ್‌ಫಾರ್ಮ್ ಸಿಇಒ ಸುರ್ಭೆ ಎಸ್ ಶರ್ಮಾ, "ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳು ಹೂಡಿಕೆಗೆ ಬಲ ತುಂಬುತ್ತವೆ. ಸಾಂಪ್ರದಾಯಿಕವಾಗಿ ಬೆಳ್ಳಿಯನ್ನು ಭೌತಿಕವಾಗಿ ಮಾತ್ರ ಇಟ್ಟುಕೊಳ್ಳಲಾಗುತ್ತಿತ್ತು. ಆದರೆ ಜಿಯೋ ಸಿಲ್ವರ್ ಇದನ್ನು ಸುರಕ್ಷಿತ ಮತ್ತು ಅತ್ಯಂತ ಸುಲಭವಾದ ಡಿಜಿಟಲ್ ಆಸ್ತಿಯಾಗಿ ಪರಿವರ್ತಿಸಿದೆ" ಎಂದು ತಿಳಿಸಿದ್ದಾರೆ.

ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!

ಈಗಾಗಲೇ 'ಡಿಜಿಟಲ್ ಗೋಲ್ಡ್' ಸೇವೆಯನ್ನು ಯಶಸ್ವಿಯಾಗಿ ನೀಡಿರುವ ಜಿಯೋ ಫೈನಾನ್ಸ್, ಈಗ 'ಜಿಯೋ ಸಿಲ್ವರ್' ಮೂಲಕ ತನ್ನ ಹೂಡಿಕೆದಾರರಿಗೆ ಮತ್ತೊಂದು ಅತ್ಯುತ್ತಮ ಅವಕಾಶವನ್ನು ನೀಡಿದೆ.