ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA KN Rajanna: ಸಿಂಹಾದ್ರಿ ಕುಟುಂಬಕ್ಕೆ ನ್ಯಾಯ, ಬದುಕಿಗೆ ಭರವಸೆ: ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ

ಇಲ್ಲಿಯವರೆಗೆ ದಲಿತರು ಸೇರಿದಂತೆ ಎಲ್ಲಾ ಜಾತಿಯ ಬಡವರು, ಅಸಹಾಯಕರು ಮತ್ತು ಶೋಷಿತ ವರ್ಗಗಳ ಕುಟುಂಬಗಳಿಗೆ ಧ್ವನಿಯಾಗಿ, ನನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬಂದಿರು ತ್ತೇನೆ. ಎಲ್ಲಾ ಜಾತಿಯಲ್ಲಿರುವ ಬಡವರು ಸೇರಿದಂತೆ, ದುರ್ಬಲರು, ಶೋಷಿತ ವರ್ಗಗಳಿಗೆ ಯಾವುದೇ ಪಕ್ಷ ಭೇದವಿಲ್ಲದೆ ಸಹಾಯ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ.

ಸಿಂಹಾದ್ರಿ ಕುಟುಂಬಕ್ಕೆ ನ್ಯಾಯ – ಬದುಕಿಗೆ ಭರವಸೆ: ಶಾಸಕ ಕೆ.ಎನ್.ರಾಜಣ್ಣ

-

Profile
Ashok Nayak Sep 30, 2026 8:05 PM

ಮಧುಗಿರಿ: ವಿಧಾನಸಭಾ ಕ್ಷೇತ್ರದ ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಯುವಕ ಸಿಂಹಾದ್ರಿ ಅವರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಬುಧವಾರ ಮುಖಂಡರೊಂದಿಗೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನ್ಯಾಯ ದೊರಕಿಸುವ ಭರವಸೆ ಯನ್ನು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ(MLA KN Rajanna) ನೀಡಿದರು.

ಈ ಪ್ರಕರಣದಲ್ಲಿ ಯಾವುದೇ ಒತ್ತಡ, ಪ್ರಭಾವ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡದೆ, ನಿಷ್ಪಕ್ಷ ಪಾತ ತನಿಖೆ ನಡೆಸಿ, ಪ್ರಕರಣದ ಸತ್ಯಾಂಶವನ್ನು ಸಂಪೂರ್ಣವಾಗಿ ಹೊರತಂದು ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: KN Rajanna: ಸಚಿವ ಸತೀಶ್‌ ಜಾರಕಿಹೊಳಿ ಮೇಲೆ ಇ.ಡಿ ದಾಳಿ ರಾಜಕೀಯ ಪ್ರೇರಿತ: ಕೆ.ಎನ್. ರಾಜಣ್ಣ

ಸಿಂಹಾದ್ರಿ ಅವರ ತಾಯಿ ಅನ್ನಪೂರ್ಣ ಅವರಿಗೆ ಜೀವನ ನಡೆಸಲು ಕಸಾಪುರ ವಿ.ಎಸ್.ಎಸ್.ಎನ್‌ ನಲ್ಲಿ ಉದ್ಯೋಗ ಕಲ್ಪಿಸಿದ್ದೇನೆ. ಹಾಗೂ ಪಂಚಾಯಿತಿ ಕಡೆಯಿಂದ ನಿವೇಶನ ಮಂಜೂರು ಮಾಡಿಸಿ ಮನೆ ಕಟ್ಟಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಿ, ನನ್ನ ಕೈಲಾದ ಆರ್ಥಿಕ ಸಹಾಯ ಮಾಡಿದ್ದೇನೆ.

ಅಲ್ಲದೆ, ಕಸಾಪುರ ಗ್ರಾಮದ ದಲಿತ ಕುಟುಂಬಗಳ ಜೀವನೋಪಾಯ ಸುಧಾರಿಸುವ ಉದ್ದೇಶದಿಂದ ಆಸಕ್ತಿ ಹೊಂದಿರುವ ಕುಟುಂಬಗಳಿಗೆ ಗೃಹ ಕೈಗಾರಿಕೆ ಆರಂಭಿಸಲು ಆರ್ಥಿಕ ನೆರವು, ಕುರಿ ಸಾಕಾಣಿಕೆಗೆ ಅಗತ್ಯ ಸಹಾಯ, ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳಡಿ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

K N R in madhugiri 2

ನ್ಯಾಯ ಕೇವಲ ಮಾತಿನಲ್ಲಿ ಉಳಿಯಬಾರದು; ಅದು ಸಂತ್ರಸ್ತ ಕುಟುಂಬದ ಬದುಕಿನಲ್ಲಿ ಭರವಸೆ ಯಾಗಿ ಕಾಣಿಸಿಕೊಳ್ಳಬೇಕು ಎಂಬ ನಿಲುವಿನೊಂದಿಗೆ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ.

ಇಲ್ಲಿಯವರೆಗೆ ದಲಿತರು ಸೇರಿದಂತೆ ಎಲ್ಲಾ ಜಾತಿಯ ಬಡವರು, ಅಸಹಾಯಕರು ಮತ್ತು ಶೋಷಿತ ವರ್ಗಗಳ ಕುಟುಂಬಗಳಿಗೆ ಧ್ವನಿಯಾಗಿ, ನನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬಂದಿರು ತ್ತೇನೆ. ಎಲ್ಲಾ ಜಾತಿಯಲ್ಲಿರುವ ಬಡವರು ಸೇರಿದಂತೆ, ದುರ್ಬಲರು, ಶೋಷಿತ ವರ್ಗಗಳಿಗೆ ಯಾವುದೇ ಪಕ್ಷ ಭೇದವಿಲ್ಲದೆ ಸಹಾಯ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ. ಈ ನಿರಂತರ ಕೆಲಸವನ್ನು ಮುಂದೆಯೂ ಸಹ ನೆಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.