ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈರಲ್ 'ದುಬೈ ಚಾಕೊಲೇಟ್'ಗೆ ಈಗ ಫುಲ್‌ ಡಿಮ್ಯಾಂಡ್‌; ಬೆಂಗಳೂರಿಗರ ಚಾಕೊಲೇಟ್ ಕ್ರೇಜ್‌ ಬಿಚ್ಚಿಟ್ಟ ಇನ್‌ಸ್ಟಾಮಾರ್ಟ್‌!

Instamart: ಜುಲೈ 2025 ರಿಂದ ಜೂನ್ 2026 ರವರೆಗೆ ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರು ಮಾಡಿರುವ ಆರ್ಡರ್‌ಗಳ ಡೇಟಾವನ್ನು ಇನ್‌ಸ್ಟಾಮಾರ್ಟ್ ವಿಶ್ಲೇಷಿಸಿದ್ದು, ವರದಿಯೊಂದನ್ನು ತಯಾರಿಸಿದೆ. ಇದರಲ್ಲಿ ಹಲವು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಈ ಬಗ್ಗೆ ಡಿಟೇಲ್ಸ್‌ ಇಲ್ಲಿದೆ.

ವೈರಲ್ 'ದುಬೈ ಚಾಕೊಲೇಟ್'ಗೆ ಈಗ ಫುಲ್‌ ಡಿಮ್ಯಾಂಡ್‌!

ಇನ್‌ಸ್ಟಾಮಾರ್ಟ್‌ -

Profile
Siddalinga Swamy Jul 7, 2026 5:07 PM

ಬೆಂಗಳೂರು, ಜು.07: ಒಂದು ಕಾಲದಲ್ಲಿ ಕೇವಲ ಹಬ್ಬ-ಹರಿದಿನಗಳು ಹಾಗೂ ಉಡುಗೊರೆ ನೀಡಲು ಮಾತ್ರ ಚಾಕೊಲೇಟ್‌ಗಳು ಸೀಮಿತವಾಗಿದ್ದವು. ಆದರೆ, ಇದೇ ಚಾಕೊಲೇಟ್‌ಗಳೀಗ ಭಾರತೀಯರ ದಿನಸಿ ಪಟ್ಟಿಯ ಅವಿಭಾಜ್ಯ ಅಂಗವಾಗಿ ಬದಲಾಗಿವೆ. ಹೀಗಂಥ ದೇಶದ ಪ್ರಮುಖ ಕ್ವಿಕ್‌ ಕಾಮರ್ಸ್‌ ವೇದಿಕೆ 'ಇನ್‌ಸ್ಟಾಮಾರ್ಟ್'ನ (Instamart) ವರದಿ ಹೇಳಿದೆ. ಜುಲೈ 7ರಂದು ಆಚರಿಸಲಾಗುವ 'ವಿಶ್ವ ಚಾಕೊಲೇಟ್ ದಿನ' ದ ಹಿನ್ನೆಲೆಯಲ್ಲಿ ಭಾರತೀಯರ ಚಾಕೊಲೇಟ್ ಖರೀದಿಯ ಅಂಕಿ-ಅಂಶಗಳನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ.

ಜುಲೈ 2025 ರಿಂದ ಜೂನ್ 2026 ರವರೆಗೆ ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರು ಮಾಡಿರುವ ಆರ್ಡರ್‌ಗಳ ಡೇಟಾವನ್ನು ಇನ್‌ಸ್ಟಾಮಾರ್ಟ್ ವಿಶ್ಲೇಷಿಸಿದ್ದು, ವರದಿಯೊಂದನ್ನು ತಯಾರಿಸಿದೆ. ಇದರಲ್ಲಿ ಹಲವು ಅಚ್ಚರಿಯ ವಿಚಾರಗಳು ಹೊರಬಿದ್ದಿವೆ.

ಬೆಂಗಳೂರೇ ದೇಶದ 'ಚಾಕೊಲೇಟ್ ರಾಜಧಾನಿ'

ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರು, ಈಗ ಭಾರತದ 'ಚಾಕೊಲೇಟ್ ಕ್ಯಾಪಿಟಲ್' ಆಗಿಯೂ ಹೊರಹೊಮ್ಮಿದೆ. ಇತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರು ದುಪ್ಪಟ್ಟು ಚಾಕೊಲೇಟ್ ಆರ್ಡರ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಿರುವ ಸಿಲಿಕಾನ್ ಸಿಟಿಯ ಜನ, ದೇಶದ ಒಟ್ಟು 'ಶುಗರ್-ಫ್ರೀ' (ಸಕ್ಕರೆ ರಹಿತ) ಮತ್ತು ಪ್ರೋಟೀನ್ ಚಾಕೊಲೇಟ್ ಆರ್ಡರ್‌ಗಳಲ್ಲಿ ಬರೋಬ್ಬರಿ ಕಾಲು ಭಾಗದಷ್ಟು ಪಾಲನ್ನು ಹೊಂದಿದ್ದಾರೆ.

ಹೈದರಾಬಾದ್ ಜನತೆಗೆ ಕ್ಯಾರಮೆಲ್ ಫ್ಲೇವರ್ ಅಚ್ಚುಮೆಚ್ಚಾಗಿದ್ದರೆ, ದುಬಾರಿ ಬೆಲೆಯ 'ಪ್ರೀಮಿಯಂ ಚಾಕೊಲೇಟ್' ಖರೀದಿಯಲ್ಲಿ ಮುಂಬೈ ನಂಬರ್ 1 ಸ್ಥಾನದಲ್ಲಿದೆ. ಕೊಚ್ಚಿ ಮತ್ತು ಕೋಲ್ಕತ್ತಾದ ಜನರು ಹೇಜಲ್‌ನಟ್ ಹಾಗೂ ವೈಟ್ ಚಾಕೊಲೇಟ್‌ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ವೈರಲ್ ಆದ 'ದುಬೈ ಚಾಕೊಲೇಟ್'ಗೆ ಭಾರಿ ಡಿಮ್ಯಾಂಡ್!

ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದ, ಪಿಸ್ತಾ ತುಂಬಿದ 'ದುಬೈ ಚಾಕೊಲೇಟ್' ಭಾರತೀಯರ ನಿದ್ದೆಗಡಿಸಿದೆ. ಇನ್‌ಸ್ಟಾಮಾರ್ಟ್‌ನಲ್ಲಿ ಈ ಚಾಕೊಲೇಟ್‌ನ ಆರ್ಡರ್‌ಗಳು ಬರೋಬ್ಬರಿ ಶೇ. 11,739 ರಷ್ಟು ಭಾರಿ ಏರಿಕೆ ಕಂಡಿದ್ದು, ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಚಾಕೊಲೇಟ್ ಆಗಿ ಮಾರ್ಪಟ್ಟಿದೆ.

ಲಕ್ಷಗಟ್ಟಲೆ ಖರ್ಚು ಮಾಡಿದ 'ಚಾಕೊಹೋಲಿಕ್ಸ್'!

  • ಅಹಮದಾಬಾದ್‌ನ ಓರ್ವ ಚಾಕೊಲೇಟ್ ಪ್ರಿಯ ವ್ಯಕ್ತಿ, ಕೇವಲ ಒಂದೇ ವರ್ಷದಲ್ಲಿ ಚಾಕೊಲೇಟ್‌ಗಳಿಗಾಗಿ ಬರೋಬ್ಬರಿ 1.59 ಲಕ್ಷ ರೂ. ಖರ್ಚು ಮಾಡಿದ್ದಾರೆ!
  • ಇನ್ನು ಕೊಚ್ಚಿಯ ಮತ್ತೋರ್ವ ವ್ಯಕ್ತಿ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 277 ಬಾರಿ ಚಾಕೊಲೇಟ್ ಆರ್ಡರ್ ಮಾಡಿದ್ದಾರೆ. ಅಂದರೆ ಸರಾಸರಿ ಇವರು ಪ್ರತಿ 4 ದಿನದಲ್ಲಿ ಮೂರು ಬಾರಿ ಚಾಕೊಲೇಟ್‌ ಆರ್ಡರ್ ಮಾಡಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ವ್ಯಕ್ತಿಯೊಬ್ಬರು 205 ಬಾರಿ ಆರ್ಡರ್ ಮಾಡುವ ಮೂಲಕ ದೇಶದಲ್ಲೇ 2ನೇ ಸ್ಥಾನದಲ್ಲಿದ್ದಾರೆ.
  • ಪ್ರೇಮಿಗಳ ದಿನದಂದು ಚಾಕೊಲೇಟ್ ಆರ್ಡರ್‌ಗಳು ಶೇ. 74ರಷ್ಟು ಹೆಚ್ಚಾಗಿದ್ದವು. ಫೆ.14ರ ಬೆಳಗ್ಗೆ 11:25ರ ಸುಮಾರಿಗೆ, ಪ್ರತಿ ನಿಮಿಷಕ್ಕೆ 745 ಚಾಕೊಲೇಟ್‌ಗಳು ಆರ್ಡರ್ ಆಗಿದ್ದವು!

ಆರೋಗ್ಯಕರ ಚಾಕೊಲೇಟ್‌ಗಳತ್ತ ಭಾರತೀಯರ ಒಲವು

ಭಾರತೀಯರು ಈಗ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದು, ಸಕ್ಕರೆ ರಹಿತ ಚಾಕೊಲೇಟ್ ಆರ್ಡರ್‌ಗಳಲ್ಲಿ ಶೇ. 85ರಷ್ಟು ಹಾಗೂ ಡಾರ್ಕ್ ಚಾಕೊಲೇಟ್ ಬೇಡಿಕೆಯಲ್ಲಿ ಶೇ. 50ರಷ್ಟು ಹೆಚ್ಚಳ ಕಂಡುಬಂದಿದೆ. ಪ್ರೋಟೀನ್ ಚಾಕೊಲೇಟ್‌ಗಳೂ ಕೂಡ ಅತಿ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಒಂದಾಗಿವೆ.

ಸಣ್ಣ ನಗರಗಳಿಗೂ ಹಬ್ಬಿದ ಪ್ರೀಮಿಯಂ ಕ್ರೇಜ್

ದುಬಾರಿ ಬೆಲೆಯ ಪ್ರೀಮಿಯಂ ಚಾಕೊಲೇಟ್‌ಗಳ ಕ್ರೇಜ್ ಕೇವಲ ಮೆಟ್ರೋ ಸಿಟಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ಮೀರತ್, ಸೂರತ್, ವಾರಣಾಸಿ, ಗುಂಟೂರು ಮುಂತಾದ ಟಿಯರ್‌-2 ನಗರಗಳ ಗ್ರಾಹಕರು ಕೂಡ ಪ್ರೀಮಿಯಂ ಚಾಕೊಲೇಟ್‌ಗಳಿಗೆ ಅತಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ಅಂದಹಾಗೆ, ಭಾರತೀಯರು ಈಗಲೂ 'ಕ್ಲಾಸಿಕ್ ಮಿಲ್ಕ್ ಚಾಕೊಲೇಟ್' ಅನ್ನು ಅತಿ ಹೆಚ್ಚು ಇಷ್ಟಪಡುತ್ತಿದ್ದು, ಪ್ರತಿ 10ರಲ್ಲಿ 4 ಆರ್ಡರ್ ಈ ಚಾಕೊಲೇಟ್‌ಗಳದ್ದೇ ಆಗಿದೆ. ಹಾಗೆಯೇ 90ರ ದಶಕದ ಮಕ್ಕಳ ಫೇವರಿಟ್ ಆಗಿರುವ 'ವೇಫರ್ ಬಾರ್'ಗಳು 2ನೇ ಸ್ಥಾನದಲ್ಲಿವೆ. ‌

ರಾತ್ರಿ ಪಾಳಿಯ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; 'ಲೇಟ್ ನೈಟ್ ಈಟ್ಸ್' ಸೇವೆ ಆರಂಭಿಸಿದ ಸ್ವಿಗ್ಗಿ

ಗ್ರಾಹಕರು ಈಗ ಕೇವಲ ಐಸ್‌ಕ್ರೀಮ್, ಪಾಪ್‌ಕಾರ್ನ್ ಜತೆಗೆ ಮಾತ್ರವಲ್ಲದೆ, ಇನ್‌ಸ್ಟಂಟ್ ನೂಡಲ್ಸ್, ಬಾಳೆಹಣ್ಣು ಮತ್ತು ಪ್ರೋಟೀನ್ ಶೇಕ್‌ಗಳ ಜತೆಗೂ ಚಾಕೊಲೇಟ್ ಸೇರಿಸಿ ತಿನ್ನುವ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದು, ಚಾಕಲೇಟ್‌ ಬೇಡಿಕೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ.