Gold Price Today On October 13, 2026: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬೆಲೆ ಚೆಕ್ ಮಾಡಿ
ನವರಾತ್ರಿಯ ಮೂರನೇ ದಿನವೂ ಗ್ರಾಹಕರಿಗೆ ಶುಭ ಸುದ್ದಿ ದೊರಕಿದೆ. ಮಂಗಳವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 30 ರೂ. ಕಡಿಮೆಯಾಗಿ 13,685 ರೂ. ಇದೆ.
ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ) -
ಬೆಂಗಳೂರು: ನವರಾತ್ರಿಯ ಮೂರನೇ ದಿನವೂ ಗ್ರಾಹಕರಿಗೆ ಶುಭ ಸುದ್ದಿ ದೊರಕಿದೆ. ಮಂಗಳವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ (Gold Price Today On October 13, 2026) ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 30 ರೂ. ಕಡಿಮೆಯಾಗಿ 13,685 ರೂ. ಇದ್ದರೆ 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 39 ರೂಪಾಯಿ ಕಡಿಮೆಯಾಗಿ 14,929 ರೂಪಾಯಿ ಕಂಡು ಬಂದಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,09,480 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,36,850 ರೂಪಾಯಿ ಹಾಗೂ 100 ಗ್ರಾಂಗೆ 13,68,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,19,432 ರೂಪಾಯಿ, 10 ಗ್ರಾಂಗೆ 1,49,290 ರೂಪಾಯಿ ಹಾಗೂ 100 ಗ್ರಾಂಗೆ 14,92,900 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,685 ರೂ. | 14,929 ರೂ |
| ಮುಂಬೈ | 13,685 ರೂ. | 14,929 ರೂ |
| ದೆಹಲಿ | 13,685 ರೂ. | 14,929 ರೂ |
| ಕೋಲ್ಕತಾ | 13,685 ರೂ. | 14,929 ರೂ |
| ಹೈದರಾಬಾದ್ | 13,685 ರೂ. | 14,929 ರೂ |
ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಂಗೆ 235 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,350 ರೂಪಾಯಿ ಹಾಗೂ 1 ಕೆಜಿಗೆ 2,35,000 ರೂಪಾಯಿ ಪಾವತಿಸಬೇಕು.