ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುರೇಕಾ ಫೋರ್ಬ್ಸ್‌ನಿಂದ ಹೊಸ ರೋಬೋಟಿಕ್ ವ್ಯಾಕ್ಯೂಮ್‌ಗಳು

ಭಾರತೀಯ ಮನೆಗಳ ದೈನಂದಿನ ಶುಚಿಗೊಳಿಸುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಈ ಮಾದರಿಗಳು ವ್ಯಾಕ್ಯೂಮಿಂಗ್, ಮಾಪಿಂಗ್, ನ್ಯಾವಿಗೇಷನ್ ಮತ್ತು ಸ್ವಯಂ ಚಾಲಿತ ಕ್ಲೀನಿಂಗ್ ಸೌಲಭ್ಯಗಳನ್ನು ಹೊಂದಿವೆ. ಬ್ಲಿಟ್ಜ್ 18,000Pa ಹಾಗೂ ಸ್ವಿಫ್ಟ್ 20,000Pa ವರೆಗೆ ಹೈಪರ್‌ಸಕ್ಷನ್ ಸಾಮರ್ಥ್ಯ ಹೊಂದಿವೆ.

ಯುರೇಕಾ ಫೋರ್ಬ್ಸ್‌ನಿಂದ ಹೊಸ ರೋಬೋಟಿಕ್ ವ್ಯಾಕ್ಯೂಮ್‌ಗಳು

-

Profile
Ashok Nayak Sep 26, 2026 4:11 PM

ಯುರೇಕಾ ಫೋರ್ಬ್ಸ್ ಲಿಮಿಟೆಡ್ ತನ್ನ ಹೋಮ್ ರೋಬೋಟಿಕ್ಸ್ ಶ್ರೇಣಿಗೆ ಫೋರ್ಬ್ಸ್ ಸ್ಮಾರ್ಟ್‌ಕ್ಲೀನ್ ಬ್ಲಿಟ್ಜ್ ಮತ್ತು ಸ್ಮಾರ್ಟ್‌ಕ್ಲೀನ್ ಸ್ವಿಫ್ಟ್ ಎಂಬ ಎರಡು ಹೊಸ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್‌ಗಳನ್ನು ಪರಿಚಯಿಸಿದೆ.

ಭಾರತೀಯ ಮನೆಗಳ ದೈನಂದಿನ ಶುಚಿಗೊಳಿಸುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವ ಈ ಮಾದರಿಗಳು ವ್ಯಾಕ್ಯೂಮಿಂಗ್, ಮಾಪಿಂಗ್, ನ್ಯಾವಿಗೇಷನ್ ಮತ್ತು ಸ್ವಯಂಚಾಲಿತ ಕ್ಲೀನಿಂಗ್ ಸೌಲಭ್ಯಗಳನ್ನು ಹೊಂದಿವೆ. ಬ್ಲಿಟ್ಜ್ 18,000Pa ಹಾಗೂ ಸ್ವಿಫ್ಟ್ 20,000Pa ವರೆಗೆ ಹೈಪರ್‌ಸಕ್ಷನ್ ಸಾಮರ್ಥ್ಯ ಹೊಂದಿವೆ.

ಎರಡೂ ಮಾದರಿಗಳಲ್ಲಿ LiDAR, DToF ಮತ್ತು ಲೈನ್ ಲೇಸರ್ ಆಧಾರಿತ ನ್ಯಾವಿಗೇಷನ್, ಡ್ಯುಯಲ್ ಸ್ಪಿನ್ನಿಂಗ್ ಮಾಪ್‌ಗಳು, ಆಟೋಮ್ಯಾಟಿಕ್ ಮಾಪ್ ಲಿಫ್ಟ್ ಹಾಗೂ ಕಾರ್ಪೆಟ್‌ಗಳಿಗೆ ಸಕ್ಷನ್ ಬೂಸ್ಟ್ ಸೌಲಭ್ಯಗಳಿವೆ. ಸ್ಮಾರ್ಟ್ ಲೈಫ್ ಆ್ಯಪ್ ಮೂಲಕ ಕ್ಲೀನಿಂಗ್ ವೇಳಾಪಟ್ಟಿ, ಕೊಠಡಿ ಆಧಾರಿತ ಕ್ಲೀನಿಂಗ್ ಮತ್ತು 'ನೋ-ಗೋ ಜೋನ್'ಗಳನ್ನು ಹೊಂದಿಸಬಹುದು.

ಇದನ್ನೂ ಓದಿ: AI Robot Attacks: ಟೆಸ್ಟಿಂಗ್‌ ವೇಳೆ ಕೆಲಸಗಾರನ ಮೇಲೆ AI ರೋಬೋಟ್ ಡೆಡ್ಲಿ ಅಟ್ಯಾಕ್‌! ವಿಡಿಯೊ ಇದೆ

ಫುಲ್ಲಿ ಆಟೋಮ್ಯಾಟಿಕ್ ಕ್ಲೀನಿಂಗ್ ಸ್ಟೇಷನ್ ಧೂಳು ಸಂಗ್ರಹಣೆ, ಮಾಪ್ ತೊಳೆಯುವುದು, ನೀರು ಮರುಪೂರಣ ಮತ್ತು 45°C ಬಿಸಿ ಗಾಳಿಯ ಮೂಲಕ ಮಾಪ್ ಒಣಗಿಸುವ ಕಾರ್ಯಗಳನ್ನು ನಿರ್ವಹಿಸುತ್ತದೆ. ಕಂಪನಿಯ ಪ್ರಕಾರ, ಇದು 7 ದಿನಗಳವರೆಗೆ* ಹ್ಯಾಂಡ್ಸ್-ಫ್ರೀ ಕ್ಲೀನಿಂಗ್ ಅನುಭವವನ್ನು ಒದಗಿಸುತ್ತದೆ.

ಯುರೇಕಾ ಫೋರ್ಬ್ಸ್ ಲಿಮಿಟೆಡ್‌ನ ಚೀಫ್ ಗ್ರೋತ್ ಆಫೀಸರ್ ಅನುರಾಗ್ ಕುಮಾರ್ ಮಾತನಾಡಿ, “ರೋಬೋಟಿಕ್ಸ್ ತಂತ್ರಜ್ಞಾನವನ್ನು ಭಾರತೀಯ ಮನೆಗಳ ಅಗತ್ಯಗಳಿಗೆ ಹೊಂದಿಸುವ ಮೂಲಕ ದೈನಂದಿನ ಶುಚಿಗೊಳಿಸುವಿಕೆಯನ್ನು ಹೆಚ್ಚು ಸರಳಗೊಳಿಸುವುದು ನಮ್ಮ ಉದ್ದೇಶ,” ಎಂದರು.

ಬೆಲೆ ಮತ್ತು ಲಭ್ಯತೆ: ಸ್ಮಾರ್ಟ್‌ಕ್ಲೀನ್ ಬ್ಲಿಟ್ಜ್ ಬೆಲೆ ರೂ.52,999 , ಸ್ಮಾರ್ಟ್‌ಕ್ಲೀನ್ ಸ್ವಿಫ್ಟ್ ಬೆಲೆ ರೂ.56,999 . ಎರಡೂ ಮಾದರಿಗಳಿಗೆ ಒಂದು ವರ್ಷದ ಸಮಗ್ರ ವಾರಂಟಿ ಲಭ್ಯವಿದೆ. ಉತ್ಪನ್ನಗಳು ಪ್ರಮುಖ ಚಿಲ್ಲರೆ ಮಳಿಗೆಗಳು, ಅಮೆಜಾನ್, ಫ್ಲಿಪ್‌ಕಾರ್ಟ್, ಯುರೇಕಾ ಫೋರ್ಬ್ಸ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಆಯ್ದ ಕ್ವಿಕ್-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯವಿವೆ.