ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PF Rule Change: ಉದ್ಯೋಗಿಗಳಿಗೆ ಗುಡ್‌ನ್ಯೂಸ್‌! EPFO ಗರಿಷ್ಠ ವೇತನ ಮಿತಿ ₹25,000ಗೆ ಏರಿಕೆ ಸಾಧ್ಯತೆ

EPFO wage ceiling revision: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯಡಿ ವೇತನ ಮಿತಿಯನ್ನು 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸಲು ಕೇಂದ್ರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಮೊದಲು ಈ ಮಿತಿಯನ್ನು 2014 ರಲ್ಲಿ ಕೇಂದ್ರವು ಹೆಚ್ಚಿಸಿತ್ತು, 2014 ರಲ್ಲಿ, ಸರ್ಕಾರವು ಪಿಎಫ್ ವೇತನದ ಮಿತಿಯನ್ನು 6500 ರಿಂದ 15000 ರೂ.ಗೆ ಹೆಚ್ಚಿಸಿದೆ. ಇದೀಗ ಹನ್ನೊಂದು ವರ್ಷಗಳ ಬಳಿಕ ವೇತನ ಮಿತಿ ಹೆಚ್ಚಾಗಲಿದೆ.

ಏರಿಕೆಯಾಗಲಿದೆ ಪಿಎಫ್ ಖಾತೆಯ ವೇತನ ಮಿತಿ..!

EPFO ಗರಿಷ್ಠ ವೇತನ ಮಿತಿ ಏರಿಕೆ ಸಾಧ್ಯತೆ(ಸಾಂದರ್ಭಿಕ ಚಿತ್ರ) -

Profile
Sushmitha Jain Nov 21, 2025 3:24 PM

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌)(EPF) ಪಿಂಚಣಿ ಲೆಕ್ಕಾಚಾರಕ್ಕೆ ಗರಿಷ್ಠ ವೇತನ ಮಿತಿಯನ್ನು (Revise Salary Limit) ಸದ್ಯದಲ್ಲೇ ಈಗಿರುವ 15 ಸಾವಿರ ರೂ. ನಿಂದ 25,000 ಸಾವಿರ ರೂ.ಗೆ ಏರಿಸುವ ಸಾಧ್ಯತೆ ಇದೆ. ಈ ಸಂಬಂಧ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುಮೋದನೆ ದೊರೆಯುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ 2014ರಲ್ಲಿ ವೇತನ ಮಿತಿಯನ್ನು 6,500 ರೂ.ಗಳಿಂದ ಈಗಿನ 15,000 ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ಪಿಂಚಣಿ ಲೆಕ್ಕಾಚಾರದ ವೇತನ ಮಿತಿ ಏರಿಕೆಯಾಗುತ್ತಿದೆ.

ಹೌದು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯಡಿ ವೇತನ ಮಿತಿಯನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲು ಕೇಂದ್ರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಮೊದಲು ಈ ಮಿತಿಯನ್ನು 2014 ರಲ್ಲಿ ಕೇಂದ್ರವು ಹೆಚ್ಚಿಸಿತ್ತು, 2014 ರಲ್ಲಿ, ಸರ್ಕಾರವು ಪಿಎಫ್ ವೇತನದ ಮಿತಿಯನ್ನು 6500 ರಿಂದ 15000 ರೂ.ಗೆ ಹೆಚ್ಚಿಸಿತ್ತು. ಇದೀಗ ಸಾರ್ವತ್ರಿಕ ಸಾಮಾಜಿಕ ಭದ್ರತೆಯತ್ತ ದೊಡ್ಡ ಹೆಜ್ಜೆ ಹಿಡುತ್ತಿದ್ದು, ಲಕ್ಷಗಟ್ಟಲೆ ಸಂಬಳ ಪಡೆಯುವ ವರ್ಗದವರಿಗೆ ಇದರಿಂದ ಅನುಕೂಲವಾಗಲಿದೆ.

ಮುಂಬೈಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಎಂ. ನಗರಾಜು ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ವೇತನ ಮಿತಿ ಏರಿಕೆ ಒಂದು ಮಹತ್ವ ವಿಷಯವಾಗಿದೆ. ತಿಂಗಳಿಗೆ 15,000ರೂ ಕ್ಕಿಂತ ಸಂಬಳ ಪಡೆಯುವ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದು, ಅವರ ಕಡೆಗಾಲದಲ್ಲಿ ಆರ್ಥಿಕ ಸಹಾಯವಿಲ್ಲದೆ ಅವರ ಬದುಕು ದುಸ್ತಿರವಾಗಿರುತ್ತದೆ. ಹಾಗಾಗಿ ಇಂದಿನ ಆದಾಯ ಮಟ್ಟಗಳು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ದೀರ್ಘಕಾಲದಿಂದ ಜಾರಿಯಲ್ಲಿರುವ ಈ ನಿಯಮಗಳನ್ನು ನವೀಕರಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

Viral News: ಗಾಯಗೊಂಡ ಮಗುವಿಗೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ: ವೈದ್ಯರ ವಿರುದ್ಧ ದೂರು ದಾಖಲು

ವೇತನ ಮಿತಿ ಎಂದರೇನು?

ಇದು ಇಪಿಎಫ್ ನೀಡಲಾಗುವ ಸಂಬಳದ ಮಿತಿಯಾಗಿರುತ್ತದೆ. ಉದಾಹರಣೆಗೆ, ನಿಮ್ಮ ಮೂಲ ವೇತನ 30,000 ರೂ ಆಗಿದ್ದರೆ 15,000 ರೂ ಅನ್ನು ಇಪಿಎಫ್​ಗೆ ಪರಿಗಣಿಸಲಾಗುತ್ತದೆ. 15,000 ರೂನಲ್ಲಿ ಶೇ. 12ರಷ್ಟು ಹಣ ಉದ್ಯೋಗಿಯ ಕೊಡುಗೆಯಾಗಿರುತ್ತದೆ. ಶೇ. 12ರಷ್ಟು ಕೊಡುಗೆ ಸಂಸ್ಥೆಯದ್ದಾಗಿರುತ್ತದೆ. ಈ ಸಂಸ್ಥೆಯ ಕೊಡುಗೆಯಲ್ಲಿ ಶೇ. 8.33ರಷ್ಟು ಹಣವು ಇಪಿಎಸ್​ಗೆ ಹೋಗುತ್ತದೆ. ಉಳಿದ ಶೇ. 3.67ರಷ್ಟು ಹಣ ಇಪಿಎಫ್ ಅಕೌಂಟ್ ಸೇರುತ್ತದೆ.

ಇನ್ನು ವೇತನ ಮಿತಿ ಹೆಚ್ಚಳದಿಂದ ನೌಕರರ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡುವ ಮೊತ್ತವನ್ನು ಹೆಚ್ಚಿಸಲಿದೆ. ಆದರೆ, ನೌಕರರ ಕೈ ಸೇರುವ ವೇತನ (ಟೇಕ್‌ ಹೋಮ್‌ ಸ್ಯಾಲರಿ) ಕೊಂಚ ಇಳಿಕೆಯಾಗಲಿದೆ. ಸಾಮಾನ್ಯವಾಗಿ, ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ರಷ್ಟನ್ನು ಉದ್ಯೋಗಿ ಹಾಗೂ ಉದ್ಯೋಗದಾತರು ಪಾವತಿಸಬೇಕಿದ್ದು, ಉದ್ಯೋಗಿಯ ಪಾಲನ್ನು ಸಂಪೂರ್ಣವಾಗಿ ಇಪಿಎಫ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಉದ್ಯೋಗದಾತರ ಪಾಲಿನ ಶೇ. 8.33ರಷ್ಟು ಪಿಂಚಣಿ ಯೋಜನೆಗೆ ಜಮಾ ಮಾಡಲಾಗುತ್ತದೆ. ವೇತನ ಮಿತಿ ಹೆಚ್ಚಳದಿಂದ ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಅಧಿಕವಾಗುತ್ತದೆ. ಇದರಿಂದ ಇಪಿಎಫ್‌ಒ ಮತ್ತು ಉದ್ಯೋಗಿಳ ಪಿಂಚಣಿ ಯೋಜನೆ (ಇಪಿಎಸ್‌) ಖಾತೆಗಳಲ್ಲಿ ಠೇವಣಿ ಇಡುವ ಮೊತ್ತವನ್ನು ಹೆಚ್ಚಿಸುತ್ತದೆ. ಇದು ಉದ್ಯೋಗಿಗೆ ನಿವೃತ್ತಿಯ ಸಮಯದಲ್ಲಿ ಅವರ ಭವಿಷ್ಯ ನಿಧಿ ಮೀಸಲು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

EPFOವು ಸುಮಾರು 26 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ನಿರ್ವಹಿಸುತ್ತಿದ್ದು, ಸುಮಾರು 7.6 ಕೋಟಿ ಸಕ್ರಿಯ ಸದಸ್ಯರನ್ನು ಹೊಂದಿದೆ. ಇದೀಗ ಸಂಬಳ ಮಿತಿಯನ್ನು ಹೆಚ್ಚಿಸಿದ್ದರೆ ಇದರ ವ್ಯಾಪ್ತಿ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದ್ದು, ಕಳೆದ ಹನ್ನೊಂದು ವರ್ಷಗಳಲ್ಲಿ ಸಾಮಾಜಿಕ ಭದ್ರತಾ ಸುಧಾರಣೆಗೆ ನೀಡಿದ ಮಹತ್ವದ ಕೊಡುಗೆ ಎಂದು ಇದನ್ನು ಪರಿಗಣಿಸಲಾಗುತ್ತದೆ.