ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್‌ನಿಂದ "ಹಾರ್ಡ್ ವರ್ಕರ್" ಅನಾವರಣ
"ಹಾರ್ಡ್ ವರ್ಕರ್" ಅಡಿಯಲ್ಲಿನ ಎಲ್ಲ ಉತ್ಪನ್ನಗಳನ್ನು ರಾಮ್ಕೋದ ಸ್ವಂತ ಉತ್ಪಾದನೆ ಘಟಕಗಳಲ್ಲಿ ತಯಾರಿಸಲಾಗಿದೆ. ಗುಣಮಟ್ಟ, ಸುಸ್ಥಿರತೆ ಮತ್ತು ನಿಯಂತ್ರಣಕ್ಕೆ ಸಂಸ್ಥೆ ಹೊಂದಿ ರುವ ಬದ್ಧತೆಗೆ ಇದು ಪೂರಕವಾಗಿದೆ. ಉತ್ಪಾದನೆ ಪ್ರಕ್ರಿಯೆಯು ಪರಿಸರ ಸ್ನೇಹಿಯಾಗಿದ್ದು, ಉತ್ಪನ್ನಗಳು ಸುಸ್ಥಿರ, ಸುರಕ್ಷಿತ ಮತ್ತು ವಿಸ್ತರಿಸಬಹುದಾಗಿದೆ ಎಂಬುದನ್ನು ಖಚಿತಪಡಿಸುತ್ತದೆ.


ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್‌ನಿಂದ "ಹಾರ್ಡ್ ವರ್ಕರ್" ಅನಾವರಣ – ನಿರ್ಮಾಣ ರಾಸಾಯನಿಕ ಉತ್ಪನ್ನ ಸರಣಿಗೆ ಹೊಸ ಗುರುತು
ರಾಮ್ಕೋ ಸಿಮೆಂಟ್ಸ್ ಲಿಮಿಟೆಡ್ ಇಂದು ತನ್ನ ನಿರ್ಮಾಣ ರಾಸಾಯನಿಕ ಉತ್ಪನ್ನ ಪೋರ್ಟ್ ಫೋಲಿಯೋಗೆ ಹೊಸ ಗುರುತು "ಹಾರ್ಡ್ ವರ್ಕರ್" ಅನ್ನು ಘೋಷಣೆ ಮಾಡಿದೆ. ಅನ್ವೇಷಣೆ, ಸಾಮರ್ಥ್ಯ ಮತ್ತು ವಿಶ್ವಾಸವನ್ನು ಪ್ರತಿನಿಧಿಸುವ "ಹಾರ್ಡ್ ವರ್ಕರ್" ಹೆಸರು ಕಂಪನಿಯ ಭರವಸೆಯಾದ "ಸರಿಯಾದ ಅಪ್ಲಿಕೇಶನ್‌ಗೆ ಸರಿಯಾದ ಉತ್ಪನ್ನಗಳು" ಎಂಬ ಭರವಸೆಗೆ ಪೂರಕವಾಗಿದೆ.
ಈ ರೇಂಜ್‌ನಲ್ಲಿ 20 ವಿಶೇಷ ಹಾರ್ಡ್ ವರ್ಕರ್ ಉತ್ಪನ್ನಗಳಿದ್ದು, ಟೈಲ್ ಅಢೆಸಿವ್‌ಗಳು, ವಾಟರ್ ಪ್ರೂಫಿಂಗ್ ಸೊಲ್ಯೂಶನ್‌ಗಳು, ಬಾಂಡಿಂಗ್ ಏಜೆಂಟ್‌ಗಳು ಮತ್ತು ರಿಪೇರಿ ಮಾರ್ಟರ್ ಗಳನ್ನು ಒಳಗೊಂಡಿದೆ. ಭಾರತದ ನಿರ್ಮಾಣ ವಲಯದಲ್ಲಿ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸು ವಂತೆ ನಿಖರವಾಗಿ ವಿನ್ಯಾಸ ಮಾಡಲಾಗಿದೆ.
ಇದನ್ನೂ ಓದಿ: Roopa Gururaj Column: ಕೃಷ್ಣನಿಂದ ಪೂಜಿಸಲ್ಪಡುವ ಭಕ್ತರ ಪಾದ ಧೂಳಿ
"ಹಾರ್ಡ್ ವರ್ಕರ್" ಅಡಿಯಲ್ಲಿನ ಎಲ್ಲ ಉತ್ಪನ್ನಗಳನ್ನು ರಾಮ್ಕೋದ ಸ್ವಂತ ಉತ್ಪಾದನೆ ಘಟಕ ಗಳಲ್ಲಿ ತಯಾರಿಸಲಾಗಿದೆ. ಗುಣಮಟ್ಟ, ಸುಸ್ಥಿರತೆ ಮತ್ತು ನಿಯಂತ್ರಣಕ್ಕೆ ಸಂಸ್ಥೆ ಹೊಂದಿ ರುವ ಬದ್ಧತೆಗೆ ಇದು ಪೂರಕವಾಗಿದೆ. ಉತ್ಪಾದನೆ ಪ್ರಕ್ರಿಯೆಯು ಪರಿಸರ ಸ್ನೇಹಿಯಾಗಿದ್ದು, ಉತ್ಪನ್ನಗಳು ಸುಸ್ಥಿರ, ಸುರಕ್ಷಿತ ಮತ್ತು ವಿಸ್ತರಿಸಬಹುದಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಹಾರ್ಡ್ ವರ್ಕರ್ ಉತ್ಪನ್ನವು ಈಗ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಲಭ್ಯವಿದ್ದು, ರಾಮ್ಕೋದ ಉತ್ತಮ ಡೀಲರ್ ನೆಟ್‌ವರ್ಕ್ ಮೂಲಕ ವಿತರಿಸಲಾಗು ತ್ತಿದೆ.
ಭಾರತದ ನಿರ್ಮಾಣ ರಾಸಾಯನಿಕ ಮಾರುಕಟ್ಟೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, 2030 ರ ವೇಳೆಗೆ 40 ಸಾವಿರ ಕೋಟಿ ರೂ.ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ತ್ವರಿತವಾಗಿ ನಗರೀಕರಣ, ಮೂಲಸೌಕರ್ಯ ವಿಸ್ತರಣೆ ಮತ್ತು ಬಾಳಿಕೆ ಬರಬಲ್ಲ ಹಾಗೂ ಉತ್ತಮ ಕಾರ್ಯ ಕ್ಷಮತೆಯ ಕಟ್ಟಡ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಕಾರಣವಾಗಿದೆ. ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಆಧರಿತ ತಂತ್ರಜ್ಞಾನವನ್ನು ಹೊಂದಿರುವ ಮತ್ತು ಇನ್ ಹೌಸ್ ಉತ್ಪಾದನೆಯ ಮೇಲೆ ಹೆಚ್ಚಿನ ಗಮನ ಹರಿಸಿರುವ ಸಂಸ್ಥೆಯು ನಿರ್ಮಾಣ ಉದ್ಯಮದ ಅಗತ್ಯಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ಹೊಂದಿದೆ. ಭಾರತದ ನಿರ್ಮಾಣ ರಾಸಾಯನಿಕ ವಲಯದ ಭವಿಷ್ಯದ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ರಾಮ್ಕೋ ಸಿಮೆಂಟ್ಸ್ ಹೊಂದಿದೆ.
"ಹಾರ್ಡ್‌ವರ್ಕರ್ ಕೇವಲ ಒಂದು ಬ್ರ್ಯಾಂಡ್ ಅಲ್ಲ. ಕನ್‌ಸ್ಟ್ರಕ್ಷನ್ ವರ್ಕರ್‌ಗಳು, ಬಿಲ್ಡರ್‌ಗಳು ಮತ್ತು ಮನೆ ಮಾಲೀಕರು ಸೇರಿದಂತೆ ಎಲ್ಲ ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡುವವರಿಗೆ ನಮ್ಮ ಅಭಿನಂದನೆಯ ಪ್ರತಿರೂಪ ಇದಾಗಿದೆ. ನಮ್ಮ ಗ್ರಾಹಕರು ವಿಶ್ವಾಸ ಇರಿಸಬಹುದಾದ ಅಪ್ಲಿಕೇಶನ್ ಆಧರಿತ ಸೌಲಭ್ಯಗಳನ್ನು ಒದಗಿಸುವಲ್ಲಿ ನಮ್ಮ ಬದ್ಧತೆಯನ್ನು ಈ ಬಿಡುಗಡೆಯು ಸಾಬೀತು ಪಡಿಸುತ್ತದೆ" ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪಿ.ಆರ್.ವೆಂಕಟರಾಮ ರಾಜ ಹೇಳಿದ್ದಾರೆ.
ರಾಮ್ಕೋ ಸಿಮೆಂಟ್‌ನ ನಿರ್ಮಾಣ ರಾಸಾಯನಿಕ ವಿಭಾಗದ ಆದಾಯವು FY25 ರಲ್ಲಿ 210 ಕೋಟಿ ರೂ. ಆಗಿದ್ದು, ಮುಂದಿನ 4 ರಿಂದ 5 ವರ್ಷಗಳಲ್ಲಿ 2000 ಕೋಟಿ ರೂ. ಗೆ ಏರಿಕೆ ಮಾಡುವ ಗುರಿ ಯನ್ನು ಹೊಂದಿದ್ದೇವೆ. ಸದ್ಯ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡು ತ್ತಿರುವ ಕಂಪನಿಯು, ಈಗಾಗಲೇ ಇರುವ ಸಿಮೆಂಟ್ ವಿತರಣೆ ನೆಟ್‌ವರ್ಕ್ ಅನ್ನು ಬಳಸಿಕೊಳ್ಳುತ್ತದೆ ಮತ್ತು ಹೊಸ ಗ್ರಾಹಕರನ್ನು ತಲುಪಲು ಬ್ರ್ಯಾಂಡ್ ಪ್ರಮೋಶನ್ ಅನ್ನು ಹೆಚ್ಚಿಸಲಿದೆ.
“ಹಾರ್ಡರ್ ವರ್ಕರ್ ಉತ್ಪನ್ನದ ಮೂಲಕ ಇಂದು ನಾವು ನಿರ್ಮಾಣ ರಾಸಾಯನಿಕಗಳ ರೇಂಜ್ ಅನ್ನು 20 ಪ್ರಾಡಕ್ಟ್‌ಗಳಿಗೆ ವಿಸ್ತರಿಸುತ್ತಿದ್ದೇವೆ ಮತ್ತು ಮುಂದಿನ ದಿನದಗಳಲ್ಲಿ ಇನ್ನೂ 20 ಉತ್ಪನ್ನ ಗಳನ್ನು ಹೊರತರಲಿದ್ದೇವೆ. ಇದರಿಂದ ಕೇವಲ ಸಿಮೆಂಟ್ ಉತ್ಪಾದನೆಗೆ ಸೀಮಿತವಾಗಿದ್ದ ಸಂಸ್ಥೆಯು, ಸಂಪೂರ್ಣ ನಿರ್ಮಾಣ ಸೊಲ್ಯೂಶನ್ ಪ್ರೊವೈಡರ್ ಆಗಿ ಹೊರಹೊಮ್ಮಲಿದೆ. ಇದರಿಂದ ಗ್ರಾಹಕರಿಗೆ ತಮ್ಮ ಅಗತ್ಯಗಳಿಗೆ ಸೂಕ್ತವಾದ ಉತ್ಪನ್ನಗಳನ್ನು ಹುಡುಕಲು ಅನುವು ಮಾಡುವುದರ ಜೊತೆಗೆ, ವಿಶ್ವ ದರ್ಜೆ ಕಾರ್ಯಕ್ಷಮತೆಯನ್ನೂ ಇದು ಒದಗಿಸಲಿದೆ. ಅತಿ ಕಡಿಮೆ ಅವಧಿಯಲ್ಲಿ ನಾವು ಇಡೀ ಭಾರತವನ್ನು ವ್ಯಾಪಿಸಲು ನಾವು ಸಿದ್ಧವಾಗಿದ್ದೇವೆ ಎಂದು ಸಿಇಒ ಎ.ವಿ.ಧರ್ಮಕೃಷ್ಣನ್ ಹೇಳಿದ್ದಾರೆ.
ನಿರ್ಮಾಣ ರಾಸಾಯನಿಕಗಳ ವಿಬಾಗವು ರಾಮ್ಕೋ ಸಿಮೆಂಟ್ಸ್‌ನ ಪ್ರಮುಖ ಬೆಳವಣಿಗೆ ಚಾಲಕ ಶಕ್ತಿಗಳಲ್ಲಿ ಒಂದಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿ, ಅನ್ವೇಷಣೆ ಮತ್ತು ಗ್ರಾಹಕ ಕೇಂದ್ರಿ ಸೌಲಭ್ಯಗಳಲ್ಲಿ ನಿರಂತರ ಹೂಡಿಕೆಯು ಇದಕ್ಕೆ ಪೂರಕವಾಗಿ ನಡೆದಿದೆ.