ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌ 370 ಅಂಕ ಏರಿಕೆ, 24,937 ಪಾಯಿಂಟ್‌ಗೆ ಜಿಗಿದ ನಿಫ್ಟಿ; ಕಾರಣವೇನು?

Share Market: ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಏರಿಕೆಯನ್ನು ದಾಖಲಿಸಿತು. ಸೆನ್ಸೆಕ್ಸ್‌ 370 ಅಂಕ ಏರಿಕೆಯಾಗಿ 81,644ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 103 ಅಂಕ ಏರಿಕೆಯಾಗಿ 24,980ಕ್ಕೆ ಜಿಗಿಯಿತು. ಆಟೊಮೊಬೈಲ್‌, ಇಂಧನ, ತೈಲ ಮತ್ತು ಅನಿಲ ವಲಯದ ಷೇರುಗಳ ದರದಲ್ಲಿ ಏರಿಕೆ ಆಯಿತು.

ಸೆನ್ಸೆಕ್ಸ್‌ 370 ಅಂಕ ಏರಿಕೆ, 24,937 ಪಾಯಿಂಟ್‌ಗೆ ಜಿಗಿದ ನಿಫ್ಟಿ

ಸಾಂದರ್ಭಿಕ ಚಿತ್ರ.

Profile Siddalinga Swamy Aug 19, 2025 8:50 PM

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಸೆನ್ಸೆಕ್ಸ್‌ ಮತ್ತು ನಿಫ್ಟಿ (Stock Market) ಎರಡೂ ಏರಿಕೆಯನ್ನು ದಾಖಲಿಸಿತು. ಸೆನ್ಸೆಕ್ಸ್‌ 370 ಅಂಕ ಏರಿಕೆಯಾಗಿ 81,644ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 103 ಅಂಕ ಏರಿಕೆಯಾಗಿ 24,980ಕ್ಕೆ ಜಿಗಿಯಿತು. ಆಟೊಮೊಬೈಲ್‌, ಇಂಧನ, ತೈಲ ಮತ್ತು ಅನಿಲ ವಲಯದ ಷೇರುಗಳ ದರದಲ್ಲಿ ಏರಿಕೆ ಆಯಿತು. ಸೋಮವಾರ ಸೆನ್ಸೆಕ್ಸ್‌ ಏರಿಕೆ ದಾಖಲಿಸಿತ್ತು. ದೀಪಾವಳಿಯ ವೇಳೆಗೆ ಜಿಎಸ್‌ಟಿ ದರ ಇಳಿಕೆಯಾಗುವ ಹಿನ್ನೆಲೆಯಲ್ಲಿ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳು ಚೇತೋಹಾರಿಯಾಗಿವೆ. ಆಟೊಮೊಬೈಲ್‌, ಕನ್‌ಸ್ಯೂಮರ್‌ ಡ್ಯೂರಬಲ್ಸ್‌, ಸಾರಿಗೆ, ಕೋರ್ ಹೌಸಿಂಗ್‌, ಮೊಬಿಲಿಟಿ, ರಿಯಾಲ್ಟಿ, ಲೋಹ, ಕ್ಯಾಪಿಟಲ್‌ ಮಾರ್ಕೆಟ್‌, ಹೌಸಿಂಗ್‌, ಎಫ್‌ಎಂಸಿಜಿ ವಲಯದ ಷೇರುಗಳ ದರದಲ್ಲಿ ಏರಿಕೆಯಾಗಿವೆ.



ಅಂದರೆ ಹೂಡಿಕೆದಾರರು ಜಿಎಸ್‌ಟಿಯಲ್ಲಿ ಆಗಲಿರುವ ಮಹತ್ವದ ಸುಧಾರಣೆಗಳನ್ನು ಸ್ವಾಗತಿಸಿರುವುದು ಸ್ಪಷ್ಟವಾಗಿದೆ. ರಷ್ಯಾ-ಉಕ್ರೇನ್‌ ಶಾಂತಿ ಮಾತುಕತೆ ಪ್ರಗತಿಯಲ್ಲಿರುವುದೂ ಸಕಾರಾತ್ಮಕವಾಗಿದೆ. 16 ಸೆಕ್ಟರ್‌ಗಳಲ್ಲಿ 9 ಸೆಕ್ಟರ್‌ಗಳು ಲಾಭ ಗಳಿಸಿದವು.

ಇಂದಿನ ಟಾಪ್‌ ಟ್ರೇಡ್ಸ್

* ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ದರದಲ್ಲಿ 2% ಏರಿಕೆಯಾಯಿತು. ಜಿಯೊ ತನ್ನ 1GB day plan ಅನ್ನು ರದ್ದುಪಡಿಸಿರುವುದು ಇದಕ್ಕೆ ಕಾರಣ.

* ವೊಡಾಫೋನ್‌ ಐಡಿಯಾ ಷೇರಿನ ದರದಲ್ಲಿ 2% ಏರಿಕೆಯಾಯಿತು.

* ವೇದಾಂತ ಷೇರಿನ ದರದಲ್ಲಿ 2% ಹೆಚ್ಚಳವಾಯಿತು. ಆಗಸ್ಟ್‌ 21ರಂದು ಮಧ್ಯಂತರ ಡಿವಿಡೆಂಡ್‌ ಅನ್ನು ಕಂಪನಿ ಪ್ರಕಟಿಸಲಿದೆ.

ಇಂದು ಲಾಭ ಗಳಿಸಿದ ಸ್ಟಾಕ್ಸ್

ಟಾಟಾ ಮೋಟಾರ್ಸ್: 700/-‌

ಅದಾನಿ ಪೋರ್ಟ್ಸ್:‌ 1,370/-

ಕೆಐಒಸಿಎಲ್‌ ಲಿಮಿಟೆಡ್:‌ 384/-

ಜಿಇ ಪವರ್‌ ಇಂಡಿಯಾ: 382/-

ಎಂಬಸಿ ಡೆವಲಪ್‌ಮೆಂಟ್:‌ 101/-

ವರ್ಧಮಾನ್‌ ಟೆಕ್ಸ್‌ ಟೈಲ್ಸ್:‌ 439/-

ಬ್ಲೂಸ್ಟೋನ್‌ ಜ್ಯುವೆಲ್ಲರಿ & ಲೈಫ್‌ ಸ್ಟೈಲ್:‌ 554/-

2025ರಲ್ಲಿ ಇದುವರೆಗೆ ಬಜಾಜ್‌ ಫೈನಾನ್ಸ್‌ ಷೇರು ದರ 30% ಏರಿಕೆ

ಬಜಾಜ್‌ ಫೈನಾನ್ಸ್‌ ಷೇರು ದರದಲ್ಲಿ ಈ ವರ್ಷ ಇದುವರೆಗೆ ಬರೋಬ್ಬರಿ 30% ಏರಿಕೆಯಾಗಿದೆ. ಈಗ 901/- ಇದೆ. ಜಿಎಸ್‌ಟಿ ದರ ಇಳಿಕೆಯಾಗುವ ಹಿನ್ನೆಲೆಯಲ್ಲಿ ಷೇರಿನ ದರದ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ.

ಜಿಎಸ್‌ಟಿ ಪದ್ಧತಿಯಲ್ಲಿ ಅಕ್ಟೋಬರ್‌ನಲ್ಲಿ ಭಾರಿ ಸುಧಾರಣೆಯಾಗಲಿರುವುದರಿಂದ, ಆಟೊಮೊಬೈಲ್‌, ಸಿಮೆಂಟ್‌, ಕನ್‌ಸ್ಯೂಮರ್‌, ರಿಟೇಲ್‌, ಹೋಟೆಲ್‌ ಮತ್ತು ಹಣಕಾಸು ಸೆಕ್ಟರ್‌ಗಳಿಗೆ ಲಾಭವಾಗುವ ನಿರೀಕ್ಷೆ ಇದೆ. ಜಿಎಸ್‌ಟಿ ತೆರಿಗೆಯ ಸ್ಲ್ಯಾಬ್‌ಗಳು 5% ಮತ್ತು 18%ಕ್ಕೆ ಸುಧಾರಣೆಯಾಗುವ ನಿರೀಕ್ಷೆ ಇರುವುದು ಇದಕ್ಕೆ ಕಾರಣ.

ಇದರ ಪರಿಣಾಮ ಯಾವ ಸೆಕ್ಟರ್‌ ಮೇಲೆ ಬೀರಬಹುದು ಮತ್ತು ಆ ಸೆಕ್ಟರ್‌ನಲ್ಲಿರುವ ಸ್ಟಾಕ್ಸ್‌ ಯಾವುದು ಎಂಬುದನ್ನು ನೋಡೋಣ.

ಆಟೊಮೊಬೈಲ್‌: ಆಟೊಮೊಬೈಲ್‌ ಸೆಕ್ಟರ್‌ನಲ್ಲಿ ಜಿಎಸ್‌ ಟಿಯು 28% ರಿಂದ 18%ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ.

ಆಟೊಮೊಬೈಲ್‌ ಸೆಕ್ಟರ್‌ ಸ್ಟಾಕ್ಸ್:‌ ಹೀರೊ ಮೊಟೊ ಕಾರ್ಪ್‌, ಟಿವಿಎಸ್‌, ಬಜಾಜ್‌ ಆಟೊ, ಮಾರುತಿ ಸುಜುಕಿ ಇಂಡಿಯಾ, ಮಹೀಂದ್ರಾ & ಮಂಹೀಂದ್ರಾ, ಎಸ್ಕಾರ್ಟ್ಸ್‌ ಕ್ಯುಬೋಟಾ, ವಿ.ಎಸ್‌ಟಿ ಟಿಲ್ಲರ್‌ ಟ್ರ್ಯಾಕ್ಟರ್.‌ ಲ್ಯುಮಾಕ್ಸ್‌ ಆಟೊ ಟೆಕ್ನಾಲಜೀಸ್‌, ಗೇಬ್ರಿಯಲ್‌ ಇಂಡಿಯಾ, ಯುಎನ್‌ಒ ಮಿಂಡಾ.

ಸಿಮೆಂಟ್:‌ ಸಿಮೆಂಟ್‌ ಮೇಲಿನ ಜಿಎಸ್‌ಟಿ 28%ರಿಂದ 18%ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ.

ಸಿಮೆಂಟ್‌ ಸೆಕ್ಟರ್‌ ಸ್ಟಾಕ್ಸ್:‌ ಅಲ್ಟ್ರಾ ಟೆಕ್‌ ಸಿಮೆಂಟ್‌, ಅಂಬುಜಾ ಸಿಮೆಂಟ್‌, ದಾಲ್ಮಿಯಾ ಭಾರತ್‌, ಜೆಕೆ ಲಕ್ಷ್ಮೀ ಸಿಮೆಂಟ್‌, ಸಾಗರ್‌ ಸಿಮೆಂಟ್.‌

ಕನ್‌ಸ್ಯೂಮರ್:‌ ಎಚ್‌ಯುಎಲ್‌, ಬ್ರಿಟಾನಿಯಾ ಇಂಡಸ್ಟ್ರೀಸ್‌, ವೋಲ್ಟಾಸ್‌, ಹ್ಯಾವೆಲ್ಸ್‌ ಇಂಡಿಯಾ: ಹಲವು ವಸ್ತುಗಳ ಜಿಎಸ್‌ಟಿ 5%ಕ್ಕೆ ಇಳಿಕೆಯಾಗುವ ಸಾಧ್ಯತೆ.

ರಿಟೇಲ್‌: ಪಾದರಕ್ಷೆಗಳ ಮೇಲಿನ ಜಿಎಸ್‌ಟಿ 12%ರಿಂದ 5%ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಟ್ರೆಂಟ್‌, ವೇದಾಂತ್‌ ಫ್ಯಾಷನ್ಸ್‌, ಸಾಯಿ ಸಿಲ್ಕ್ಸ್‌, ಬಾಟಾ ಇಂಡಿಯಾ, ರೆಲಾಕ್ಸೊ ಫುಟ್‌ ವೇರ್.‌

ಹೋಟೆಲ್:‌ ಲೆಮನ್‌ ಟ್ರೀ ಹೋಟೆಲ್ಸ್‌, ಇಂಡಿಯನ್‌ ಹೋಟಲ್ಸ್‌ ಕಂಪನಿ.

ಹಣಕಾಸು: ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಲ್&ಟಿ ಫೈನಾನ್ಸ್‌, ಶ್ರೀರಾಮ್‌ ಫೈನಾನ್ಸ್‌: ಜಿಎಸ್‌ಟಿ ಇಳಿಕೆಯಾಗುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ | Festive Season Shopping 2025: ಶುರುವಾಯ್ತು ಗೌರಿ-ಗಣೇಶ ಹಬ್ಬದ ವೀಕೆಂಡ್ ಭರ್ಜರಿ ಶಾಪಿಂಗ್