ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್: ನವರಾತ್ರಿಗೆ ಹಬ್ಬದ ವಸ್ತುಗಳನ್ನು ಖರೀದಿಸಿ
ಆಯ್ಕೆ ಮಾಡಲು 3 ಕೋಟಿಗೂ ಅಧಿಕ ಉತ್ಪನ್ನಗಳಿರುವುದರಿಂದ, ಪ್ರತಿಯೊಂದು ಶೈಲಿ ಮತ್ತು ಸಂದರ್ಭಕ್ಕೂ ಬೇಕಾದ ಹಬ್ಬದ ಅಗತ್ಯ ವಸ್ತುಗಳನ್ನು ಕಂಡುಕೊಳ್ಳುವುದನ್ನು ಆ್ಯಮೆಜಾನ್ ಬಜಾರ್ ಸುಲಭಗೊಳಿಸುತ್ತದೆ. ಆ್ಯಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಗ್ರಾಹಕರು ವಿವಿಧ ವಿಭಾಗಗಳಲ್ಲಿ ಶೇ. 70 ರವರೆಗೆ ರಿಯಾಯಿತಿ ಮತ್ತು ಹೆಚ್ಚುವರಿ ಕ್ಯಾಶ್ಬ್ಯಾಕ್* ಪಡೆಯಬಹುದು.
-
ಬೆಂಗಳೂರು: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅತ್ಯಾಕರ್ಷಕ ಹಬ್ಬದ ಆಫರ್ಗಳನ್ನು ತರುತ್ತಿದ್ದು, ಗ್ರಾಹಕರು ಆ್ಯಮೆಜಾನ್ ಬಜಾರ್ನಲ್ಲಿ ಕೈಗೆಟುಕುವ ದರದ ವೈವಿಧ್ಯಮಯ ವಸ್ತು ಗಳೊಂದಿಗೆ ನವರಾತ್ರಿಗೆ ಸಜ್ಜಾಗಬಹುದು. ತಮ್ಮ ಸಾಂಪ್ರದಾಯಿಕ ಉಡುಪುಗಳ ಸಂಗ್ರಹ ವನ್ನು ನವೀಕರಿಸುವುದರಿಂದ ಹಿಡಿದು ಹಬ್ಬದ ಲುಕ್ಗೆ ಆಭರಣಗಳನ್ನು ಜೋಡಿಸುವುದು ಮತ್ತು ಮನೆಗೆ ವರ್ಣರಂಜಿತ ಮೆರುಗು ನೀಡುವುದರವರೆಗೆ, ಗ್ರಾಹಕರು ಫ್ಯಾಷನ್, ಬ್ಯೂಟಿ, ಕಿಚನ್, ಹೋಮ್ ಸೇರಿದಂತೆ ಹಲವು ವಿಭಾಗಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಅನ್ವೇಷಿಸಬಹುದು.
ಆಯ್ಕೆ ಮಾಡಲು 3 ಕೋಟಿಗೂ ಅಧಿಕ ಉತ್ಪನ್ನಗಳಿರುವುದರಿಂದ, ಪ್ರತಿಯೊಂದು ಶೈಲಿ ಮತ್ತು ಸಂದರ್ಭಕ್ಕೂ ಬೇಕಾದ ಹಬ್ಬದ ಅಗತ್ಯ ವಸ್ತುಗಳನ್ನು ಕಂಡುಕೊಳ್ಳುವುದನ್ನು ಆ್ಯಮೆಜಾನ್ ಬಜಾರ್ ಸುಲಭಗೊಳಿಸುತ್ತದೆ. ಆ್ಯಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮಯದಲ್ಲಿ ಗ್ರಾಹಕರು ವಿವಿಧ ವಿಭಾಗಗಳಲ್ಲಿ ಶೇ. 70 ರವರೆಗೆ ರಿಯಾಯಿತಿ ಮತ್ತು ಹೆಚ್ಚುವರಿ ಕ್ಯಾಶ್ಬ್ಯಾಕ್* ಪಡೆಯಬಹುದು.
ಇದರೊಂದಿಗೆ, ಎಸ್ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳು ಹಾಗೂ EMI ವಹಿವಾಟುಗಳ ಮೇಲೆ ಗ್ರಾಹಕರು ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.
ಇದನ್ನೂ ಓದಿ: EPL: Amazon.in ನಲ್ಲಿ ಮಾ.6ರಿಂದ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ
ನವರಾತ್ರಿಗಾಗಿ ಆ್ಯಮೆಜಾನ್ ಬಜಾರ್ನಿಂದ ಆಯ್ದ ಕೆಲವು ಪ್ರಮುಖ ಹಬ್ಬದ ವಸ್ತುಗಳು ಇಲ್ಲಿವೆ:
ಜೈಪುರಿ ಕೊಲ್ಹಾಪುರಿ ಘುಂಗ್ರೂ ಸ್ಯಾಂಡಲ್ಸ್: ರೂ. 274
ಸಾಂಪ್ರದಾಯಿಕ ಘುಂಗ್ರೂ (ಗೆಜ್ಜೆ) ವಿನ್ಯಾಸವನ್ನು ಹೊಂದಿರುವ ಈ ಜೈಪುರಿ ಶೈಲಿಯ ಕೊಲ್ಹಾಪುರಿ ಸ್ಯಾಂಡಲ್ಗಳೊಂದಿಗೆ ನಿಮ್ಮ ನವರಾತ್ರಿ ಲುಕ್ ಪೂರ್ಣಗೊಳಿಸಿ. ಸಾಂಪ್ರದಾಯಿಕ ಸೊಬಗು ಮತ್ತು ನಿತ್ಯದ ಬಳಕೆಯ ಸೌಕರ್ಯ ಎರಡನ್ನೂ ನೀಡುವ ನೋಟಕ್ಕಾಗಿ ಇವುಗಳನ್ನು ಕಸೂತಿ ಮಾಡಿದ ಕುರ್ತಾ ಸೆಟ್, ವರ್ಣರಂಜಿತ ಲೆಹೆಂಗಾ ಅಥವಾ ಹಬ್ಬದ ಸ್ಕರ್ಟ್ನೊಂದಿಗೆ ಧರಿಸಿ.
ಅಡ್ಜಸ್ಟಬಲ್ ಗೋಲ್ಡ್-ಟೋನ್ ಟ್ರೆಡಿಷನಲ್ ನೆಕ್ಪೀಸ್: ರೂ. 399
ಈ ಗೋಲ್ಡ್-ಟೋನ್ ನೆಕ್ಪೀಸ್ನೊಂದಿಗೆ ನಿಮ್ಮ ಹಬ್ಬದ ಉಡುಪಿಗೆ ಸಾಂಪ್ರದಾಯಿಕ ಮೆರುಗು ನೀಡಿ. ಇದರ ಎತ್ನಿಕ್ ಶೈಲಿಯು ನವರಾತ್ರಿ ಆಚರಣೆಗಳು, ಕೌಟುಂಬಿಕ ಸಮಾರಂಭಗಳು ಮತ್ತು ಹಬ್ಬದ ಸಂಜೆಗಳಿಗಾಗಿ ಕುರ್ತಾಗಳು, ಲೆಹೆಂಗಾಗಳು ಮತ್ತು ಇತರ ಭಾರತೀಯ ಉಡುಪುಗಳೊಂದಿಗೆ ಧರಿಸಲು ಅತ್ಯುತ್ತಮ ಆಭರಣವಾಗಿದೆ.
ಟೋಟಲ್ ಫ್ಯಾಷನ್ ಆಕ್ಸಿಡೈಸ್ಡ್ ಟ್ರೆಡಿಷನಲ್ ನೆಕ್ಲೇಸ್: ರೂ. 198
ಈ ಆಕ್ಸಿಡೈಸ್ಡ್ ಸಾಂಪ್ರದಾಯಿಕ ನೆಕ್ಲೇಸ್ ಧರಿಸಿ ನಿಮ್ಮ ಮುಂದಿನ ಗರ್ಬಾ ನೈಟ್ನಲ್ಲಿ ಆಕರ್ಷಕ ವಾಗಿ ಮಿಂಚಿ. ಇದರ ಎತ್ನಿಕ್ ವಿನ್ಯಾಸವು ಮಿರರ್-ವರ್ಕ್ ಚನಿಯಾ ಚೋಲಿ, ಕಸೂತಿ ಕುರ್ತಾಗಳು ಮತ್ತು ವರ್ಣರಂಜಿತ ಹಬ್ಬದ ಉಡುಪುಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವುದರಿಂದ, ನವರಾತ್ರಿ ಸಂಭ್ರಮಾಚರಣೆಗೆ ಇದು ಹೇಳಿಮಾಡಿಸಿದ ಆಭರಣವಾಗಿದೆ.
ಎತ್ನಿಕ್ ಜೈಪುರಿ ಮಲ್ಟಿಕಲರ್ ವೆಲ್ವೆಟ್ ಜುಟ್ಟಿ: ರೂ. 242
ಈ ಬಹುಬಣ್ಣದ ಕಸೂತಿ ಕೆಲಸದ ಜೈಪುರಿ ಜುಟ್ಟಿಗಳೊಂದಿಗೆ ನಿಮ್ಮ ಹಬ್ಬದ ಲುಕ್ ಪೂರ್ಣ ಗೊಳಿಸಿ. ಇವುಗಳ ರೋಮಾಂಚಕ ಬಣ್ಣಗಳು ಮತ್ತು ವೆಲ್ವೆಟ್ ಫಿನಿಶ್ ಚನಿಯಾ ಚೋಲಿ, ಎತ್ನಿಕ್ ಸೂಟ್ಗಳು ಮತ್ತು ಲೆಹೆಂಗಾಗಳೊಂದಿಗೆ ಅಚ್ಚುಕಟ್ಟಾಗಿ ಒಪ್ಪುತ್ತವೆ. ನವರಾತ್ರಿ ಆಚರಣೆಗಳು, ವಿವಾಹಗಳು ಮತ್ತು ಇತರ ಹಬ್ಬದ ಸಂದರ್ಭಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ತವಸ್ಯ ಮಹಿಳೆಯರ ಫ್ಲೋರಲ್ ಪ್ರಿಂಟೆಡ್ ಶಾರ್ಟ್ ಕುರ್ತಿ: ರೂ. 289
ಈ ಪ್ರಿಂಟೆಡ್ ಶಾರ್ಟ್ ಕುರ್ತಿಯೊಂದಿಗೆ ನಿಮ್ಮ ವಾರ್ಡ್ರೋಬ್ಗೆ ತಾಜಾ ಹೂವಿನ ವಿನ್ಯಾಸದ ಸ್ಪರ್ಶ ನೀಡಿ. ಇದರ ದುಂಡಗಿನ ಕುತ್ತಿಗೆ (ರೌಂಡ್ ನೆಕ್), ಮುಕ್ಕಾಲು ತೋಳುಗಳು ಮತ್ತು ಆರಾಮ ದಾಯಕ ಫಿಟ್ ಇದನ್ನು ಜೀನ್ಸ್, ಟ್ರೌಸರ್ ಅಥವಾ ಎತ್ನಿಕ್ ಬಾಟಮ್ಸ್ಗಳೊಂದಿಗೆ ಧರಿಸಲು ಸುಲಭವಾಗಿಸುತ್ತದೆ. ಇದು ಕ್ಯಾಶುಯಲ್ ಔಟಿಂಗ್, ಕಚೇರಿ ಉಡುಪು ಮತ್ತು ಹಬ್ಬದ ಕೂಟಗಳಿಗೆ ಬಹುಪಯೋಗಿ ಲುಕ್ ನೀಡುತ್ತದೆ.
ವಸ್ತ್ರಾಸೈಡ್ ಮಹಿಳೆಯರ ಬಾಂದಣಿ ಉಡುಪು: ರೂ. 299
ಅಲಂಕೃತ ನೆಕ್ಲೈನ್ ಹೊಂದಿರುವ ಈ ಬಾಂದಣಿ ಶೈಲಿಯ ಮಹಿಳೆಯರ ಉಡುಪಿನೊಂದಿಗೆ ನವರಾತ್ರಿಯ ಬಣ್ಣಗಳನ್ನು ಸಂಭ್ರಮಿಸಿ. ಇದರ ಸಾಂಪ್ರದಾಯಿಕ ವಿನ್ಯಾಸವು ಪೂಜಾ ಭೇಟಿಗಳು, ಕೌಟುಂಬಿಕ ಸಮಾರಂಭಗಳು ಮತ್ತು ಹಬ್ಬದ ಕೂಟಗಳಿಗೆ ಸೂಕ್ತವಾದ ವಾರ್ಡ್ರೋಬ್ ಆಯ್ಕೆಯಾಗಿದೆ. ಇದಕ್ಕೆ ಸಾಂಪ್ರದಾಯಿಕ ಆಭರಣಗಳನ್ನು ಜೋಡಿಸುವುದರಿಂದ ಹಬ್ಬದ ಮೆರುಗು ಮತ್ತಷ್ಟು ಹೆಚ್ಚುತ್ತದೆ.
ವಿನ್ಸ್ಕ್ರಾಫ್ಟ್ ಡೆಕೋರೇಟಿವ್ ಟೀಲೈಟ್ ಹೋಲ್ಡರ್: ರೂ. 189
ಈ ಆಕರ್ಷಕ ಅಲಂಕಾರಿಕ ಟೀಲೈಟ್ ಹೋಲ್ಡರ್ನೊಂದಿಗೆ ಮನೆಯಲ್ಲಿ ಹಬ್ಬದ ಬೆಚ್ಚಗಿನ ಮತ್ತು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸಿ. ನವರಾತ್ರಿಯ ಸಂಜೆಗಳು ಮತ್ತು ಹಬ್ಬದ ಕೂಟಗಳಿಗೆ ಮೃದುವಾದ ಬೆಳಕಿನ ಸೌಂದರ್ಯವನ್ನು ನೀಡಲು ಇದನ್ನು ಟೇಬಲ್ಟಾಪ್, ಶೆಲ್ಫ್ ಅಥವಾ ಕೋಣೆಯ ವಿಶೇಷ ಮೂಲೆಯಲ್ಲಿ ಇರಿಸಬಹುದು.
ಪಂಕಾ ಲೋಟಸ್ ವಾಲ್ ಹ್ಯಾಂಗಿಂಗ್ ವಿತ್ ಜುಮ್ಕಿ: ರೂ. 159
ಜುಮ್ಕಿ ವಿನ್ಯಾಸವನ್ನು ಒಳಗೊಂಡಿರುವ ಈ ಕಮಲದ ಹೂವಿನ ಥೀಮ್ನ ವಾಲ್ ಹ್ಯಾಂಗಿಂಗ್ನೊಂದಿಗೆ ನಿಮ್ಮ ಪ್ರವೇಶ ದ್ವಾರ ಅಥವಾ ಪೂಜಾ ಕೋಣೆಗೆ ಹಬ್ಬದ ಹೊಸ ಕಳೆ ನೀಡಿ. ಇದರ ಅಲಂಕಾರಿಕ ವಿನ್ಯಾಸವು ನವರಾತ್ರಿ ಅಲಂಕಾರಕ್ಕೆ ಸುಂದರವಾದ ಮೆರುಗು ನೀಡುತ್ತದೆ ಹಾಗೂ ಪ್ರಾರ್ಥನೆ ಮತ್ತು ಆಚರಣೆಗಳಿಗೆ ವರ್ಣರಂಜಿತ, ಸ್ವಾಗತಾರ್ಹ ಪರಿಸರವನ್ನು ರೂಪಿಸಲು ನೆರವಾಗುತ್ತದೆ.
ಯಶಿಕಾ ಮಹಿಳೆಯರ ಟ್ರೆಂಡಿ ಬನಾರಸಿ ಕಾಂಜೀವರಂ: ರೂ. 369
ಈ ಬನಾರಸಿ ಕಾಂಜೀವರಂ ಆರ್ಟ್ ಸಿಲ್ಕ್ ಸೀರೆಯನ್ನು ಉಟ್ಟು ಸಾಟಿಯಿಲ್ಲದ ಸಾಂಪ್ರದಾಯಿಕ ಸೊಬಗನ್ನು ನಿಮ್ಮದಾಗಿಸಿಕೊಳ್ಳಿ. ಹೊಲಿಯದ ಬ್ಲೌಸ್ ಪೀಸ್ನೊಂದಿಗೆ ಬರುವ ಈ ಸೀರೆಯ ಹೂವಿನ ವಿನ್ಯಾಸವು ಹಬ್ಬದ ಆಚರಣೆಗಳು, ವಿವಾಹಗಳು, ಸಂಜೆಯ ಸಮಾರಂಭಗಳು ಮತ್ತು ಕೌಟುಂಬಿಕ ಕಾರ್ಯಕ್ರಮಗಳಿಗೆ ಬಹುಪಯೋಗಿ ಆಯ್ಕೆಯಾಗಿದೆ.
ಬೈರಾ ಫ್ಲೋರಲ್ ಥ್ರೆಡ್ ಎಂಬ್ರಾಯ್ಡರ್ಡ್ ಸೀಕ್ವಿನ್ ಪೊಟ್ಲಿ ಬ್ಯಾಗ್ ವಿತ್ ಪರ್ಲ್ ಹ್ಯಾಂಡಲ್: ರೂ. 179
ಸೂಕ್ಷ್ಮವಾದ ನೂಲಿನ ಕಸೂತಿ, ಸೀಕ್ವಿನ್ ಕೆಲಸ ಮತ್ತು ಆಕರ್ಷಕ ಮುತ್ತಿನ ಹಿಡಿಕೆಯನ್ನು ಹೊಂದಿರುವ ಈ ಹೂವಿನ ವಿನ್ಯಾಸದ ಪೊಟ್ಲಿ ಬ್ಯಾಗ್ನೊಂದಿಗೆ ನಿಮ್ಮ ನವರಾತ್ರಿ ಲುಕ್ ಪೂರ್ಣಗೊಳಿಸಿ. ಇದರ ಸಾಂಪ್ರದಾಯಿಕ ವಿನ್ಯಾಸವು ಗರ್ಬಾ ನೈಟ್ಗಳು, ಪೂಜಾ ಸಮಾರಂಭಗಳು ಮತ್ತು ಕೌಟುಂಬಿಕ ಆಚರಣೆಗಳಿಗೆ ನಿಮ್ಮ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಸ್ಟೈಲಿಶ್ ಆಕ್ಸೆಸರಿಯಾಗಿದೆ. ಹಬ್ಬದ ಪರಿಪೂರ್ಣ ಫಿನಿಶಿಂಗ್ಗಾಗಿ ಇದನ್ನು ಸೀರೆ, ಲೆಹೆಂಗಾ ಅಥವಾ ಎತ್ನಿಕ್ ಕುರ್ತಾ ಸೆಟ್ನೊಂದಿಗೆ ಧರಿಸಿ.
ಸಾಂಪ್ರದಾಯಿಕ ಉಡುಪುಗಳು ಮತ್ತು ಆಭರಣಗಳಿಂದ ಹಿಡಿದು ಗೃಹಾಲಂಕಾರಿಕ ವಸ್ತುಗಳು ಹಾಗೂ ನಿತ್ಯದ ಅಗತ್ಯ ವಸ್ತುಗಳವರೆಗೆ, ಆ್ಯಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026 ರ ಸಂದರ್ಭದಲ್ಲಿ ಗ್ರಾಹಕರು (ಆ್ಯಮೆಜಾನ್ ಮೊಬೈಲ್ ಆ್ಯಪ್ನಲ್ಲಿ ಮಾತ್ರ ಲಭ್ಯ) ಕೈಗೆಟುಕುವ ದರದ ಹಬ್ಬದ ವಸ್ತುಗಳ ವ್ಯಾಪಕ ಶ್ರೇಣಿಯನ್ನು ಅನ್ವೇಷಿಸಬಹುದು.
ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳ ಖರೀದಿಯ ಮೇಲೆ ಗ್ರಾಹಕರು ಗರಿಷ್ಠ ₹100 ರವರೆಗೆ ಶೇ. 10 ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು, ಹಾಗೆಯೇ ಹೊಸ ಗ್ರಾಹಕರು ತಮ್ಮ ಮೊದಲ ಆರ್ಡರ್ ಮೇಲೆ ಗರಿಷ್ಠ ₹150 ರವರೆಗೆ ಶೇ. 35 ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು. ಸುಲಭವಾಗಿ ಗುರುತಿಸಲು ಅತ್ಯಂತ ಕಡಿಮೆ ಬೆಲೆಯ ವಸ್ತುಗಳು 'ಬಜಾರ್ ಬ್ಯಾಡ್ಜ್' ಹೊಂದಿರುತ್ತವೆ. ಗ್ರಾಹಕರು ಹಣತೆಗಳು (ದಿಯಾಗಳು), ಫೇರಿ ಲೈಟ್ಗಳು, ಪೊಟ್ಲಿ ಬ್ಯಾಗ್ಗಳು ಮತ್ತು ಹೆಚ್ಚಿನವುಗಳ ಮೇಲೆ '₹99 ರ ಒಳಗೆ' ಲಭ್ಯವಿರುವ ಆಫರ್ಗಳು ಸೇರಿದಂತೆ, ಪ್ರತಿ ಆರು ಗಂಟೆಗಳಿಗೊಮ್ಮೆ ಅಪ್ಡೇಟ್ ಆಗುವ 'ಮೆಗಾ ಪ್ರೈಸ್ ಡ್ರಾಪ್ಸ್' ಮತ್ತು 'ಲೂಟ್ ಓ ಕ್ಲಾಕ್' ಡೀಲ್ಗಳನ್ನು ಅನ್ವೇಷಿಸಬಹುದು. ಯಾವುದೇ ಕನಿಷ್ಠ ಆರ್ಡರ್ ಮೌಲ್ಯವಿಲ್ಲದ ಉಚಿತ ಡೆಲಿವರಿ ಸೌಲಭ್ಯವು ಗ್ರಾಹಕರ ಉಳಿತಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಅಮೆಜಾನ್ ಬಜಾರ್ ಎಂಬುದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೈನಂದಿನ ಅಗತ್ಯ ವಸ್ತು ಗಳನ್ನು ಹುಡುಕುವ ಬಜೆಟ್-ಪ್ರಜ್ಞೆಯ ಗ್ರಾಹಕರಿಗಾಗಿ ರೂಪಿಸಲಾದ ಅಮೆಜಾನ್ ಇಂಡಿಯಾದ ಮೀಸಲಾದ ಮೌಲ್ಯ-ಆಧಾರಿತ ತಾಣವಾಗಿದೆ. ಫ್ಯಾಷನ್ ಮತ್ತು ಹೋಮ್ ಡೆಕೋರ್ನಿಂದ ಹಿಡಿದು ಅಡುಗೆಮನೆಯ ಪರಿಕರಗಳು ಮತ್ತು ವೈರ್ಲೆಸ್ ಆಕ್ಸೆಸರಿಗಳವರೆಗೆ, ಬಜಾರ್ ಅತ್ಯುತ್ತಮ ಡೀಲ್ಗಳೊಂದಿಗೆ ಸರಳೀಕೃತ ಶಾಪಿಂಗ್ ಅನುಭವ ಒದಗಿಸುವ ವ್ಯಾಪಕವಾದ, ಆಯ್ದ ಉತ್ಪನ್ನಗಳ ಸಂಗ್ರಹವನ್ನು ನೀಡುತ್ತದೆ. “ಹೆಚ್ಚು ಖರೀದಿಸಿ, ಹೆಚ್ಚು ಉಳಿಸಿ” ನಂತಹ ವೈಶಿಷ್ಟ್ಯಗಳು ಮತ್ತು ನಂಬಲಾಗದಷ್ಟು ಕಡಿಮೆ ದರದಲ್ಲಿ ಪ್ರಾರಂಭವಾಗುವ ಬೆಲೆಗಳೊಂದಿಗೆ, ಬಜಾರ್ ಅನುಕೂಲತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಅತ್ಯುತ್ತಮ ಕೊಡುಗೆಗಳನ್ನು ಒದಗಿಸುತ್ತದೆ.