Siver vs Gold vs Nifty: ಚಿನ್ನವನ್ನೂ ಹಿಂದಿಕ್ಕಿದ ಬೆಳ್ಳಿಯ ರಿಟರ್ನ್! ಕಾರಣವೇನು?
ಕಳೆದ ವರ್ಷ, ಅಂದ್ರೆ 2024 ಅಕ್ಟೋಬರ್‌ನಿಂದ ಈ ವರ್ಷ 2025ರ ಅಕ್ಟೋಬರ್ ತನಕ ಒಂದು ವರ್ಷದ ಅವಧಿಯಲ್ಲಿ ನಿಫ್ಟಿ 50 ಕೇವಲ 2% ಆದಾಯ ಅಥವಾ ರಿಟರ್ನ್ ಅನ್ನು ಹೂಡಿಕೆದಾರರಿಗೆ ಕೊಟ್ಟು ನಿರಾಸೆಗೊಳಿಸಿದೆ. ಆದರೆ ಚಿನ್ನ 60% ರಿಟರ್ನ್ ಕೊಟ್ಟು ಗಮನ ಸೆಳೆದಿದೆ.

-

ಕೇಶವಪ್ರಸಾದ.ಬಿ
ಮುಂಬೈ: ಕಳೆದ ವರ್ಷ, ಅಂದ್ರೆ 2024 ಅಕ್ಟೋಬರ್‌ನಿಂದ ಈ ವರ್ಷ 2025ರ (Siver vs Gold vs Nifty) ಅಕ್ಟೋಬರ್ ತನಕ ಒಂದು ವರ್ಷದ ಅವಧಿಯಲ್ಲಿ ನಿಫ್ಟಿ 50 ಕೇವಲ 2% ಆದಾಯ ಅಥವಾ ರಿಟರ್ನ್ ಅನ್ನು ಹೂಡಿಕೆದಾರರಿಗೆ ಕೊಟ್ಟು ನಿರಾಸೆಗೊಳಿಸಿದೆ. ಆದರೆ ಚಿನ್ನ 60% ರಿಟರ್ನ್ ಕೊಟ್ಟು ಗಮನ ಸೆಳೆದಿದೆ. ಎಲ್ಲಕ್ಕಿಂತ ಆಶ್ಚರ್ಯ ಮೂಡಿಸಿದ್ದು ಯಾವುದು ಎಂದರೆ ಬೆಳ್ಳಿ. ಬೆಳ್ಳಿ ತನ್ನ ಹೂಡಿಕೆದಾರರಿಗೆ 80% ರಿಟರ್ನ್ ಕೊಟ್ಟಿದೆ. 2024ರ ಅಕ್ಟೋಬರ್ ನಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 96,000/- ಇತ್ತು. 2025ರ ಅಕ್ಟೋಬರ್ 15ರ ವೇಳೆಗೆ 1,80,000/-ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಬೆಳ್ಳಿ ಎಂದರೆ ಕಡೆಗಣನೆಗೆ ಗುರಿಯಾಗಿದ್ದ ಲೋಹವಾಗಿತ್ತು. ಆದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಬಂಗಾರವನ್ನೂ ಮೀರಿಸುವಂತೆ ರಿಟರ್ನ್ ಕೊಡುತ್ತಿದೆ. ಇನ್ನೂ ಹಲವಾರು ಕಾರಣಗಳಿಂದಾಗಿ ಬೆಳ್ಳಿ ಸುದ್ದಿಯಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬೆಳ್ಳಿಯ ದರ 50 ಡಾಲರ್‌ಗೆ ಏರಿಕೆಯಾಗಿದೆ.
ಈ ಸುದ್ದಿಯನ್ನೂ ಓದಿ: ರಿಯಲ್ ಎಸ್ಟೇಟ್ ಹೂಡಿಕೆಗೆ ಸೂಕ್ತ ಸಮಯ ಯಾವುದು? ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ
ಬೆಳ್ಳಿಗೆ ಬೇಡಿಕೆ ಬರಲು ಕಾರಣಗಳೂ ಇವೆ. ಇವತ್ತು ಸಿಲ್ವರ್ ಕೇವಲ ಆಭರಣಗಳ ಬಳಕೆಗೆ ಮಾತ್ರ ಬಳಕೆಯಾಗುತ್ತಿಲ್ಲ. ಉದ್ಯಮದಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಜಾಗತಿಕ ಆರ್ಥಿಕತೆಗೂ, ತಂತ್ರಜ್ಞಾನದ ಪ್ರಗತಿಗೂ ಬೆಳ್ಳಿಯ ಲಿಂಕ್ ಇದೆ. ವಿಶ್ವದಲ್ಲೇ ಅತ್ಯಂತ ಕ್ರಿಟಿಕಲ್ ಆಗಿರುವ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳ ಉದ್ದಿಮೆಯಲ್ಲಿ ಬೆಳ್ಳಿ ನಿರ್ಣಾಯಕ ಕಚ್ಚಾ ವಸ್ತುವಾಗಿ ಹೊರಹೊಮ್ಮಿದೆ.
ಸೌರಫಲಕಗಳ ಉತ್ಪಾದನೆಯಲ್ಲಿ ಬೆಳ್ಳಿ ಬೇಕಾಗುತ್ತದೆ. ಇವತ್ತು ಸೌರ ಫಲಕಗಳ ಉದ್ದಿಮೆಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಇದೆ. ಇಂಧನದ ಅಗತ್ಯ ಇದಕ್ಕೆ ಕಾರಣ. ಫೋಟೊವೋಲ್ಟಿಕ್ ಸೆಲ್‌ಗಳಲ್ಲಿ ಸಿಲ್ವರ್ ಪೇಸ್ಟ್ ಅಗತ್ಯವಾಗಿದೆ. ಸೋಲಾರ್ ಸೆಕ್ಟರ್ ಒಂದೇ ಒಟ್ಟು ಗ್ಲೋಬಲ್ ಸಿಲ್ವರ್ ಪೂರೈಕೆಯಲ್ಲಿ 20% ವಹಿಸುತ್ತದೆ.
ಎಲೆಕ್ಟ್ರಿಕ್ ವಾಹನಗಳಲ್ಲಿ ಕೂಡ ಬೆಳ್ಳಿ ಬಳಕೆಯಾಗುತ್ತದೆ. ಇವಿ ಬ್ಯಾಟರಿಗಳು, ಹೈ ಕಂಡಕ್ಟಿವಿಟಿ ಎಲೆಕ್ಟ್ರಿಕಲ್ ಕನೆಕ್ಷನ್ಸ್, ಅಡ್ವಾನ್ಸ್ಡ್ ಸೇಫ್ಟಿ ಸಿಸ್ಟಮ್ಸ್‌ನಲ್ಲಿ ರಜತ ಲೋಹ ಬಳಕೆಯಾಗುತ್ತದೆ. ಗ್ರೀನ್ ಎನರ್ಜಿಯ ಅಗತ್ಯಗಳನ್ನು ಹೊರತುಪಡಿಸಿ ಅತ್ಯಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಕನೆಕ್ಟಿವಿಟಿಗೂ ಸಿಲ್ವರ್ ಬಳಕೆಯಾಗುತ್ತದೆ.
ಭಾರತದ ಮಾರುಕಟ್ಟೆಯಲ್ಲಿ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಬೆಳ್ಳಿಯ ನಾಣ್ಯಗಳು, ಗಟ್ಟಿಗಳು, ಜ್ಯುವೆಲ್ಲರಿಗಳಿಗೆ ಭಾರಿ ಬೇಡಿಕೆ ಇದೆ. ಕೈಗಾರಿಕೆಗಳಿಗೂ ಅಗತ್ಯ ಇದೆ. ಹಬ್ಬ, ಉತ್ಸವಗಳ ಸಂದರರ್ಭದಲ್ಲೂ ಬೆಳ್ಳಿ ಬೇಕಾಗುತ್ತದೆ. ಎಕ್ಸ್‌ಚೇಂಜ್ ಟ್ರೇಡಡ್ ಫಂಡ್ಸ್ ಅಥವಾ ಇಟಿಎಫ್‌ನಲ್ಲೂ ಬೆಳ್ಳಿ ಬಳಕೆಯಾಗುತ್ತದೆ. ಸಿಲ್ವರ್ ಇಟಿಎಫ್‌ಗಳಿಗೆ 2025ರಲ್ಲಿ ಭಾರಿ ಹೂಡಿಕೆ ಹರಿದು ಬಂದಿದೆ. ಸಿಲ್ವರ್ ಇಟಿಎಫ್‌ಗಳು ಈ ವರ್ಷ 87% ರಿಟರ್ನ್ ನೀಡಿವೆ.
ಭಾರತದಲ್ಲಿ ಹಲವಾರು ಸಿಲ್ವರ್ ಇಟಿಎಫ್‌ಗಳು ಲಭ್ಯವಿದೆ. ಅವುಗಳ ಪಟ್ಟಿ ಹೀಗಿದೆ:
ನಿಪ್ಪಾನ್ ಇಂಡಿಯಾ ಸಿಲ್ವರ್ ಇಟಿಎಫ್ : 81.42% ರಿಟರ್ನ್
ಯುಟಿಐ ಸಿಲ್ವರ್ ಇಟಿಎಫ್: 77.6% ರಿಟರ್ನ್
ಐಸಿಐಸಿಐ ಪ್ರುಡೆನ್ಷಿಯಲ್ ಸಿಲ್ವರ್ ಇಟಿಎಫ್ : 74%
ಎಚ್‌ಡಿಎಫ್‌ಸಿ ಸಿಲ್ವರ್ ಇಟಿಎಫ್
ಎಸ್ ಬಿಐ ಸಿಲ್ವರ್ ಇಟಿಎಫ್ : 75% ರಿಟರ್ನ್
ಆದಿತ್ಯ ಬಿರ್ಲಾ ಸನ್ ಲೈಫ್ ಸಿಲ್ವರ್ ಇಟಿಎಫ್
ಕೋಟಕ್ ಸಿಲ್ವರ್ ಇಟಿಎಫ್ : 75% ರಿಟರ್ನ್
ಟಾಟಾ ಸಿಲ್ವರ್ ಇಟಿಎಫ್
ಎಕ್ಸಿಸ್ ಸಿಲ್ವರ್ ಇಟಿಎಫ್
ಈ ಸುದ್ದಿಯನ್ನೂ ಓದಿ:
ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಬಂಪರ್ ಲಾಭ, ಶೇ. 153 ರಿಟರ್ನ್
ದೆಹಲಿ: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ (Sovereign gold bond) 2020-21ರ VII ಸೀರಿಸ್‌ನಲ್ಲಿ ಹೂಡಿಕೆ ಮಾಡಿದವರಿಗೆ 153% ರಿಟರ್ನ್ ಲಭಿಸಿದೆ. 2020ರ ಅಕ್ಟೋಬರ್ 20ರಂದು ಇದು ಬಿಡುಗಡೆಯಾಗಿತ್ತು. 2025ರ ಅಕ್ಟೋಬರ್ 20ಕ್ಕೆ ಈ ಬಾಂಡ್ ನಿಂದ ಹೂಡಿಕೆಯನ್ನು ಹಿಂಪಡೆಯಲು ಅಥವಾ ರಿಡೆಂಪ್ಷನ್ ಮಾಡಲು ಸಾಧ್ಯವಿದೆ. ಹೀಗಾಗಿ 2020ರಲ್ಲಿ 5,051 ರುಪಾಯಿ ಹೂಡಿಕೆಗೆ ಪ್ರತಿಯಾಗಿ ಈಗ 12,792 ರುಪಾಯಿ ಲಭಿಸಲಿದೆ. ಅಂದರೆ 153% ರಿಟರ್ನ್ ಸಿಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2020-21ರ ಸೀರಿಸ್‌ನ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು 2025ರ ಅಕ್ಟೋಬರ್ 20ಕ್ಕೆ, ಅವಧಿಗೆ ಮುನ್ನ ರಿಡಂಪ್ಷನ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಿಂದಾಗಿ 153.25% ಲಾಭ ಸಿಗಲಿದೆ. ಪ್ರತಿ ಯುನಿಟ್‌ಗೆ 12,792 ರುಪಾಯಿ ಸಿಗಲಿದೆ. ಇದಕ್ಕೆ ವಾರ್ಷಿಕ 2.5% ಬಡ್ಡಿ ಇರುವುದಿಲ್ಲ. ಬಿಡುಗಡೆಯಾದ ಐದನೇ ವರ್ಷದಿಂದ ರಿಡೆಂಪ್ಷನ್‌ಗೆ ಅವಕಾಶ ಇದೆ.
ಇಂಡಿಯಾ ಬುಲಿಯನ್ ಆಂಡ್ ಜ್ಯುವೆಲರ್ಸ್ ಅಸೋಸಿಯೇಶನ್ ಪ್ರಕಟಿಸುವ ಚಿನ್ನದ ಮಾರುಕಟ್ಟೆ ದರದ ಅಧಾರದಲ್ಲಿ ರಿಟರ್ನ್ ಅನ್ನು ಲೆಕ್ಕಾಚಾರ ಹಾಕಲಾಗುತ್ತಿದೆ. 2025ರ ಅಕ್ಟೋಬರ್ 15, 16 ಮತ್ತು 17ರ ದಿನಾಂಕವನ್ನು ಪರಿಗಣಿಸಲಾಗಿದೆ.
ಕೇಂದ್ರ ಸರಕಾರ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು 2025ರ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿತ್ತು. ಭೌತಿಕ ಬಂಗಾರದ ಬದಲಿಗೆ ಈ ಬಾಂಡ್‌ಗಳನ್ನು ಜನಪ್ರಿಯಗೊಳಿಸುವುದು ಇದರ ಉದ್ದೇಶವಾಗಿತ್ತು. ಮಾರುಕಟ್ಟೆಯ ದರ ಹೆಚ್ಚಳದ ಲಾಭದ ಜತೆಗೆ ವಾರ್ಷಿಕ 2.5% ಬಡ್ಡಿಯ ಲಾಭವೂ ಸಿಗುತ್ತಿತ್ತು. ಆದರೆ 2023ರಲ್ಲಿ ಸರಕಾರವು ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಕೈ ಬಿಟ್ಟಿತು. ಬಾಂಡ್ ನಿರ್ವಹಣೆಗೆ ತಗಲುವ ವೆಚ್ಚ ಏರಿಕೆಯಿಂದಾಗಿ ಯೋಜನೆಯನ್ನು ಕೈಬಿಡಲಾಗಿತ್ತು. ಎರಡನೆಯದಾಗಿ ಗೋಲ್ಡ್ ಇಟಿಎಫ್, ಡಿಜಿಟಲ್ ಗೋಲ್ಡ್ ಇತ್ಯಾದಿ ಪರ್ಯಾಯಗಳು ಬಂದಿದ್ದರಿಂದ ಸರಕಾರ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಹಿಂತೆಗೆದುಕೊಂಡಿತ್ತು.