MLA K.H. Puttaswamy Gowda: ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಿ : ಶಾಸಕ ಪುಟ್ಟಸ್ವಾಮಿಗೌಡ ಸಲಹೆ
ನಗರದ ಜನಸಂದಣಿ ಪ್ರದೇಶದಲ್ಲಿ ಭವ್ಯವಾದ ಕಟ್ಟಡದಲ್ಲಿ ವಿಶಾಲ್‌ಮಾರ್ಟ್ನವರು ತಮ್ಮ ಮಳಿಗೆ ಯನ್ನು ಪ್ರಾರಂಭಿಸಿರುವುದು ಸಂತೋಷ ತಂದಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉಡುಗೆ ತೊಡುಗೆ, ಗೃಹೋಪಯೋಗಿ ವಸ್ತುಗಳು ಹಾಗೂ ದಿನಬಳಕೆಯ ವಸ್ತು ಗಳನ್ನು ನೀಡುತ್ತಿರುವುದು ಕಂಪನಿಗೆ ಗ್ರಾಹಕರ ಬಗ್ಗೆ ಇರುವ ಕಾಳಜಿ ಹಾಗೂ ನಂಬಿಕೆಯನ್ನು ತೋರಿಸುತ್ತದೆ

ಬಹುರಾಷ್ಟ್ರೀಯ ಕಂಪನಿಗಳ ರೀತಿಯಲ್ಲಿ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ವಿತರಿಸುವ ಜತೆಗೆ ಗ್ರಾಹಕಸ್ನೇಹಿ ವಹಿವಾಟು ನಡೆಸಿದಾಗ ಮಾತ್ರ ವಿಶಾಲ್ ಮಾರ್ಟ್ ಜನತೆಯ ವಿಶ್ವಾಸ ಗಳಿಸಲು ಸಾಧ್ಯ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ತಿಳಿಸಿದರು. -

ಗೌರಿಬಿದನೂರು: ಬಹುರಾಷ್ಟ್ರೀಯ ಕಂಪನಿಗಳ ರೀತಿಯಲ್ಲಿ ಗ್ರಾಹಕರಿಗೆ ಗುಣಮಟ್ಟದ ವಸ್ತು ಗಳನ್ನು ವಿತರಿಸುವ ಜತೆಗೆ ಗ್ರಾಹಕಸ್ನೇಹಿ ವಹಿವಾಟು ನಡೆಸಿದಾಗ ಮಾತ್ರ ವಿಶಾಲ್ ಮಾರ್ಟ್ ಜನತೆಯ ವಿಶ್ವಾಸ ಗಳಿಸಲು ಸಾಧ್ಯ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ( MLA K.H. Puttaswamy Gowda) ತಿಳಿಸಿದರು.
ನಗರದ ನಾಗಪ್ಪ ಬ್ಲಾಕ್ ಬೈಪಾಸ್ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ವಿಶಾಲ್ ಮಾರ್ಟ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ಜನಸಂದಣಿ ಪ್ರದೇಶದಲ್ಲಿ ಭವ್ಯವಾದ ಕಟ್ಟಡದಲ್ಲಿ ವಿಶಾಲ್‌ಮಾರ್ಟ್ನವರು ತಮ್ಮ ಮಳಿಗೆಯನ್ನು ಪ್ರಾರಂಭಿಸಿರುವುದು ಸಂತೋಷ ತಂದಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉಡುಗೆ ತೊಡುಗೆ, ಗೃಹೋಪಯೋಗಿ ವಸ್ತುಗಳು ಹಾಗೂ ದಿನಬಳಕೆಯ ವಸ್ತು ಗಳನ್ನು ನೀಡುತ್ತಿರುವುದು ಕಂಪನಿಗೆ ಗ್ರಾಹಕರ ಬಗ್ಗೆ ಇರುವ ಕಾಳಜಿ ಹಾಗೂ ನಂಬಿಕೆಯನ್ನು ತೋರಿಸುತ್ತದೆ ಎಂದರು.
ಇದನ್ನೂ ಓದಿ: MLA KH Puttaswamy Gowda: ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ : ಶಾಸಕ ಪುಟ್ಟಸ್ವಾಮಿಗೌಡ ತಾಕೀತು
ಪ್ರತಿಯೊಂದು ವ್ಯಾಪಾರ ವ್ಯವಹಾರದಲ್ಲಿ ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸವನ್ನು ಗಳಸುವುದು ಒಂದು ದೊಡ್ಡ ಸವಾಲು. ಅಂತಹ ಸವಾಲನ್ನು ವಿಶಾಲ್ ಮಾರ್ಟ್ ಯಶಸ್ವಿಯಾಗಿ ಎದುರಿಸಿ ,ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸುವ ಮೂಲಕ, ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಾ ಗೌರಿಬಿದನೂರು ನಗರದಲ್ಲಿ ತಮ್ಮ ಮಳಿಗೆ ತೆರೆದು ಕ್ಷೇತ್ರದ ಗ್ರಾಹಕರ ಸೇವೆಗೆ ಮುಂದಾಗಿರುವ ಖ್ಯಾತ ವಾಣಿಜ್ಯೋದ್ಯಮಿಗಳಾದ ಬಿ.ಆರ್.ಶ್ರೀನಿವಾಸ್ ಮೂರ್ತಿ ಅವರನ್ನು ಅಭಿನಂದಿಸುವುದಾಗಿ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡರು ತಿಳಿಸಿದರು.
ಈ ಸಂಧರ್ಭದಲ್ಲಿ ಹಿರಿಯ ವಾಣಿಜ್ಯೋದ್ಯಮಿ ಬಿ.ಆರ್ ಶ್ರೀನಿವಾಸ್ ಮೂರ್ತಿ, ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮುಖಂಡರಾದ ಆರ್.ಅಶೋಕ್ ಕುಮಾರ್,ನಗರಸಭೆ ಮಾಜಿ ಅಧ್ಯಕ್ಷ ಜಿಎನ್ ನಾಗರಾಜ್,ಸೂರಣ್ಣ, ಅಲ್ಲಂಪಲ್ಲಿ ವೇಣು,ಇಸ್ತೂರಿ ಸತೀಶ್, ಇಸ್ತೋರಿ ಸಂಪAಗಿ,ನಗರಸಭೆ ಸದಸ್ಯರಾದ ಅಮರನಾಥ್,ಸಪ್ತಗಿರಿ ,ಡಿಜೆ ಚಂದ್ರಮೋಹನ್,ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರಾಮರೆಡ್ಡಿ,ಹೊಸೂರು ಗ್ರಾ.ಪಂ ಅಧ್ಯಕ್ಷೆ ಗೀತಾ ನಾಗರಾಜ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.