ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jio Towers: ಸೈನಿಕರಿಗೆ ದೀಪಾವಳಿ ಗಿಫ್ಟ್: ಗುರೆಜ್‌ನಲ್ಲಿ ಜಿಯೋದಿಂದ 5 ಹೊಸ ಟವರ್ ಸ್ಥಾಪನೆ

ರಿಲಯನ್ಸ್ ಜಿಯೋ ಮತ್ತು ಭಾರತೀಯ ಸೇನೆಯು ಜಂಟಿಯಾಗಿ ಕಾಶ್ಮೀರದ ಬಂಡಿಪೋರಾದಲ್ಲಿರುವ ಗುರೆಜ್‌ನಲ್ಲಿ 5 ಹೊಸ ಟವರ್‌ಗಳನ್ನು ಸ್ಥಾಪಿಸಿದೆ. ಈ ಟವರ್‌ಗಳು ಸರಾಸರಿ 13,000 ಅಡಿ ಎತ್ತರದಲ್ಲಿದ್ದು, ಈ ಭಾಗದ ಪ್ರಮುಖ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಕುಪ್ವಾರ ಸೆಂಟಿನೆಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.

ಜಿಯೋದಿಂದ ಭಾರತೀಯ ಸೈನಿಕರಿಗೆ ದೀಪಾವಳಿ ಗಿಫ್ಟ್

-

ಶ್ರೀನಗರ: ಜಿಯೋ ಈ ಬಾರಿಯ ದೀಪಾವಳಿಗೆ (Deepavali gift) ದೇಶದ ಸೈನಿಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಕಾಶ್ಮೀರದ (Kashmir) ಬಂಡಿಪೋರಾದಲ್ಲಿರುವ (Bandipora) ಗುರೆಜ್ (Gurez) ಪ್ರದೇಶದಲ್ಲಿ ರಿಲಯನ್ಸ್ ಜಿಯೋ (Reliance Jio) ಐದು ಹೊಸ ಟವರ್ (Jio Towers) ಸ್ಥಾಪಿಸಿದ್ದು, ಈ ಮೂಲಕ ದೇಶದ ಸೈನಿಕರು ತುರ್ತು ಸಂದರ್ಭ, ತಮ್ಮ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗುವ ಇಂಟರ್‌ನೆಟ್ ಸೌಲಭ್ಯ ದೊರೆಯುವಂತೆ ಮಾಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ (x) ಖಾತೆಯಲ್ಲಿ ಕುಪ್ವಾರ ಸೆಂಟಿನೆಲ್ಸ್ ಪೋಸ್ಟ್ ಮಾಡಿದೆ.

ರಿಲಯನ್ಸ್ ಜಿಯೋ ಮತ್ತು ಭಾರತೀಯ ಸೇನೆಯು ಜಂಟಿಯಾಗಿ ಐದು ಹೊಸ ಟವರ್‌ಗಳನ್ನು ಕಾಶ್ಮೀರದ ಬಂಡಿಪೋರಾದಲ್ಲಿರುವ ಗುರೆಜ್‌ನಲ್ಲಿ ಸ್ಥಾಪಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕುಪ್ವಾರ ಸೆಂಟಿನೆಲ್ಸ್, ಈ ಟವರ್‌ಗಳು ಸರಾಸರಿ 13,000 ಅಡಿ ಎತ್ತರದಲ್ಲಿದ್ದು, ಈ ಭಾಗದ ಪ್ರಮುಖ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ತಿಳಿಸಿದೆ.

ಇದೊಂದು ಮಹತ್ವದ ಸಾಧನೆ ಎಂದು ಹೇಳಿರುವ ಕುಪ್ವಾರ ಸೆಂಟಿನಲ್ಸ್, ಭಾರತೀಯ ಸೇನೆ ಮತ್ತು ರಿಲಯನ್ಸ್ ಜಿಯೋ ಗುರೆಜ್ ಪ್ರದೇಶದಲ್ಲಿ ಐದು ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿವೆ. ಸಂವಹನ ಮೂಲ ಸೌಕರ್ಯವನ್ನು ಸುಧಾರಿಸುವ ಮತ್ತು ಈ ಪ್ರದೇಶದಲ್ಲಿ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುವತ್ತ ಇದೊಂದು ಪ್ರಮುಖ ಹೆಜ್ಜೆ ಎಂದು ಹೇಳಿದೆ.

ಇದನ್ನೂ ಓದಿ: Viral Video: ದಿಟ್ಟಿಸಿ ನೋಡಿದನೆಂದು ಪ್ರೊಫೆಸರ್‌ಗೆ ಎಬಿವಿಪಿ ಸದಸ್ಯೆಯಿಂದ ಕಪಾಳಮೋಕ್ಷ! ವಿಡಿಯೊ ನೋಡಿ

ಈ ಹಿಂದೆ ಜಿಯೋ 16,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸೇವೆಯನ್ನು ಒದಗಿತ್ತು. ಇದು ಈ ಭಾಗದ ಮೊದಲ ಆಪರೇಟರ್ ಆಗಿ ಗುರುತಿಸಿಕೊಂಡಿತ್ತು. ಜನವರಿ 15ರಂದು ಸೇನಾ ದಿನಾಚರಣೆಗೆ ಸ್ವಲ್ಪ ಮೊದಲು ಸಿಯಾಚಿನ್ ಗ್ಲೇಸಿಯರ್‌ನಲ್ಲಿ 4ಜಿ ಮತ್ತು 5ಜಿ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು.

ಗುರೆಜ್ ಪ್ರದೇಶದಲ್ಲಿರುವ ಈ ಟವರ್‌ಗಳು ಖಾಸಗಿ ವಲಯ ಮತ್ತು ಸೇನೆಯು ಒಟ್ಟಾಗಿ ಕೆಲಸ ಮಾಡುುದಕ್ಕೆ ಉದಾಹರಣೆ ಎನಿಸಿಕೊಂಡಿದೆ. ರಿಲಯನ್ಸ್ ಜಿಯೋ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನವನ್ನು ಒದಗಿಸಿದರೆ, ಸೇನೆಯು ಮೂಲಸೌಕರ್ಯ, ಫೈಬರ್ ಭದ್ರತೆ ಮತ್ತು ವಿದ್ಯುತ್ ಲಭ್ಯತೆಗೆ ಕಾರಣವಾಗಿದೆ. ಜಿಯೋ ತನ್ನ ಸ್ಥಳೀಯ ಪೂರ್ಣ-ಸ್ಟ್ಯಾಕ್ 5ಜಿ ತಂತ್ರಜ್ಞಾನವನ್ನು ಬಳಸಿದೆ ಎಂಬುದು ವಿಶೇಷ.

ಇದನ್ನೂ ಓದಿ: UK digital ID scheme: ಬ್ರಿಟಿಷ್ ನಾಗರಿಕರಿಗೆ ಆಧಾರ್ ಕಾರ್ಡ್; ಪ್ರಧಾನಿ ಸ್ಟಾರ್ಮರ್ ಯೋಜನೆ ಏನು?

ಈ ಟವರ್‌ಗಳು ಭಾರತೀಯ ಸೈನಿಕರಿಗೆ ಸ್ಥಿರ ಸಂಪರ್ಕವನ್ನು ಒದಗಿಸುತ್ತವೆ. ಅವರು ತಮ್ಮ ಕುಟುಂಬಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತವೆ. ಸವಾಲಿನ ಭೂಪ್ರದೇಶ ಮತ್ತು ಕಷ್ಟದ ಪರಿಸ್ಥಿತಿಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಸಂವಹನ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.