ಕದನ ವಿರಾಮದ ವಿಶ್ವಾಸ: ಸೆನ್ಸೆಕ್ಸ್ 1,271 ಅಂಕ ಜಿಗಿತ; ನಿಫ್ಟಿ 24,233ಕ್ಕೆ ಏರಿಕೆ
Stock Market: ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಪ್ರಿಲ್ 15ರಂದು ಅಂದ್ರೆ ಇವತ್ತು ಭಾರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 1,264 ಅಂಕ ಚೇತರಿಸಿ 78,111ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 389 ಅಂಕ ಚೇತರಿಸಿಕೊಂಡು 24,231ಕ್ಕೆ ಸ್ಥಿರವಾಯಿತು.
ಸಾಂದರ್ಭಿಕ ಚಿತ್ರ -
Siddalinga Swamy
Apr 15, 2026 8:51 PM
ಮುಂಬೈ, ಏ. 15: ಭಾರತೀಯ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏಪ್ರಿಲ್ 15ರಂದು ಭಾರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 1,264 ಅಂಕ ಚೇತರಿಸಿ 78,111ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 389 ಅಂಕ ಚೇತರಿಸಿಕೊಂಡು24,231ಕ್ಕೆ ಸ್ಥಿರವಾಯಿತು. ಐಟಿ, ಹಣಕಾಸು ಸೇವೆ, ಲೋಹ, ಪಿಎಸ್‌ಯು ಬ್ಯಾಂಕ್ ಷೇರುಗಳು ಏರಿಕೆಯಾಯಿತು. ಆಟೊಮೊಬೈಲ್ ಮತ್ತು ಎಫ್‌ಎಂಸಿಜಿ ಷೇರುಗಳೂ ಲಾಭ ಗಳಿಸಿತು. ಫಾರ್ಮಾ ಮತ್ತು ಹೆಲ್ತ್ ಕೇರ್ ಸ್ಟಾಕ್ಸ್ ಸ್ವಲ್ಪ ಮಂದಗತಿಯಲ್ಲಿತ್ತು. ಹೂಡಿಕೆದಾರರಿಗೆ ಇವತ್ತು 9 ಲಕ್ಷ ಕೋಟಿ ರುಪಾಯಿ ನೋಶನಲ್ ಲಾಭ ಗಳಿಸಿತು.
ಸೆನ್ಸೆಕ್ಸ್-ನಿಫ್ಟಿ ಚೇತರಿಕೆಗೆ ಕಾರಣವೇನು?
- ಅಮೆರಿಕ- ಇರಾನ್ ನಡುವೆ ಕದನ ವಿರಾಮ ಏರ್ಪಡುವ ನಿರೀಕ್ಷೆ.
- ಕಚ್ಚಾ ತೈಲ ದರ ಬ್ಯಾರೆಲ್ ಗೆ 94 ಡಾಲರ್‌ಗೆ ಇಳಿಕೆ.
- ಡಾಲರ್ ಎದುರು ರುಪಾಯಿಮೌಲ್ಯ ಏರಿಕೆ.
- ಬಾಂಡ್ ಉತ್ಪತ್ತಿ ಇಳಿಕೆ.
- ಜಾಗತಿಕ ಮಾರುಕಟ್ಟೆಯ ಚೇತರಿಕೆ.
ವಿಡಿಯೊ ಇಲ್ಲಿದೆ:
ಬುಧವಾರ ಇನ್ಫೋಸಿಸ್, ಟಿಸಿಎಸ್, ವಿಪ್ರೊ ಮೊದಲಾದ ಐಟಿ ಸ್ಟಾಕ್ಸ್ ದರ 5% ಏರಿಕೆಯಾಗಿದೆ. ಅಮೆರಿಕ- ಇರಾನ್ ನಡುವೆ ಕದನ ವಿರಾಮ ಏರ್ಪಡುವ ನಿರೀಕ್ಷೆ ಸಕಾರಾತ್ಮಕ ಪ್ರಭಾವ ಬೀರಿತು. ಎಐ ಕುರಿತ ಕಳವಳ ಕೂಡ ಕಡಿಮೆಯಾಗಿದೆ. ನಿಫ್ಟಿ ಐಟಿ ಹೆಚ್ಚು ಲಾಭ ಗಳಿಸಿತು.