ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೂರ್ಯಾಘಾತದಿಂದ ರಕ್ಷಣೆಗೆ ಮುಂದಾಗಿ

ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕವಾದ ಕೆಲಸಗಳನ್ನು ಮಾಡಬಾರದು. ಹೆಚ್ಚು ನೀರನ್ನು ಆಗಾಗ್ಗೆ ಕುಡಿಯುತ್ತಿರಬೇಕು. ಹೆಚ್ಚು ಸಕ್ಕರೆ ಯುಕ್ತ ಪಾನೀಯಗಳು / ಕಾರ್ಬೋನೋಟೆಡ್ ಪಾನೀಯ ಗಳನ್ನು ಕುಡಿಯಬಾರದು. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ. ತಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಹೊರಾಂಗಣದಲ್ಲಿ ಕೆಲಸ ಮಾಡುವಾಗ ಆಗಾಗ್ಗೆ ವಿಶ್ರಾಂತಿ ಪಡೆಯುವುದರಿಂದ ಸೂರ್ಯಾಘಾತದಿಂದ ರಕ್ಷಿಸಿಕೊಳ್ಳಲು ಸಾಧ್ಯ

ಸೂರ್ಯಾಘಾತದಿಂದ ರಕ್ಷಣೆಗೆ ಮುಂದಾಗಿ

-

Profile
Ashok Nayak Apr 16, 2026 12:03 AM

ಚಿಕ್ಕಬಳ್ಳಾಪುರ: ಬಿಸಿ ಗಾಳಿಯ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಾಘಾತ ಉಂಟಾಗುವ (ಸನ್ ಸ್ಟ್ರೋಕ್) ಸಾಧ್ಯತೆಯು ಅಧಿಕವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್ ತಿಳಿಸಿದರು.

ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕವಾದ ಕೆಲಸಗಳನ್ನು ಮಾಡಬಾರದು. ಹೆಚ್ಚು ನೀರನ್ನು ಆಗಾಗ್ಗೆ ಕುಡಿಯುತ್ತಿರಬೇಕು. ಹೆಚ್ಚು ಸಕ್ಕರೆ ಯುಕ್ತ ಪಾನೀಯಗಳು / ಕಾರ್ಬೋನೋಟೆಡ್ ಪಾನೀಯಗಳನ್ನು ಕುಡಿಯಬಾರದು. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ. ತಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಹೊರಾಂಗಣದಲ್ಲಿ ಕೆಲಸ ಮಾಡುವಾಗ ಆಗಾಗ್ಗೆ ವಿಶ್ರಾಂತಿ ಪಡೆಯುವು ದರಿಂದ ಸೂರ್ಯಾಘಾತದಿಂದ ರಕ್ಷಿಸಿಕೊಳ್ಳಲು ಸಾಧ್ಯ ಎಂದರು.

ಸೂರ್ಯಾಘಾತಕ್ಕೆ ಪ್ರಥಮ ಚಿಕಿತ್ಸಾ ಕ್ರಮಗಳು

ಸೂರ್ಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. ಕುಡಿಯಲು ಆಗಾಗ್ಗೆ ನೀರನ್ನು ಕೊಡುವುದು. ವ್ಯಕ್ತಿಯು ಚೇತರಿಸಿ ಕೊಂಡ ನಂತರ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ನೀಡಬೇಕು.

ಬಿಸಿಲಿನ ಶಾಖದಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು

ಮೂರ್ಛೆ ಹೋಗುವುದು, ಸ್ನಾಯು ಸೆಳೆತ, ರೋಗಗ್ರಸ್ತವಾಗುವಿಕೆ, ಸಿಡುಕುತನ, ತಲೆನೋವು, ಹೆಚ್ಚಾಗಿ ಬೆವರುವುದು, ಬಲಹೀನತೆ, ತಲೆ ತಿರುಗುವಿಕೆ, ಗೊಂದಲಮಯ ರೀತಿಯಲ್ಲಿ ವರ್ತಿಸು ವುದು, ತ್ವರಿತ ಉಸಿರಾಟ / ಹೃದಯ ಬಡಿತ, ವಾಕರಿಕೆ ಮತ್ತು ವಾಂತಿ, ಎದ್ದೇಳಲು ಕಷ್ಟ ಪಡು ವುದು, ದೇಹದ ಉಷ್ಣತೆಯು 40.5, ಸಿ (105,ಎಫ್) ಗೆ ಏರುವುದು. ನಿಮ್ಮ ಮಗುವಿಗೆ ತೀವ್ರವಾದ ರೋಗ ಲಕ್ಷಣಗಳಿದ್ದರೆ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: Heatwave Alert: ಏಪ್ರಿಲ್‌-ಜೂನ್‌ ಅವಧಿಯಲ್ಲಿ ತಾಪಮಾನ ಇನ್ನಷ್ಟು ಹೆಚ್ಚಲಿದೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

ತಾಪಮಾನದಿಂದ ರಕ್ಷಣೆ ಪಡೆದುಕೊಳ್ಳುವ ವಿಧಾನ

ಪುನರ್‌ಜಲೀಕರಣ ಮಾಡಿಕೊಳ್ಳಿ: ಆಗಾಗ್ಗೆ ನೀರನ್ನು ಕುಡಿಯಬೇಕು, ಪ್ರಯಾಣ ಮಾಡುವ ಸಂದರ್ಭದಲ್ಲಿ ನೀರಿನ ಬಾಟಲ್‌ನ್ನು ಕೊಂಡೊಯ್ಯಬೇಕು, ನಿಂಬೆ ಹಣ್ಣಿನ ಷರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ರಸಗಳು ಅಥವಾ ಒ.ಆರ್.ಎಸ್ ಕುಡಿಯಬೇಕು. ತಾಜಾ ಹಣ್ಣುಗಳಾದ ಕಲ್ಲಂಗಡಿ, ಕಿತ್ತಳೆ ಹಣ್ಣು ಹಾಗೂ ಸೌತೇಕಾಯಿಯನ್ನು ಹೆಚ್ಚಾಗಿ ಸೇವಿಸಬೇಕು. ಒಳಾಂಗಣದಲ್ಲಿದ್ದಾಗ ನೆರಳಿನ ಸ್ಥಳದಲ್ಲಿ ವಿಶ್ರಮಿಸಬೇಕು. ಕಿಟಕಿ / ಬಾಗಿಲುಗಳ ಪರದೆಗಳನ್ನು ಬಳಸಿ, ಪ್ಯಾನ್, ಏರ್ ಕೂಲರ್, ಏರ್ ಕಂಡೀಶನರ್ ಬಳಸಿ, ತಣ್ಣನೆಯ ನೀರನಲ್ಲಿ ಸ್ನಾನ ಮಾಡಬೇಕು.  ಬಿಸಿಲಿನಿಂದ ರಕ್ಷಿಸಿ ಕೊಳ್ಳಲು ಛತ್ರಿ, ಟೋಪಿ, ಟವಲ್ ಹಾಗೂ ಇತರ ವಿಧಾನಗಳನ್ನು ಬಳಸಬೇಕು. ತಿಳಿ ಬಣ್ಣದ ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಾಗೂ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಸಂಪರ್ಕಿಸಬಹುದೆAದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.