ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tata Motors: ಕೋಲ್ಕತ್ತಾದಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಕೋಲ್ಕತ್ತಾ ದಲ್ಲಿ ತಮ್ಮ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು (ಆರ್ ವಿ ಎಸ್ ಎಫ್) ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ಟಾಟಾ ಕಂಪನಿಯು ಈ ದೇಶದಲ್ಲಿ ಹೊಂದಿರುವ ಎಂಟನೇ ವಾಹನ ಸ್ಕ್ರ್ಯಾಪಿಂಗ್ ಘಟಕವಾಗಿದೆ

ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್

Profile Ashok Nayak May 8, 2025 11:23 PM

ಈ ಅತ್ಯಾಧುನಿಕ ಘಟಕವು ವಾರ್ಷಿಕವಾಗಿ 21000 ವಾಹನಗಳನ್ನು ಸಂಪೂರ್ಣವಾಗಿ ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಹೊಂದಿದೆ

ಕೋಲ್ಕತ್ತಾ: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಕೋಲ್ಕತ್ತಾದಲ್ಲಿ ತಮ್ಮ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು (ಆರ್ ವಿ ಎಸ್ ಎಫ್) ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ಟಾಟಾ ಕಂಪನಿಯು ಈ ದೇಶದಲ್ಲಿ ಹೊಂದಿರುವ ಎಂಟನೇ ವಾಹನ ಸ್ಕ್ರ್ಯಾಪಿಂಗ್ ಘಟಕವಾಗಿದೆ. 'ರೀ.ವೈ.ರ್ – ರೀಸೈಕಲ್ ವಿತ್ ರೆಸ್ಪೆಕ್ಟ್' ಎಂಬ ಹೆಸರಿನ ಈ ಅತ್ಯಾಧುನಿಕ ಘಟಕವು ವರ್ಷಕ್ಕೆ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಘಟಕವನ್ನು ಅನ್ನು ಟಾಟಾ ಮೋಟಾರ್ಸ್‌ ನ ಪಾಲುದಾರ ಸಂಸ್ಥೆಯಾದ ಸೆಲ್ಲಡೇಲ್ ಸಿನರ್ಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ನಿರ್ವಹಿಸಲಿದ್ದು, ಇದು ಎಲ್ಲಾ ಬ್ರಾಂಡ್‌ ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕೂಡ ಸ್ಕ್ರ್ಯಾಪ್ ಮಾಡಲಿದೆ.

ಇದನ್ನೂ ಓದಿ: Bangalore News: ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ

ರೀ.ವೈ.ರ್ ಘಟಕವನ್ನು ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಸ್ನೇಹಾಸಿಸ್ ಚಕ್ರವರ್ತಿ ಉದ್ಘಾಟಿಸಿದರು. ಕೋಲ್ಕತ್ತಾದ ಮೇಯರ್ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಗರಾ ಭಿವೃದ್ಧಿ ಮತ್ತು ಪೌರ ವ್ಯವಹಾರಗಳ ಸಚಿವರಾದ ಶ್ರೀ ಫಿರ್ಹಾದ್ ಹಕೀಂ ಅವರು ಈ ಸಮಾರಂಭ ದಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಸೌಮಿತ್ರ ಮೋಹನ್, ಐಎಎಸ್ ಮತ್ತು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ ರಾಜೇಶ್ ಕೌಲ್ ಉಪಸ್ಥಿತ ರಿದ್ದರು. ಅವರೆಲ್ಲರ ಜೊತೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್‌ ನ ಗಣ್ಯರು ಭಾಗವಹಿಸಿದ್ದರು.

ಈ ಘಟಕ ಉದ್ಘಾಟನೆಯ ಮೂಲಕ ಟಾಟಾ ಕಂಪನಿಯು ಇದೀಗ ಕೋಲ್ಕತ್ತಾ, ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ, ದೆಹಲಿ ಎ ಸಿ ಆರ್, ಪುಣೆ ಮತ್ತು ಗುವಾಹಟಿಯಲ್ಲಿ ನೋಂದಾ ಯಿತ ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಹೊಂದಿದಂತಾಗಿದೆ. ಕೋಲ್ಕತ್ತಾದ ಘಟಕವು ಪೂರ್ವ ಭಾರತದಲ್ಲಿನ ಮೂರನೇ ರೀ.ವೈ.ರ್ ಘಟಕವಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿದೆ.

ಘಟಕವನ್ನು ಉದ್ಘಾಟಿಸಿ ಮಾತನಾಡಿದ ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ಸ್ನೇಹಾಸಿಸ್ ಚಕ್ರವರ್ತಿ ಅವರು, "ನಮ್ಮ ಜನರಿಗೆ ಸ್ವಚ್ಛ ಮತ್ತು ಸುಸ್ಥಿರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್‌ ನ ರೀ.ವೈ.ರ್ ಘಟಕದ ಉದ್ಘಾಟನೆಯು ಸ್ವಾಗತಾರ್ಹ ಹೆಜ್ಜೆ ಯಾಗಿದೆ. ಈ ಯೋಜನೆಯು ಹೊಸ, ಸುರಕ್ಷಿತ, ಇಂಧನ- ಸಮರ್ಥ ವಾಹನಗಳ ಬಳಕೆಗೆ ಪ್ರೇರಣೆ ನೀಡುತ್ತದೆ ಮತ್ತು ಸಾರಿಗೆ ವಲಯದಲ್ಲಿ ಸುಸ್ಥಿರ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯನ್ನು ನಮ್ಮ ರಾಜ್ಯಕ್ಕೆ ತಂದ ಟಾಟಾ ಮೋಟಾರ್ಸ್, ಸೆಲ್ಲಡೇಲ್ ಸಿನರ್ಜೀಸ್ ಮತ್ತು ಸಂಬಂಧಪಟ್ಟ ಎಲ್ಲಾ ಪಾಲುದಾರರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ" ಎಂದು ಹೇಳಿದರು.

ಕೋಲ್ಕತ್ತಾದ ಮೇಯರ್ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರ ವ್ಯವಹಾರಗಳ ಸಚಿವರಾದ ಶ್ರೀ ಫಿರ್ಹಾದ್ ಹಕೀಂ ಅವರು ಮಾತನಾಡಿ, "ಟಾಟಾ ಮೋಟಾರ್ಸ್‌ ನ ಸ್ಕ್ರ್ಯಾಪಿಂಗ್ ಘಟಕವು ಸುಸ್ಥಿರ ಅಭಿವೃದ್ಧಿ ಪಥದಲ್ಲಿನ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ. ಇದು ನಮ್ಮ ರಾಜ್ಯದಲ್ಲಿನ ಪರಿಸರದ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ಜನರಿಗೆ ಒಳಿತು ಉಂಟು ಮಾಡಲು ಸಹಾಯ ಮಾಡುತ್ತದೆ. ಈ ಘಟಕವು ರಾಜ್ಯಕ್ಕೆ ಬಹಳಷ್ಟು ಉದ್ಯೋಗಾವಕಾಶ ಗಳನ್ನೂ ಸೃಷ್ಟಿಸಲಿದೆ. ನಮ್ಮ ರಾಜ್ಯದ ಜನರಿಗಾಗಿ ಈ ದೂರದೃಷ್ಟಿಯ ಹೆಜ್ಜೆಯನ್ನು ಇಟ್ಟ ಟಾಟಾ ಮೋಟಾರ್ಸ್‌ ಸಂಸ್ಥೆಗೆ ಮೆಚ್ಚುಗೆ ಸಲ್ಲುತ್ತವೆ" ಎಂದರು.

ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ಶ್ರೀ ರಾಜೇಶ್ ಕೌಲ್ ಅವರು ಮಾತನಾಡಿ, "ಟಾಟಾ ಮೋಟಾರ್ಸ್ ಸಂಸ್ಥೆಯು ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸಲು ಮಾಡಲು ಮತ್ತು ಸುಸ್ಥಿರ ಆರ್ಥಿಕತೆಯನ್ನು ಬೆಳೆಸಲು ಬದ್ಧವಾಗಿದೆ. ಪಶ್ಚಿಮ ಬಂಗಾಳದ ಮೊದಲ ಮತ್ತು ದೇಶದ ಎಂಟನೇ ರೀ.ವೈ.ರ್ ಘಟಕದ ಉದ್ಘಾಟನೆಯು ನಮ್ಮ ವಾಹನ ಸ್ಕ್ರ್ಯಾಪಿಂಗ್ ವಿಭಾಗವನ್ನು ವಿಸ್ತರಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಒಟ್ಟು ಎಂಟು ಟಾಟಾ ಮೋಟಾರ್ಸ್ ಸ್ಕ್ರ್ಯಾಪಿಂಗ್ ಘಟಕಗಳು ವರ್ಷಕ್ಕೆ 1.3 ಲಕ್ಷಕ್ಕೂ ಹೆಚ್ಚು ವಾಹನ ಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಹೊಂದಿವೆ. ಸುರಕ್ಷತೆ, ಅನುಸರಣೆ ಮತ್ತು ಸುಸ್ಥಿರತೆಯ ಕಡೆಗೆ ಗಮನ ಕೇಂದ್ರೀಕರಿಸುತ್ತಲೇ ಭಾರತದ ವಾಹನ ಸ್ಕ್ರ್ಯಾಪಿಂಗ್ ಕ್ಷೇತ್ರವನ್ನು ಅನ್ನು ಪರಿವರ್ತಿ ಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ" ಎಂದರು.

ಪ್ರತಿ ರೀ.ವೈ.ರ್ ಘಟಕವು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಎಲ್ಲಾ ಕಾರ್ಯಾ ಚರಣೆಗಳು ಸುಗಮವಾಗಿ ಮತ್ತು ಕಾಗದರಹಿತವಾಗಿ ನಡೆಯುತ್ತವೆ. ವಾಣಿಜ್ಯ ವಾಹನಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸೆಲ್- ಟೈಪ್ ಒಡೆಯುವಿಕೆ ಮತ್ತು ಪ್ರಯಾಣಿಕ ವಾಹನಗಳಿಗೆ ಲೈನ್- ಟೈಪ್ ಒಡೆಯುವಿಕೆ ವಿಧಾನದ ಮೂಲಕ ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ.

ಟೈರ್‌ಗಳು, ಬ್ಯಾಟರಿಗಳು, ಇಂಧನ, ಆಯಿಲ್ ಗಳು, ಲಿಕ್ವಿಡ್ ಗಳು ಮತ್ತು ಅನಿಲಗಳಂತಹ ವಿವಿಧ ಘಟಕಗಳನ್ನು ಸುರಕ್ಷಿತವಾಗಿ ಒಡೆಯಲು ವಿಶೇಷ ವಿಭಾಗಗಳಿವೆ. ಪ್ರತಿ ವಾಹನ ಕೂಡ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಜವಾಬ್ದಾರಿಯುತ ಸ್ಕ್ರ್ಯಾಪಿಂಗ್ ನಿಯಮಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೂಕ್ಷ್ಮ ದಾಖಲಾತಿ ಪ್ರಕ್ರಿಯೆ ಮತ್ತು ಸ್ಕ್ರ್ಯಾಪಿಂಗ್ ಪ್ರಕ್ರಿಯೆಗೆ ಒಳಪಡುತ್ತದೆ. ರಾಷ್ಟ್ರದ ವಾಹನ ಸ್ಕ್ರ್ಯಾಪಿಂಗ್ ನೀತಿಗೆ ಅನುಗುಣವಾಗಿ ಎಲ್ಲಾ ಘಟಕಗಳಲ್ಲಿಯೂ ಸುರಕ್ಷಿತ ವಿಲೇವಾರಿಯನ್ನು ಮಾಡಲಾಗುತ್ತದೆ. ರೀ.ವೈ.ರ್. ಘಟಕವು ಆಟೋಮೊಬೈಲ್ ಉದ್ಯಮ ದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಬೆಳೆಸುವಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.