Stock Market: ಸ್ಟಾಕ್ ಮಾರ್ಕೆಟ್ ನಲ್ಲಿ ಮುಂದಿನ ವಾರ ಪ್ರಭಾವ ಬೀರಬಹುದಾದ ಅಂಶಗಳೇನು?
ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಎತ್ತರದ ಸಮೀಪದಲ್ಲಿವೆ. ಹೀಗಿದ್ದರೂ, ಮುಂದಿನ ವಾರ ಡಿಸೆಂಬರ್ 15ರಿಂದ 19 ತನಕ ಹೇಗಿರಲಿದೆ? ಯಾವೆಲ್ಲ ಅಂಶಗಳು ಪ್ರಭಾವ ಬೀರಲಿದೆ? ಇತ್ಯಾದಿ ವಿವರಗಳನ್ನು ತಿಳಿಯೋಣ. ಕಳೆದ ಶುಕ್ರವಾರ ನಿಫ್ಟಿ 148 ಅಂಕ ಕಳೆದುಕೊಂಡು 26,046ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು.
ಸಂಗ್ರಹ ಚಿತ್ರ -
ಮುಂಬೈ: ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಎತ್ತರದ ಸಮೀಪದಲ್ಲಿವೆ. ಹೀಗಿದ್ದರೂ, ಮುಂದಿನ ವಾರ ಡಿಸೆಂಬರ್ 15ರಿಂದ 19 ತನಕ ಹೇಗಿರಲಿದೆ? ಯಾವೆಲ್ಲ ಅಂಶಗಳು ಪ್ರಭಾವ ಬೀರಲಿದೆ? ಇತ್ಯಾದಿ ವಿವರಗಳನ್ನು ತಿಳಿಯೋಣ. ಕಳೆದ ಶುಕ್ರವಾರ ನಿಫ್ಟಿ 148 ಅಂಕ ಕಳೆದುಕೊಂಡು 26,046ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು. ಸೆನ್ಸೆಕ್ಸ್ 450 ಅಂಕ ಕಳೆದುಕೊಂಡು 85,267ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತ್ತು.
ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಡೊಮೆಸ್ಟಿಕ್ ಡೇಟಾಗಳು ಸಾಕಷ್ಟು ಪ್ರಭಾವ ಬೀರಬಹುದು. ಮುಖ್ಯವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಡೆಗಳು, ಸಗಟು ಹಣದುಬ್ಬರ ಅಂಕಿ ಅಂಶಗಳು, ಭಾರತ-ಅಮೆರಿಕ ಟ್ರೇಡ್ ಡೀಲ್ ಕುರಿತ ಬೆಳವಣಿಗೆಗಳು ಪ್ರಭಾವ ಬೀರುವ ನಿರೀಕ್ಷೆ ಇದೆ. ಟೆಕ್ನಿಕಲ್ ಸ್ವರೂಪಗಳು ನಿಫ್ಟಿ, ಬ್ಯಾಂಕ್ ನಿಫ್ಟಿ ಮತ್ತು ಸೆನ್ಸೆಕ್ಸ್‌ಗೆ ಪೂರಕವಾಗಿವೆ.
ಡಿಸೆಂಬರ್ 15ರಂದು ಹಣದುಬ್ಬರ ಕುರಿತ ಅಂಕಿ ಅಂಶಗಳು ಪ್ರಕಟವಾಗಲಿದೆ. ಅಕ್ಟೋಬರ್‌ನಲ್ಲಿ ಹೋಲ್ ಸೇಲ್ ಹಣದುಬ್ಬರವು ಮೈನಸ್ 1.21% ಕ್ಕೆ ಇಳಿದಿತ್ತು. ಆಹಾರ ವಸ್ತುಗಳು, ಬೇಳೆ ಕಾಳುಗಳು ಮತ್ತು ತರಕಾರಿಗಳ ದರಗಳು ಇಳಿಕೆಯಾಗಿವೆ. ಇಂಧನ ಮತ್ತು ಉತ್ಪಾದಿತ ವಸ್ತುಗಳ ದರಗಳು ಇಳಿದಿವೆ.
ವಿಡಿಯೊ ಇಲ್ಲಿದೆ:
ಭಾರತ- ಅಮೆರಿಕ ಟ್ರೇಡ್ ಡೀಲ್
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆ ಪ್ರಗತಿಯ ಹಂತದಲ್ಲಿದೆ. ವ್ಯಾಪಾರದ ಸ್ವರೂಪದ ಪ್ರಮುಖಾಂಶಗಳ ಬಗ್ಗೆ ಉಣಯ ಬಣಗ ನಡುವೆ ಮಾತುಕತೆ ಮುಕ್ತಾಯವಾಗಿದೆ. ಇದು ಸ್ಟಾಕ್ ಮಾರ್ಕೆಟ್‌ಗೆ ಪಾಸಿಟಿವ್ ಸಿಗ್ನಲ್ ಕೊಡುವ ನಿರೀಕ್ಷೆ ಇದೆ.
ಡಾಲರ್ ಎದುರು ರುಪಾಯಿ ಮೌಲ್ಯ ಇಳಿಕೆ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 90 ರುಪಾಯಿ 57 ಪೈಸೆ ಮಟ್ಟದಲ್ಲಿದೆ. ಆಮದುದಾರರಿಂದ ಡಾಲರ್‌ಗೆ ಬೇಡಿಕೆ ಮತ್ತು ವಿದೇಶಿ ಹೂಡಿಕೆಯ ಹೊರ ಹರಿವು ಪ್ರಭಾವ ಬೀರಿದೆ. ಅಂದ್ರೆ ಆಮದನ್ನು ಹೆಚ್ಚು ಅವಲಂಬಿಸಿರುವ ಕಂಪನಿಗಳಿಗೆ ಇದು ನೆಗೆಟಿವ್ ಆಗಬಹುದು. ಆದರೆ ಐಟಿ ಮೊದಲಾದ ರಫ್ತು ಅಧಾರಿತ ಕಂಪನಿಗಳಿಗೆ ರುಪಾಯಿ ಮೌಲ್ಯ ಇಳಿಕೆಯು ಲಾಭದಾಯಕ. ಏಕೆಂದರೆ ಅವುಗಳು ಡಾಲರ್ ಗಳಲ್ಲಿ ಗಳಿಸುವ ಆದಾಯವನ್ನು ರುಪಾಯಿಗೆ ಪರಿವರ್ತಿಸಿದಾಗ ಹೆಚ್ಚು ಆದಾಯ ಸಿಗುತ್ತದೆ.
ಬೆಳ್ಳಿಯ ದರ ಜಿಗಿತ
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಅಥವಾ MCX ನಲ್ಲಿ ಬೆಳ್ಳಿಯ ದರ ಏರುಗತಿಯಲ್ಲಿದೆ. ಪ್ರತಿ ಕೆಜಿಗೆ 2 ಲಕ್ಷ ರುಪಾಯಿಗಳ ಗಡಿಯನ್ನು ದಾಟಿದೆ. ಇಂಡಸ್ಟ್ರಿಯಲ್ ಉದ್ದೇಶಕ್ಕೆ ಬೇಡಿಕೆ ಗಣನೀಯವಾಗಿ ಏರಿಕೆಯಾಗಿರುವುದು, ಪೂರೈಕೆಯ ಕೊರತೆ ಬೆಲೆ ಏರಿಕೆಗೆ ಕಾರಣವಾಗಿದೆ.
ಸ್ಪೇಸ್ ಎಕ್ಸ್ ಐಪಿಒಗೆ ಸಿದ್ಧತೆ
ಜಗತ್ತಿನ ಶ್ರೀಮಂತ ಟೆಕ್ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯು 2026ರಲ್ಲಿ ಐಪಿಒ ಮೂಲಕ ಷೇರು ಪೇಟೆಗೆ ಪ್ರವೇಶಿಸಲಿದೆ. ಇದು ಇದುವರೆಗಿಗ ಅತಿ ದೊಡ್ಡ ಗಾತ್ರದ ಐಪಿಒ ಆಗುವ ನಿರೀಕ್ಷೆ ಇದೆ. ಇದರ ಪರಿಣಾಮ ಸ್ಪೇಸ್ ಎಕ್ಸ್‌ನ ಮಾರುಕಟ್ಟೆ ಮೌಲ್ಯವು 800 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಮುಂದಿನ ವಾರ ಯಾವೆಲ್ಲ ಐಪಿಒಗಳು ನಡೆಯಲಿವೆ ಎಂಬುದನ್ನು ಈಗ ನೋಡೋಣ.
ಶ್ಯಾಮ್ ಧನಿ ಇಂಡಸ್ಟ್ರೀಸ್
ಮಾರ್ಕ್ ಟೆಕ್ನಾಲಜೀಸ್
ಗ್ಲೋಬಲ್ ಓಶಿಯನ್ ಟೆಕ್ನಾಲಜೀಸ್
ಕೆಎಸ್‌ಎಚ್ ಇಂಟರ್ ನ್ಯಾಶನಲ್
ನೆಪ್ಚ್ಯೂನ್ ಲಾಗಿಟೆಕ್
ಕಂಪನಿಗಳ ಐಪಿಒ ನಡೆಯಲಿದೆ.
ಇನ್ನು ಐಸಿಐಸುಐ ಪ್ರುಡೆನ್ಷಿಯಲ್ ಅಸೆಟ್ ಮ್ಯಾನೇಜ್‌ಮೆಂಟ್ ಐಒಇಒ ಡಿಸೆಂಬರ್ 16ಕ್ಕೆ ಮುಕ್ತಾಯವಾಗಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಷೇರು ಮಾರುಕಟ್ಟೆಯಲ್ಲಿ 2025ರ ಈ ವರ್ಷ ಇದುವರೆಗೆ ಪ್ರತಿ ಟ್ರೇಡಿಂಗ್ ಗಂಟೆಗೆ ಸರಾಸರಿ 152 ಕೋಟಿ ರುಪಾಯಿಗಳನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಿದ್ದರೂ, ಷೇರು ಮಾರುಕಟ್ಟೆ ಸೂಚ್ಯಂಕಗಳು ಬಿದ್ದಿಲ್ಲ, ಬದಲಿಗೆ ಚೇತರಿಸಿ ಹೊಸ ಎತ್ತರಕ್ಕೆ ಸನಿಹದಲ್ಲಿವೆ. ಇದಕ್ಕೆ ಕಾರಣ ದೇಶೀಯ ಹೂಡಿಕೆದಾರರು ಪ್ರತಿ ತಿಂಗಳು ನಿರಂತರವಾಗಿ ಸಿಪ್ ಮೂಲಕ ಹೂಡಿಕೆ ಮಾಡುತ್ತಿರುವುದು. ಜತೆಗೆ ನೇರವಾಗಿ ಹೂಡಿಕೆಯೂ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದೆಲ್ಲವೂ ಸಕಾರಾತ್ಮಕವಾಗಿ ಪರಿಣಮಿಸಿದೆ.