ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್-ನಿಫ್ಟಿ ಫ್ಲ್ಯಾಟ್‌ ಸೂಚ್ಯಂಕ ಇಳಿದಿರುವುದೇಕೆ?

ಸೆನ್ಸೆಕ್ಸ್‌, ನಿಫ್ಟಿ ಎರಡೂ ಸೂಚ್ಯಂಕಗಳು ಇವತ್ತು ಇಳಿಕೆ ದಾಖಲಿಸಿತು. ಸೆನ್ಸೆಕ್ಸ್‌ 78 ಅಂಕ ಕಳೆದುಕೊಂಡು 84,481ಕ್ಕೆ ಸ್ಥಿರವಾದರೆ, ನಿಫ್ಟಿ 3 ಅಂಕ ಕಳೆದುಕೊಂಡು 25,815ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಬಿಎಸ್‌ಇ ಮಿಡ್‌ ಕ್ಯಾಪ್‌ ಇಂಡೆಕ್ಸ್‌ ಲಾಭ ಗಳಿಸಿದರೆ, ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ 0.28% ಇಳಿಕೆ ದಾಖಲಿಸಿತು.

ಸೆನ್ಸೆಕ್ಸ್-ನಿಫ್ಟಿ ಫ್ಲ್ಯಾಟ್‌ ಸೂಚ್ಯಂಕ ಇಳಿದಿರುವುದೇಕೆ?

ಸಾಂಧರ್ಬಿಕ ಚಿತ್ರ -

ಸೆನ್ಸೆಕ್ಸ್‌, ನಿಫ್ಟಿ ಎರಡೂ ಸೂಚ್ಯಂಕಗಳು ಇವತ್ತು ಇಳಿಕೆ ದಾಖಲಿಸಿತು. ಸೆನ್ಸೆಕ್ಸ್‌ 78 ಅಂಕ ಕಳೆದುಕೊಂಡು 84,481ಕ್ಕೆ ಸ್ಥಿರವಾದರೆ, ನಿಫ್ಟಿ 3 ಅಂಕ ಕಳೆದುಕೊಂಡು 25,815ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಬಿಎಸ್‌ಇ ಮಿಡ್‌ ಕ್ಯಾಪ್‌ ಇಂಡೆಕ್ಸ್‌ ಲಾಭ ಗಳಿಸಿದರೆ, ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ 0.28% ಇಳಿಕೆ ದಾಖಲಿಸಿತು. ಮಾರುಕಟ್ಟೆಯಲ್ಲಿ ಇವತ್ತು ಫ್ರೆಶ್‌ ಟ್ರಿಗರ್ಸ್‌ ಕೊರತೆ ಉಂಟಾಗಿತ್ತು. ಆದರೆ ಐಟಿ ಷೇರುಗಳು ಏರಿಕೆ ದಾಖಲಿಸಿತು. ಇನ್ಫೋಸಿಸ್‌, ಟಿಸಿಎಸ್‌, ಟೆಕ್‌ ಮಹೀಂದ್ರಾ ಸೆನ್ಸೆಕ್ಸ್‌ಗೆ ಸಪೋರ್ಟ್‌ ನೀಡಿತು. ಮತ್ತೊಂದು ಕಡೆ ಎಚ್‌ಡಿಎಫ್‌ಸಿ ಬ್ಯಾಂಕ್‌, ಸನ್‌ ಫಾರ್ಮಾ, ಭಾರ್ತಿ ಏರ್‌ ಟೆಲ್‌ ಇಳಿಕೆ ದಾಖಲಿಸಿತು.

ಸತತ 4 ದಿನಗಳಿಂದ ಸೆನ್ಸೆಕ್ಸ್-ನಿಫ್ಟಿ ಇಳಿಮುಖವಾಗಿದೆ. ನಾಲ್ಕು ಸೆಶನ್ಸ್‌ ಗಳಲ್ಲಿ ಸೆನ್ಸೆಕ್ಸ್‌ 800 ಅಂಕ ಕಳೆದುಕೊಂಡಿದೆ. ರುಪಾಯಿಯ ವೀಕ್ನೆಸ್‌, ವಿದೇಶಿ ಹೂಡಿಕೆಯ ಹೊರಹರಿವಿನ ಕಳವಳ, ಭಾರತ- ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ಪ್ರಭಾವ ಬೀರಿತು. ಹೊಸ ಟ್ರಿಗರ್‌ ಕೊಡುವ ಅಂಶ ಇರಲಿಲ್ಲ.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಟಾಪ್‌ ಗೈನರ್ಸ್:‌ ಇಂಟರ್‌ ಗ್ಲೋಬ್‌ ಏವಿಯೇಶನ್‌, ಟಿಸಿಎಸ್‌, ಮ್ಯಾಕ್ಸ್‌ ಹೆಲ್ತ್‌ ಕೇರ್‌ ಇನ್‌ಸ್ಟಿಟ್ಯೂಟ್‌ ಲಾಭ ಗಳಿಸಿತು. ನಿಫ್ಟಿ 50 ಇಂಡೆಕ್ಸ್‌ನಲ್ಲಿ ಟಾಪ್‌ ಲಾಸರ್ಸ್:‌ ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಪವರ್‌ ಗ್ರಿಡ್‌ ಕಾರ್ಪೊರೇಷನ್.‌

ವಲಯಾವಾರು ಇಂಡೆಕ್ಸ್‌ ಹೇಗಿತ್ತು: ನಿಫ್ಟಿ ಐಟಿ 1.21% ಏರಿಕೆಯಾಗಿತ್ತು. ನಿಫ್ಟಿ ಕನ್‌ಸ್ಯೂಮರ್‌ ಡ್ಯೂರಬಲ್ಸ್‌ ೦.37% ಹೆಚ್ಚಳವಾಗಿತ್ತು. ರಿಯಾಲ್ಟಿ 0.34% ಹೆಚ್ಚಳವಾಗಿತ್ತು. ಮೆಟಲ್‌ ಇಂಡೆಕ್ಸ್‌ 0.25% ಏರಿಕೆ ಆಗಿತ್ತು. ನಿಫ್ಟಿ ಮೀಡಿಯಾ 1.27% ಇಳಿಕೆ ದಾಖಲಿಸಿತು. ನಿಫ್ಟಿ ಆಟೊ 0.61% ಇಳಿಯಿತು. ಆಯಿಲ್‌ ಆಂಡ್‌ ಗ್ಯಾಸ್‌ 0.33% ಮತ್ತು ಫಾರ್ಮಾ 0.24% ಇಳಿಕೆ ದಾಖಲಿಸಿತು.

ವಾಲ್ಯೂಮ್‌ ದೃಷ್ಟಿಯಿಂದ ಹೆಚ್ಚು ಸಕ್ರಿಯವಾಗಿದ್ದ ಷೇರುಗಳು: ವೊಡಾಫೋನ್‌ ಐಡಿಯಾ: 88 ಕೋಟಿ ಷೇರುಗಳು, ಮೀಶೋ: 30 ಕೋಟಿ ಷೇರುಗಳು, ಓಲಾ ಎಲೆಕ್ಟ್ರಿಕ್‌ ಮೊಬಿಲಿಟಿ: 18.5 ಕೋಟಿ ಷೇರುಗಳು ಹೆಚ್ಚು ಸಕ್ರಿಯವಾಗಿತ್ತು.

15% ಗಿಂತಲೂ ಹೆಚ್ಚು ಏರಿಕೆಯಾದ ಷೇರುಗಳು: ಟಿಸಿಐ ಫೈನಾನ್ಸ್‌, ಆಂಟನಿ ವೇಸ್ಟ್‌ ಹ್ಯಾಂಡ್ಲಿಂಗ್‌ ಸೆಲ್‌, ಎನ್‌ಡಿಎ ಸೆಕ್ಯುರಿಟೀಸ್‌, ಸೋನಲ್‌ ಮರ್ಕಂಟೈಲ್‌, ರುದ್ರ ಗ್ಲೋಬಲ್‌ ಇನ್ಫ್ರಾ ಪ್ರಾಡಕ್ಟ್ಸ್‌ ಷೇರುಗಳ ದರದಲ್ಲಿ 15% ಗಿಂತ ಹೆಚ್ಚು ಏರಿಕೆ ದಾಖಲಾಯಿತು.

Meesho IPO: ಸ್ಟಾಕ್‌ ಮಾರ್ಕೆಟ್‌ನಲ್ಲಿ ಬೆಂಗಳೂರಿನ ಮೀಶೊ IPO ಹವಾ

ಅಡ್ವಾನ್ಸ್-ಡಿಕ್ಲೈನ್‌ ಅನುಪಾತ: ಬಿಎಸ್‌ ಇನಲ್ಲಿ 4,332 ಷೇರುಗಳ ಪೈಕಿ 1,629 ಷೇರುಗಳು ಲಾಭ ಗಳಿಸಿತು. 2,509 ಷೇರುಗಳು ನಷ್ಟಕ್ಕೀಡಾಯಿತು. 194 ಷೇರುಗಳು ಯಥಾಸ್ಥಿತಿಯಲ್ಲಿತ್ತು.

52 ವಾರಗಳಲ್ಲಿ ಗರಿಷ್ಠ ಎತ್ತರಕ್ಕೇರಿದ ಷೇರುಗಳು: ವೇದಾಂತ, ಶ್ರೀರಾಮ್‌ ಫೈನಾನ್ಸ್‌, ಫೆಡರಲ್‌ ಬ್ಯಾಂಕ್‌, ಅಶೋಕ್‌ ಲೇಲ್ಯಾಂಡ್‌, ಹಿಂದುಸ್ತಾನ್‌ ಝಿಂಕ್‌ ಷೇರುಗಳು 52 ವಾರಗಳ ಗರಿಷ್ಠ ಎತ್ತರಕ್ಕೇರಿತು.