ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತೈಲ ದರ ಸ್ಫೋಟ: ಸೆನ್ಸೆಕ್ಸ್‌ 1,350ಕ್ಕೂ ಹೆಚ್ಚು ಅಂಕ ಪತನ; 9 ಲಕ್ಷ ಕೋಟಿ ರುಪಾಯಿ ನಷ್ಟ

Share Market: ಇರಾನ್‌-ಇಸ್ರೇಲ್‌ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಜಿಗಿದಿದೆ. ಇದರ ಬೆನ್ನಲ್ಲೇ ಸೋಮವಾರ ಸೆನ್ಸೆಕ್ಸ್‌ 1,352 ಅಂಕ ಕುಸಿತಕ್ಕೀಡಾಗಿ 77,566ಕ್ಕೆ ಇಳಿಯಿತು. ನಿಫ್ಟಿ 422 ಅಂಕ ಕಳೆದುಕೊಂಡು 24,028ಕ್ಕೆ ತಗ್ಗಿತು.

ಸೆನ್ಸೆಕ್ಸ್‌ 1,350ಕ್ಕೂ ಹೆಚ್ಚು ಅಂಕ ಪತನ; ಕಾರಣವೇನು?

ಸಾಂದರ್ಭಿಕ ಚಿತ್ರ -

ಮುಂಬೈ, ಮಾ. 9: ಇರಾನ್‌-ಇಸ್ರೇಲ್‌ ಯುದ್ಧ (Middle East Conflict) ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಜಿಗಿದಿದೆ. ಇದರ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ಕುಸಿದಿದೆ (Share Market). ಸೋಮವಾರ ಸೆನ್ಸೆಕ್ಸ್‌ 1,352 ಅಂಕ ಕುಸಿತಕ್ಕೀಡಾಗಿ 77,566ಕ್ಕೆ ಇಳಿಯಿತು. ನಿಫ್ಟಿ 422 ಅಂಕ ಕಳೆದುಕೊಂಡು 24,028ಕ್ಕೆ ತಗ್ಗಿತು. ಎಸ್‌ಬಿಐ, ಮಹೀಂದ್ರಾ & ಮಹೀಂದ್ರಾ ಶೇಕಡಾ 5ರ ತನಕ ಇಳಿಯಿತು.

ಬೆಳಗ್ಗೆ ಸೆನ್ಸೆಕ್ಸ್‌ ಮತ್ತು ನಿಫ್ಟಿ ತಲಾ ಶೇಕಡಾ 3 ಕುಸಿತ ದಾಖಲಿಸಿತು. ಸೆನ್ಸೆಕ್ಸ್‌ 2,400ಕ್ಕೂ ಹೆಚ್ಚು ಅಂಕ ಇಳಿಯಿತು. ಕೆಲವೇ ನಿಮಿಷಗಳಲ್ಲಿ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 12 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ನಷ್ಟ ಸಂಭವಿಸಿತು. ದಿನದ ಮುಕ್ತಾಯದ ವೇಳೆಗೆ ಹೂಡಿಕೆದಾರರಿಗೆ 9 ಲಕ್ಷ ಕೋಟಿ ರುಪಾಯಿ ನೋಶನಲ್‌ ನಷ್ಟ ಉಂಟಾಯಿತು. ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಷೇರುಗಳ ಬಂಡವಾಳ ಮೌಲ್ಯವು 450 ಲಕ್ಷ ಕೋಟಿ ರುಪಾಯಿಯಿಂದ 441 ಲಕ್ಷ ಕೋಟಿ ರುಪಾಯಿಗೆ ಇಳಿಯಿತು.

ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಪತನಕ್ಕೆ ಕಾರಣವೇನು?

  • ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗೂ ಮೇಲ್ಪಟ್ಟು ಏರಿಕೆ.
  • ಮಧ್ಯಪ್ರಾಚ್ಯದಲ್ಲಿ ಇರಾನ್ - ಇಸ್ರೇಲ್ - ಅಮೆರಿಕ ಯುದ್ಧ ತೀವ್ರ.
  • ಡಾಲರ್‌ ಎದುರು ರುಪಾಯಿ ಮೌಲ್ಯ 92ಕ್ಕೆ ಇಳಿಕೆ.
  • ಬಾಂಡ್‌ ಉತ್ಪತ್ತಿ ಏರಿಕೆ.
  • ಎಫ್‌ಐಐಗಳಿಂದ ಹೂಡಿಕೆ ಹಿಂತೆಗೆತ.
  • ಜಾಗತಿಕ ಷೇರು ಮಾರುಕಟ್ಟೆ ಪತನ.
  • ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತದ ಮೇಲೆ ಪರಿಣಾಮ ಸಾಧ್ಯತೆ.

ಜಾಗತಿಕ ಮಾರುಕಟ್ಟೆ ಪತನ

  • ಎಸ್‌ &ಪಿ 500 ಫ್ಯೂಚರ್ಸ್‌ 1.7% ಕುಸಿತ.
  • ನಾಸ್‌ಡಾಕ್‌ 100 ಫ್ಯೂಚರ್ಸ್‌ 1.8% ಇಳಿಕೆ.
  • ಎಂಎಸ್‌ಸಿಐ ಏಷ್ಯಾ ಪೆಸಿಫಿಕ್‌ ಇಂಡೆಕ್ಸ್‌ 4% ಇಳಿಕೆ.
  • ಹಾಂಕಾಂಗ್‌ನ ಹ್ಯಾಂಗ್‌ಸೆಂಗ್‌ 1.9% ಇಳಿಕೆ.
  • ಶಾಂಘೈ ಕಂಪೊಸಿಟ್‌ 0.7% ಇಳಿಕೆ.

ನಿಫ್ಟಿ 50ಯಲ್ಲಿ ಹೆಚ್ಚು ನಷ್ಟಕ್ಕೀಡಾದ ಷೇರುಗಳು

  • ಟಾಟಾ ಮೋಟಾರ್ಸ್‌ ಪಿವಿ: 330/: 5.71%
  • ಅಲ್ಟ್ರಾ ಟೆಕ್‌ ಸಿಮೆಂಟ್‌: 11,341/: 5.35%
  • ಮಾರುತಿ ಸುಜುಕಿ: 13,514/: 4.67%
  • M&M: 3,185/: 4.47%
  • ಬಜಾಜ್‌ ಆಟೊ: 9,398/: 4.43%
  • SBI: 1,097/: 4.21%

ನಿಫ್ಟಿ 50ಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳು

  • ರಿಲಯನ್ಸ್‌ ಇಂಡಸ್ಟ್ರೀಸ್‌: 1,428/: 1.72%
  • ವಿಪ್ರೊ: 198/: 1.66%
  • ಅಪೊಲೊ ಹಾಸ್ಪಿಟಲ್‌: 7,804/: 0.99%
  • ಇನ್ಫೋಸಿಸ್‌: 1,316/: 0.62%
  • ಸನ್‌ ಫಾರ್ಮಾ: 1,810/- : 0.60%
  • ಸಿಪ್ಲಾ: 1,328/: 0.53%

ಭಾರತದ ವಾರೆನ್ ಬಫೆಟ್ ರಾಕೇಶ್ ಜುಂಜುನ್ವಾಲಾ ಯಶಸ್ಸಿನ ಗುಟ್ಟೇನು?

ನಿಫ್ಟಿ 50 ಸೂಚ್ಯಂಕವು ಕಳೆದ 17-18 ತಿಂಗಳಿಂದ ಹೂಡಿಕೆದಾರರಿಗೆ ಝೀರೊ ರಿಟರ್ನ್‌ ಕೊಟ್ಟಿದೆ. ಕಳೆದ 25 ವರ್ಷಗಳ ಮಾರುಕಟ್ಟೆ ಅಂಕಿ ಅಂಶಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಮುಂದೆ ಸ್ಟಾಕ್‌ ಮಾರ್ಕೆಟ್‌ನಲ್ಲಿ ಸೂಚ್ಯಂಕಗಳ ಗಣನೀಯ ಏರಿಕೆ ಆಗಲೂ ಬಹುದು ಎನ್ನುತ್ತಾರೆ ತಜ್ಞರು. 2001ರಿಂದೀಚೆಗೆ ಪ್ರತಿ ಬಾರಿ 17-18 ತಿಂಗಳು ಸೂಚ್ಯಂಕ ಕುಸಿತದ ಬಳಿಕ 30 ಪರ್ಸೆಂಟ್‌ ತನಕ ಏರಿಕೆಯೂ ಆಗಿದೆ.

ಬ್ರೆಂಟ್‌ ಕ್ರೂಡ್‌ ಆಯಿಲ್‌ ದರವು 2022ರಿಂದ ಮೊದಲ ಬಾರಿಗೆ ಪ್ರತಿ ಬ್ಯಾರಲ್‌ಗೆ 117 ಡಾಲರ್‌ಗೆ ಏರಿಕೆಯಾಯಿತು. ಮತ್ತೊಂದು ಕಡೆ ಅಮೆರಿಕದ ಬಾಂಡ್‌ ಉತ್ಪತ್ತಿ 2 ಪರ್ಸೆಂಟ್‌ನಿಂದ 4.21 ಪರ್ಸೆಂಟ್‌ಗೆ ಏರಿಕೆಯಾಗಿದೆ. ಹರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್‌ ನಿರ್ಬಂಧ ಹಾಕಿರುವುದು ಇದಕ್ಕೆ ಕಾರಣವಾಗಿದೆ. ಭಾರತವು 85 ಪರ್ಸೆಂಟ್‌ ನಷ್ಟು ಕಚ್ಚಾ ತೈಲ ಅಗತ್ಯಗಳಿಗೆ ಆಮದನ್ನು ಅವಲಂಬಿಸಿದೆ. ಪ್ರತಿ ಬ್ಯಾರಲ್‌ ದರದಲ್ಲಿ 1 ಡಾಲರ್‌ ಏರಿಕೆ ಕೂಡ ಆಮದು ಬಿಲ್‌ನಲ್ಲಿ ವಾರ್ಷಿಕ 16,000 ಕೋಟಿ ರುಪಾಯಿ ಏರಿಸುತ್ತದೆ.

ಡಾಲರ್‌ ಎದುರು ರುಪಾಯಿ ಮೌಲ್ಯದಲ್ಲಿ ಸೋಮವಾರ ಒಂದೇ ದಿನ 58 ಪೈಸೆ ಇಳಿಕೆಯಾಗಿದ್ದು 92 ರುಪಾಯಿ 35 ಪೈಸೆಗೆ ಇಳಿಯಿತು. ಇರಾನ್ - ಇಸ್ರೇಲ್‌ - ಅಮೆರಿಕ ನಡುವಣ ಸಮರ ಶೀಘ್ರ ಮುಕ್ತಾಯವಾಗುವ ಲಕ್ಷಣವೂ ಕಾಣಿಸುತ್ತಿಲ್ಲ.

ಮೀಶೋ ಕಂಪನಿಯ ಷೇರುಗಳ ದರದಲ್ಲಿ ಶೇಕಡಾ 10 ಇಳಿಕೆಯಾಗಿದೆ. ಇದಕ್ಕೆ ಕಾರಣ ಆದಾಯ ತೆರಿಗೆ ಇಲಾಖೆಯು ಕಂಪನಿಗೆ 1,500 ಕೋಟಿ ರುಪಾಯಿಗಳ ಟ್ಯಾಕ್ಸ್‌ ಡಿಮಾಂಡ್‌ ನೋಟಿಸ್‌ ಕಳಿಸಿರುವುದು. ಅಂದರೆ ಮೂರನೇ ತ್ರೈಮಾಸಿಕದ ಆದಾಯದ ಅರ್ಧದಷ್ಟು ಆಗಿದೆ. ಆಗ ಕಂಪನಿ 3,517 ಕೋಟಿ ರುಪಾಯಿ ಆದಾಯ ಗಳಿಸಿತ್ತು.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (IOCL), ಹಿಂದುಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (HPCL) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (BPCL) ಷೇರು ದರದಲ್ಲಿ ಸೋಮವಾರ 9% ಇಳಿಕೆ ದಾಖಲಾಯಿತು. ರೇಟಿಂಗ್‌ ಏಜೆನ್ಸಿ ಯುಬಿಎಸ್‌ ಇವುಗಳ ರೇಟಿಂಗ್‌ ಅನ್ನು ಡೌನ್‌ ಗ್ರೇಡ್‌ ಮಾಡಿರುವುದು ಇದಕ್ಕೆ ಕಾರಣ.

ಓಯೊ ಸಂಸ್ಥಾಪಕ ಈಗ ಭಾರತದ ಅತ್ಯಂತ ಕಿರಿಯ ಬಿಲಿಯನೇರ್!

ಮಾರುಕಟ್ಟೆ ನಿಯಂತ್ರಕ ಸೆಬಿಯು ಈಕ್ವಿಟಿ ಮ್ಯೂಚುವಲ್‌ ಫಂಡ್‌ ಗಳಿಗೆ ತಮ್ಮ ಹೂಡಿಕೆಯಲ್ಲಿ 35 ಪರ್ಸೆಂಟ್‌ ತನಕ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಿದೆ. ಇದರಿಂದ ಮ್ಯೂಚುವಲ್‌ ಫಂಡ್‌ ಮ್ಯಾನೇಜರ್‌ ಗಳಿಗೆ ಮಾರುಕಟ್ಟೆಯ ಏರಳಿತಗಳ ಸಂದರ್ಭ ರಿಸ್ಕ್‌ ಅನ್ನು ನಿರ್ವಹಿಸಲು ಅನುಕೂಲಕರವಾಗಲಿದೆ.