ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್‌ನ 15 ತಿಂಗಳ ಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಪಂಚಪ್ರಾಣ; ದಿನವೂ ಫೋಟೊಕ್ಕೆ ಸ್ವೀಟ್ ಅರ್ಪಣೆ
Suniel Shetty: ತಮ್ಮ 15 ತಿಂಗಳ ಮೊಮ್ಮಗಳು ಇವಾರಾ ಪ್ರತಿದಿನ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊಕ್ಕೆ ಸ್ವೀಟ್ ಅರ್ಪಿಸುತ್ತಾಳೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ತಿಳಿಸಿದ್ದಾರೆ. 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ, ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಮತ್ತು ಸುನೀಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ದಂಪತಿಗೆ 2025ರ ಮಾರ್ಚ್‌ನಲ್ಲಿ ಇವಾರಾ ಜನಿಸಿದಳು.
ಸಾಂದರ್ಭಿಕ ಚಿತ್ರ -
ಮುಂಬೈ, ಜೂ. 27: ಸತತ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿ (Narendra Modi) ಜಗತ್ತಿನ ಗಮನ ಸೆಳೆದಿದ್ದಾರೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ಯಾವುದೇ ಸಮಾರಂಭವಿರಲಿ ಅಥವಾ ತಮ್ಮ ನಿವಾಸಕ್ಕೆ ಭೇಟಿ ನೀಡುವ ಮಕ್ಕಳಿರಲಿ ಮೋದಿ ಅವರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ. ಅವರೊಂದಿಗೆ ಆಟವಾಡುತ್ತಾರೆ, ತಮಗಿಂತ ಹಿರಿಯರು ಕಂಡರೆ ಅವರು ಜನ ಸಾಮಾನ್ಯರಾಗಿದ್ದರೂ ಅವರ ಕಾಲಿಗೆರಗುತ್ತಾರೆ. ಇದೇ ಕಾರಣಕ್ಕೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೋದಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ತಮ್ಮ 15 ತಿಂಗಳ ಮೊಮ್ಮಗಳು ಇವಾರಾ (Evaarah) ಕೂಡ ಮೋದಿಯ ದೊಡ್ಡ ಅಭಿಮಾನಿ ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಮಾತನಾಡಿದರು.
2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ, ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಮತ್ತು ಸುನೀಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ದಂಪತಿಗೆ 2025ರ ಮಾರ್ಚ್‌ನಲ್ಲಿ ಇವಾರಾ ಜನಿಸಿದಳು. ಅವಳಿಗೆ ಈಗ ಸುಮಾರು 15 ತಿಂಗಳು. ಅವಳು ಕೂಡ ಮೋದಿಯನ್ನು ಗುರುತಿಸುತ್ತಾಳೆ. ಪ್ರತಿ ದಿನ ಮೋದಿ ಫೋಟೊಕ್ಕೆ ಸ್ವೀಟ್ ಅರ್ಪಿಸುತ್ತಾಳೆ ಎನ್ನುವ ಅಚ್ಚರಿಯ ಸಂಗತಿಯನ್ನು ಸುನೀಲ್ ಶೆಟ್ಟಿ ಬಹಿರಂಗಪಡಿಸಿದ್ದಾರೆ.
ಸುನೀಲ್ ಶೆಟ್ಟಿ ಅವರ ಸಂದರ್ಶನ:
Sunil Shetty revealed that his 15‑month‑old granddaughter has a picture of Narendra Modi in a book next to Sai Baba. She performs Modi’s pooja, even offering laddus to his photo from a Ganesh Ji mandir because he is seen as divine. This shows just how far Bollywood has fallen pic.twitter.com/wTxfc5OdGa
— r (@bekhayalime) June 26, 2026
ಸುನೀಲ್ ಶೆಟ್ಟಿ ಹೇಳಿದ್ದೇನು?
ʼʼಇವಾರಾ ಪ್ರತಿದಿನ ಬೆಳಗ್ಗೆ ಪ್ರಧಾನಿ ಮೋದಿ ಫೋಟೊದ ಮುಂದೆ ಸ್ವೀಟ್ ಇಡುತ್ತಾಳೆ. ಹೀಗೆ ಮಾಡುವಂತೆ ಅವಳಿಗೆ ಯಾರೂ ಹೇಳಿಕೊಟ್ಟಿಲ್ಲ. ಅವಳೇ ರೂಢಿಸಿಕೊಂಡ ಹವ್ಯಾಸ ಇದು. ಮೋದಿ ಅವರಲ್ಲಿ ಏನೋ ಸೆಳೆತವಿದೆ ಎನ್ನುವುದಕ್ಕೆ ಇದೇ ಉದಾಹರಣೆʼʼ ಎಂದು ಸುನೀಲ್ ಶೆಟ್ಟಿ ವಿವರಿಸಿದ್ದಾರೆ.
ಮೊಮ್ಮಗಳ ಬಗ್ಗೆ ಸುನೀಲ್ ಶೆಟ್ಟಿ ಪೋಸ್ಟ್ ಫುಲ್ ವೈರಲ್
ʼʼನಾನು ಮೋದಿಯ ದೊಡ್ಡ ಅಭಿಮಾನಿ. ಅದನ್ನು ಹಿಂದೆಯೂ ಅನೇಕ ಬಾರಿ ಹೇಳಿದ್ದೇನೆ. ಪಕ್ಷದ ಬಗ್ಗೆ ನಾನು ಹೇಳುತ್ತಿಲ್ಲ, ಬದಲು ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದೇನೆ. ರಾಜಕೀಯ ನಾಯಕರಾಗಿ ನನ್ನನ್ನು ಆಕರ್ಷಿಸಿದ್ದು ಅವರೊಬ್ಬರೇ. ದೇಶವನ್ನೇ ಪ್ರೀತಿಸುವಷ್ಟು ನಾನು ಮೋದಿ ಅವರನ್ನು ಪ್ರೀತಿಸುತ್ತೇನೆ. ನನ್ನ ಮಗಳಿಗೆ 15 ತಿಂಗಳು ಈಗ. ವಿಮಾನ ನಿಲ್ದಾಣವೊಂದರಲ್ಲಿ ಒಂದುದಿನ ಅಜ್ಜಿ ಅವಳಿಗೆ ಮೋದಿ ಬಗ್ಗೆ ತಿಳಿಸಿದರು. ಅದಾದ ಬಳಿಕ ಅವಳು ಪ್ರತಿದಿನ ಬೆಳಗ್ಗೆ ಸಾಯಿ ಬಾಬಾ ಮತ್ತು ಮೋದಿ ಅವರ ಫೋಟೊ ನೋಡುತ್ತಾಳೆ. ʼಮೋದಿ ಜಿʼ ಎಂದು ಕರೆಯುತ್ತಾಳೆ. ಮೋದಿ ಫೋಟೊಕ್ಕೆ ಸಿಹಿ ಅರ್ಪಿಸುತ್ತಾಳೆ. ಹಾಗೆ ಮಾಡುವಂತೆ ನಾವ್ಯಾರೂ ಆಕೆಗೆ ತಿಳಿಸಿಲ್ಲ. ಹಾಗಿದ್ದರೂ ಅಕೆ ಹಾಗೆ ಮಾಡುತ್ತಿದ್ದಾಳೆ ಎಂದರೆ ಅವರಲ್ಲಿ ಏನೋ ಮ್ಯಾಜಿಕ್ ಇದೆʼʼ ಎಂದು ಟೈಮ್ಸ್ ನೌ ಸಂದರ್ಶನದಲ್ಲಿ ಹೇಳಿದ್ದಾರೆ.
ಆಮೀರ್ ಖಾನ್‌ಗಿದ್ಯಾ ಅಂಡರ್‌ವರ್ಲ್ಡ್‌ನಿಂದ ಜೀವ ಬೆದರಿಕೆ; ಸುನೀಲ್ ಶೆಟ್ಟಿ ಬಿಚ್ಚಿಟ್ಟ ಆ ಭಯಾನಕ ಸಂಗತಿ ಏನು?
ಮಗಳ ಬಗ್ಗೆ ಹೇಳಿದ್ದ ಸುನೀಲ್ ಶೆಟ್ಟಿ
ಇದಕ್ಕೂ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುನೀಲ್ ಶೆಟ್ಟಿ ತಮ್ಮ ಮಗಳು ಆಥಿಯಾ ಶೆಟ್ಟಿ, ಇವಾರಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ʼʼಇವಾರಾ ನೋಡಲು ಆಥಿಯಾ ರೀತಿಯೇ ಇದ್ದಾಳೆ. ಅವಳ 2.0 ವರ್ಷನ್. ನನ್ನ ಪ್ರತಿ ಬಿಡುವಿನ ಸಮಯವನ್ನು ಅವಳೊಂದಿಗೆ ಕಳೆಯುತ್ತೇನೆʼʼ ಎಂದಿದ್ದರು. ಜತೆಗೆ ಇವಾರಾಳನ್ನು ಮನೆಯ ಲಕ್ಷ್ಮೀ ಎಂದು ಬಣ್ಣಿಸಿದ್ದರು.
ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.