ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಲಕ ರೂಪದ ರಾಕ್ಷಸ: 9 ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರ ಎಸಗಿದ 12 ವರ್ಷದ ಹುಡುಗ; ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಪತ್ತೆ

Gorakhpur Horror: ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಶ್ಲೀಲ ವಿಡಿಯೊ ವೀಕ್ಷಿಸುವ ಚಟ ಬೆಳೆಸಿಕೊಂಡಿರುವ 12 ವರ್ಷದ ಬಾಲಕನೊಬ್ಬ 9 ತಿಂಗಳ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಗಂಭೀರ ಗಾಯಗೊಂಡಿರುವ ಬಾಲಕಿಗೆ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

9 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 12 ವರ್ಷದ ಬಾಲಕ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Jun 21, 2026 9:25 PM

ಲಖನೌ, ಜೂ. 21: ದೇಶವೇ ಬೆಚ್ಚಿಬೀಳಿಸುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಅಶ್ಲೀಲ ವಿಡಿಯೊ ವೀಕ್ಷಿಸುವ ಚಟ ಬೆಳೆಸಿಕೊಂಡಿರುವ 12 ವರ್ಷದ ಬಾಲಕನೊಬ್ಬ 9 ತಿಂಗಳ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ (Gorakhpur Horror). ಸದ್ಯ ಪೊಲೀಸರು ಕೃತ್ಯ ಎಸಗಿದ ಬಾಲಕನ್ನು ಭಾನುವಾರ (ಜೂನ್‌ 21) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆತನ ಹಲವು ಅಪರಾಧಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ (Uttar Pradesh News). ಮಕ್ಕಳಲ್ಲಿ ಹೆಚ್ಚುತ್ತಿರುವ ಈ ರೀತಿಯ ವಿಕೃತ ಮನೋಭಾವ, ಕೆಟ್ಟ ಪ್ರವೃತ್ತಿ ನಾಗರಿಕ ಸಮಾಜದ ಕಳವಳಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಗೋರಾಖ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರು ಈ ಬಗ್ಗೆ ಮಾಹಿತಿ ನೀಡಿ, ಕೃತ್ಯ ಎಸಗುವ ಮುನ್ನ ಬಾಲಕ ಮದ್ಯ ಸೇವಿಸಿ, ಅಶ್ಲೀಲ ವಿಡಿಯೊ ವೀಕ್ಷಿಸಿದ್ದ ಎಂದು ತಿಳಿಸಿದ್ದಾರೆ. ತಾಯಿ ಬಳಿ ಮಲಗಿದ್ದ ಮಗುವನ್ನು ಬಾಲಕ ಎತ್ತಿಕೊಂಡು ಹೋಗಿ ಆಕೆಯ ಮೇಲೆ ದೌರ್ಜನ್ಯ ಎಸಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ. ಗುಲರಿಹಾ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕನ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೊ ಕಂಡು ಬಂದಿದ್ದು, 100ಕ್ಕೂ ಹೆಚ್ಚು ಪೋರ್ನ್‌ ವೆಬ್‌ಸೈಟ್‌ ಸರ್ಚ್‌ ಮಾಡಿರುವುದು ಪತ್ತೆಯಾಗಿದೆ.

ಒಂದೇ ದಿನ 2 ಪ್ರತ್ಯೇಕ ಸ್ಥಳದಲ್ಲಿ ಪ್ರಿಯಕರ, ಅಪರಿಚಿತನಿಂದ ಯುವತಿ ಮೇಲೆ ಅತ್ಯಾಚಾರ

ಘಟನೆ ವಿವರ

ಕುಟುಂಬಸ್ಥರ ಪ್ರಕಾರ, ಶುಕ್ರವಾರ ಮುಂಜಾನೆ 2 ಗಂಟೆಗೆ ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ತಾಯಿ ಪಕ್ಕ ಮಲಗಿದ್ದ ಮಗು ಕಾಣಿಸುತ್ತಿಲ್ಲ ಎಂದು ಗಾಬರಿಗೊಂಡು ಹುಡುಕಾಟ ನಡೆಸಲಾಯಿತು. ಹೊಲ-ಸುತ್ತಮುತ್ತ ಪ್ರದೇಶಗಳಲ್ಲಿ ಎಲ್ಲಿಯೂ ಮಗು ಕಂಡು ಬರಲಿಲ್ಲ. ಶನಿವಾರ ಬೆಳಗ್ಗೆ ಮನೆಯಿಂದ 500 ಮೀಟರ್‌ ದೂರದಲ್ಲಿ ಟಿನ್‌ ಶೆಡ್‌ ಒಂದರಲ್ಲಿ ಕೊನೆಗೂ ಶಿಶು ಪತ್ತೆಯಾಯಿತು. ಈ ವೇಳೆ ಆಕೆ ರಕ್ತದ ಮಡುವಿನಲ್ಲಿ ಮುಳುಗಿದ್ದರೆ, ಮೈ ತುಂಬ ಗಾಯ ಕಂಡು ಬಂದಿತ್ತು.

ಕೂಡಲೇ ಮನೆಯವರು ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬಿಆರ್‌ಡಿ ಮೆಡಿಕಲ್‌ ಕಾಲೇಜಿಗೆ ದಾಖಿಸಲಾಯಿತು. ಪ್ರಾಥಮಿಕ ಪರಿಶೀಲನೆ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿ ಮುಂದುವರಿದಿದೆ.

ತನಿಖೆ ವೇಳೆ ಪೊಲೀಸರು ಕುಟುಂಬಸ್ಥರು, ಬಾಲಕಿಯ ಹೆತ್ತವರು ಮತ್ತು ಅಜ್ಜ-ಅಜ್ಜಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಬಾಲಕ ಮತ್ತು ಕುಟುಂಬ ಕೇವಲ 3 ದಿನಗಳ ಹಿಂದೆಯಷ್ಟೆ ಚಂಡೀಗಢದಿಂದ ಗೋರಾಖ್‌ಪುರಕ್ಕೆ ಆಗಮಿಸಿತ್ತು. ಸದ್ಯ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.

ಕುಡಿತದ ಮತ್ತಿನಲ್ಲಿ ಬೀದಿನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ

6 ವರ್ಷದ ನೆರೆ ಮನೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ 9ನೇ ತರಗತಿಯ ಬಾಲಕ

ಅಗರ್ತಲ: 9ನೇ ತರಗತಿಯ ಬಾಲಕನೊಬ್ಬ ತನ್ನ ನೆರೆಮನೆಯ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಕೆಲವು ದಿನಗಳ ಹಿಂದೆ ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ನಡೆದಿತ್ತು. ಘಟನೆ ಬಳಿಕ ಆರೋಪಿ ಬಾಲಕನನ್ನು ಬಂಧಿಸಲಾಯಿತು. ಹೂವುಗಳನ್ನು ತೋರಿಸುವುದಾಗಿ ಆಮಿಷವೊಡ್ಡಿ ಬಾಲಕ ಈ ಕೃತ್ಯ ಎಸಗಿದ್ದ. ಬಾಲಕಿ ತನ್ನ ಅಕ್ಕನೊಂದಿಗೆ ಮನೆಯಲ್ಲಿದ್ದಾಗ ಈ ಘಟನೆ ನಡೆದಿದ್ದು, ಈ ವೇಳೆ ಆಕೆಯ ಪೋಷಕರು ಹೊಲಕ್ಕೆ ಹೋಗಿದ್ದರು.

ಅಪರಾಧ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.