ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಂಡನನ್ನೇ ಕೊಲ್ಲಲು ಪ್ರೇಮಿಗೆ ಸಹಾಯ ಮಾಡಿದ ಮಹಿಳೆ; ನಿಗೂಢ ಪ್ರಕರಣವನ್ನು ಭೇದಿಸಿದ ಆಗ್ರಾ ಪೊಲೀಸರು

ಆಗ್ರಾದ ಸೈಯಾನ್ ಪ್ರದೇಶದಲ್ಲಿ ಏಪ್ರಿಲ್ 1ರಂದು ರಾತ್ರಿ ಪತ್ತೆಯಾದ ಶವದ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳೆಯೇ ತನ್ನ ಗಂಡನನ್ನು ಕೊಲ್ಲಲು ಪ್ರೇಮಿಗೆ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ. ಮೃತದೇಹದ ತೋಳಿನ ಮೇಲಿದ್ದ ಹಚ್ಚೆಯು ಪ್ರಕರಣವನ್ನು ಭೇದಿಸಲು ಸಹಾಯ ಮಾಡಿತ್ತು ಎನ್ನಲಾಗಿದೆ.

ಮೃತ ದೇಹದಲ್ಲಿದ್ದ ಹಚ್ಚೆ ಪ್ರಕರಣ ಭೇದಿಸಲು ಸಹಾಯ ಮಾಡಿದ್ದು ಹೇಗೆ?

ಸಂಗ್ರಹ ಚಿತ್ರ -

ಆಗ್ರಾ: ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಗಂಡನನ್ನು ಕೊಂದಿರುವ (Murder case) ಭಯಾನಕ ಘಟನೆ ಆಗ್ರಾದಲ್ಲಿ (agra crime news) ನಡೆದಿದೆ. ಮೃತದೇಹದ ತೋಳಿನ ಮೇಲಿದ್ದ ಹಚ್ಚೆಯು ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿತ್ತು. ಆಗ್ರಾದ ಸೈಯಾನ್ ಪ್ರದೇಶದಲ್ಲಿ ಏಪ್ರಿಲ್ 1ರಂದು ರಾತ್ರಿ ಅರ್ಧ ಸುಟ್ಟಿದ್ದ ಶವವೊಂದು ಪತ್ತೆಯಾಗಿತ್ತು. ಇದರ ರಹಸ್ಯವನ್ನು ಇದೀಗ ಪೊಲೀಸರು ಭೇದಿಸಿದ್ದಾರೆ. ನಾಪತ್ತೆ ದೂರು, ಅರ್ಧ ಸುಟ್ಟ ಶವ, ಮದ್ಯದ ಬಾಟಲಿಗಳ ಮೇಲಿನ ಕ್ಯೂಆರ್ ಕೋಡ್‌ಗಳು ತನಿಖೆಯ ವೇಳೆ ಪೋಲೀಸರ (agra police) ಕೈ ಸೇರಿದ್ದು, ಇದು ಕೊಲೆಯ ಹಿಂದಿರುವ ಕಾರಣವನ್ನು ಬಯಲು ಮಾಡಿದೆ.

ಆಗ್ರಾದ ಸೈಯಾನ್ ಪ್ರದೇಶದಲ್ಲಿ ಏಪ್ರಿಲ್ 1ರಂದು ರಾತ್ರಿ ಅರ್ಧ ಸುಟ್ಟ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಶವದ ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿತ್ತು. ದೇಹವನ್ನು ಗುರುತಿಸುವುದು ಸವಾಲಾಗಿತ್ತು. ಈ ಸಂದರ್ಭದಲ್ಲಿ ಶವದ ಮುಂಗೈ ಮೇಲಿದ್ದ ಹಚ್ಚೆಯಲ್ಲಿ ಮೃತ ವ್ಯಕ್ತಿಯನ್ನು ಲೋಕೇಂದ್ರ ಎಂದು ಗುರುತಿಸಲಾಗಿತ್ತು. ಇದಕ್ಕೂ ಮೊದಲು ಲೋಕೇಂದ್ರ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಕೊನೆಯದಾಗಿ ಅವರನ್ನು ಮಹೇಶ್ ಪ್ರಜಾಪತಿ ಜೊತೆ ನೋಡಿದ್ದಾಗಿ ಹೇಳಿಕೊಂಡಿದ್ದರು.

ಉತ್ತರ ಪ್ರದೇಶದಲ್ಲಿ ಶಂಕಿತ ಐಸಿಸ್ ಭಯೋತ್ಪಾದಕನ ಬಂಧನ; ಮದ್ದುಗುಂಡು, ದಾಖಲೆ ವಶ

ಲೋಕೇಂದ್ರ ಸಾವಿನ ರಹಸ್ಯವನ್ನು ಭೇದಿಸಲು ಪೊಲೀಸರು ಐದು ತಂಡಗಳನ್ನು ರಚಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿದ್ದ ಮದ್ಯದ ಬಾಟಲಿಗಳು, ಕೆಲವು ಕಾಗದದ ತುಂಡುಗಳನ್ನು ವಶಪಡಿಸಿಕೊಂಡರು. ಪುರಾವೆಗಳನ್ನು ಪರಿಶೀಲಿಸಿದ ಬಳಿಕ ಲೋಕೇಂದ್ರನ ಪತ್ನಿಯು ಮಹೇಶ್ ಪ್ರಜಾಪತಿ ಮತ್ತು ಅವನ ಸ್ನೇಹಿತ ಧರ್ಮವೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕೇಂದ್ರನ ಪತ್ನಿಯೊಂದಿಗೆ ಮಹೇಶ್ ಸಂಬಂಧ ಹೊಂದಿದ್ದು, ಇದು ಇತ್ತೀಚೆಗೆ ಲೋಕೇಂದ್ರನಿಗೆ ತಿಳಿದಿತ್ತು. ಬಳಿಕ ತಾವಿಬ್ಬರು ಸೇರಿ ಆತನ ಕೊಲೆಗೆ ಸಂಚು ರೂಪಿಸಿರುವುದಾಗಿ ಮಹೇಶ್ ವಿಚಾರಣೆ ವೇಳೆ ತಿಳಿಸಿದ್ದಾನೆ.

ಕೊಲೆ ನಡೆದಿದ್ದು ಹೇಗೆ?

ಏಪ್ರಿಲ್ 1ರಂದು ಲೋಕೇಂದ್ರ ಮನೆಯಿಂದ ಹೊರಟಾಗ ಆತನ ಹೆಂಡತಿ ಮಹೇಶ್‌ಗೆ ಕರೆ ಮಾಡಿದ್ದಳು. ದಾರಿಯಲ್ಲಿ ಲೋಕೇಂದ್ರನನ್ನು ಭೇಟಿಯಾದ ಮಹೇಶ್ ಮದ್ಯ ಕುಡಿಯಲು ಕರೆದಿದ್ದಾನೆ.

ಅವಳಿ ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿ ಹತ್ಯೆಗೈದ ನೀಚ ತಂದೆ; ಗಂಡು ಮಗು ಜನಿಸದ್ದಕ್ಕೆ ಈ ದುಷ್ಕೃತ್ಯ

ಈ ವೇಳೆ ಧರ್ಮವೀರ್ ಕೂಡ ಅವರ ಜೊತೆ ಸೇರಿದ್ದಾನೆ. ಹೊಲದಲ್ಲಿ ಕುಳಿತು ಆಹಾರ, ಮದ್ಯ ಸೇವಿಸಿದ ಬಳಿಕ ಮಹೇಶ್ ಮತ್ತು ಧರ್ಮವೀರ್ ಸೇರಿ ಲೋಕೇಂದ್ರನನ್ನು ಉಸಿರುಗಟ್ಟಿಸಿ ಪ್ರಜ್ಞೆ ತಪ್ಪಿದರು. ಬಳಿಕ ಆತನ ಮೇಲೆ ಪೆಟ್ರೋಲ್ ಸುರಿದು ಗೋಧಿಯ ಮೂಟೆಯನ್ನು ಇಟ್ಟು ಬೆಂಕಿ ಹಚ್ಚಿದ್ದರು ಎಂಬುದಾಗಿ ಆರೋಪಿ ಮಹೇಶ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎಂದು ಪಶ್ಚಿಮ ಆಗ್ರಾದ ಉಪ ಪೊಲೀಸ್ ಆಯುಕ್ತ ಆದಿತ್ಯ ಕುಮಾರ್ ತಿಳಿಸಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.