IPL 2026: 28 ರನ್‌ಗೆ ಔಟಾದರೂ ರೋಹಿತ್ ಶರ್ಮಾರ ದೊಡ್ಡ ದಾಖಲೆ ಮುರಿದ ವಿರಾಟ್ ಕೊಹ್ಲಿ!
Virat Kohli Creates history: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ 28 ರನ್ ಗಳಿಸಿದ ಬಳಿಕ ವಿರಾಟ್ ಕೊಹ್ಲಿ ಔಟ್ ಆದರು. ಆದರೂ ಅವರು, ರೋಹಿತ್ ಶರ್ಮಾರ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ.
ರೋಹಿತ್ ಶರ್ಮಾ ದಾಖಲೆ ಮುರಿದ ವಿರಾಟ್ ಕೊಹ್ಲಿ. -
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ( Virat Kohli) ಈಗಾಗಲೇ ಅನೇಕ ದಾಖಲೆಯನ್ನು ಬರೆದಿದ್ದಾರೆ. ಇದೀಗ ಅವರ ಐಪಿಎಲ್ ದಾಖಲೆಗಳ ಸಾಲಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಭಾನುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಐಪಿಎಲ್ (IPL 2026) ಟೂರ್ನಿಯ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ ಕೊಹ್ಲಿ, 18 ಎಸೆತಗಳಲ್ಲಿ 28 ರನ್ ಗಳಿಸಿ ಅನ್ಷುಲ್ ಕಾಂಬೋಜ್‌ಗೆ ವಿಕೆಟ್ ಒಪ್ಪಿಸಿದರು. ಇದರ ಹೊರತಾಗಿಯೂ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾರ (Rohit Sharma) ದೊಡ್ಡ ದಾಖಲೆಯನ್ನು ಮುರಿದಿದ್ದಾರೆ.
ಭಾನುವಾರ ನಡೆದಿದ್ದ ಎರಡನೇ ಹೆಡರ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಜೋಡಿ ಮೊದಲನೇ ವಿಕೆಟ್‌ಗೆ 37 ರನ್‌ಗಳ ಜೊತೆಯಾಟವನ್ನು ಆಡಿತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅರ್ಧಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಅದೇ ಲಯವನ್ನು ಸಿಎಸ್‌ಕೆ ಎದುರು ಮುಂದುವರಿಸಿ 18 ಎಸೆತಗಳಲ್ಲಿ 28 ರನ್ ಸಿಡಿಸಿ ಎರಡನೇ ಅರ್ಧಶತಕ ಬಾರಿಸುವ ಹಾದಿಯಲ್ಲಿದ್ದರು. ಆದರೆ, ಅನ್ಷುಲ್ ಕಾಂಬೋಜ್ ಎಸೆತದಲ್ಲಿ ಶಿವಂ ದುಬೇಗೆ ಕ್ಯಾಚ್ ಕೊಟ್ಟರು. ಇದಕ್ಕೂ ಮುನ್ನ ಕೊಹ್ಲಿಯ ಸುಲಭ ಕ್ಯಾಚ್ ಅನ್ನು ದುಬೇ ಕೈ ಚೆಲ್ಲಿದ್ದರು.
IPL 2026: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಂಜು ಸ್ಯಾಮ್ಸನ್ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಭವಿಷ್ಯ!
ರೋಹಿತ್ ಶರ್ಮಾ ದಾಖಲೆ ಮುರಿದ ಕಿಂಗ್ ಕೊಹ್ಲಿ
ಐಪಿಎಲ್ ಟೂರ್ನಿಯಲ್ಲಿ ಏಕೈಕ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ. ಕೊಹ್ಲಿ, ಸಿಎಸ್‌ಕೆ ಎದುರು ಆಡಿದ 36ನೇ ಇನಿಂಗ್ಸ್‌ನಲ್ಲಿ 1174 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಎದುರು 1161 ರನ್ ಗಳಿಸಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾರನ್ನು ಆರ್‌ಸಿಬಿ ಮಾಜಿ ನಾಯಕ ಹಿಂದಿಕ್ಕಿದ್ದಾರೆ.
Our third highest total in #TATAIPL. 🫡
— Royal Challengers Bengaluru (@RCBTweets) April 5, 2026
Over to the bowlers now. 🙌 pic.twitter.com/fZv3u4SQ8F
ಏಕೈಕ ಐಪಿಎಲ್ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು
ವಿರಾಟ್ ಕೊಹ್ಲಿ- 1174 vs ಚೆನ್ನೈ ಸೂಪರ್ ಕಿಂಗ್ಸ್
ರೋಹಿತ್ ಶರ್ಮಾ- 1161 vs ಕೋಲ್ಕತಾ ನೈಟ್ ರೈಡರ್ಸ್
ವಿರಾಟ್ ಕೊಹ್ಲಿ- 1159 vs ಪಂಜಾಬ್ ಕಿಂಗ್ಸ್
ಡೇವಿಡ್ ವಾರ್ನರ್- 1134 vs ಪಂಜಾಬ್ ಕಿಂಗ್ಸ್
ವಿರಾಟ್ ಕೊಹ್ಲಿ- 1130 vs ಡೆಲ್ಲಿ ಕ್ಯಾಪಿಟಲ್ಸ್
IPL 2026: ʻಬೇಕಿದ್ದರೆ ನನ್ನನ್ನು ಬೈದು ಬಿಡಿʼ-ಪಂಜಾಬ್ ಸೋಲಿನ ಬಳಿಕ ಸಿಎಸ್‌ಕೆಯನ್ನು ಟೀಕಿಸಿದ ಅಶ್ವಿನ್!
250 ರನ್ ಕಲೆ ಹಾಕಿದ ಆರ್‌ಸಿಬಿ
ವಿರಾಟ್ ಕೊಹ್ಲಿ ಬೇಗ ವಿಕೆಟ್ ಒಪ್ಪಿಸಿದರೂ, ಟಿಮ್ ಡೇವಿಡ್ (70* ರನ್) ಹಾಗೂ ದೇವದತ್ ಪಡಿಕ್ಕಲ್ (50) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 250 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಸಿಎಸ್‌ಕೆಗೆ 251 ರನ್‌ಗಳ ಗುರಿಯನ್ನು ನೀಡಿತು. ಫಿಲ್ ಸಾಲ್ಟ್ 46 ರನ್ ಹಾಗೂ ರಜತ್ ಪಾಟಿದಾರ್ ಅಜೇಯ 48 ರನ್ ಸಿಡಿಸಿದರು.