ಕ್ಲಾಸ್ ರೂಂನಲ್ಲೇ ಬಾಲಕಿ ಮೇಲೆ ಮರಕೊಯ್ಯುವ ಯಂತ್ರದಿಂದ ಹಲ್ಲೆ ಎಸಗಿದ ಪಾಗಲ್ ಪ್ರೇಮಿ ಕಾಲಿಗೆ ಗುಂಡೇಟು; ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವನಿಗೆ ತಕ್ಕ ಶಾಸ್ತಿ
Andhra Chainsaw Attacker: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್ ಹೈಸ್ಕೂಲ್‌ಗೆ ಶನಿವಾರ ನುಗ್ಗಿ ಬಾಲಕಿಯ ಮೇಲೆ ಚೈನ್‌ಸಾ ಮೂಲಕ ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದ ಪಾಗಲ್ ಪ್ರೇಮಿ ಹೇಮಂತ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಆತ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಅನಿವಾರ್ಯವಾಗಿ ಪೊಲೀಸರು ಶೂಟೌಟ್ ಮಾಡಿದ್ದಾರೆ.
ಹೇಮಂತ್ ಮತ್ತು ಸಾಂದರ್ಭಿಕ ಚಿತ್ರ -
ಅಮರಾವತಿ, ನ. 1: ಶಾಲೆಯಲ್ಲಿ ಶನಿವಾರ (ಅಕ್ಟೋಬರ್ 31) ಬೆಳಗ್ಗೆಪಾಠ ನಡೆಯುತ್ತಿದ್ದಾಗಲೇ 10ನೇ ತರಗತಿಯ ಕೊಠಡಿಗೆ ನುಗ್ಗಿ 15 ವರ್ಷದ ವಿದ್ಯಾರ್ಥಿನಿ ಮೇಲೆ ಚೈನ್‌ಸಾ (ಮರ ಕತ್ತರಿಸುವ ಯಂತ್ರ) ಮೂಲಕ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ ಹೇಮಂತ್ ಆಲಿಯಾಸ್ ಡುಮ್ಮು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ (Andhra Chainsaw Attacker). ಹೇಮಂತ್ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಅನಿವಾರ್ಯವಾಗಿ ಫೈರಿಂಗ್ ಮಾಡಬೇಕಾಯ್ತು ಎಂದು ಮೂಲಗಳು ತಿಳಿಸಿವೆ. 6 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಹೇಮಂತ್‌ಗೆ ಗಂಭೀರ ಗಾಯವಾಗಿದೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್ ಹೈಸ್ಕೂಲ್‌ಗೆ ಶನಿವಾರ ನುಗ್ಗಿದ ಹೇಮಂತ್ ಬಾಲಕಿಯ ಮೇಲೆ ಚೈನ್‌ಸಾ ಮೂಲಕ ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ.
ಬಾಲಕಿ ಮೇಲೆ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ ಮೇಲೆ ಗುಂಡಿನ ದಾಳಿ:
Andhra Police shot the accused in yesterday’s horrific chainsaw attack on a Class 10 girl inside Raptadu Zilla Parishad High School in Anantapur district. https://t.co/FnrtSylrSZ
— 🏹 (@karna3102bc) November 1, 2026
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೇಮಂತ್‌ನನ್ನು ಆತ್ಮಕೂರು ಅರಣ್ಯ ಪ್ರದೇಶದಿಂದ ಬಂಧಿಸಿದ್ದರು. ರಾತ್ರಿಯಾಗುತ್ತಿದ್ದಂತೆ ಹೇಮಂತ್ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಶೂಟ್ ಮಾಡಿದ್ದಾರೆ. ಅಪರಾವಧ ದೃಶ್ಯನ್ನು ಮರುಸೃಷ್ಟಿಸಲು ಹೇಮಂತ್‌ನನ್ನು ರಾಪ್ತಾಡುವಿಗೆ ಕರೆದೊಯ್ಯುವ ವೇಳೆ ಈ ಘಟನೆ ಸಂಭವಿಸಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಆತ ತಪ್ಪಿಸಿಕೊಳ್ಳಲು ಮುಂದಾಗಿದ್ದ.
ಶಾಲೆಯೊಳಗೆ ನುಗ್ಗಿ ಗರಗಸದಿಂದ ಬಾಲಕಿ ಮೇಲೆ ಹಲ್ಲೆ ಮಾಡಿದ ಯುವಕ
ʼʼಶಾಲೆಯಲ್ಲಿ ನಡೆಸಿದ ಹಲ್ಲೆಯ ದೃಶ್ಯವನ್ನು ಮರುಸೃಷ್ಟಿಸಲು ಪೊಲೀಸರು ಹೇಮಂತ್‌ನನ್ನು ರಾಪ್ತಾಡುವಿಗೆ ಕರೆದುಕೊಂಡು ಹೋಗುವಾಗ ಆತ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ದಾಳಿ ವೇಳೆ ಪೊಲೀಸರಿಗೆ ಗಾಯವಾಗಿದೆ. ಹೀಗಾಗಿ ಆತನ ವೇಳೆ ದಾಳಿ ನಡೆಸಬೇಕಾಯ್ತುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತನನ್ನು ನಿಯಂತ್ರಿಸಲು ಶೂಟೌಟ್ ನಡೆಸಿವುದು ಅನಿವಾರ್ಯವಾಗಿತ್ತು ಎಂದಿದ್ದಾರೆ. ʼʼಪೊಲೀಸರು ಆತನ ಮೇಲೆ 6 ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಹೇಮಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆʼʼ ಎಂದು ವಿವರಿಸಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿರುವ ಹೇಮಂತ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬಾಲಕಿ ಸ್ಥಿತಿ ಹೇಗಿದೆ?
ಹೇಮಂತ್ ದಾಳಿಯಿಂದ ಗಂಭೀರ ಗಾಯಗೊಂಡ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬಾಲಕಿಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಮುಂದಿನ 48 ಗಂಟೆ ಅತ್ಯಂತ ನಿರ್ಣಾಯಕವಾಗಲಿದೆ ಎಂದು ಸಚಿವ ನಾರಾ ಲೋಕೇಶ್ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ ಅವರು ಆಕೆಯ ಕುಟುಂಬದವರಿಗೆ ಸಾಂತ್ವಾನ ಹೇಳಿ ಮಾಧ್ಯಮ ಜತೆ ಮಾತನಾಡಿದರು.
ವಿಶೇಷ ಚೇತನ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿಯಿಂದ ಮಾರಣಾಂತಿಕ ಹಲ್ಲೆ; ಹೂ ಕುಂಡದಿಂದ ಥಳಿಸಿದ ವಿಡಿಯೊ ವೈರಲ್
ಏನಿದು ಘಟನೆ?
ಶಾಲೆಯಲ್ಲಿ ಶನಿವಾರ ಬೆಳಗ್ಗೆ ಪಾಠ ನಡೆಯುತ್ತಿದ್ದಾಗಲೇ 10ನೇ ತರಗತಿಯ ಕೊಠಡಿಗೆ ನುಗ್ಗಿ ವಿದ್ಯಾರ್ಥಿನಿ ಮೇಲೆ ಚೈನ್‌ಸಾ ಮೂಲಕ ಹೇಮಂತ್ ಹಲ್ಲೆ ಮಾಡಿದ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಕೂಡಲೇ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಈತ ಹುಡುಗಿಯ ದೂರದ ಸಂಬಂಧಿಯಾಗಿದ್ದು, ಕೆಲವು ದಿನಗಳಿಂದ ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.