ಅಪ್ಪ ಎಂದು ಕರೆಯುತ್ತಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿಯ ಕೃತ್ಯಕ್ಕೆ ಬೆಚ್ಚಿಬಿದ್ದ ದೇಶ
Assam Horror: ಅಸ್ಸಾಂನಲ್ಲಿ 9 ವರ್ಷದ ಬಾಲಕಿ ಮೇಲೆ 32 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ದಾರುಣ ಘಟನೆ ನಡೆದಿದೆ. ದುರಂತ ಎಂದರೆ ಅಪ್ಪ ಎಂದು ಕರೆಯುತ್ತಿದ್ದ ಬಾಲಕಿಯ ಮೇಲೆಯೇ ಈತ ಎರಗಿದ್ದಾನೆ. ಆರೋಪಿಯನ್ನು ರಾಹುಲ್ ರಾಯ್ ಆಲಿಯಾಸ್ ರಾಜು ಎಂದು ಗುರುತಿಸಲಾಗಿದೆ.
ರಾಹುಲ್ ರಾಯ್ ಮತ್ತು ಸಾಂದರ್ಭಿಕ ಚಿತ್ರ -
ದಿಸ್ಪುರ, ನ. 24: ಕಠಿಣ ಕಾನೂನು ಇದ್ದರೂ ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಅಸ್ಸಾಂನಲ್ಲಿ 9 ವರ್ಷದ ಬಾಲಕಿ ಮೇಲೆ 32 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ದಾರುಣ ಘಟನೆ ನಡೆದಿದೆ (Assam Horror). ದುರಂತ ಎಂದರೆ ಅಪ್ಪ ಎಂದು ಕರೆಯುತ್ತಿದ್ದ ಬಾಲಕಿಯ ಮೇಲೆಯೇ ಈತ ಎರಗಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅಸ್ಸಾಂನ ಸಿಲ್ಛಾರ್ನಲ್ಲಿ ಈ ದುರಂತ ಸಂಭವಿಸಿದ್ದು, ಆರೋಪಿಯನ್ನು ರಾಹುಲ್ ರಾಯ್ ಆಲಿಯಾಸ್ ರಾಜು ಎಂದು ಗುರುತಿಸಲಾಗಿದೆ.
ಆರಂಭದಲ್ಲಿ ಪ್ರಕರಣವನ್ನು ದಾಖಲಿಸಲು ಹಿಂದೇಟು ಹಾಕಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಸದ್ಯ ಪರಾರಿಯಾಗಲು ಯತ್ನಿಸಿದ ರಾಹುಲ್ ರಾಯ್ನನ್ನು ಸಿಲ್ಛಾರ್ನ ಹೊರ ವಲಯದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಬಂಧನ:
Assam: 32-Year-Old Man Arrested for Alleged Sexual Abuse of 9-Year-Old Girl A 32-year-old man named Rahul Roy has been arrested in Silchar, Assam, over the alleged sexual abuse of a 9-year-old girl. The accused was planning to marry the girl's mother, and the child affectionately called him "Baba". The mother alleged that Rahul threatened the girl and forced her to remain silent. The case came to light on November 11 after the girl's health deteriorated. The family also alleged that police initially refused to register their complaint. A case has been registered under the POCSO Act. Two police personnel have been suspended over alleged negligence, and a departmental inquiry has been initiated.
— Pasha Nadeem (@PashaNadeem3) November 24, 2026
ಘಟನೆ ವಿವರ
ಸಂತ್ರಸ್ತೆಯ ಕುಟುಂಬಸ್ಥರ ಪ್ರಕಾರ ರಾಹುಲ್ ರಾಯ್ ಬಾಲಕಿಯ ತಾಯಿಯೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದ. ರಾಹುಲ್ ರಾಯ್ಗೂ ಬಾಲಕಿಯ ತಾಯಿಗೂ ಈಗಾಗಲೇ ವಿಚ್ಛೇದನವಾಗಿದ್ದು, ಇಬ್ಬರೂ ಮದುವೆಯಾಗುವ ಯೋಜನೆ ರೂಪಿಸಿದ್ದರು. ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಭರವಸೆ ನೀಡಿ ರಾಹುಲ್, ತಾಯಿ ಮತ್ತು ಬಾಲಕಿಗೆ ಹತ್ತಿರವಾಗಿದ್ದ ಎನ್ನಲಾಗಿದೆ. ಅಲ್ಲದೆ ತಾನು ಆ ಬಾಲಕಿಯ ತಂದೆ ಎಂದೇ ಹೇಳಿಕೊಳ್ಳುತ್ತಿದ್ದ.
ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತೆಯ ಅತ್ಯಾಚಾರ-ಕೊಲೆ
ನವೆಂಬರ್ 11ರಂದು ಬಾಲಕಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಾಗ ಆತನ ಹೀನ ಕೃತ್ಯ ಬೆಳಕಿಗೆ ಬಂತು. ರಾಹುಲ್ ಹಲವು ಬಾರಿ ಈ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆಕೆಯ ತಾಯಿ ಹೇಳಿದ್ದಾರೆ.
ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು
ನವೆಂಬರ್ 11ರಂದು ಸಂತ್ರಸ್ತೆಯ ಮನೆಯವರು ರಂಗಿರ್ಖಾರಿ ಪೊಲೀಸ್ ಔಟ್ಪೋಸ್ಟ್ನಲ್ಲಿ ದೂರು ನೀಡಲು ಮುಂದಾದರೂ ಸಿಬ್ಬಂದಿ ಸ್ವೀಕರಿಸಲು ಹಿಂದೇಟು ಹಾಕಿದರು. ಅಲ್ಲದೆ ನಿರಂತರ ಮನವಿ ಮಾಡಿದರೂ ಪೊಲೀಸರು ಬಾಲಕಿ ವೈದ್ಯಕೀಯ ಪರೀಕ್ಷೆಗೆ ಮುಂದಾಗಲಿಲ್ಲ ಎಂದು ಆರೋಪ ಕೇಳಿ ಬಂದಿದೆ. ಕೊನೆಗೆ ಮನೆಯವರು ಅಡಿಷನಲ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಪಿ.ಪಿ. ಸೈಕಿಯ ಬಳಿ ತೆರಳಿ ದೂರು ನೀಡಬೇಕಾಯ್ತು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದರು. ಬಳಿಕ ರಾಹುಲ್ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಯಿತು. ಆತ ರಂಗ್ಪುರದಲ್ಲಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದರು.
ಒಡಿಶಾವನ್ನು ಬೆಚ್ಚಿಬೀಳಿಸಿದ ಅತ್ಯಾಚಾರ ಪ್ರಕರಣ: ಹತ್ತು ದಿನಗಳಲ್ಲಿ ಐದು ಸಾಮೂಹಿಕ ಅತ್ಯಾಚಾರ ದೂರು ದಾಖಲು
ಬಾಲಕಿಯ ತಾಯಿ ಹೇಳಿದ್ದೇನು?
ಮಾಧ್ಯಮಗಳ ಜತೆ ಮಾತನಾಡಿದ ಬಾಲಕಿಯ ತಾಯಿ, ರಾಹುಲ್ ಮೇಲೆ ನಂಬಿಕೆ ಇರಿಸಿ ಆತನನ್ನು ವಿವಾಹವಾಗುವ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾರೆ. ಬೆದರಿಕೆ ಹಾಕಿದ್ದರಿಂದ ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ಆರಂಭದಲ್ಲಿ ಹೇಳಿರಲಿಲ್ಲ ಎಂದೂ ತಿಳಿಸಿದ್ದಾರೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ರಾಹುಲ್ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ನಿರ್ಲಕ್ಷ್ಯದ ಆರೋಪದ ಮೇರೆಗೆ ಸಬ್ ಇನ್ಸ್ಪೆಕ್ಟರ್ ಅನಂತ ಸಿನ್ಹಾ ಮತ್ತು ಕಾನ್ಸ್ಟೇಬಲ್ ಹರಿಪಾದ ರಾಯ್ನನ್ನು ಅಮಾನತುಗೊಳಿಸಲಾಗಿದೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.