ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sheikh Hasina: ಮುಜೀಬರ್‌ ಬಯೋಪಿಕ್‌ನಲ್ಲಿ ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನ ಚರಿತ್ರೆ ಆಧಾರಿತ 'ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್' ಚಿತ್ರದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ( Sheikh Hasina) ಪಾತ್ರವನ್ನು ನಿರ್ವಹಿಸಿದ ಜನಪ್ರಿಯ ಬಾಂಗ್ಲಾದೇಶದ ನಟಿ ನುಸ್ರತ್ ಫರಿಯಾ ಅವರನ್ನು ಭಾನುವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಶೇಖ್ ಹಸೀನಾ ಪಾತ್ರದಲ್ಲಿ ನಟಿಸಿದ್ದ ಬಾಂಗ್ಲಾ ನಟಿ ಅರೆಸ್ಟ್

Profile Vishakha Bhat May 18, 2025 5:59 PM

ಢಾಕಾ: ಶೇಖ್ ಮುಜಿಬುರ್ ರೆಹಮಾನ್ ಅವರ ಜೀವನ ಚರಿತ್ರೆ ಆಧಾರಿತ 'ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್' ಚಿತ್ರದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ( Sheikh Hasina) ಪಾತ್ರವನ್ನು ನಿರ್ವಹಿಸಿದ ಜನಪ್ರಿಯ ಬಾಂಗ್ಲಾದೇಶದ ನಟಿ ನುಸ್ರತ್ ಫರಿಯಾ ಅವರನ್ನು ಭಾನುವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 31 ವರ್ಷದ ನುಸ್ರತ್ ಫರಿಯಾ ಇಂದು ಬೆಳಿಗ್ಗೆ ಥೈಲ್ಯಾಂಡ್‌ಗೆ ತೆರಳುತ್ತಿದ್ದಾಗ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ತಪಾಸಣಾ ಕೇಂದ್ರದಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸರ್ಕಾರಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಕೊಲೆ ಯತ್ನದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಿಯಾ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಬಡ್ಡಾ ವಲಯದ ಸಹಾಯಕ ಪೊಲೀಸ್ ಆಯುಕ್ತ ಶಫೀಕುಲ್ ಇಸ್ಲಾಂ ಅವರು ನಟಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಬಂಧನದ ನಂತರ ಫರಿಯಾಳನ್ನು ಢಾಕಾದ ವತಾರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂತರ ಆಕೆಯನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸ್ (ಡಿಎಂಪಿ) ಯ ಪತ್ತೇದಾರಿ ಶಾಖೆಯ (ಡಿಬಿ) ಕಚೇರಿಗೆ ವರ್ಗಾಯಿಸಲಾಗಿದೆ.

2023 ರಲ್ಲಿ ಬಿಡುಗಡೆಯಾದ 'ಮುಜೀಬ್: ದಿ ಮೇಕಿಂಗ್ ಆಫ್ ಎ ನೇಷನ್' ಚಿತ್ರದಲ್ಲಿ ಫರಿಯಾ ಹಸೀನಾ ಪಾತ್ರವನ್ನು ನಿರ್ವಹಿಸಿದ್ದಾರೆ, ಈ ಚಿತ್ರವನ್ನು ದಿವಂಗತ ನಿರ್ದೇಶಕ ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಬಾಂಗ್ಲಾದೇಶ ಮತ್ತು ಭಾರತದ ಜಂಟಿ ನಿರ್ಮಾಣವಾಗಿತ್ತು. ಫರಿಯಾರ್‌ ರೇಡಿಯೋ ಜಾಕಿ ಮತ್ತು ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು 2015 ರಲ್ಲಿ ಬಾಂಗ್ಲಾದೇಶ-ಭಾರತ ಜಂಟಿ ನಿರ್ಮಾಣದ 'ಆಶಿಕಿ: ಟ್ರೂ ಲವ್' ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು.

ಫರಿಯಾ ಹಲವಾರು ಬಾಂಗ್ಲಾದೇಶ ಮತ್ತು ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಬಂಗಾಳಿ ಚಲನಚಿತ್ರಗಳು. ಇದಲ್ಲದೆ, ಅವರು ದೂರದರ್ಶನ ನಿರೂಪಣೆ ಮತ್ತು ಮಾಡೆಲಿಂಗ್‌ನಲ್ಲಿಯೂ ಸಕ್ರಿಯರಾಗಿದ್ದರು.

ಈ ಸುದ್ದಿಯನ್ನೂ ಓದಿ: Sheikh Hasina: ಶೇಖ್‌ ಹಸೀನಾ ವಿರುದ್ಧ ಇಂಟರ್‌ಪೋಲ್‌ ಮೆಟ್ಟಿಲೇರಿದ ಬಾಂಗ್ಲಾದೇಶ

ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಬಳಿಕ ದೇಶ ತೊರೆದಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ(Sheikh Hasina) ವಿರುದ್ಧ ರೆಡ್‌ ಕಾರ್ನರ್‌ ನೊಟೀಸ್‌(Red Corner Notice) ಜಾರಿಗೊಳಿಸುವಂತೆ ಇಂಟರ್‌ಪೋಲ್‌ಗೆ ಬಾಂಗ್ಲಾ ಮನವಿ ಮಾಡಿದೆ. ಬಾಂಗ್ಲಾದೇಶ ಪೊಲೀಸರ ರಾಷ್ಟ್ರೀಯ ಕೇಂದ್ರ ಬ್ಯೂರೋ (NCB) ಇಂಟರ್‌ಪೋಲ್‌ಗೆ ಶೇಖ್ ಹಸೀನಾ ಸೇರಿದಂತೆ 12 ವ್ಯಕ್ತಿಗಳ ವಿರುದ್ಧ ರೆಡ್ ನೋಟಿಸ್ ಹೊರಡಿಸುವಂತೆ ಕೋರಿಕೆಯನ್ನು ಸಲ್ಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 77 ವರ್ಷದ ಹಸೀನಾ, ಕಳೆದ ವರ್ಷ ಆಗಸ್ಟ್‌ನಲ್ಲಿ ಭುಗಿಲೆದ್ದ ಗಲಭೆಗಳ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು.