ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Crime at Gubbi: ಬೈಕ್ ನಿಲ್ಲಿಸಿದ್ದಕ್ಕೆ ಆರು ಜನರ ತಲೆಗೆ ಗಂಭೀರ ಪೆಟ್ಟು..!! : ಕ್ಷುಲ್ಲಕ ಕಾರಣಕ್ಕೆ ರಕ್ತದ ಕೋಡಿ

ಸಂಜೆ ವೇಳೆ ದಿಲೀಪ್ ತನ್ನ ಬೈಕ್ ನಲ್ಲಿ ಗುಬ್ಬಿಯಿಂದ ಬಂದು ಮನೆ ಮುಂದೆ ನಿಲ್ಲಿಸಿದ್ದ ವಿಚಾರಕ್ಕೆ ಏಕಾಏಕಿ ಅಶ್ಲೀಲ ಪದಗಳಿಂದ ಬೈಗುಳ ಆರಂಭಿಸಿ ಸ್ಥಳದಲ್ಲಿದ್ದ ದೊಣ್ಣೆ, ಗಳಗಳು, ಗುದ್ದಲಿ ಹಿಡಿದು ಅಟ್ಟ್ಯಾಕ್ ಮಾಡಿದ್ದರು. ಬೈಕ್ ತೆಗೆಯುವಷ್ಟರಲ್ಲಿ ಜಗಳ ತೆಗೆದು ಮಾರಣಾಂ ತಿಕವಾಗಿ ಹೊಡೆದಿದ್ದಾರೆ.

ಬೈಕ್ ನಿಲ್ಲಿಸಿದ್ದಕ್ಕೆ ಆರು ಜನರ ತಲೆಗೆ ಗಂಭೀರ ಪೆಟ್ಟು..!!

-

Ashok Nayak
Ashok Nayak Feb 16, 2026 3:37 PM

ಗುಬ್ಬಿ: ರಸ್ತೆ ಬದಿ ಬೈಕ್ ನಿಲ್ಲಿಸಿದ್ದ ವಿಚಾರ ಮುಂದಿಟ್ಟು ಒಂದೇ ಕುಟುಂಬದ ಆರು ಮಂದಿ ಯ ಮೇಲೆ ಮತ್ತೊಂದು ಕುಟುಂಬದ ಎಂಟು ಮಂದಿ ಏಕಾಏಕಿ ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ ಮಾಡಿ ಆರು ಜನರ ತಲೆಗೆ ಹೊಡೆದು ರಕ್ತದ ಕೋಡಿ ಹರಿದ ಭೀಕರ ಘಟನೆ ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ನಡೆದಿದೆ.

ಅಮ್ಮನಘಟ್ಟ ಗ್ರಾಮದ ಮಾರುತಿನಗರ ಬಡಾವಣೆಯ ನಿವಾಸಿಗಳಾದ ಹನುಮಂತಯ್ಯ, ದಿಲೀಪ್, ಜಯಮ್ಮ, ವೆಂಕಟೇಶ್, ಜಯಮ್ಮ ಮತ್ತು ಪದ್ಮ ಈ ಆರು ಮಂದಿ ತೀವ್ರ ರಕ್ತ ಸ್ರಾವದಿಂದ ಗುಬ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ದಿಲೀಪ್ ಅವರ ಕೈ ಮೂಳೆ ಮುರಿತವಾಗಿದೆ. ಉಳಿದ ಐದು ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯು ತ್ತಿದ್ದಾರೆ.

ಇದನ್ನೂ ಓದಿ: Bengaluru Crime News: ಹಿಂದೂ ಯುವತಿಗೆ ಮಗು ಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

ಸಂಜೆ ವೇಳೆ ದಿಲೀಪ್ ತನ್ನ ಬೈಕ್ ನಲ್ಲಿ ಗುಬ್ಬಿಯಿಂದ ಬಂದು ಮನೆ ಮುಂದೆ ನಿಲ್ಲಿಸಿದ್ದ ವಿಚಾರಕ್ಕೆ ಏಕಾಏಕಿ ಅಶ್ಲೀಲ ಪದಗಳಿಂದ ಬೈಗುಳ ಆರಂಭಿಸಿ ಸ್ಥಳದಲ್ಲಿದ್ದ ದೊಣ್ಣೆ, ಗಳಗಳು, ಗುದ್ದಲಿ ಹಿಡಿದು ಅಟ್ಟ್ಯಾಕ್ ಮಾಡಿದ್ದರು. ಬೈಕ್ ತೆಗೆಯುವಷ್ಟರಲ್ಲಿ ಜಗಳ ತೆಗೆದು ಮಾರಣಾಂತಿಕವಾಗಿ ಹೊಡೆದಿದ್ದಾರೆ. ಹಳೇ ವೈಷಮ್ಯ ಹಿನ್ನಲೆ ಪೂರ್ವನಿಯೋಜಿತವಾಗಿ ಸಜ್ಜಾಗಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಗಾಯಾಳು ದಿಲೀಪ್ ನೇರ ಆರೋಪ ಮಾಡಿದರು.

ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಗುಬ್ಬಿ ಪೊಲೀಸರು ಭೇಟಿ ನೀಡಿ ಮುಂದಿನ ತನಿಖೆ ನಡೆಸಿದ್ದಾರೆ. ಹಲ್ಲೆ ಮಾಡಿದ ಯುವರಾಜ್, ಸಂಜಯ್, ಮಂಜಮ್ಮ, ರವೀಶ್, ಹೇಮಂತ್, ಶಾಂತರಾಜು, ಲಕ್ಷ್ಮಮ್ಮ, ಮೂಡಲಗಿರಿ ಇವರ ಮೇಲೆ ಪ್ರಕರಣ ದಾಖಲಿಸಲು ಮುಂದಿನ ಕ್ರಮ ಕೈಗೊಂಡರು.