ಮನೆ ತುಂಬಾ ಚೀಟಿ, ಕಸ; ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ
ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಯುವತಿಯೊಬ್ಬಳು ತಾನು ವಾಸವಿದ್ದ ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಅರೆಕೊಳೆತ ಮೃತದೇಹವಾಗಿ ಅನುಮಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಮೃತ ಯುವತಿಯನ್ನು ಜಾರ್ಖಂಡ ಮೂಲದ ಪೂಜಾ ದತ್ತ ಎಂದು ಗುರುತಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಯುವತಿಯೊಬ್ಬಳು ತಾನು ವಾಸವಿದ್ದ (Puja Dutta Death Case) ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಅರೆಕೊಳೆತ ಮೃತದೇಹವಾಗಿ ಅನುಮಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು, ಮೃತ ಯುವತಿಯನ್ನು ಜಾರ್ಖಂಡ ಮೂಲದ ಪೂಜಾ ದತ್ತ ಎಂದು ಗುರುತಿಸಲಾಗಿದೆ. ಈಕೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದಳು ಎಂದು ತಿಳಿದುಬಂದಿದೆ. ಸದ್ಯ ಪೂಜಾ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಪೂಜಾ ಸಾವು ಆತ್ಮಹತ್ಯೆಯೋ ಇಲ್ಲ ಕೊಲೆಯೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಮಾರು 3 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು, , ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಇನ್ನು, ಏ.27ರಂದು ಅಕ್ಕಪಕ್ಕದ ಮನೆಯವರಿಗೆ ಈಕೆ ವಾಸವಿದ್ದ ಈ ಮನೆಯಿಂದ ಕೊಳೆತಿರುವ ಕೆಟ್ಟ ವಾಸನೆ ಬಂದಿದ್ದು, ಈ ವೇಳೆ ಅಲ್ಲಿನ ನೆರರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಗೋಡೆಗಳ ತುಂಬೆಲ್ಲಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ ಚೀಟಿಗಳನ್ನು ಅಂಟಿಸಲಾಗಿದೆ. ಅಷ್ಟೇ ಅಲ್ಲದೆ, ಚಿತ್ರಗಳನ್ನು ಬಿಡಿಸಿ ಗೋಡೆಗೆ ಹಾಕಲಾಗಿದೆ. ಮನೆಯ ಒಂದು ಕೋಣೆಯ ಪೂರ್ತಿ ಕಸ ಮತ್ತು ಹರಿದ ಕಾಗದದ ಹಾಳೆಗಳನ್ನೇ ತುಂಬಿಸಿಟ್ಟುಕೊಳ್ಳಲಾಗಿತ್ತು. ಸುಮಾರು ಐದಾರು ಮೂಟೆಗಳಷ್ಟು ಹಳೆಯ ಕಾಗದಗಳು ಮನೆಯಲ್ಲಿ ಪತ್ತೆಯಾಗಿದೆ. ಪೂಜಾ ಆಗಾಗ ರಸ್ತೆಯಲ್ಲಿ ಒಬ್ಬಳೇ ಬೈದಾಡಿಕೊಂಡು ಹೋಗುತ್ತಿದ್ದಳು ಎಂದು ಸ್ಥಳೀಯ ನಿವಾಸಿ ಕಿರಣ್ ತಿಳಿಸಿದ್ದಾರೆ. ಆಕೆ ಮಾನಸಿಕವಾಗಿ ಕುಗ್ಗಿದಂತೆ ಕಾಣುತ್ತಿದ್ದಳು ಎಂದು ನೆರೆಹೊರೆಯವರು ತಿಳಿಸಿದ್ದಾರೆ.
Suhas Shetty Murder: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಕೊಲೆಗಾರರ ಹೆಡೆಮುರಿ ಕಟ್ಟುತ್ತೇವೆ ಎಂದ ಸಿಎಂ
ಆಕೆಯ ಮನೆಯ ಮಾಲೀಕರಾದ ಜಾನಕಮ್ಮ ಅವರು ಈಕೆ ಕಳೆದ 3 ವರ್ಷಗಳಿಂದ ಇದೇ ಮನೆಯಲ್ಲಿ ವಾಸವಿದ್ದು, ಹೆಚ್ಚಾಗಿ ಹಿಂದಿಯಲ್ಲಿ ಮಾತಾಡುತ್ತಿದ್ದಳು. ಅಲ್ಲದೆ, ಈಕೆಯನ್ನು ಭೇಟಿಯಾಗಲು ಆಗ್ಗಾಗೆ ಒಬ್ಬ ಯುವಕ ಬರುತ್ತಿದ್ದು, ಸದಾ ಜಗಳವಾಡುತ್ತಿದ್ದನು. ಆದರೆ, ಈ ಜಗಳಕ್ಕೆ ಕಾರಣ ಮಾತ್ರ ತಿಳಿದಿರಲಿಲ್ಲ. ಅಷ್ಟೇ ಅಲ್ಲದೆ, ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಆಕೆ ಕೆಳಗಿಳಿದುಬಂದಿದೆ ನಾನು ನೋಡಿದ ಕೊನೆಯ ಕ್ಷಣ ಎಂದು ತಿಳಿಸಿದ್ದಾರೆ. ಸದ್ಯ ದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಇದು ಕೊಲೆಯೋ ಇಲ್ಲ ಆತ್ಮಹತ್ಯೆಯೇ ಎಂದು ತಿಳಿದು ಬರುತ್ತದೆ.