Kidnap case: ಕನ್ನಡದ ನಿರ್ದೇಶಕನ ಕಿಡ್ನಾಪ್, ಹಲ್ಲೆ; ನಟಿ ಐಶ್ವರ್ಯಾ ಸೇರಿ 11 ಮಂದಿ ಆರೆಸ್ಟ್
ಕಿಡ್ನ್ಯಾಪ್‌ಗೆ ಒಳಗಾದವರು ಅನೀಶ್ ಎಂಬ ಯುವ ನಿರ್ದೇಶಕ. ಈ ಹಿಂದೆ ‘ಭರವಸೆಯೇ ಜೀವನ’ ಸೇರಿದಂತೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಆರೋಪಿಗಳು ಅನೀಶ್ ಅವರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಅವರನ್ನು ಬ್ಯಾಡರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ನಿರ್ದೇಶಕ ಅನೀಶ್, ನಟಿ ಐಶ್ವರ್ಯಾ -
ಬೆಂಗಳೂರು, ಫೆ.26: ಬೆಂಗಳೂರು (bengaluru) ನಗರದಲ್ಲಿ ಚಲನಚಿತ್ರ ನಿರ್ದೇಶಕರೊಬ್ಬರನ್ನು (film director) ಕಿಡ್ನ್ಯಾಪ್ (Kidnap case) ಮಾಡಿ ಅಮಾನವೀಯವಾಗಿ ಹಲ್ಲೆ (Assault) ನಡೆಸಿ ಚಿನ್ನಾಭರಣ ಹಾಗೂ ಹಣ ದೋಚಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಗಳ ಬಂಧನದಿಂದ ಪ್ರಕರಣದ ಸಂಪೂರ್ಣ ಸಂಚು ಬಹಿರಂಗವಾಗಿದೆ.
ಕಿಡ್ನ್ಯಾಪ್‌ಗೆ ಒಳಗಾದವರು ಅನೀಶ್ ಎಂಬ ಯುವ ನಿರ್ದೇಶಕ. ಈ ಹಿಂದೆ ‘ಭರವಸೆಯೇ ಜೀವನ’ ಸೇರಿದಂತೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಹೊಸ ಚಲನಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದ ಅನೀಶ್, ಕೆಲ ಕಾರಣಗಳಿಂದಾಗಿ ಆ ಸಿನಿಮಾ ನಿಲ್ಲಿಸಿ ಮುಂಬೈಗೆ ಸ್ಥಳಾಂತರಗೊಂಡಿದ್ದರು.
ಅನೀಶ್ ಅವರು ತಮ್ಮ ಕಾರನ್ನು ಮಾರಾಟ ಮಾಡುವ ಉದ್ದೇಶದಿಂದ ಪರಿಚಯವಿದ್ದ ನಟಿಯೊಬ್ಬರಿಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿಯನ್ನು ಬಳಸಿಕೊಂಡು ಆರೋಪಿಗಳು ನಟಿಯ ಮೂಲಕ ಅನೀಶ್ ಅವರನ್ನು ಸಂಪರ್ಕಿಸಿದ್ದರು. ಕಾರು ಖರೀದಿ ಮಾಡುವ ನೆಪದಲ್ಲಿ ಕರೆ ಮಾಡಿ, ನಟಿಯ ಮೂಲಕವೇ ಅನೀಶ್ ಅವರನ್ನು ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಆ ನಟಿಯ ಹೆಸರು ಐಶ್ವರ್ಯಾ, ಈ ಹಿಂದೆ ನಟ ದುನಿಯಾ ಅವರ ಭೀಮಾ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದವರು.
Mandya News: ಮಂಡ್ಯದಲ್ಲಿ ಅಮಾನವೀಯ ಕೃತ್ಯ; ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ
ಕಿಡ್ನ್ಯಾಪ್, ಹಲ್ಲೆ ಮತ್ತು ಸುಲಿಗೆ
ಆರೋಪಿಗಳು ಅನೀಶ್ ಅವರನ್ನು ಆಡುಗೋಡಿ ಠಾಣೆ ವ್ಯಾಪ್ತಿಗೆ ಕರೆಸಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಅವರನ್ನು ಬ್ಯಾಡರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆ ನಡೆಸಿದ ಬಳಿಕ ಅನೀಶ್ ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಿತ್ತುಕೊಂಡ ಆರೋಪಿಗಳು, ನಂತರ ಅವರನ್ನು ಮಧುಗಿರಿ ಸಮೀಪ ಬಿಟ್ಟು ಪರಾರಿಯಾಗಿದ್ದರು.
ಐದು ಲಕ್ಷ ರೂ. ಹಣದ ಜಗಳ ಕಾರಣ
ತನಿಖೆಯ ವೇಳೆ, ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತನ ನೇತೃತ್ವದಲ್ಲಿ ಈ ಕಿಡ್ನ್ಯಾಪ್ ಪ್ಲಾನ್ ರೂಪಿಸಲಾಗಿತ್ತು ಎಂಬುದು ಪತ್ತೆಯಾಗಿದೆ. ನಿರ್ದೇಶಕ ಅನೀಶ್ ಮತ್ತು ಆರೋಪಿ ಆಶೀರ್ವಾದ್‌ಗೆ ಸುಮಾರು ₹5 ಲಕ್ಷ ಹಣದ ವಿಚಾರವಾಗಿ ಜಗಳ ಉಂಟಾಗಿದ್ದು, ಅದೇ ಕಾರಣಕ್ಕೆ ಈ ಅಪರಾಧ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.
ವೃದ್ಧ ತಾಯಿಯ ಕೂದಲು ಹಿಡಿದು ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ಮಗಳು: ನೋಡಿದವರ ರಕ್ತ ಕುದಿಯುತ್ತೆ
ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಒಬ್ಬ ಯುವತಿ (ನಟಿ) ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಅವರು ಮಾತನಾಡಿ, ಫೆಬ್ರವರಿ 11ರಂದು ಆಸ್ಪತ್ರೆಗೆ ಎಂಎಲ್‌ಸಿ ವರದಿ ಬಂದಿತ್ತು. ವಿಕ್ಟಿಮ್ ಅನೀಶ್ ಕೈ, ಕಾಲು ಸೇರಿದಂತೆ ದೇಹದ ಹಲವೆಡೆ ಗಾಯಗಳಿವೆ. ಆರೋಪಿಗಳು ಎಲ್ಲರೂ ಸಂತ್ರಸ್ತನಿಗೆ ಪರಿಚಯದವರೇ ಆಗಿದ್ದಾರೆ. ಹಣಕಾಸಿನ ವಿಚಾರದಲ್ಲಿಯೇ ಗಲಾಟೆ ನಡೆದಿದೆ. ಯುವತಿಯೊಬ್ಬಳು ಸಂತ್ರಸ್ತನನ್ನು ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಳೆ” ಎಂದು ತಿಳಿಸಿದ್ದಾರೆ.