ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂದಿನ ವರ್ಷ ಸಂಕಷ್ಟ ಕಾದಿದೆಯಾ? ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಕುರಿತು ಜ್ಯೋತಿಷಿ ನುಡಿದ ಭವಿಷ್ಯವೇನು?

Viral Video: ಸಿಜೆಪಿ ಸಂಸ್ಥಾಪಕರಿಗೆ ಮುಂದಿನ ದಿನದ ಭವಿಷ್ಯವು ಕರಾಳವಾಗಿದೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಈತನಿಗೆ ತುಂಬಾ ಒತ್ತಡದಾಯಕ ದಿನವಾಗಬಹುದು. ವಾಸ್ತವವಾಗಿ ಜೈಲಿಗೂ ಹೋಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಭೀಜಿತ್ ದೀಪ್ಕೆ ಜೈಲಿಗೆ ಸೇರುತ್ತಾರೆಯೇ? ಭವಿಷ್ಯ ನುಡಿದ ಜ್ಯೋತಿಷಿ

ಸಿಜೆಪಿ ಸಂಸ್ಥಾಪಕ ಅಭೀಜಿತ್ ದೀಪ್ಕೆ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ -

Profile
Pushpa Kumari Aug 5, 2026 12:47 PM

ನವದೆಹಲಿ,ಆ. 5: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭೀಜಿತ್ ದೀಪ್ಕೆ (Abhijeet Dipke) ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಭಾರತದ ಯುವ ಪೀಳಿಗೆಯ ಜೊತೆ ಸೇರಿ 'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಸದ್ದು ಮಾಡಿದ್ದರು. ಈ ನಡುವೆ ಸಿಜೆಪಿ ಸಂಸ್ಥಾಪಕರಿಗೆ ಮುಂದಿನ ದಿನದ ಭವಿಷ್ಯವು ಕರಾಳವಾಗಿದೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಈತನಿಗೆ ತುಂಬಾ ಒತ್ತಡದಾಯಕ ದಿನವಾಗಬಹುದು. ವಾಸ್ತವವಾಗಿ ಜೈಲಿಗೂ ಹೋಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಸಂಖ್ಯಾಶಾಸ್ತ್ರಜ್ಞ ಸಂದೀಪ್ ಬಜಾಜ್ ಅವರು ಅಭೀಜಿತ್ ಅವರ ಭವಿಷ್ಯದ ಬಗ್ಗೆ ಎಚ್ಚರಿಸಿದ್ದಾರೆ.. ಭವಿಷ್ಯ ಮುಂದಕ್ಕೆ ಕೆಟ್ಟದಾಗಿದೆ. ಏಕೆಂದರೆ, ನಾನು ಇದನ್ನು ಮೊದಲೇ ಹೇಳಿದ್ದೇನೆ. 2, 4, ಅಥವಾ 8 ವಾಹನ ನಂಬರ್ ಹೊಂದಿರುವ ಜನರು ಮೊದಲು ಗುಳ್ಳೆಯಂತೆ ಮೇಲೆದ್ದು ಬರುತ್ತಾರೆ. ನಂತರ ಒಮ್ಮೆಲೇ ಕುಗ್ಗಬಹುದು. ಸಂಖ್ಯಾ ಶಾಸ್ತ್ರದ ಪ್ರಕಾರ ಇವರ ಪರ್ಸನಲ್ ನಂಬರ್ 4 ಆಗಲಿದ್ದು, ಇದು 2 ಮತ್ತು 8 ರ ವಿರುದ್ಧವಾದ ನಂಬರ್ ಆಗಿದೆ. ಹಾಗಾಗಿ ಮುಂದಿನ ವರ್ಷ ಅವರು ಜೈಲಿಗೆ ಹೋಗುವ ಮುನ್ಸೂಚನೆ ಇದೆ. ಅಥವಾ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಕೂಡ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

ವಿಡಿಯೋ ನೋಡಿ:

ಈ ವರ್ಷ ಅವರ ವೈಯಕ್ತಿಕ ವರ್ಷ 3, ಆದ್ದರಿಂದ ಅವರಿಗೆ ಜಾಕ್‌ಪಾಟ್ ಹೊಡೆದಂತೆ ಭಾಸವಾಗಬಹುದು. ಆದರೆ ಫೆಬ್ರವರಿ 6 ರ ನಂತರ, ನೋಡಿ, ಬಹಳಷ್ಟು ಒತ್ತಡವು ಅವರ ಮೇಲೆ ಬೀಳಬಹುದು. ಜ್ಯೋತಿಷಿ ಅಭಿಜೀತ್ ದೀಪ್ಕೆ ಅವರು ಸಂಖ್ಯಾ ಶಾಸ್ತ್ರವನ್ನು ನಂಬುದಾದರೆ ಅವರ ಹೆಸರಿನ ಹೆಸರಿನ ಸ್ಪೆಲ್ಲಿಂಗ್ ಬದಲಾವಣೆ ಮಾಡಿದರೆ ಒಳಿತು ಎಂದು ಅವರು ಸಲಹೆ ನೀಡಿದ್ದಾರೆ.

Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್

ಸರ್ಕಾರ ಹಾಗೂ ವ್ಯವಸ್ಥೆಯನ್ನು ಟೀಕಿಸುವ ಉದ್ದೇಶದಿಂದ ಕಾಕ್ರೋಚ್‌ ಜನತಾ ಪಾರ್ಟಿ ಹುಟ್ಟುಹಾಕಿ ಭಾರೀ ಜನಪ್ರಿಯತೆ ಗಳಿಸಿರುವ ಅಭಿಜೀತ್‌ ದೀಪ್ಕೆ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಪ್ರತಿಭಟನೆ ನಡೆಸಿದ್ದರು. ಸದ್ಯ ​ಜ್ಯೋತಿಷಿಯ ಈ ವೀಡಿಯೊಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು ಕೆಲವರು ಸಿಜೆಪಿ ಪಕ್ಷದ ನಾಯಕನ ಧೈರ್ಯಕ್ಕೆ ಮೆಚ್ಚುಗೆ ನೀಡಿದರೆ ಇನ್ನು ಕೆಲವರು ಟೀಕಿಸಿದ್ದಾರೆ. ಬಳಕೆದಾರರೊಬ್ಬರು ಸರಕಾರವನ್ನು ದೂಷಿಸುವ ಇಂತಹ ವ್ಯಕ್ತಿಯನ್ನು ಜೈಲಿಗೆ ಹಾಕಬೇಕೆಂದು ವಾದಿಸಿದರು. ಇನ್ನು ಕೆಲವರು ನಿರುದ್ಯೋಗಿಗಳ ಪರ ಧ್ವನಿ ಎತ್ತಿದ್ದವರು ಎಂದು ಬೆಂಬಲಿಸಿದ್ದಾರೆ.