ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಾಜ್ಯದಲ್ಲಿ ಮತ್ತೊಂದು ಲವ್‌ ಜಿಹಾದ್‌? ಹಿಂದೂ ಯುವತಿಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ ನವಾಜ್‌

Love Jihad: ಬೆಂಗಳೂರಿನಲ್ಲಿ ಲವ್‌ ಜಿಹಾದ್‌ ಹೋಲುವ ಪ್ರಕರಣವೊಂದು ನಡೆದಿದೆ. ಬೆಂಗಳೂರಿನ ವರ್ತೂರು ಮುಖ್ಯ ರಸ್ತೆ ಬಳಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಹಿಂದೂ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದ ನವಾಜ್‌

ಚಾಟ್‌ಜಿಪಿಟಿ ರಚಿತ ಚಿತ್ರ -

Ramesh Ballamoole
Ramesh Ballamoole Jul 9, 2026 10:10 PM

ಬೆಂಗಳೂರು, ಜು. 9: ಇತ್ತೀಚೆಗೆ ರಾಜ್ಯದಲ್ಲಿ ಲವ್‌ ಜಿಹಾದ್‌ (Love Jihad) ಪ್ರಕರಣ ಹೆಚ್ಚಾಗುತ್ತಿದೆ. ಹುಬ್ಬಳ್ಳಿ, ಬಾಗಲಕೋಟೆ, ಹಾವೇರಿ, ಮೂಡಿಗೆರೆ ಮುಂತಾದ ಕಡೆಗಳ ಬಳಿಕ ಇದೀಗ ಬೆಂಗಳೂರಿನಲ್ಲೂ ಇದನ್ನೇ ಹೋಲುವ ಪ್ರಕರಣವೊಂದು ನಡೆದಿದೆ. ಬೆಂಗಳೂರಿನ ವರ್ತೂರು ಮುಖ್ಯ ರಸ್ತೆ ಬಳಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚಾಕುವಿನಿಂದ ಇರಿದ ಯುವಕನನ್ನು 18 ವರ್ಷದ ಬಂದೇ ನವಾಜ್‌ ಎಂದು ಗುರುತಿಸಲಾಗಿದೆ. ತನ್ನ ಮಾಜಿ ಪ್ರೇಯಸಿ ನಂದಿನಿ ದಾಸ್‌ ಮನೆಗೆ ಗುರುವಾರ (ಜುಲೈ 9) ನುಗ್ಗಿದ ಆತ ಈ ಕೃತ್ಯ ಎಸಗಿದ್ದಾನೆ.

ಘಟನೆ ವಿವರ

ನಂದಿನಿ ಮತ್ತು ನವಾಜ್‌ 3 ವರ್ಷ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ನಂದಿನಿ ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಅಲ್ಲದೆ ಮನೆಯವರು ನಂದಿನಿಗೆ ಬೇರೆ ಮದುವೆ ಮಾಡಲು ಮುಂದಾಗಿದ್ದರು. ಇದರಿಂದ ಹತಾಶನಾದ ನವಾಜ್‌ ಗುರುವಾರ ಚಾಕು ಸಮೇತ ನಂದಿನಿ ಮನೆಗೆ ನುಗ್ಗಿ ಆಕೆಯ ಕುತ್ತಿಗೆ, ಕೈ, ತೊಡೆಗೆ ಇರಿದಿದ್ದಾನೆ. ಇದರಿಂದ ನಂದಿನಿ ತೀವ್ರ ಗಾಯಗೊಂಡಿದ್ದು, ಆಕೆಯನ್ನು ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದರು. ಇದೇ ವೇಳೆ ನವಾಜ್‌ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನಿಗೂ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ.

ಬಾಗಲಕೋಟೆಯಲ್ಲೂ ಲವ್‌ ಜಿಹಾದ್‌ ಶಂಕೆ: ಅನ್ಯಕೋಮಿನ ಯುವಕನ ಕಿರುಕುಳ, ಯುವತಿ ಆತ್ಮಹತ್ಯೆ

ಹಾವೇರಿಯಲ್ಲಿ ನಿಶ್ಚಿತಾರ್ಥದ ಹಿಂದಿನ ದಿನ ಯುವತಿ ನಾಪತ್ತೆ; ಲವ್‌ ಜಿಹಾದ್‌ ಆರೋಪ

ಹಾವೇರಿ: ನಿಶ್ಚಿತಾರ್ಥದ ಹಿಂದಿನ ದಿನವೇ ಯುವತಿ ಮನೆಯಿಂದ ಕಾಣೆಯಾಗಿರುವ ಪ್ರಕರಣ ಇತ್ತೀಚೆಗೆ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ಶಂಕರಮ್ಮ (24) ಕೆರಿಮೆತ್ತಿಹಳ್ಳಿ ಎಂಬ ಯುವತಿಯ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬಾತ ತಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದರು.

ಬಿಕಾಂ ಮುಗಿಸಿದ ಬಳಿಕ ಶಂಕರಮ್ಮ ಅಕ್ಕಿಆಲೂರಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಈ ವೇಳೆ ಇಬ್ರಾಹಿಂನ ಪರಿಚಯವಾಗಿದೆ ಎಂದು ಹೇಳಲಾಗುತ್ತಿದೆ. ಮೇ 11ರಂದು ಶಂಕರಮ್ಮಾಳ ಮದುವೆ ನಿಗದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿಶ್ಚಿತಾರ್ಥ ಫಿಕ್ಸ್ ಮಾಡಲಾಗುತ್ತಿತ್ತು. ನಿಶ್ಚಿತಾರ್ಥದ ಮುನ್ನ ದಿನ ರಾತ್ರಿ ಶಂಕರಮ್ಮಳನ್ನು ಇಬ್ರಾಹಿಂ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.

ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.