ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime: 'ದೃಶ್ಯಂ' ಕಥೆಯಿಂದ ಸ್ಫೂರ್ತಿ; ಇನ್ಶೂರೆನ್ಸ್‌ ಹಣಕ್ಕಾಗಿ ಅತ್ತೆಯನ್ನೇ ಕೊಂದ ಅಳಿಯ!

60 ಲಕ್ಷ ರೂಪಾಯಿ ಇನ್ಶೂರೆನ್ಸ್‌ ಹಣಕ್ಕಾಗಿ 60 ವರ್ಷದ ಅತ್ತೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಪೆದ್ದಮಾಸನ್‌ಪಲ್ಲಿ ಗ್ರಾಮದಲ್ಲಿ ನಡೆದಿದೆ. ಆರೋಪಿಯು 'ದೃಶ್ಯಂ' ಚಿತ್ರದ ಕಥೆಯಿಂದ ಸ್ಫೂರ್ತಿ ಪಡೆದು ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಇನ್ಶೂರೆನ್ಸ್‌  ಹಣಕ್ಕಾಗಿ ದುಷ್ಕೃತ್ಯ; ಅತ್ತೆಯನ್ನೇ ಕೊಂದ ಅಳಿಯ

ಸಾಂದರ್ಭಿಕ ಚಿತ್ರ

Profile Sushmitha Jain Jul 13, 2025 9:34 PM

ಸಿದ್ದಿಪೇಟೆ: 60 ಲಕ್ಷ ರೂಪಾಯಿ ಇನ್ಶೂರೆನ್ಸ್‌ ಹಣಕ್ಕಾಗಿ (Insurance Money) 60 ವರ್ಷದ ಅತ್ತೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ (Hyderabad) ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ತೆಲಂಗಾಣದ (Telangana) ಸಿದ್ದಿಪೇಟೆ ಜಿಲ್ಲೆಯ ಪೆದ್ದಮಾಸನ್‌ಪಲ್ಲಿ ಗ್ರಾಮದಲ್ಲಿ ನಡೆದಿದೆ. ಆರೋಪಿಯು 'ದೃಶ್ಯಂ' (Drishyam) ಚಿತ್ರದ ಕಥೆಯಿಂದ ಸ್ಫೂರ್ತಿ ಪಡೆದು ಕೃತ್ಯ (Viral News) ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ವೆಂಕಟೇಶ್ ತನ್ನ ಅತ್ತೆ ರಾಮವ್ವಾ ಅವರ ಹೆಸರಿನಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ಡಾಕ್ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಬಹು ವಿಮಾ ಪಾಲಿಸಿಗಳನ್ನು ತೆಗೆದುಕೊಂಡಿದ್ದ. ಆತನ ಉದ್ದೇಶವು ಈ ಇನ್ಶುರೆನ್ಸ್‌ ಹಣವನ್ನು ಪಡೆಯುವುದಾಗಿತ್ತು. ಈ ಕೃತ್ಯಕ್ಕೆ ತನ್ನ ಸಹೋದರನಿಗೆ ಅರ್ಧದಷ್ಟು ಹಣ ನೀಡುವ ಆಮಿಷವೊಡ್ಡಿದ್ದ ಎಂದು ವರದಿ ತಿಳಿಸಿದೆ.

ಪೊಲೀಸರ ಪ್ರಕಾರ, ವೆಂಕಟೇಶ್ ರಾಮವ್ವಾ ಅವರನ್ನು ಕೆಲಸದ ನೆಪವೊದೊಡ್ಡಿ ಹೊಲಕ್ಕೆ ಕರೆದೊಯ್ದಿದ್ದ. ರಾತ್ರಿ ಆಗುವವರೆಗೆ ಕಾದು, ಮಧ್ಯರಾತ್ರಿಯ ಸುಮಾರಿಗೆ ಆಕೆಯನ್ನು ಒಂಟಿಯಾಗಿ ಮನೆಗೆ ಕಳುಹಿಸಿದ್ದ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಒಂಟಿಯಾಗಿ ನಡೆಯುತ್ತಿದ್ದ ರಾಮವ್ವಾ ಅವರನ್ನು ಆತನ ಸಹಾಯಕನೊಬ್ಬ ಕಾರಿನಿಂದ ಗುದ್ದಿ ಕೊಂದಿದ್ದಾನೆ. ಈ ಘಟನೆಯನ್ನು ರಸ್ತೆ ಅಪಘಾತದಂತೆ ಕಾಣುವಂತೆ ವೆಂಕಟೇಶ್ ರೂಪಿಸಿದ್ದ.

ಈ ಸುದ್ದಿಯನ್ನು ಓದಿ: Viral Video: ಸಚಿವರ ಕಾರ್ಯಕ್ರಮದಲ್ಲಿ ಕುಡಿದು ಬಂದು ವೇದಿಕೆ ಏರಿದ ಅಧಿಕಾರಿಯ ಬಂಧನ

ಆದರೆ, ಪೊಲೀಸರಿಗೆ ಅನುಮಾನ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವೆಂಕಟೇಶ್‌ನ ಕತೆಯಲ್ಲಿ ವ್ಯತ್ಯಾಸಗಳು ಕಂಡುಬಂದವು. ತನಿಖೆಯ ವೇಳೆ ವಿಚಾರಣೆಗೊಳಪಡಿಸಿದಾಗ, ವೆಂಕಟೇಶ್ ತಾನು ರೂ. 60 ಲಕ್ಷ ಇನ್ಶುರೆನ್ಸ್‌ ಹಣಕ್ಕಾಗಿ ಈ ಕೊಲೆಗೆ ಪ್ಲಾನ್‌ ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ವಿಮಾ ಹಣಕ್ಕಾಗಿ ಯೋಜಿತ ಕೊಲೆಯ ಕೃತ್ಯವು 'ದೃಶ್ಯಂ' ಚಿತ್ರದ ಕತೆಗೆ ಹೋಲುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ವೆಂಕಟೇಶ್ ಮತ್ತು ಆತನ ಸಹಾಯಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.