ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳದ ಪಾಲಿಗೆ ಕರಾಳ ಶನಿವಾರ: ಕೋಲ್ಕತಾ ಕಾಲ್ತುಳಿತ ಬೆನ್ನಲ್ಲೇ ಅಸನ್ಸೋಲ್‌ನಲ್ಲಿ ಕುಸಿದ ವಿದ್ಯುತ್ ಸ್ಥಾವರದ ಚಿಮಿಣಿ; ನಾಲ್ವರ ಸಾವು

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿನ ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಹಂತದಲ್ಲಿದ್ದ ಚಿಮಿಣಿ ಭಾಗವೊಂದು ಕುಸಿದು ಬಿದ್ದು ನಾಲ್ವರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಜಮುರಿಯಾ ಪ್ರದೇಶದ ಶ್ಯಾಮ್ ಎಸ್‌ಇಎಲ್ ಅಂಡ್ ಪವರ್ ಲಿಮಿಟೆಡ್ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಜಮುರಿಯಾ ಕ್ಷೇತ್ರದ ಶಾಸಕ ಬಿಜಾನ್ ಮುಖರ್ಜಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ದುರಂತ: ನಾಲ್ವರು ಸಾವು

ಸಂಗ್ರಹ ಚಿತ್ರ -

ಪಶ್ಚಿಮ ಬಂಗಾಳ: ವಿದ್ಯುತ್ ಸ್ಥಾವರದಲ್ಲಿ (Power Plant) ನಿರ್ಮಾಣ ಹಂತದಲ್ಲಿದ್ದ ಚಿಮಿಣಿಯ ಭಾಗವೊಂದು ಕುಸಿದು ನಾಲ್ವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ (west bengal) ಅಸನ್ಸೋಲ್‌ನಲ್ಲಿನ (Asansol) ಜಮುರಿಯಾ (Jamuria) ಪ್ರದೇಶದ ಶ್ಯಾಮ್ ಎಸ್‌ಇಎಲ್ ಅಂಡ್ ಪವರ್ ಲಿಮಿಟೆಡ್ (Shyam SEL And Power Limited) ಘಟಕದಲ್ಲಿ ಶನಿವಾರ ಸಂಜೆ ನಡೆದಿದೆ. ಸ್ಥಳದಲ್ಲಿ ಹಲವು ಕಾರ್ಮಿಕರಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮುರಿಯ ಕ್ಷೇತ್ರದ ಶಾಸಕ ಬಿಜಾನ್ ಮುಖರ್ಜಿ (Jamuria MLA Bijan Mukherjee), ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಸಂಪೂರ್ಣ ತನಿಖೆ ನಡೆಸುವುದಾಗಿ ತಿಳಿಸಿದರು.

ಜಮುರಿಯಾ ಪ್ರದೇಶದ ವಿದ್ಯುತ್ ಸ್ಥಾವರದ ಶ್ಯಾಮ್ ಎಸ್‌ಇಎಲ್ ಅಂಡ್ ಪವರ್ ಲಿಮಿಟೆಡ್ ಘಟಕದಲ್ಲಿ ಶನಿವಾರ ಸಂಜೆ ನಿರ್ಮಾಣ ಹಂತದಲ್ಲಿದ್ದ ಚಿಮಿಣಿಯ ಭಾಗವೊಂದು ಕುಸಿದು ಬಿದ್ದಿದೆ. ಇದರಿಂದ ನಾಲ್ವರು ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದರು.

ಕೋಲ್ಕತಾ ದುರ್ಗಾ ಪೆಂಡಾಲ್ ಕಾಲ್ತುಳಿತ: 19ಕ್ಕೇರಿದ ಸಾವಿನ ಸಂಖ್ಯೆ

ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಅವಶೇಷಗಳಡಿಯಲ್ಲಿ ಬಿದ್ದಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರನ್ನು ಆಸ್ಪತ್ರೆಗೆ ಸಾಗಿಸಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ಕೊಡಿಸಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ವಿದ್ಯುತ್ ಚಿಮಿಣಿಯ ರಚನೆ ಕುಸಿಯುತ್ತಿರುವುದನ್ನು ನೋಡಿ ಇತರ ಕಾರ್ಮಿಕರು ತಕ್ಷಣ ಅಲ್ಲಿಂದ ಹೊರಬಂದರು. ಆದರೆ ದುರದೃಷ್ಟವಶಾತ್ ನಾಲ್ವರು ಅದರಡಿ ಸಿಲುಕಿ ಬಿದ್ದಿದ್ದಾರೆ. ಇದೊಂದು ಅತ್ಯಂತ ದುಃಖಕರ ಘಟನೆ. ಎಲ್ಲರನ್ನೂ ರಕ್ಷಿಸಲು ನಾವು ನಮ್ಮಿಂದಾದ ಪ್ರಯತ್ನ ಮಾಡಿದೆವು ಎಂದು ಅವರು ಹೇಳಿದರು.

ಈ ದುರಂತಕ್ಕೆ ನಿರ್ಲಕ್ಷ್ಯ ಕಾರಣವೇ ಎನ್ನುವ ಕುರಿತು ತನಿಖೆ ನಡೆಸಲಾಗುವುದು. ಆದರೆ ನಾನು ಇದನ್ನು ನಿರ್ಲಕ್ಷ್ಯ ಎಂದು ಕರೆಯಲಾರೆ. ಶ್ಯಾಮ್ ಎಸ್‌ಇಎಲ್ ಒಂದು ಪ್ರತಿಷ್ಠಿತ ಕಂಪೆನಿಯಾಗಿದೆ. ಇಲ್ಲಿನ ಕಾರ್ಮಿಕರು ಉತ್ತಮ ತರಬೇತಿ ಪಡೆದಿದ್ದು ದೀರ್ಘಕಾಲದಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಆಗಷ್ಟೇ ಹಾಕಲಾಗಿದ್ದ ಕಾಂಕ್ರೀಟ್ ಆಗಿತ್ತು. ಎಲ್ಲೋ, ಯಾವುದೋ ಒಂದು ತಾಂತ್ರಿಕ ದೋಷ ಉಂಟಾಗಿರಬಹುದು. ಕಾರ್ಮಿಕರು ಸುರಕ್ಷತಾ ಉಪಕರಣಗಳನ್ನು ಬಳಸುತ್ತಿದ್ದರು ಎಂದು ತಿಳಿಸಿದರು.

Gauribidanur News: ನವರಾತ್ರಿ ಅಂಗವಾಗಿ ಶೃಂಗೇರಿ ಶಾರದಾ ಮಂದಿರದಲ್ಲಿ ವಿಶೇಷ ಪೂಜೆ; ನೂರಾರು ಭಕ್ತರು ಭಾಗಿ

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸುವೆಂದು ಅಧಿಕಾರಿ, ಜಮುರಿಯಾ ಪ್ರದೇಶದ ಶ್ಯಾಮ್ ಎಸ್‌ಇಎಲ್ ಅಂಡ್ ಪವರ್ ಲಿಮಿಟೆಡ್ ಘಟಕದಲ್ಲಿ ವಿದ್ಯುತ್ ಚಿಮಿಣಿ ಕುಸಿದು ದುರಂತ ಸಂಭವಿಸಿದಾಗಲೇ ಇಲ್ಲಿಂದ ಸುಮಾರು 200 ಕಿ.ಮೀ. ದೂರದ ಗಿರೀಶ್‌ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾರದಾ ಪಾರ್ಕ್‌ನ ಚೋರ್‌ ಬಗಾನ್‌ ದುರ್ಗಾ ಪೆಂಡಾಲ್‌ನಲ್ಲಿ ಕಾಲ್ತುಳಿತ ಉಂಟಾಗಿದೆ. ಇದರಿಂದ 19 ಮಂದಿ ಸಾವನ್ನಪ್ಪಿದ್ದಾರೆ. 25 ಮಂದಿ ಗಾಯಗೊಂಡಿದ್ದಾರೆ.