ತುಪ್ಪಕ್ಕಾಗಿ ಅತ್ತೆಯೊಂದಿಗೆ ಜಗಳ, ಸೊಸೆ ಆತ್ಮಹತ್ಯೆ: ಪೊಲೀಸರಿಂದ ತನಿಖೆ
Suicide case: ಕುಟುಂಬದ ಒಳಜಗಳವೇ ಜೀವ ಕಸಿದುಕೊಂಡ ದುರ್ಘಟನೆ ನಡೆದಿದೆ. ತುಪ್ಪ ವಿಷಯವಾಗಿ ಅತ್ತೆ–ಸೊಸೆ ನಡುವೆ ಉಂಟಾದ ಜಗಳದ ನಂತರ ಸೊಸೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತಿಯು ತನ್ನ ಅತ್ತೆಗೆ ಹೆಚ್ಚಿನ ತುಪ್ಪ ನೀಡಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ -
ಇಂದೋರ್, ಜ.16: ಮಹಿಳೆಯೊಬ್ಬರು ತುಪ್ಪದ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳವಾಡಿದ ನಂತರ ಆತ್ಮಹತ್ಯೆ (suicide) ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಇಮ್ಲೌಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಇಂದರ್ ಪೊಲೀಸ್ ಠಾಣೆಯ ಉಸ್ತುವಾರಿ ದಿನೇಶ್ ಸಿಂಗ್ ತಿಳಿಸಿದ್ದಾರೆ.
ಸೋನಮ್ ಜಾತವ್ ಆತ್ಮಹತ್ಯೆ ಮಾಡಿಕೊಂಡ ಸೊಸೆ. 2018 ರಲ್ಲಿ ಅವರು ಧನಪಾಲ್ ಎಂಬುವವರನ್ನು ವಿವಾಹವಾದರು. ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಕುಟುಂಬದಲ್ಲಿನ ಜಗಳಗಳಿಂದಾಗಿ ಸೋನಮ್ ಪ್ರತ್ಯೇಕವಾಗಿ ಅಡುಗೆ ಮಾಡಲು ಪ್ರಾರಂಭಿಸಿದರು. ಗುರುವಾರ (ಜ.15) ಬೆಳಗ್ಗೆ, ಧನಪಾಲ್ ಅವರ ತಾಯಿಯು ಸೋನಮ್ ಬಳಿ ಸ್ವಲ್ಪ ತುಪ್ಪ ಕೇಳಿದರು. ಸೋನಮ್ ಆರಂಭದಲ್ಲಿ ಕೊಡಲು ನಿರಾಕರಿಸಿದರು. ಆದರೆ, ಅವರ ಪತಿಯ ಒತ್ತಾಯದ ಮೇರೆಗೆ ಅವರು ಸುಮಾರು 100 ಗ್ರಾಂ ತುಪ್ಪವನ್ನು ನೀಡಿದರು ಎಂದು ಅವರು ಹೇಳಿದರು.
ಸೈಕಲ್ ಸವಾರಿ ಮಾಡುತ್ತಿದ್ದ 8 ವರ್ಷದ ಬಾಲಕ ಗಾಳಿಪಟದ ದಾರಕ್ಕೆ ಸಿಲುಕಿ ಸಾವು
ಸೋನಂ ಅವರ ಇಚ್ಛೆಗೆ ವಿರುದ್ಧವಾಗಿ ಧನಪಾಲ್ ತನ್ನ ತಾಯಿಗೆ ಸ್ವಲ್ಪ ಹೆಚ್ಚು ತುಪ್ಪ ನೀಡಿದ ನಂತರ, ಇಬ್ಬರು ಮಹಿಳೆಯರ ನಡುವೆ ಜಗಳವಾಯಿತು. ಸಿಟ್ಟಿನ ಭರದಲ್ಲಿ, ಸೋನಂ ಮನೆಯಲ್ಲಿ ಇರಿಸಲಾಗಿದ್ದ ವಿಷಕಾರಿ ವಸ್ತುವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ಮೊದಲು ಆಕೆಯನ್ನು ಪಚವಲಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಶಿವಪುರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಗೆ ತೆರಳುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿಯ ಮಗ ಆತ್ಮಹತ್ಯೆ
ನಿವೃತ್ತ ಐಎಎಸ್ ಅಧಿಕಾರಿ ಚಂದ್ರ ಎಂಬುವವರ ಕಿರಿಯ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನ ಧೂಮಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜೆಪಿ ನಗರ ಸುಲೇಮ್ ಸರೈನಲ್ಲಿ ನಡೆದಿದೆ. 22 ವರ್ಷದ ಹಿಮಾಂಶು ಆತ್ಮಹತ್ಯೆ ಮಾಡಿಕೊಂಡ ಯುವಕ. ಪದವಿ ವಿದ್ಯಾರ್ಥಿಯಾಗಿದ್ದ ಹಿಮಾಂಶು ಎರಡು ತಿಂಗಳ ಹಿಂದೆ ಶಿವಾನಿ ಎಂಬ ಮಹಿಳೆಯನ್ನು ಮದುವೆಯಾಗಿದ್ದ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಅವರು ತಮ್ಮ ಕೋಣೆಯ ಬಾಗಿಲಿಗೆ ಬೀಗ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಹಳ ಸಮಯದವರೆಗೆ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದನ್ನು ಕಂಡ ಕುಟುಂಬವು, ಕಿಟಕಿ ಬಳಿ ಹೋಗಿ ನೋಡಿದಾಗ ಹಿಮಾಂಶು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಅವರು ಬಂದು ಬಾಗಿಲು ಒಡೆದು ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಿದರು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಿಮಾಂಶು ನಿರುದ್ಯೋಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದು ಗಂಡ-ಹೆಂಡತಿಯ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಇದರಿಂದಾಗಿಯೇ ಹಿಮಾಂಶು ಈ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಹೇಳಲಾಗಿದೆ.
Drowned: ತಂದೆಯ ಎದುರೇ ಕೊಳದಲ್ಲಿ ಮುಳುಗಿ ಇಬ್ಬರು ಮಕ್ಕಳು ಜಲಸಮಾಧಿ
ಇನ್ನು ಘಟನೆಯ ಸಮಯದಲ್ಲಿ ಐಎಎಸ್ ನಿವೃತ್ತ ಅಧಿಕಾರಿ ಶ್ರೀ ಚಂದ್ರ ಅವರು ಮನೆಯಲ್ಲಿ ಇರಲಿಲ್ಲ. ಹಿಮಾಂಶು ಸಾವಿನ ಸುದ್ದಿ ಕೇಳಿ ಕುಟುಂಬದ ರೋಧನೆ ಮುಗಿಲುಮುಟ್ಟಿದೆ. ಕುಟುಂಬವು ಪೊಲೀಸರಿಗೆ ಇನ್ನೂ ಯಾವುದೇ ಲಿಖಿತ ದೂರು ನೀಡಿಲ್ಲ. ಆದರೆ, ಸಾವಿಗೆ ನಿಖರವಾದ ಕಾರಣವೇನೆಂದು ತಿಳಿಯಲು ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಗಮನಿಸಿ: (ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದರೆ, ಅದು ತುಂಬಾ ಗಂಭೀರವಾದ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ತಕ್ಷಣ ಭಾರತ ಸರ್ಕಾರದ ಜೀವನ್ ಸತಿ ಸಹಾಯವಾಣಿಯನ್ನು 18002333330 ಗೆ ಸಂಪರ್ಕಿಸಿ. ಈ 1800914416 ಸಹಾಯವಾಣಿಗೆ ಸಹ ಕರೆ ಮಾಡಬಹುದು. ಇಲ್ಲಿ, ನಿಮ್ಮ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ತಜ್ಞರು ಈ ಪರಿಸ್ಥಿತಿಯನ್ನು ನಿವಾರಿಸಲು ನಿಮಗೆ ಅಗತ್ಯವಾದ ಸಮಾಲೋಚನೆಯನ್ನು ಒದಗಿಸುತ್ತಾರೆ. ನೆನಪಿಡಿ, ಜೀವನ ತುಂಬಾ ಅಮೂಲ್ಯವಾದದ್ದು.)