ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Seetha Payanam Movie: 7 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್

Anoop Rubens: ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ಅವರು 7 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿವೆ.

'ಸೀತಾ ಪಯಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನೂಪ್ ರೂಬೆನ್ಸ್ ಕಮ್‌ಬ್ಯಾಕ್

-

Avinash GR
Avinash GR Jan 16, 2026 1:30 PM

ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಅನೂಪ್ ರೂಬೆನ್ಸ್ ಅವರು ಪ್ರತಿಭೆಯ ಮೂಲಕ ದಕ್ಷಿಣ ಭಾರತದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇವರು, ಇದೀಗ ಕನ್ನಡ ಚಿತ್ರರಂಗದಲ್ಲೂ ತಮ್ಮ ವಿಶಿಷ್ಟ ಛಾಪನ್ನು ಮೂಡಿಸುತ್ತಿದ್ದಾರೆ. ಸುದೀರ್ಘ 7 ವರ್ಷಗಳ ಬಳಿಕ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾಕ್ಕಾಗಿ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.

'ಸೀತಾ ಪಯಣ' ಸಿನಿಮಾಕ್ಕಾಗಿ ಸಂಗೀತ ಸಂಯೋಜನೆ

ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್ʼ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸೀತಾ ಪಯಣʼ ಸಿನಿಮಾವು ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿದೆ. ಈ ಸಿನಿಮಾಕ್ಕೆ ಅನೂಪ್ ರೂಬೆನ್ಸ್ ಸಂಗೀತ ನೀಡಿದ್ದು, 'ಸೀತಾ ಪಯಣ' ಚಿತ್ರದ ಹಾಡುಗಳು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿವೆ.

ಈಗಾಗಲೇ ಬಿಡುಗಡೆಯಾಗಿರುವ "ಯಾವೂರಿಗ್ ಹೊಕ್ಕಿಯೆ ಹುಡುಗಿ" ಮತ್ತು "ಅಸಲಿ ಸಿನಿಮಾ" ಈ ಎರಡೂ ಹಾಡುಗಳು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಇದರ ಬೆನ್ನಲ್ಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗಾಗಿ ಅನೂಪ್ ಸಂಯೋಜಿಸಿರುವ ಮೂರನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಅದರ ಫ್ರೆಶ್ ಸೌಂಡ್ ಮತ್ತು ಮಾಸ್ ಅಪೀಲ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

Arjun Sarja: ಶೂಟಿಂಗ್‌ನ ಮೊದಲ ದಿನವೇ ಅರ್ಜುನ್ ಸರ್ಜಾ ಕಪಾಳಕ್ಕೆ ಬಾರಿಸಿದ ರಾಜೇಂದ್ರ ಸಿಂಗ್ ಬಾಬು: ಕಾರಣವೇನು?

ಸ್ಯಾಂಡಲ್‌ವುಡ್‌ನಲ್ಲಿ ಅನೂಪ್ ಹವಾ

ತೆಲುಗಿನ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಅನೂಪ್ ಅವರು ಹಿಟ್ ಹಾಡುಗಳನ್ನು ನೀಡುತ್ತಾ ಬಂದಿದ್ದಾರೆ. ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌, ಅಮೂಲ್ಯ ನಟನೆಯ ʻಖುಷಿ ಖುಷಿಯಾಗಿʼ ಈ ಚಿತ್ರದ ಮೂಲಕ ಅನೂಪ್‌ ಕನ್ನಡಕ್ಕೆ ಎಂಟ್ರಿ ನೀಡಿದ್ದರು. ಆ ಸಿನಿಮಾದ "ಅರೆ ಅರೆ ಮತ್ತೆ ಹೃದಯ ಹಾಡಿತು" ಹಾಡು ಆಗ ದೊಡ್ಡ ಮಟ್ಟದ ಹಿಟ್‌ ಆಗಿತ್ತು. ಆನಂತರ

ನಿಖಿಲ್‌ ಕುಮಾರಸ್ವಾಮಿ, ರಚಿತಾ ರಾಮ್‌ ಕಾಂಬಿನೇಷನ್‌ನ ʻಸೀತಾರಾಮ ಕಲ್ಯಾಣʼ ಚಿತ್ರಕ್ಕೂ ಅನೂಪ್‌ ಸಂಗೀತ ನೀಡಿದ್ದರು. ಆ ಸಿನಿಮಾದ "ನಿನ್ನ ರಾಜ ನಾನು ನನ್ನ ರಾಣಿ ನೀನು" ರೊಮ್ಯಾಂಟಿಕ್ ಹಾಡು ಕರ್ನಾಟಕದಾದ್ಯಂತ ದೊಡ್ಡಮಟ್ಟದಲ್ಲಿ ಸೌಂಡು ಮಾಡಿತ್ತು. ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ರೀತಿ ಗಣೇಶ್‌ ಅವರ ಮತ್ತೊಂದು ಸಿನಿಮಾ ಗೀತಾಕ್ಕೂ ಅನೂಪ್ ಸಂಗೀತ ನೀಡಿದ್ದರು. ಇದೀಗ ಸೀತಾ ಪಯಣ ಚಿತ್ರಕ್ಕಾಗಿ 7 ವರ್ಷಗಳ ಬಳಿಕ ಕನ್ನಡಕ್ಕೆ ಮರಳಿದ್ದಾರೆ.

ಇನ್ನು, ತೆಲುಗಿನಲ್ಲಿ ಅನೂಪ್‌ ಅನೇಕ ಸೂಪರ್‌ ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. 'ಇಷ್ಕ್', 'ಪ್ರೇಮ ಕಾವಲಿ', 'ಗುಂಡೆ ಜಾರಿ ಗಲ್ಲಂತಯ್ಯಿಂದೆ', 'ಮನಂ', 'ಗೋಪಾಲ ಗೋಪಾಲ', 'ಸೊಗ್ಗಾಡೆ ಚಿನ್ನಿ ನಾಯನಾ' ಮತ್ತು '30 ರೋಜುಲ್ಲೋ ಪ್ರೇಮಿಂಚಡಂ ಎಲಾ' ಮುಂತಾದ ಸಿನಿಮಾಗಳಲ್ಲಿನ ಅವರ ಸಂಗೀತ ಸಂಯೋಜನೆಯ ಹಾಡುಗಳು ಇಂದಿಗೂ ಮೆಲೋಡಿ ಪ್ರಿಯರ ಫೆವರೇಟ್‌ ಎನ್ನಬಹುದು.