ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಿಜಿಟಲ್‌ ಅರೆಸ್ಟ್‌ ಆಗಿದ್ದ ತಂದೆ ತಾಯಿಯನ್ನು ರಕ್ಷಿಸಿದ 8 ನೇ ತರಗತಿ ಬಾಲಕ!

ಉತ್ತರ ಪ್ರದೇಶದ ಬರೇಲಿಯಲ್ಲಿ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ದಂಪತಿಯನ್ನು 10 ಗಂಟೆಗಳ ಕಾಲ ವಿಡಿಯೋ ಕಾಲ್ ಮೂಲಕ ಒತ್ತೆಯಾಳಾಗಿಟ್ಟಿದ್ದರು. ಈ ವೇಳೆ ಅವರ 8ನೇ ತರಗತಿ ಓದುತ್ತಿರುವ ಮಗ ಸಮಯಪ್ರಜ್ಞೆ ತೋರಿಸಿ ಫೋನ್ ಅನ್ನು ಫ್ಲೈಟ್ ಮೋಡ್‌ಗೆ ಹಾಕಿ ವಂಚಕರ ಸಂಪರ್ಕ ಕಡಿತಗೊಳಿಸಿ ಪೋಷಕರನ್ನು ರಕ್ಷಿಸಿದ್ದಾನೆ.

‘ಡಿಜಿಟಲ್ ಅರೆಸ್ಟ್’: ಬಾಲಕನ ಚಾಣಾಕ್ಷತನದಿಂದ ತಪ್ಪಿದ ದೊಡ್ಡ ವಂಚನೆ

ಸಂತ್ರಸ್ತ ದಂಪತಿ -

Profile
Sushmitha Jain Apr 10, 2026 4:37 PM

ಲಖನೌ: ಸೈಬರ್ ಅಪರಾಧಿಗಳು ಹೂಡಿದ್ದ 'ಡಿಜಿಟಲ್ ಅರೆಸ್ಟ್ (digital arrest)' ಎಂಬ ಕುತಂತ್ರದ ಜಾಲಕ್ಕೆ ಸಿಲುಕಿ ಸುಮಾರು 10 ಗಂಟೆಗಳ ಕಾಲ ಒತ್ತೆಯಾಳಾಗಿದ್ದ ದಂಪತಿಯನ್ನು ಅವರ 8ನೇ ತರಗತಿಯ ಮಗ ತನ್ನ ಚಾಣಾಕ್ಷತನದಿಂದ ರಕ್ಷಿಸಿದ ಘಟನೆ ಉತ್ತರ ಪ್ರದೇಶ (Uttar Pradesh)ದ ಬರೇಲಿ (Bareilly)ಯಲ್ಲಿ ನಡೆದಿದೆ.

ಏನಿದು ಪ್ರಕರಣ?

ಬರೇಲಿಯ ಪ್ರೇಮ್ ನಗರ (Pram Nagar)ದ ನಿವಾಸಿ, ವ್ಯಾಪಾರಿ ಸಂಜಯ್ ಸಕ್ಸೇನಾ (Sanjay Saxena) ಮತ್ತು ಅವರ ಪತ್ನಿಯನ್ನೇ ಗುರಿಯಾಗಿಸಿಕೊಂಡಿದ್ದ ಸೈಬರ್ ವಂಚಕರು, ತನಿಖಾ ಸಂಸ್ಥೆಯ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದರು. ಸಕ್ಸೇನಾ ಅವರಿಗೆ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಬಂಧವಿದೆ ಮತ್ತು ಬಹುಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಲಾಗಿತ್ತು. ಅಷ್ಟೇ ಅಲ್ಲದೆ, ವಿಡಿಯೋ ಕಾಲ್‌ನಲ್ಲಿ ನಕಲಿ ಅರೆಸ್ಟ್ ವಾರಂಟ್ ತೋರಿಸಿ ದಂಪತಿಯನ್ನು ಮಾನಸಿಕವಾಗಿ ಬೆದರಿಸಲಾಗಿತ್ತು.

10 ಗಂಟೆಗಳ ಕಾಲ ಕಣ್ಗಾವಲು:

'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ವಂಚಕರು ದಂಪತಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ್ದರು. "ವಿಡಿಯೋ ಕಾಲ್ ಕಟ್ ಮಾಡಬಾರದು, ಮನೆಯಿಂದ ಹೊರಗೆ ಹೋಗಬಾರದು, ಊಟ ಮತ್ತು ನಿದ್ರೆ ಕೂಡ ಕ್ಯಾಮೆರಾ ಮುಂದೆಯೇ ಮಾಡಬೇಕು" ಎಂದು ಧಮಕಿ ಹಾಕಿದ್ದರು. ಈ ಅವಧಿಯಲ್ಲಿ ದಂಪತಿಯಿಂದ ಬ್ಯಾಂಕ್ ವಿವರಗಳನ್ನು ಪಡೆದಿದ್ದ ವಂಚಕರು, ಅವರ ಖಾತೆಯಿಂದ ಹಣ ಲೂಟಿ ಮಾಡಲು ಸಜ್ಜಾಗಿದ್ದರು.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬೋರ್‌ವೆಲ್‌ಗೆ ಬಿದ್ದ ಎರಡೂವರೆ ವರ್ಷದ ಬಾಲಕ: ರಕ್ಷಣಾ ಕಾರ್ಯಾಚರಣೆ ಚುರುಕು

ಬಾಲಕ ತನ್ಮಯ್ ಸಾಹಸ:

ಪೋಷಕರು ತೀವ್ರ ಭಯದಲ್ಲಿದ್ದುದನ್ನು ಗಮನಿಸಿದ ಮಗ ತನ್ಮಯ್ (8ನೇ ತರಗತಿ ವಿದ್ಯಾರ್ಥಿ), ಏನೋ ತಪ್ಪಿದೆ ಎಂದು ತಕ್ಷಣವೇ ಗ್ರಹಿಸಿದನು. ತಡರಾತ್ರಿಯವರೆಗೂ ವಿಡಿಯೋ ಕಾಲ್ ನಡೆಯುತ್ತಿದ್ದುದನ್ನು ಕಂಡು, ಪೋಷಕರ ವಿರೋಧದ ನಡುವೆಯೂ ಬಾಲಕನು ಫೋನ್ ಅನ್ನು ಕಿತ್ತುಕೊಂಡು ಅದನ್ನು 'ಫ್ಲೈಟ್ ಮೋಡ್' (Flight Mode) ಗೆ ಹಾಕಿದನು. ಇದರಿಂದ ವಂಚಕರ ಸಂಪರ್ಕ ತಕ್ಷಣವೇ ಕಡಿತಗೊಂಡಿತು.

ಪೊಲೀಸ್ ದೂರು:

ಮರುದಿನ ಬೆಳಿಗ್ಗೆ ಕುಟುಂಬವು ಪ್ರೇಮ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿತು. ಫೋನ್ ಆನ್ ಮಾಡಿದಾಗ ವಂಚಕರು ಮತ್ತೆ ಕರೆ ಮಾಡಿದರು, ಆಗ ಪೊಲೀಸರೇ ಕರೆ ಸ್ವೀಕರಿಸಿ ಅವರಿಗೆ ಎಚ್ಚರಿಕೆ ನೀಡಿದರು. ಎಸ್‌ಪಿ ಮನುಷ್ ಪಾರೀಕ್ ಅವರು ಬಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ ಮತ್ತು ಯಾವುದೇ ತನಿಖಾ ಸಂಸ್ಥೆಗಳು ಇಂತಹ 'ಡಿಜಿಟಲ್ ಅರೆಸ್ಟ್' ಮಾಡುವುದಿಲ್ಲ, ಇಂತಹ ಕರೆಗಳು ಬಂದಾಗ ತಕ್ಷಣ ಪೊಲೀಸರಿಗೆ ದೂರು ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.