ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​: ಮಹೇಂದ್ರ ರೆಡ್ಡಿ ಫೋನ್ ಪೇಯಲ್ಲಿ ಪ್ರೇಯಸಿಗೆ ಮಾಡಿದ್ದ ಮೆಸೇಜ್‌ ರಿಟ್ರೀವ್‌

ಭಾರೀ ಸಂಚಲನ ಮೂಡಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲಾಗಿದೆ. ಸದ್ಯ ಕೊಲೆಗೆ ಸಂಬಂಧಿಸಿದ ಪ್ರಬಲ ಸಾಕ್ಷಿ ಮೊಬೈಲ್ ರಿಟ್ರೀವ್​ನಿಂದ ಬಯಲಾಗಿದೆ. ಪತಿಯೇ ಪತ್ನಿಯನ್ನು ಕೊಂದು ನಾಟಕವಾಡಿದ್ದು ಇದೀಗ ಫೋನ್ ಪೇ ಚಾಟಿಂಗ್ ಎಲ್ಲವನ್ನು ತೆರೆದಿಟ್ಟಿದೆ.

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​:  ಪತಿಯ ಮತ್ತೊಂದು ಮುಖ ಬಯಲು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 8, 2026 11:00 PM

ಬೆಂಗಳೂರು: ಭಾರೀ ಸಂಚಲನ ಮೂಡಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್‌ನ ಮತ್ತೊಂದು ರಹಸ್ಯ ಬಯಲಾಗಿದೆ. ಸದ್ಯ ಕೊಲೆಗೆ ಸಂಬಂಧಿಸಿದ (Doctor Kritika Reddy murder case) ಪ್ರಬಲ ಸಾಕ್ಷಿ ಮೊಬೈಲ್ ರಿಟ್ರೀವ್​ನಿಂದ ಬಯಲಾಗಿದೆ. ಪತಿಯೇ ಪತ್ನಿಯನ್ನು ಕೊಂದು ನಾಟಕವಾಡಿದ್ದು ಇದೀಗ ಫೋನ್ ಪೇ ಚಾಟಿಂಗ್ ಎಲ್ಲವನ್ನು ತೆರೆದಿಟ್ಟಿದೆ. ಏಪ್ರಿಲ್ 2025ರಂದು ಮಾರತ್ತಹಳ್ಳಿಯಲ್ಲಿ ಚರ್ಮರೋಗ ವೈದ್ಯ ಕೃತಿಕಾ ರೆಡ್ಡಿ ಕೊಲೆಯಾಗಿತ್ತು. ಪತಿ ಮಹೇಂದ್ರ ರೆಡ್ಡಿಯೇ ಪ್ರೊಪೋಫೋಲ್ ಎಂಬ ಅನಸ್ತೇಶಿಯಾವನ್ನು ಐವಿ ಫ್ಲೂಯಿಡ್ ಮೂಲಕ ನೀಡಿ ಕೊಂದಿದ್ದ. ಮೊದಮೊದಲು ಕೃತಿಕಾ ರೆಡ್ಡಿ ಸಾವು ಸ್ವಾಭಾವಿಕ ಸಾವು ಎಂದುಕೊಳ್ಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ ದೇಹದಲ್ಲಿ ಅನಸ್ತೇಶಿಯಾ ನೀಡಿರುವುದು ಗೊತ್ತಾಗಿತ್ತು.

ಮಹೇಂದ್ರ ರೆಡ್ಡಿ 2024ರಲ್ಲಿ ಕೃತಿಕಾ ರೆಡ್ಡಿ ವಿವಾಹವಾಗಿದ್ದ. ಹಣದಾಸೆಗೆ ಕೃತಿಕಾ ರೆಡ್ಡಿ ಕೊಂದು ಪ್ರೇಯಸಿ ಜೊತೆಗಿರಲು ಹೊಂಚು ಹಾಕಿದ್ದ. ಅದಕ್ಕೆ ಪೂರಕ ಎಂಬಂತೆ ಕೃತಿಕಾ ರೆಡ್ಡಿ ಕೊಲೆ ಬಳಿಕ ಮಹೇಂದ್ರ ರೆಡ್ಡಿ ಫೋನ್ ಪೇ ಮೂಲಕ ಪ್ರಿಯತಮೆಗೆ ಕಳುಸಿದ್ದ ಮೆಸೇಜ್​ ಅನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.

ತನಿಖೆಯಲ್ಲಿ ತಿಳಿದಿದ್ದೇನು?

ಫೋನ್‌ಪೇನಲ್ಲಿ ಮೆಸೇಜ್‌ ಮಾಡಿದ್ದ ಆರೋಪಿ ಮಹೇಂದ್ರ ಮೆಸೇಜ್​​ ನೋಡಿದ ನಂತರ ನನಗೆ ಎಲ್ಲಿಯೂ ಮೆಸೇಜ್​​ ಅಥವಾ ಕರೆ ಮಾಡಬೇಡ. ಎಲ್ಲವೂ ಸರಿಯಾದ ನಂತರ ನಾನು ನಿನಗೆ ಫೋನ್ ಮಾಡ್ತೇನೆ. ಪೊಲೀಸರು ನಮ್ಮ ಸಂಬಂಧದ ಬಗ್ಗೆ ಕೇಳಲು ನಿನ್ನನ್ನ ಕರೆಯಬಹುದು. ಆಗ ನಾವು ಸ್ನೇಹಿತರು ಎಂದು ಹೇಳು. ನಾನು ಬೇಗ ಹೋಗಿ ನನ್ನ ಹೆತ್ತವರಿಗೆ ಮತ್ತು ಕೃತಿಕಾ ಹೆತ್ತವರಿಗೆ ಹೇಳುತ್ತೇನೆ. ನಾನು ಕೃತಿಕಾಳನ್ನು ಕೊಂದಿರುವ ಮತ್ತು ನನ್ನ ಬಳಿ ಪುರಾವೆ ಇಲ್ಲ ಅಂತಾ. ಅಲ್ಲದೆ ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.

Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ

ನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಹೋಗಿ ನಿನ್ನ ಜೀವನವನ್ನು ಆನಂದಿಸು. ನೀನು ಬಯಸಿದಂತೆ ನಾನು ದುಖಃದಿಂದ ಬಳಲುತ್ತೇನೆ. ಮತ್ತು ನೀನು ಬಯಸಿದಂತೆ ಸಾಯುತ್ತೇನೆ, ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ ಎಂದು ತನ್ನ ಪ್ರೇಯಸಿಗೆ ಹೇಳಿದ್ದ. ಹೇಂದ್ರ ರೆಡ್ಡಿ ಮೊಬೈಲ್ ರಿಟ್ರೀವ್​ನಲ್ಲಿ 485 ಫೋನ್ ಪೇ ಚಾಟ್ ಪತ್ತೆಯಾಗಿದ್ದು, ಈ ಪೈಕಿ ಮೂರು ಮೆಸೇಜ್​ಗಳನ್ನ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಆರೋಪಿ ಪ್ರೇಯಸಿ ನರ್ಸ್, ವೈದ್ಯೆ ಕೃತಿಕಾ ಹಾಗೂ ಮಹೇಂದ್ರ ಮೊಬೈಲ್ ರಿಟೀವ್​ನಲ್ಲಿ ಒಟ್ಟು 10 ಲಕ್ಷ 34 ಸಾವಿರ ರೂ ದಷ್ಟು ಡಿಜಿಟಲ್ ಫೈಲ್​ಗಳನ್ನ ರಿಟ್ರೀವ್ ಮಾಡಿದ್ದಾರೆ.