ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೈಲಿನಿಂದ ತಪ್ಪಿಸಿಕೊಂಡಿದ್ದ ಮಾವೋವಾದಿ ಸೇರಿದಂತೆ ನಾಲ್ವರ ಎನ್‌ಕೌಂಟರ್‌

ಭದ್ರತಾ ಪಡೆಗಳು ಶುಕ್ರವಾರ ಜಾರ್ಖಂಡ್‌ನಲ್ಲಿ ಮಾವೋವಾದಿಗಳ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಮಾವೋವಾದಿಗಳನ್ನು ಎನ್‌ಕೌಂಟರ್‌ ಮಾಡಲಾಗಿದೆ. ಇದರಲ್ಲಿ 2011ರ ಚೈಬಾಸಾ ಜೈಲ್ ಬ್ರೇಕ್ ಸಮಯದಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದ ಪ್ರಾದೇಶಿಕ ಹಿರಿಯ ಕಮಾಂಡರ್ ಕೂಡ ಸೇರಿದ್ದಾನೆ. ಘಟನಾ ಸ್ಥಳದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಎನ್‌ಕೌಂಟರ್‌: ನಾಲ್ವರು ಮಾವೋವಾದಿಗಳ ಹತ್ಯೆ

ಸಂಗ್ರಹ ಚಿತ್ರ -

ಜಾರ್ಖಂಡ್: ಮಾವೋವಾದಿಗಳ (Encounter) ವಿರುದ್ಧ ಭದ್ರತಾ ಪಡೆಗಳು ಶುಕ್ರವಾರ ಜಾರ್ಖಂಡ್‌ನಲ್ಲಿ (jharkhand) ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭದಲ್ಲಿ ನಾಲ್ವರು ಕಟ್ಟಾ ಮಾವೋವಾದಿಗಳನ್ನು ಎನ್‌ಕೌಂಟರ್‌ (Jharkhand encounter) ಮಾಡಲಾಗಿದೆ. ಸಾವನ್ನಪ್ಪಿದ್ದ ಮಾವೋವಾದಿಗಳಲ್ಲಿ ಮೋಸ್ಟ್ ವಾಂಟೆಡ್ ಮಾವೋವಾದಿ ಸಹ್ದಿಯೋ ಮಹ್ತೋ ಅಲಿಯಾಸ್ ಅನುಜ್ ಕೂಡ ಸೇರಿದ್ದಾನೆ. ಈತ 2011ರ ಚೈಬಾಸಾ ಜೈಲ್ ಬ್ರೇಕ್ ಸಮಯದಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದನು. ಪ್ರಾದೇಶಿಕ ಹಿರಿಯ ಕಮಾಂಡರ್ ಆಗಿದ್ದ ಸಹ್ದಿಯೋ ಮಹ್ತೋನ ಹತ್ಯೆಯು ಎಡಪಂಥೀಯ ಉಗ್ರವಾದಕ್ಕೆ ದೊಡ್ಡ ಹೊಡೆತವಾಗಿದೆ.

ಜಾರ್ಖಂಡ್‌ನ ಹಜಾರಿಬಾಗ್‌ನ ಖಾಪಿಯಾ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಿಆರ್‌ಪಿಎಫ್ ಸಿಬ್ಬಂದಿ, 209 ಕೋಬ್ರಾ ಬೆಟಾಲಿಯನ್‌ನ ಗಣ್ಯ ಕಮಾಂಡೋಗಳು, ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿದರು. ಗುಪ್ತಚರ ಇಲಾಖೆ ನೀಡಿರುವ ಖಚಿತ ಮಾಹಿತಿ ಮೇರೆಗೆ ಕುಖ್ಯಾತ ಪ್ರಾದೇಶಿಕ ಸಮಿತಿ ಸದಸ್ಯ (ಆರ್‌ಸಿಎಂ) ಸಹ್ದಿಯೋ ಮಹ್ತೋ ಅಲಿಯಾಸ್ ಅನುಜ್ ನೇತೃತ್ವದ ಗುಂಪಿನ ವಿರುದ್ಧ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.

ಗುಲ್ಶನ್ ಆಗಿ ಬದಲಾದ ಗೋಪಾಲ್; ಬಗೆದಷ್ಟು ಬಯಲಾಗ್ತಿದೆ ಟಿಸಿಎಸ್ ಮತಾಂತರದ ಭೂತ!

ಮಾವೋವಾದಿಗಳ ವಿರುದ್ಧ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದು, ಇದರ ಬಳಿಕ ತೀವ್ರ ಗುಂಡಿನ ಕಾಳಗ ನಡೆದಿದೆ. ಸುಮಾರು ಅರ್ಧ ಗಂಟೆ ಕಾಲ ನಡೆಸಿದ ಕಾಳಗದಲ್ಲಿ ನಾಲ್ವರು ಮಾವೋವಾದಿಗಳನ್ನು ಹತ್ಯೆ ಮಾಡಲಾಯಿತು.

ಈ ದಾಳಿಯಲ್ಲಿ 2011 ರ ಚೈಬಾಸಾ ಜೈಲ್ ಬ್ರೇಕ್ ಸಮಯದಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದ ಸಹ್ದಿಯೋ ಮಹ್ತೋ ಅಲಿಯಾಸ್ ಅನುಜ್; ವಿಶೇಷ ವಲಯ ಸಮಿತಿ ಸದಸ್ಯೆ ಮತ್ತು ಸಹ್ದಿಯೋ ಮಹ್ತೋನ ಪತ್ನಿ ನತಾಶಾ; ಏರಿಯಾ ಕಮಾಂಡರ್ ಬುಧನ್ ಕರ್ಮಾಲಿ ಮತ್ತು ಏರಿಯಾ ಕಮಾಂಡರ್ ಕೂಡ ಆಗಿದ್ದ ರಂಜೀತ್ ಗಂಜು ಎಂಬವರನ್ನು ಹತ್ಯೆ ಮಾಡಲಾಗಿದೆ.

Yogesh gowda Murder Case: ಯೋಗೇಶ್‌ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಆದೇಶ

ಈ ಕುರಿತು ಮಾಹಿತಿ ನೀಡಿದ ಹಜಾರಿಬಾಗ್ ಪೊಲೀಸ್ ವರಿಷ್ಠಾಧಿಕಾರಿ ಅಂಜನಿ ಅಂಜನ್, ಪ್ರಾಥಮಿಕವಾಗಿ ಹಜಾರಿಬಾಗ್ ಜಿಲ್ಲೆಯ ಕೆರೆದಾರಿ ಬ್ಲಾಕ್‌ನೊಳಗಿನ ಖಾಪಿಯಾ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹ್ದಿಯೋ ಸೇರಿದಂತೆ ಎಲ್ಲಾ ಮಾವೋವಾದಿಗಳು ಹತ್ಯೆ ಮಾಡಲಾಗಿದೆ. ಸ್ಥಳದಿಂದ ಅಪಾರ ಪ್ರಮಾಣ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಎರಡು ಎಕೆ ರೈಫಲ್‌ಗಳು, ಒಂದು ಕೋಲ್ಟ್ ಎಆರ್-15 ಮತ್ತು ಒಂದು ಐಎನ್‌ಎಸ್‌ಎಎಸ್ ರೈಫಲ್ ಸೇರಿದೆ ಎಂದು ತಿಳಿಸಿದರು.